Thursday, May 26, 2022

ಲಿವರ್ ಆರೋಗ್ಯಕ್ಕೆ ಈ ಆಹಾರ ಉತ್ತಮ

Follow Us

ಬೀಟ್ರೂಟ್ ರಸವು ಯಕೃತ್ತನ್ನು ಆಕ್ಸಿಡೇಟಿವ್ (oxidative) ಹಾನಿ ಮತ್ತು ಉರಿಯೂತದಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಕಾಫಿ, ಬ್ಲ್ಯಾಕ್ ಟೀ ಮತ್ತು ಗ್ರೀನ್ ಟೀ, ಯಕೃತ್ತಿನಲ್ಲಿ antioxidant level ಅನ್ನು ಹೆಚ್ಚಿಸುತ್ತದೆ ಹಾಗೂ ಉರಿಯೂತವನ್ನು ಕಡಿಮೆ ಮಾಡುತ್ತದೆ.

• ಡಾ.ಸೀಮಾ ಸೋನ್
newsics.com@gmial.com

ಲಿವರ್ ಅಥವಾ ಯಕೃತ್ ಅನ್ನುವುದು ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದು. ಪವರ್ ಸಪ್ಲಯರ್ ಅಂದರೂ ತಪ್ಪಲ್ಲ. ಇದು ಪ್ರೊಟೀನ್‌ಗಳು, ಕೊಲೆಸ್ಟ್ರಾಲ್ ಮತ್ತು ಪಿತ್ತರಸವನ್ನು ಉತ್ಪಾದಿಸುವುದರಿಂದ ಹಿಡಿದು ಜೀವಸತ್ವಗಳು, ಖನಿಜಗಳು ಮತ್ತು ಕಾರ್ಬೋಹೈಡ್ರೇಟ್‌ಗಳನ್ನು ಸಂಗ್ರಹಿಸುವವರೆಗೆ ದೇಹಕ್ಕೆ ಅಗತ್ಯ ಇರುವ ವಿವಿಧ ಕಾರ್ಯಗಳನ್ನು ನಿರ್ವಹಿಸುತ್ತದೆ.
ಇದು ಆಲ್ಕೋಹಾಲ್, ಕೆಲವು ಔಷಧಗಳ ಅಡ್ಡ ಪರಿಣಾಮ ಮತ್ತು ಟಾಕ್ಸಿನ್‌ಯುಕ್ತ, ಚಯಾಪಚಯ ಕ್ರಿಯೆಯಿಂದ ಉತ್ಪತ್ತಿಯಾಗುವ ಕೆಲವು ಉಪ ಉತ್ಪನ್ನಗಳು ಮೊದಲಾದವುಗಳಿಂದ ಯಕೃತ್ ತೊಂದರೆಗೆ ಒಳಗಾಗುತ್ತದೆ.

ಅಧ್ಯಯನಗಳ ಪ್ರಕಾರ ಕಾಫಿ, ಚಹಾ, ದ್ರಾಕ್ಷಿ ಹಣ್ಣು, ಬೆರಿ ಹಾಗೂ ಕ್ಯಾನ್ಬೆರಿ ಹಣ್ಣುಗಳು, ಬೀಟ್ರೂಟ್ ಜ್ಯೂಸ್, ಕೋಸುಗಡ್ಡೆ, ಸಾಸಿವೆ ಸೊಪ್ಪು ಮೊದಲಾದ ಕ್ರೂಸಿಫೆರಸ್ ತರಕಾರಿಗಳು, ಬೀಜಗಳು, ಕೊಬ್ಬಿನಂಶ ಸಮೃದ್ಧವಾಗಿರುವ ಮೀನುಗಳು, ಆಲಿವ್ ಎಣ್ಣೆ ಮೊದಲಾದವು ಈ ಲಿವರ್‌ನ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ.
ಕಾಫಿ, ಬ್ಲ್ಯಾಕ್ ಟೀ ಮತ್ತು ಗ್ರೀನ್ ಟೀ, ಯಕೃತ್ತಿನಲ್ಲಿ , antioxidant level ಅನ್ನು ಹೆಚ್ಚಿಸುತ್ತದೆ ಹಾಗೂ ಉರಿಯೂತವನ್ನು ಕಡಿಮೆ ಮಾಡುತ್ತದೆ.
ದ್ರಾಕ್ಷಿಹಣ್ಣಿನಲ್ಲಿರುವ antioxidant ಉರಿಯೂತವನ್ನು ಕಡಿಮೆ ಮಾಡುವ ಮೂಲಕ ಮತ್ತು ಅದರ ರಕ್ಷಣಾತ್ಮಕ ಕಾರ್ಯವಿಧಾನಗಳನ್ನು ಹೆಚ್ಚಿಸುವ ಮೂಲಕ ಯಕೃತ್ತನ್ನು ರಕ್ಷಿಸುತ್ತವೆ.
ಬೆರ್ರಿಗಳಲ್ಲಿ ಆಂಟಿಆಕ್ಸಿಡೆಂಟ್‌ಗಳು ಅಧಿಕವಾಗಿದ್ದು, ಇದು ಯಕೃತ್ತನ್ನು ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಅದರ ಪ್ರತಿರಕ್ಷಣಾ ಮತ್ತು ಉತ್ಕರ್ಷಣ ನಿರೋಧಕ ಪ್ರತಿಕ್ರಿಯೆಗಳನ್ನು ಸುಧಾರಿಸಲು ಸಹಾಯ ಮಾಡಬಹುದು. ಬೀಟ್ರೂಟ್ ರಸವು ಯಕೃತ್ತನ್ನು ಆಕ್ಸಿಡೇಟಿವ್ (oxidative) ಹಾನಿ ಮತ್ತು ಉರಿಯೂತದಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಇನ್ನು ಈ ಕ್ರೂಸಿಫೆರಸ್ ತರಕಾರಿಗಳು ಯಕೃತ್ತಿನ ನೈಸರ್ಗಿಕ ನಿರ್ವಿಶೀಕರಣ ಕಿಣ್ವಗಳನ್ನು (natural detoxification enzymes) ಹೆಚ್ಚಿಸಲು, ಹಾನಿಯಿಂದ ರಕ್ಷಿಸಲು ಹಾಗೂ ಯಕೃತ್ತಿನ ಕಿಣ್ವಗಳ ರಕ್ತದ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಆಲಿವ್ ಎಣ್ಣೆಯ ಸೇವನೆಯು ಯಕೃತ್ತಿನಲ್ಲಿ ಕೊಬ್ಬಿನ ಮಟ್ಟವನ್ನು ಕಡಿಮೆ ಮಾಡಲು, ರಕ್ತದ ಹರಿವನ್ನು ಹೆಚ್ಚಿಸಲು ಮತ್ತು ಯಕೃತ್ತಿನ ಕಿಣ್ವದ(enzymes) ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ಹೇಳಿವೆ.

ಕೊಬ್ಬಿನ ಮೀನುಗಳು ಒಮೆಗಾ-3 ಕೊಬ್ಬಿನಾಮ್ಲಗಳನ್ನು ಹೊಂದಿರುತ್ತವೆ. ಒಮೆಗಾ-3 ಭರಿತ ಕೊಬ್ಬಿನ ಮೀನುಗಳನ್ನು ತಿನ್ನುವುದರಿಂದ ಯಕೃತ್ತಿಗೆ ಅನೇಕ ಪ್ರಯೋಜನಗಳಿವೆ. ಆದಾಗ್ಯೂ, ನಿಮ್ಮ ಒಮೆಗಾ -6 ಮತ್ತು ಒಮೆಗಾ -3 ಅನುಪಾತವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅಷ್ಟೇ ಮುಖ್ಯ.
ಲಿವರ್ ಸಂಬಂಧಿ ಕಾಯಿಲೆಗಳು ಸಾಮಾನ್ಯವಾಗಿ ಪ್ರಾಣಕ್ಕೆ ಅಪಾಯಕಾರಿ. ಹೀಗೆ ಆಹಾರದ ವಿಚಾರದಲ್ಲಿ ಕೊಂಚ ಎಚ್ಚರಿಕೆ ವಹಿಸಬೇಕು.

ಮತ್ತಷ್ಟು ಸುದ್ದಿಗಳು

Latest News

ಪಾಟಿದಾರ್ ಶತಕದಾಟ: ಕ್ವಾಲಿಫೈಯರ್ 2 ತಲುಪಿದ ಫಾಫ್ ಪಡೆ

newsics.com ಕೋಲ್ಕತ್ತಾ: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಐಪಿಎಲ್ 2022 ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 14ರನ್‌ಗಳ ಗೆಲುವು ಸಾಧಿಸಿದೆ. ಮಳೆಯ ಕಾರಣದಿಂದಾಗಿ ಕೊಂಚ ತಡವಾಗಿ...

ಉಗ್ರರ ಗುಂಡಿಗೆ ಟಿವಿ‌ ಕಲಾವಿದೆ ಬಲಿ

newsics.com ಶ್ರೀನಗರ: ಉಗ್ರರ ಗುಂಡಿಗೆ ಟಿವಿ ಕಲಾವಿದೆಯೊಬ್ಬರು ಬಲಿಯಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಬದ್ಗಾಮ್‌ ಜಿಲ್ಲೆಯಲ್ಲಿ ಬುಧವಾರ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತ ಮಹಿಳೆಯನ್ನು ಕಲಾವಿದೆ ಅಮ್ರೀನ್‌ ಭಟ್‌ ಎಂದು ಗುರುತಿಸಲಾಗಿದೆ. ಅಮ್ರೀನ್...

ಪೆಟ್ರೋಲಿಲ್ಲ, ಎಟಿಎಂನಲ್ಲಿ ಹಣವಿಲ್ಲ: ಪಾಕ್ ಸರ್ಕಾರದ ವಿರುದ್ಧ ಹಫೀಜ್ ವಾಗ್ದಾಳಿ

newsics.com ಇಸ್ಲಾಮಾಬಾದ್: ಪಾಕಿಸ್ತಾನದ ಸ್ಥಿತಿಗತಿಗಳ ಬಗೆಗೆ ಮಾಜಿ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಅವರು ಕಿಡಿಕಾರಿದ್ದಾರೆ. ಲಾಹೋರ್ ನಲ್ಲಿ ಜನ ಸಾಮಾನ್ಯರಿಗೆ ಪೆಟ್ರೋಲ್ ಸಿಗುತ್ತಿಲ್ಲ. ಎಟಿಎಂನಲ್ಲಿ ಹಣವಿಲ್ಲ ಎಂದು ಹೇಳಿದ್ದಾರೆ. ಯಾವುದೇ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್...
- Advertisement -
error: Content is protected !!