Tuesday, July 5, 2022

ಅರಿಶಿನ, ಅಪರಿಮಿತ ಸೌಂದರ್ಯವರ್ಧಕ

Follow Us

ನಂಜು ನಿರೋಧಕ ಶಕ್ತಿ ಹೊಂದಿರುವ ಅರಿಶಿನ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿದೆ. ಚರ್ಮದಲ್ಲಿರುವ ಸತ್ತ ಜೀವಕೋಶಗಳನ್ನು ತೊಲಗಿಸಿ ಚರ್ಮದ ಕಾಂತಿ ಹೆಚ್ಚಿಸುತ್ತದೆ.
ಮೊಡವೆಯ ಕಪ್ಪು ಕಲೆಗಳನ್ನು ಇದು ದೂರ ಮಾಡುತ್ತದೆ.

• ಡಾ. ಅಹಲ್ಯಾ
newsics.com@gmail.com

ಧುನಿಕ ಯುಗದಲ್ಲಿ ಮಹಿಳೆಯರು ಸೌಂದರ್ಯ ಕಾಪಾಡಿಕೊಳ್ಳಲು ಸೌಂದರ್ಯ ವರ್ಧಕಗಳನ್ನು ಉಪಯೋಗಿಸುತ್ತಿದ್ದಾರೆ. ಆದರೆ ಇವುಗಳಿಂದ ಹಾನಿಯೇ ಹೆಚ್ಚು. ಹೀಗಾಗಿ ಮನೆಯಲ್ಲಿ ಸಿಗುವ ವಸ್ತುಗಳನ್ನು ಉಪಯೋಗಿಸುವುದು ಉತ್ತಮ. ಅರಿಶಿನ ಮನೆಯಲ್ಲಿ ಸುಲಭವಾಗಿ ಸಿಗುವ ವಸ್ತು. ಆಹಾರ ತಯಾರಿಕೆಯಲ್ಲಿ ಬಳಸಲ್ಪಡುವ ಅರಿಶಿನ ಆ್ಯಂಟಿಬಯೋಟಿಕ್ ಗುಣ ಹೊಂದಿದೆ.
ಭಾರತೀಯ ಸಂಸ್ಕೃತಿಯಲ್ಲಿ ಮದುವೆ, ಉಪನಯನ ಮುಂತಾದ ಸಮಾರಂಭಗಳಲ್ಲಿ ಅರಿಶಿನ ಧಾರಣೆ ಒಂದು ಮಹತ್ವದ ಶಾಸ್ತ್ರ. ಹಿರಿಯರು ಅರಿಶಿನದ ಮಹತ್ವದ ಬಗ್ಗೆ ಅರಿತಿದ್ದರು. ಹಿಂದಿನ ಕಾಲದಲ್ಲಿ ಮಹಿಳೆಯರು ಅರಿಶಿನ ಹಚ್ಚಿ ಸ್ನಾನ ಮಾಡುತ್ತಿದ್ದರು. ಸೌಂದರ್ಯ ವರ್ಧಕವಾಗಿದ್ದ ಅರಿಶಿನ ಕಾಲ ಬದಲಾದಂತೆ ಮಹತ್ವ ಕಳೆದುಕೊಳ್ಳುತ್ತಿದೆಯಾ.
ಗಾಯಗಳನ್ನು ಗುಣಪಡಿಸುವ ಗುಣ ಹೊಂದಿರುವ ಅರಿಶಿನ ನಂಜು ನಿವಾರಕವಾಗಿ ಕೆಲಸ ಮಾಡುತ್ತದೆ. ಈಗಿನ ಕಲುಷಿತ ವಾತಾವರಣ, ಆಹಾರ ಶೈಲಿ ಎಲ್ಲಪತ ಮೊಡವೆಗಳು ಮೂಡುವುದಕ್ಕೆ ಕಾರಣವಾಗುತ್ತಿವೆ. ಇಂತಹ ಸಮಯದಲ್ಲಿ ಅರಿಶಿನ ಉಪಯುಕ್ತ ಆಗಬಲ್ಲದು. ಬೊಕ್ಕೆ , ಕಪ್ಪು ಕಲೆ ಸಮಸ್ಯೆ ನಿವಾರಣೆಗೆ ಒಳ್ಳೆಯದು.

ನಂಜು ನಿರೋಧಕ ಶಕ್ತಿ ಹೊಂದಿರುವ ಅರಿಶಿನ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿದೆ. ಚರ್ಮದಲ್ಲಿರುವ ಸತ್ತ ಜೀವಕೋಶಗಳನ್ನು ತೊಲಗಿಸಿ ಚರ್ಮದ ಕಾಂತಿ ಹೆಚ್ಚಿಸುತ್ತದೆ.
ಮೊಡವೆಯ ಕಪ್ಪು ಕಲೆಗಳನ್ನು ಇದು ದೂರ ಮಾಡುತ್ತದೆ. ಅರಿಶಿನದ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಬೇಕು. ಮುಖದ ಮೇಲಿನ ನೆರಿಗೆಗಳನ್ನು ದೂರ ಮಾಡಲು l ಅರಿಶಿನವನ್ನು ಮಜ್ಜಿಗೆ ಹಾಗೂ ಕಬ್ಬಿನ ಹಾಲಿನಲ್ಲಿ ಬೆರೆಸಿ ಬಳಸಬೇಕು. ಇವು ಮುಖದಲ್ಲಿರುವ ಸುಕ್ಕು , ಗೆರೆಗಳನ್ನು ನಿವಾರಿಸಲು ಸಹಕಾರಿ. ಚರ್ಮದ ರಂಧ್ರಗಳನ್ನು ನಿಯಂತ್ರಿಸಲು ಅರಿಶಿನ ಹಾಗೂ ಜೇನುತುಪ್ಪ ಮಿಶ್ರಣವನ್ನು ಹಚ್ಚಬೇಕು. ಅರಿಶಿನ, ಶ್ರೀಗಂಧ ಮಿಶ್ರ ಮಾಡಿ ಮೊಡವೆ ಇರುವ ಜಾಗಕ್ಕೆ ಹಚ್ಚಬೇಕು.
ಮುಖದಲ್ಲಿ ಬೆಳೆಯುವ ಕೂದಲನ್ನು ನಿವಾರಿಸಲು ಅರಿಶಿನ ಹಾಗೂ ಕಡಲೆಹಿಟ್ಟು ಮಿಶ್ರಣವನ್ನು ಸತತವಾಗಿ ಹಚ್ಚಬೇಕು. ಒಡೆದ ಹಿಮ್ಮಡಿಗಳಿಗೆ ಕೊಬ್ಬರಿ ಎಣ್ಣೆ ಜತೆ ಮಿಶ್ರಣ ಮಾಡಿ ಹಚ್ಚಬೇಕು.

ಮತ್ತಷ್ಟು ಸುದ್ದಿಗಳು

vertical

Latest News

ಕಾಲಿಗೆ ನಮಸ್ಕಾರ ಮಾಡುವ ನಾಟಕ: ಚಂದ್ರಶೇಖರ್ ಗುರೂಜಿಗೆ 70 ಬಾರಿ ಇರಿದ ದುಷ್ಕರ್ಮಿಗಳು

newsics.com ಹುಬ್ಬಳ್ಳಿ: ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಮೇಲೆ ದುಷ್ಕರ್ಮಿಗಳು 70 ಬಾರಿ ಇರಿದು ಹತ್ಯೆ ಮಾಡಿದ್ದಾರೆ.  ಅತ್ಯಂತ ಭೀಕರವಾಗಿ ಚುಚ್ಚಿ ಚುಚ್ಚಿ ಹತ್ಯೆ ಮಾಡಲಾಗಿದೆ. ಇಬ್ಬರು...

ಕರಾಚಿಯಲ್ಲಿ ತುರ್ತು ಭೂ ಸ್ಪರ್ಶ ಮಾಡಿದ ಸ್ಪೈಸ್ ಜೆಟ್

newsics.com ನವದೆಹಲಿ:  ದೆಹಲಿಯಿಂದ  ದುಬೈಗೆ ಪ್ರಯಾಣಿಸುತ್ತಿದ್ದ ಸ್ಪೈಸ್ ಜೆಟ್ ವಿಮಾನ ತಾಂತ್ರಿಕ ದೋಷದ ಕಾರಣ ಕರಾಚಿಯಲ್ಲಿ ತುರ್ತು ಭೂ ಸ್ಪರ್ಶ  ಮಾಡಿದೆ. ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ತಕ್ಷಣ ಪೈಲಟ್ ಕರಾಚಿ ವಿಮಾನ ನಿಲ್ದಾಣ...

ಚಾಕು ಇರಿದು ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಕೊಲೆ

newsics.com ಹುಬ್ಬಳ್ಳಿ: ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್‌ ಗುರೂಜಿ ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ಕೊಲೆಯಾಗಿದ್ದಾರೆ. ಭಕ್ತರ ಸೋಗಿನಲ್ಲಿ ಬಂದ ದುಷ್ಕರ್ಮಿಗಳು ಚಾಕು ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಸರಳ ವಾಸ್ತು ಸಲಹೆ ನೀಡುವ ಮೂಲಕ ಹಲವರ ಬಾಳಿಗೆ...
- Advertisement -
error: Content is protected !!