Saturday, December 10, 2022

ಹುಣಸೆ ಎಲೆ ಚಹಾದಿಂದ ದೇಹಾರೋಗ್ಯ

Follow Us

ಹುಣಸೆ ಎಲೆಯಲ್ಲಿ ವಿಟಮಿನ್ ಸಿ ಇದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮುಟ್ಟಿನ ಸಮಯದಲ್ಲಿ ಉಂಟಾಗುವ ಹೊಟ್ಟೆ ನೋವನ್ನು ಇದು ಕಡಿಮೆ ಮಾಡುತ್ತದೆ. ತೂಕ ಇಳಿಸಲು ಸಹಕಾರಿ. ಮೆಟಾಬಾಲಿಕ್ ಸಿಂಡ್ರೋಮ್‌ನ್ನು ದೂರ ಮಾಡುತ್ತದೆ.

• ಡಾ.ಅಹಲ್ಯಾ
newsics.com@gmail.com

ಹುಣಸೆ ಹಣ್ಣು ಹಲವು ಆರೋಗ್ಯಕರವಾದ ಅಂಶಗಳನ್ನು ಹೊಂದಿದೆ. ಇದರ ಸೇವನೆಯಿಂದ ದೇಹದಲ್ಲಿ ಅನೇಕ ಪ್ರಯೋಜನ ಉಂಟಾಗುತ್ತದೆ.
ಹುಣಸೆ ಎಲೆಯ ಚಹಾ ಸೇವನೆ ಮಾಡುವುದರಿಂದ ತೂಕ ಇಳಿಸಲು ಸಹಕಾರಿ. ಮೆಟಾಬಾಲಿಕ್ ಸಿಂಡ್ರೋಮ್‌ನ್ನು ದೂರ ಮಾಡುತ್ತದೆ. ಇದರ ಸೇವನೆಯಿಂದ ಹಸಿವು ಕಡಿಮೆಯಾಗುತ್ತದೆ. ತೂಕ ಇಳಿಯುತ್ತದೆ.
ಹುಣಸೆ ಎಲೆಯಲ್ಲಿ ವಿಟಮಿನ್ ಸಿ ಇದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮುಟ್ಟಿನ ಸಮಯದಲ್ಲಿ ಉಂಟಾಗುವ ಹೊಟ್ಟೆ ನೋವನ್ನು ಇದು ಕಡಿಮೆ ಮಾಡುತ್ತದೆ.
ಬಾಯಿಯ ಸ್ವಚ್ಛತೆಗೆ ಕೂಡಾ ನಾವು ಆದ್ಯತೆ ನೀಡಬೇಕು. ಕೆಟ್ಟ ಉಸಿರು ಹಾಗೂ ಹಲ್ಲು ನೋವಿನ ಸಮಸ್ಯೆಯನ್ನು ಇದು ನಿವಾರಿಸುತ್ತದೆ.ಹುಣಸೆ ಗಿಡ ಮಧುಮೇಹ ವಿರೋಧಿ ಗುಣ ಹೊಂದಿದೆ ಎನ್ನಲಾಗಿದೆ. ಹುಣಸೆ ಎಲೆಗಳ ಮಿಶ್ರಣವನ್ನು ಸೇವನೆ ಮಾಡುವುದರಿಂದ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಹಾಗೂ ಅದರ ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸಲು ನೆರವಾಗುತ್ತದೆ.

ಎಲೆಗಳಲ್ಲಿ ನಂಜು ನಿರೋಧಕ ಗುಣ ಇದ್ದು ಗಾಯವನ್ನು ಗುಣಪಡಿಸುತ್ತದೆ. ಇತರ ಸೋಂಕುಗಳನ್ನು ತಡೆಯುತ್ತದೆ. ಕೆಂಪು,ಬಿಳಿ ರಕ್ತ ಕಣಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ.ಉರಿಯೂತದ ಗುಣ ಲಕ್ಷಣಗಳನ್ನು ಹೊಂದಿದೆ.ಕೀಲು ನೋವು ಹಾಗೂ ಇತರ ಉರಿಯೂತಗಳಿಗೆ ಚಿಕಿತ್ಸೆಯಾಗಿ ಬಳಸುತ್ತಾರೆ.
ಹುಣಸೆ ಎಲೆಯ ಸೇವನೆ ಮಾಡುವುದರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ.ಈ ಎಲೆಗಳ ಚಹಾವನ್ನು ತಯಾರಿಸಿ ಕುಡಿಯುವುದರಿಂದ ಜೀರ್ಣಕ್ರಿಯೆ ಸರಿಯಾಗಿ ನಡೆಯುವಂತೆ ಮಾಡುತ್ತದೆ.

ಮತ್ತಷ್ಟು ಸುದ್ದಿಗಳು

vertical

Latest News

ಡಿಸೆಂಬರ್ 15ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ರಾಜ್ಯಕ್ಕೆ ಭೇಟಿ

newsics.com ಬೆಂಗಳೂರು:  ಗುಜರಾತ್ ಚುನಾವಣೆ ಬಳಿಕ ಬಿಜೆಪಿ ಹೈಕಮಾಂಡ್ ಇದೀಗ ರಾಜ್ಯದತ್ತ ದೃಷ್ಟಿ ನೆಟ್ಟಿದೆ. ಇದರ ಮೊದಲ ಭಾಗವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ...

ಕಾರ್ಕಳ ಬಳಿ ಭೀಕರ ಅಪಘಾತ: ದಂಪತಿ, ಮಗು ಸಹಿತ ಮೂವರ ಸಾವು

newsics.com ಮಂಗಳೂರು:  ಉಡುಪಿ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ  ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಕಾರ್ಕಳದ ನೆಲ್ಲಿಕಾರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟಿರುವ ಮೈನೇರು ಎಂಬಲ್ಲಿ ಈ ದುರಂತ ಸಂಭವಿಸಿದೆ. ಖಾಸಗಿ ಬಸ್ ಮತ್ತು...

ಇಂಡಿಗೋ ವಿಮಾನದಲ್ಲಿ ಹರಿದ ಸೀಟು: ಪೇಟಿಎಂ‌ ಸಿಇಒಗೆ ಅಚ್ಚರಿ!

newsics.com ಮುಂಬೈ: ನೀವು ಬಸ್‌ನಲ್ಲೋ, ಆಟೋದಲ್ಲೋ ಹರಿದ ಸೀಟುಗಳನ್ನು ನೋಡಿರಬಹುದು. ಆದರೆ ವಿಮಾನದಲ್ಲೂ ಹರಿದ ಸೀಟಿನ ಚಿತ್ರವನ್ನು ಪೇಟಿಎಂ ಸಿಇಒ Paytm CEO ಹಂಚಿಕೊಂಡಿದ್ದಾರೆ. 'ಈ ಏರ್‌ಲೈನ್‌ನಲ್ಲಿ ಮಾತ್ರ ಇಂತಹ ಹರಿದ ಸೀಟನ್ನು ಮೊದಲು ನೋಡಲಾಗಿದೆ'...
- Advertisement -
error: Content is protected !!