Sunday, May 22, 2022

ಮೆಂತ್ಯ ಆರೋಗ್ಯದ ಮಂತ್ರ…

Follow Us

ಆರೋಗ್ಯಕಾರಿ ಅಂಶಗಳ ಕಂತೆಯನ್ನೇ ಹೊತ್ತ ಮೆಂತ್ಯಕ್ಕೆ ಭಾರತೀಯ ಅಡುಗೆಮನೆಯಲ್ಲಿ ಮಹತ್ವದ ಸ್ಥಾನ. ಸೌಂದರ್ಯವರ್ಧಕವಾಗಿ, ಮಧುಮೇಹ ನಿಯಂತ್ರಕವಾಗಿ, ಲೈಂಗಿಕ ಬಳಕೆ ಹೆಚ್ಚಳಕ್ಕಾಗಿ, ಎದೆಹಾಲು ಹೆಚ್ಚಿಸಿಕೊಳ್ಳುವುದಕ್ಕಾಗಿ, ದೈಹಿಕ ಕ್ಷಮತೆ ವೃದ್ಧಿ ಸೇರಿದಂತೆ ಹಲವು ಆರೋಗ್ಯಕಾರಿ ಪದಾರ್ಥವಾಗಿ ಮೆಂತ್ಯವನ್ನು ಬಳಸಬಹುದು.


• ಅನಿತಾ ಬನಾರಿ
newsics.com@gmail.com

ಭಾರತೀಯ ಸಾಂಬಾರ ಪದಾರ್ಥಗಳು ಅಡುಗೆಗೆ ರುಚಿ, ವಾಸನೆ ನೀಡುವುದು ಮಾತ್ರವಲ್ಲ, ಬದಲಾಗಿ ಅನೇಕ ಆರೋಗ್ಯ ಸಂಬಂಧಿ ಉಪಯೋಗಗಳನ್ನೂ ಹೊಂದಿದೆ ಎಂಬುದು ತಿಳಿದಿರುವ ವಿಚಾರ. ಅಂತಹ ಸಾಂಬಾರ ಪದಾರ್ಥವಾದ ಮೆಂತೆ ಕಾಳಿನಲ್ಲಿ ಕೂಡಾ ನಿಮಗೆ ತಿಳಿಯದ ಅನೇಕ ಔಷಧೀಯ ಗುಣಗಳಿವೆ. ಸೌಂದರ್ಯವರ್ಧಕವಾಗಿಯೂ ಇದನ್ನು ಬಳಸಬಹುದು.
ದಕ್ಷಿಣ ಯೂರೋಪ್ ಹಾಗೂ ಮೆಡಿಟರೇನಿಯನ್ ಭಾಗದಲ್ಲಿ ಮೊದಲಿಗೆ‌ ಮೆಂತೆಯನ್ನು ಬೆಳೆಯುತ್ತಿದ್ದರು. ಯುರೋಪಿನ ಮಧ್ಯ ಹಾಗೂ ಆಗ್ನೇಯ ಭಾಗದಲ್ಲಿ ಮತ್ತು ಪೂರ್ವ ಏಷ್ಯಾ ಮತ್ತು ಉತ್ತರ ಆಫ್ರಿಕಾದಲ್ಲಿ ಮೆಂತೆಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ಭಾರತದಲ್ಲೂ ಹೆಚ್ಚು ಬೆಳೆಯಲಾಗುತ್ತದೆ.
ಮೆಂತ್ಯ ಸಸ್ಯದ ಒಣಗಿದ ಎಲೆಗಳು ಮತ್ತು ಪರಿಮಳಯುಕ್ತ ಬೀಜಗಳನ್ನು ವಿವಿಧ ಅಡುಗೆಯಲ್ಲಿ ಆಯುರ್ವೇದ ಔಷಧ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಮೆಂತ್ಯ ಬೀಜಗಳನ್ನು ನೀರಿನಲ್ಲಿ ನೆನೆಸಿ ಬೇಯಿಸಿ ಸೇವಿಸಬಹುದು ಅಥವಾ ಹಾಗೇ ಹಸಿಯಾಗಿ ತಿನ್ನಬಹುದು. ವಿವಿಧ ಸೌಂದರ್ಯವರ್ಧಕಗಳು ಮತ್ತು ಸಾಬೂನುಗಳಲ್ಲಿಯೂ ಇದನ್ನು ಬಳಸಲಾಗುತ್ತದೆ.
ಮಧುಮೇಹ ನಿಯಂತ್ರಕ:
ಅಧ್ಯಯನಗಳ ಪ್ರಕಾರ, 5ರಿಂದ 50 ಗ್ರಾಂನಷ್ಟು ಮೆಂತ್ಯ ಬೀಜಗಳನ್ನು ದಿನಕ್ಕೆ ಒಂದು ಅಥವಾ ಎರಡು ಬಾರಿ ಊಟದೊಂದಿಗೆ ಸೇವಿಸಿದಾಗ, ಅವು ಟೈಪ್ 2 ಮಧುಮೇಹ ಹೊಂದಿರುವ ಜನರಲ್ಲಿ ಊಟದ ನಂತರ‌ ಉತ್ಪತ್ತಿಯಾಗುವ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. 50 ಗ್ರಾಂ ಮೆಂತ್ಯ ಬೀಜದ ಪುಡಿಯನ್ನು ದಿನಕ್ಕೆ ಎರಡು ಬಾರಿ ಸೇವಿಸುವುದರಿಂದ ಟೈಪ್ 1 ಮಧುಮೇಹ ಹೊಂದಿರುವ ಜನರಲ್ಲಿ ಮೂತ್ರದಲ್ಲಿ ಕಂಡುಬರುವ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡಬಹುದು. ಅದರೆ ವೈದ್ಯರನ್ನು ಸಂಪರ್ಕಿಸಿ ಇದರ ಸೇವನೆ ಮಾಡೋದು ಉತ್ತಮ.
ಲೈಂಗಿಕ ಬಯಕೆ, ಕಾರ್ಯಕ್ಷಮತೆ ಸುಧಾರಣೆ:
ಮೆಂತ್ಯೆ ಬೀಜದ ಅಂಶಗಳು ಲೈಂಗಿಕ ಕಾರ್ಯಕ್ಷಮತೆ ಮತ್ತು ಪುರುಷರಲ್ಲಿ ಲೈಂಗಿಕ ಆಸಕ್ತಿಯನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ. ಕಡಿಮೆ ಸೆಕ್ಸ್ ಡ್ರೈವ್ ಹೊಂದಿರುವ ಮಹಿಳೆಯರಲ್ಲಿ ಸೆಕ್ಸ್ ಡ್ರೈವ್ ಅನ್ನು ಸುಧಾರಿಸುತ್ತದೆ ಎಂದು ಹೇಳಲಾಗುತ್ತದೆ. ಪುರುಷರಲ್ಲಿ ವೀರ್ಯಾಣು ಸಂಖ್ಯೆಯನ್ನು ಸುಧಾರಿಸುತ್ತದೆ ಎಂದು ಹೇಳಲಾಗಿದೆ.
ಎದೆಹಾಲು ವೃದ್ಧಿ:
ಮೆಂತ್ಯವನ್ನು ಪುಡಿಮಾಡಿದ ಬೀಜಗಳಾಗಿ ಬಳಸಲಾಗುತ್ತದೆ ಅಥವಾ ಎದೆಹಾಲಿನ ಉತ್ಪಾದನೆಯನ್ನು ಹೆಚ್ಚಿಸಲು ಕೆಲವು ಇತರ ಗಿಡಮೂಲಿಕೆಗಳ ಪೂರಕಗಳೊಂದಿಗೆ ಚಹಾದ ರೂಪದಲ್ಲಿ ಸೇವಿಸಲಾಗುತ್ತದೆ.
ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ:
ಮೆಂತೆ ಬೀಜ ಜೀರ್ಣಾಂಗವ್ಯವಸ್ಥೆಯನ್ನು ಹೆಚ್ಚಿಸುತ್ತದೆ. ಅನಾದಿ ಕಾಲದಿಂದಲೂ ಇದನ್ನು ಬಳಸಲಾಗುತ್ತಿದೆ. ಅಜೀರ್ಣ, ಹೊಟ್ಟೆಯುಬ್ಬರ ಮೊದಲಾದ ತೊಂದರೆಗಳನ್ನು ಕಡಿಮೆ ಮಾಡುತ್ತದೆ.
ಮುಟ್ಟಿನ ನೋವನ್ನು ನಿವಾರಿಸುತ್ತದೆ:
ಮೆಂತೆ ಬೀಜ ಮುಟ್ಟಿನ ನೋವನ್ನು ನಿವಾರಿಸುತ್ತದೆ. ದಿನಕ್ಕೆ ಮೂರು ಡೋಸ್‌ನಂತೆ ಮೆಂತೆಯ ಪೌಡರನ್ನು ಸೇವಿಸುತ್ತಿದ್ದರೆ ಪರಿಣಾಮಕಾರಿ.
ತೂಕ ಇಳಿಸಲು ಸಹಕಾರಿ:
ಕೆಲವೊಂದು ಅಧ್ಯಯನಗಳ ಪ್ರಕಾರ ಮೆಂತೆಯು ಹಸಿವನ್ನು ನಿಯಂತ್ರಿಸಿ, ಜೀರ್ಣಕ್ರಿಯೆಯನ್ನು ಪ್ರಬಲಡಿಸುತ್ತದೆ. ಇದರಿಂದಾಗಿ ತೂಕ ಹೆಚ್ಚಳವಾಗೋದು ತಪ್ಪುತ್ತದೆ.
ಇದಲ್ಲದೇ ದೈಹಿಕ ಕ್ಷಮತೆಯನ್ನು ಹೆಚ್ಚಿಸುವುದು, ತಲೆಗೂದಲಿನ ಬೆಳವಣಿಗೆ, ರಕ್ತದಲ್ಲಿ ಕೊಲೆಸ್ಟರಾಲ್ ಮಟ್ಟವನ್ನು ಸುಧಾರಿಸುವುದು, ಜ್ವರವನ್ನು ಗುಣಪಡಿಸುವುದು, ಅಲರ್ಜಿ, ಚರ್ಮದ ತೊಂದರೆಗಳನ್ನು ನಿವಾರಿಸುವುದು ಮೊದಲಾದ ಉಪಯೋಗಗಳನ್ನು ಹೊಂದಿದೆ‌.

ಮತ್ತಷ್ಟು ಸುದ್ದಿಗಳು

Latest News

ಕುತುಬ್ ಮಿನಾರ್ ಸಂಕೀರ್ಣ ಉತ್ಖನನ: ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದ ಕೇಂದ್ರ ಸಚಿವ

newsics.com ನವದೆಹಲಿ: ಕುತುಬ್ ಮಿನಾರ್ ಸಂಕೀರ್ಣದ ಉತ್ಖನನ ಕುರಿತಂತೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಕೇಂದ್ರ ಸಂಸ್ಕೃತಿ ಸಚಿವ ಜಿ.ಕೆ.ರೆಡ್ಡಿ ಹೇಳಿದ್ದಾರೆ. ದೆಹಲಿಯ ಕುತುಬ್ ಮಿನಾರ್ ಸಂಕೀರ್ಣದಲ್ಲಿ...

ನನ್ನ ದೇಹದ ಖಾಸಗಿ ಭಾಗದಲ್ಲಿನ ಮಚ್ಚೆ ಬಗ್ಗೆ ಹೇಳಲಿ: ಲೈಂಗಿಕ ಕಿರುಕುಳ ಆರೋಪಕ್ಕೆ ಎಲಾನ್ ಮಸ್ಕ್ ಓಪನ್ ಚಾಲೆಂಜ್

newsics.com ನ್ಯೂಯಾರ್ಕ್: ಖಾಸಗಿ ಜೆಟ್‌ನಲ್ಲಿ ಫ್ಲೈಟ್ ಅಟೆಂಡೆಂಟ್ ಸ್ನೇಹಿತೆ ಎನ್ನಲಾದ ವ್ಯಕ್ತಿ ಮಾಡಿರುವ ಲೈಂಗಿಕ ಕಿರುಕುಳ ಆರೋಪವನ್ನು ಜಗತ್ತಿನ‌ ನಂಬರ್ ಒನ್ ಶ್ರೀಮಂತ ಬಿಲಿಯನೇರ್ ಎಲಾನ್‌ ಮಸ್ಕ್ ಅಲ್ಲಗಳೆದಿದ್ದಾರೆ. ಒಂದು ವೇಳೆ ಲೈಂಗಿಕ ಕಿರುಕುಳ‌ ನೀಡಿದ್ದೇನೆ...

ಪ್ರಿಯಕರನನ್ನೇ ಮದುವೆಯಾಗುವೆನೆಂದ ವಧು: ತಾಳಿ ಕಟ್ಟುವ ವೇಳೆ ಹೈಡ್ರಾಮಾ

newsics.com ಮೈಸೂರು: ಮದುವೆಯಲ್ಲಿ ತಾಳಿ ಕಟ್ಟುವ ವೇಳೆ ಮದುಮಗಳು ವರನಿಗೆ ಶಾಕ್ ಕೊಟ್ಟಿದ್ದು, ತಾನು ಪ್ರೀತಿಸಿದ ಹುಡುಗನನ್ನೇ ಮದುವೆಯಾಗುವುದಾಗಿ ಹಠ ಹಿಡಿದಿದ್ದಾಳೆ. ಮದುಮಗಳು ಸಿಂಚನ ತನ್ನ ಪಕ್ಕದ ಮನೆಯ ಯುವಕನನ್ನು ಪ್ರೀತಿಸಿದ್ದು, ಆದರೆ ಮನೆಯವರು ಎಚ್.ಡಿ.ಕೋಟೆ...
- Advertisement -
error: Content is protected !!