Saturday, November 27, 2021

ನೀನೊಲಿಯೇ ನಿದಿರಾದೇವಿಯೇ…

Follow Us

“ಮೆಲ್ಲಗೆ ಮೆಲ್ಲಗೆ ಬಾರಮ್ಮ… ನಿದಿರಾದೇವಿಯೇ ಬಾರಮ್ಮ….’ ಎಂದು ಎಷ್ಟೇ ಉತ್ಕಟವಾಗಿ ಕರೆದರೂ ಒಮ್ಮೊಮ್ಮೆ ಆಕೆ ಬಳಿ ಬರುವುದೇ ಇಲ್ಲ. ದೂರದೂರವೇ ಇದ್ದು ಕಾಟ ಕೊಡುತ್ತಾಳೆ. ಆಕೆಯನ್ನು ಒಲಿಸಿಕೊಂಡು ತೃಪ್ತರಾಗಲು ಏನೆಲ್ಲ ಮಾಡಬಹುದು?

===

ರಾತ್ರಿ ಸರಿಯಾಗಿ ನಿದ್ರೆ ಮಾಡಿಲ್ಲವೆಂದರೆ ಕಂಡವರ ಮೇಲೆಲ್ಲ ರೇಗಾಡುವಂತಾಗುತ್ತದೆ. ಮಾಡಲೇಬೇಕಾದ ಕೆಲಸವನ್ನೂ ಸರಿಯಾಗಿ ಮಾಡಲಾಗದೆ ಒದ್ದಾಡುವುದು ಗ್ಯಾರಂಟಿ. ಮಧ್ಯಾಹ್ನ ತೂಕಡಿಸಿ ಬೀಳುವಂತಾದರೂ ಎಷ್ಟೋ ಬಾರಿ ಮಲಗಲು ಸಾಧ್ಯವಾಗದು. ಅಕಸ್ಮಾತ್ ಮಲಗಿದರೂ ಮತ್ತೆ ರಾತ್ರಿ ಕಾಟ ಕೊಡುವ ನಿದಿರಾದೇವಿ. ಹೀಗೆ ಎಷ್ಟೋ ದಿನಗಟ್ಟಲೆ ನಿದ್ರೆ ಬರದೆ ಒದ್ದಾಡದೆ ಇರುವವರಿದ್ದಾರೆ.
ಈಗಂತೂ ಮಲಗಿ ಐದು ನಿಮಿಷವಾದರೂ ನಿದ್ದೆ ಬಂದಿಲ್ಲ ಎಂದಾಕ್ಷಣ ಮೊಬೈಲ್ ಕರೆಯುತ್ತಿರುತ್ತದೆ. ನಿದ್ರೆ ಬರುವವರೆಗೆ ಮೊಬೈಲ್ ನೋಡೋಣ ಎಂದು ಶುರು ಹಚ್ಚಿಕೊಂಡೆವೋ ಕಥೆ ಮುಗಿಯಿತು. ನಿದ್ರೆ ಬರುವವರೆಗೆ ಅಲ್ಲ, ಮೊಬೈಲ್ ನೋಡಿ ಬೇಸರವಾಗಿ ಕೆಳಗಿಟ್ಟರೂ ನಿದ್ರೆ ಮಾತ್ರ ಹತ್ತಿರ ಸುಳಿಯದು. ದೀರ್ಘ ಕಾಲ ಹೀಗೆಯೇ ಆದರೆ ಖಂಡಿತವಾಗಿ ವ್ಯಕ್ತಿಯ ಸಾಮಥ್ರ್ಯದ ಮೇಲೆ ಪರಿಣಾಮವುಂಟಾಗುತ್ತದೆ. ಹೀಗಾಗಿ, ಆರಂಭದಲ್ಲಿಯೇ ಇದಕ್ಕೆ ಮದ್ದು ಕಂಡುಕೊಳ್ಳಬೇಕು. ಹಾಗಾದರೆ ಚೆನ್ನಾಗಿ ನಿದ್ರೆ ಬರಲು ಏನು ಮಾಡಬಹುದು? ಇಲ್ಲಿ ನೋಡಿ, ಕೆಲವು ಟಿಪ್ಸ್…
• ಸಾಧ್ಯವಾದಷ್ಟೂ ರಾತ್ರಿ ಬೇಗ ಊಟ ಮಾಡುವುದು ಒಳಿತು. ಎಂಟು ಗಂಟೆಗೆ ಊಟ ಮಾಡಿದರೆ ಹತ್ತು ಗಂಟೆಯ ಹೊತ್ತಿಗೆ ಹೊಟ್ಟೆಯಲ್ಲಿರುವುದು ಸ್ವಲ್ಪ ಅರಗಿರುತ್ತದೆ. ತಡವಾಗಿ ಊಟ ಮಾಡುವುದರಿಂದಲೂ ಚೆನ್ನಾದ ನಿದ್ರೆ ಬಾರದು ಎನ್ನುವುದು ತಜ್ಞರ ಅಭಿಮತ. “ಇಂದಿನ ದಿನಗಳಲ್ಲಿ ಎಂಟು ಗಂಟೆಗೆಲ್ಲ ಊಟ ಮಾಡಲು ಸಾಧ್ಯವೇ? ಇಲ್ಲಸಲ್ಲದ ಮಾತುಗಳಿಂದ ಪ್ರಯೋಜನವಿಲ್ಲ’ ಎಂದು ಹೇಳುವವರಿದ್ದಾರೆ. ಆದರೆ, ಪ್ರಯತ್ನಿಸಿದರೆ ಖಂಡಿತ ಸಾಧ್ಯ. ಸಂಜೆ ಏಳರ ಹೊತ್ತಿಗೆ ಏನಾದರೂ ಸ್ನ್ಯಾಕ್ಸ್ ತಿನ್ನುವ ಅಭ್ಯಾಸದವರು ಅದನ್ನು ಸ್ವಲ್ಪ ಮುಂದೂಡಿ ಊಟವನ್ನೇ ಬೇಗ ಮಾಡಲು ಸಾಧ್ಯವಿದೆ. ಯೋಚಿಸಿ ನೋಡಿ.
• ಹಾಸಿಗೆಗೆ ಹೋಗುವ ಮುನ್ನವೇ ಮನಸ್ಸನ್ನು ಶಾಂತವಾಗಿರಿಸಿಕೊಳ್ಳಬೇಕು. ಕಿರಿಕಿರಿಯಾಗುವ ಯೋಚನೆಗಳನ್ನು ದೂರವಿಡಬೇಕು. ಸಮಸ್ಯೆಗಳು ಯಾರಿಗಿಲ್ಲ? ಅವುಗಳೊಟ್ಟಿಗೇ ಬದುಕುವುದು ಅನಿವಾರ್ಯ. ಆದರೆ, ಅವುಗಳಿಂದಾಗಿ ಆರೋಗ್ಯ ಹಾಳು ಮಾಡಿಕೊಂಡರೆ ಬದುಕು ಇನ್ನಷ್ಟು ಅಸಹನೀಯವಾಗುತ್ತದೆ ಎನ್ನುವ ಸತ್ಯವನ್ನು ಅರಿತು ಮನಸ್ಸನ್ನು ತಹಬಂದಿಗೆ ತಂದುಕೊಳ್ಳುವುದು ಜಾಣತನ. ಇದಕ್ಕಾಗಿ ಧ್ಯಾನ ಮಾಡಬಹುದು.
• ರಾತ್ರಿ ಮಲಗುವಾಗ ಎಲ್ಲರಿಗೂ ಧನ್ಯವಾದ ಅರ್ಪಿಸುವ ಪದ್ಧತಿಯನ್ನು 21 ದಿನಗಳ ಕಾಲ ಅಭ್ಯಾಸ ಮಾಡಿ ನೋಡಿ. ಆ ಸಮಯದಲ್ಲಿ ಮನಸ್ಸು ಕೃತಜ್ಞತಾ ಭಾವದಿಂದ ತುಂಬಿರಬೇಕು. ಕೃತಜ್ಞತೆ ಅರ್ಪಿಸುವುದರಿಂದ ಮನುಷ್ಯನ ಇಗೋ ಕಡಿಮೆಯಾಗುತ್ತದೆ. ಇದು ಸಾಕಷ್ಟು ನೆಮ್ಮದಿ ಕೊಡುತ್ತದೆ. ಇಗೋ ಬಲೆಯಲ್ಲಿ ಸಿಲುಕಿರುವ ಮನುಷ್ಯನಲ್ಲಿ ಇತರರ ಬಗ್ಗೆ ಕೃತಜ್ಞತಾ ಭಾವನೆ ಕಡಿಮೆ ಇರುತ್ತದೆಯಂತೆ. ಇದನ್ನು ಉದ್ದೀಪಿಸಿಕೊಂಡಾಗ ಭಾವಕೋಶ ಜಾಗೃತವಾಗಿ ಮನಸ್ಸು ನೆಮ್ಮದಿ ಕಾಣುತ್ತದೆ.
• ನಿಮ್ಮ ಎಷ್ಟೇ ಒತ್ತಡಗಳ ನಡುವೆಯೂ ಮಕ್ಕಳೊಂದಿಗೆ ಒಡನಾಡುವ ಪದ್ಧತಿ ಇಟ್ಟುಕೊಂಡರೆ ಅನುಕೂಲ. ರಾತ್ರಿ ಮಲಗುವ ಮುನ್ನ ಮಕ್ಕಳಿಗೆ ಕತೆ ಹೇಳುತ್ತ, ಅವರೊಂದಿಗೆ ನಲಿದಾಡಿದರೆ ಒತ್ತಡಮುಕ್ತರಾಗಲು ಸಾಧ್ಯ. ಆ ಸಮಯದಲ್ಲಿ ಅವರ ಬಗ್ಗೆ ಯಾವುದೇ ಟೀಕೆ, ಟಿಪ್ಪಣಿ, ಹೀಗಲ್ಲ, ಹಾಗಲ್ಲ ಎಂದೆಲ್ಲ ಕಮೆಂಟ್ ಮಾಡದೆ ಸುಮ್ಮನೆ ನಾವೂ ಮಕ್ಕಳಾಗಿ ಆಡಬೇಕು.
• ದಿನವೂ ವ್ಯಾಯಾಮ ಮಾಡುವುದು ಅಗತ್ಯ. ದೇಹವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲು ದಿನವೂ ಕನಿಷ್ಠ ವ್ಯಾಯಾಮವನ್ನು ರೂಢಿಸಿಕೊಂಡರೆ, ನಿದ್ರೆಯೂ ಚೆನ್ನಾಗಿ ಬರುತ್ತದೆ.
ಉತ್ತಮ ಚಟುವಟಿಕೆ, ಉತ್ತಮ ಚಿಂತನೆ ಬದುಕಿನ ಭಾಗವಾಗಲು ನಮ್ಮ ಪ್ರಯತ್ನವೂ ಇರಲೇಬೇಕು.
• ಮಲಗುವ ನಾಲ್ಕು ಗಂಟೆ ಮೊದಲು ಟೀ, ಕಾಫಿ ಹಾಗೂ ಸಿದ್ಧ ಪಾನೀಯ (ಕೋಕೋ ಕೋಲಾ, ಸ್ಪ್ರೈಟ್ ಇತ್ಯಾದಿ) ಗಳಿಂದ ದೂರವಿರಿ. ಅಡಕೆ, ತಂಬಾಕು ಸೇವನೆ ಬೇಡ. ಉಗುರುಬೆಚ್ಚಗಿನ ಹಾಲು ಅಥವಾ ನೀರು ನಿಮ್ಮ ಸುಖನಿದ್ದೆಗೆ ಸಹಕಾರಿಯಾಗಬಲ್ಲದು.
• ನೆನಪಿರಲಿ, ನಿತ್ಯ ಕನಿಷ್ಠ 7-8 ಗಂಟೆ ನಿದ್ರೆ ಅತ್ಯವಶ್ಯ. ಇಲ್ಲವಾದಲ್ಲಿ ನಿಧಾನವಾಗಿ ರೋಗನಿರೋಧಕ ಶಕ್ತಿ ಕಡಿಮೆಯಾಗಿ ಹಲವು ಕಾಯಿಲೆಗಳು ಕಾಡಲಾರಂಭಿಸಬಹುದು. ನಿದ್ರೆ ಸಮರ್ಪಕವಾಗಿಲ್ಲದಿದ್ದರೆ ಬುದ್ಧಿಶಕ್ತಿಯೂ ಕುಂದಬಹುದು.

response@134.209.153.225

ಮತ್ತಷ್ಟು ಸುದ್ದಿಗಳು

Latest News

ದಕ್ಷಿಣ ಆಫ್ರಿಕಾ ಕೊರೋನಾ ರೂಪಾಂತರಿಗೆ ಒಮಿಕ್ರೋನ್ ಎಂದು ನಾಮಕರಣ

newsics.com ವಾಷಿಂಗ್ಟನ್: ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೊರೋನಾ ರೂಪಾಂತರಿ ವಿಶ್ವದೆಲ್ಲೆಡೆ ಆತಂಕ ಸೃಷ್ಟಿಸಿದೆ. ಅತ್ಯಂತ ಪ್ರಬಲ ರೂಪಾಂತರಿಯಾಗಿರುವ ಕಾರಣ ಇದು ವೇಗವಾಗಿ ಹರಡುತ್ತಿದೆ ಎಂಬ ಭೀತಿ ಮನೆ...

ವಿವಾಹಿತೆಯ ಜತೆ ಅಕ್ರಮ ಸಂಬಂಧ ಹೊಂದಿದ್ದ ಪೊಲೀಸ್ ಎಸ್ಐ ಅಮಾನತು

newsics.com ವಾರಂಗಲ್(ಆಂಧ್ರಪ್ರದೇಶ): ವಿವಾಹಿತೆಯ ಜತೆ ಅಕ್ರಮ ಸಂಬಂಧ ಹೊಂದಿರುವ ಆರೋಪದ ಮೇಲೆ ಪೊಲೀಸ್ ಎಸ್ಐ ಒಬ್ಬರನ್ನು ಅಮಾನತುಗೊಳಿಸಲಾಗಿದೆ. ವಾರಂಗಲ್‌ನ ‍ವನಪರ್ತಿ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಶೇಕ್ ಶಾಪಿ ಅಮಾನತುಗೊಂಡಿರುವ ಪೊಲೀಸ್ ಅಧಿಕಟರಿ. ನವೆಂಬರ್ 18ರಂದು ವಿವಾಹಿತೆಯ...

ಗುದದ್ವಾರಕ್ಕೆ ಏರ್ ಪಂಪ್: ಸ್ನೇಹಿತ ಸಾವು

newsics.com ಬೆಂಗಳೂರು: ತಮಾಷೆಗೆ ಸ್ನೇಹಿತನ ಗುದದ್ವಾರಕ್ಕೆ ಏರ್ ಪಂಪ್ ಮಾಡಿದ್ದು, ಆತ ಮೃತಪಟ್ಟ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದ ರೆಹಮತ್ ಅಲಿ ಮೃತಪಟ್ಟ ವ್ಯಕ್ತಿ. ನವೆಂಬರ್ 16ರಂದು ಕೋಲ್ಕತ್ತಾದ ಗಿರಣಿಯಲ್ಲಿ ರಾತ್ರಿ...
- Advertisement -
error: Content is protected !!