Saturday, April 17, 2021

ಮಾನವಕುಲ ರಕ್ಷಿಸುವ ಲಸಿಕೆಗಳು

ಇಂದು (ಮಾರ್ಚ್ 16) ರಾಷ್ಟ್ರೀಯ ಲಸಿಕಾ ದಿನ. ಈ ಬಾರಿ, ಕೊರೋನಾ ಸೋಂಕಿನ ಎರಡನೇ ಅಲೆಯ ಹೆಚ್ಚಳದ ಭೀತಿಯ ನಡುವೆ ಬಂದಿರುವ “ಲಸಿಕಾ ದಿನ’ಕ್ಕೆ ಇನ್ನಷ್ಟು ಮಹತ್ವ ಹೆಚ್ಚಾಗಿದೆ. ಹಿಂದೇಟು ಹಾಕದೆ ಕೊರೋನಾ ಲಸಿಕೆ ಪಡೆದುಕೊಳ್ಳುವುದು ನಮ್ಮ ಆದ್ಯತೆಯಾಗಬೇಕಿದೆ. ಹಂತಹಂತಗಳಲ್ಲಿ ನೀಡುತ್ತಿರುವುದರಿಂದ ನಮ್ಮ ಸರದಿ ಬಂದಾಗ ಲಸಿಕೆ ಹಾಕಿಸಿಕೊಳ್ಳುವುದರ ಜತೆಗೆ, ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯುವವರಲ್ಲಿ ಧೈರ್ಯ ತುಂಬಬೇಕಿದೆ.

      ಇಂದು ರಾಷ್ಟ್ರೀಯ ಲಸಿಕಾ ದಿನ    


♦ ಡಾ. ಸುಮನ್
newsics.com@gmail.com


 ವ ರ್ಷದಿಂದ ಕಾಯುತ್ತಿದ್ದ ಕೊರೋನಾ ಲಸಿಕೆ ಈಗ ದೇಶದ ಮೂಲೆಮೂಲೆಗೂ ಲಭ್ಯವಾಗುತ್ತಿದೆ. “ಲಸಿಕೆ ಬಂತು, ಇನ್ನು ಆರಾಮಾಗಿರಬಹುದು’ ಎನ್ನುವ ಭಾವನೆ ಎಲ್ಲರಲ್ಲೂ ಮೂಡಿದೆ. ಹೇಗೂ ಲಸಿಕೆ ಸಿಗುತ್ತಿದೆ ಎನ್ನುವ ಧೈರ್ಯದಲ್ಲಿ ಜನ ಕೋವಿಡ್-19 ನಿಯಮಗಳನ್ನು ಸರಿಯಾಗಿ ಪಾಲನೆ ಮಾಡುತ್ತಿಲ್ಲದಿರುವುದು ಬೇರೆ ವಿಚಾರ. ಆದರೆ, ಲಸಿಕೆಯೊಂದು ನೀಡುವ ಸುರಕ್ಷಿತ ಭಾವನೆಗೆ ಸಾಟಿಯಿಲ್ಲ.
ಹೌದು, ಮಾನವ ಜನಾಂಗವನ್ನು ಹಲವಾರು ಮಾರಣಾಂತಿಕ ರೋಗಗಳಿಂದ ಮುಕ್ತಿ ನೀಡಿರುವುದರಲ್ಲಿ ಲಸಿಕೆಯ ಪಾತ್ರ ಮಹತ್ವದ್ದು. ಲಸಿಕೆ ನಮ್ಮ ರಕ್ಷಕನಾಗಿ ಕೆಲಸ ಮಾಡುತ್ತದೆ. ಲಸಿಕೆಯ ಮಹತ್ವದ ಬಗ್ಗೆ ಅರಿವು ಮೂಡಿಸಲು ಪ್ರತಿವರ್ಷ ಮಾರ್ಚ್ 16ರಂದು “ರಾಷ್ಟ್ರೀಯ ಲಸಿಕೆ ದಿನ’ ಆಚರಿಸಲಾಗುತ್ತದೆ.
ರಾಷ್ಟ್ರೀಯ ಲಸಿಕಾ ದಿನ
ಭಾರತದಲ್ಲಿ 1995ರ ಮಾರ್ಚ್ 16ರಿಂದ ರಾಷ್ಟ್ರೀಯ ಲಸಿಕಾ ದಿನ ಆಚರಿಸಲಾಗುತ್ತಿದೆ. ಈ ದಿನದಂದು, ರಾಷ್ಟ್ರವ್ಯಾಪಿ ಐದು ವರ್ಷದೊಳಗಿನ ಮಕ್ಕಳಿಗೆ ಬಾಯಿ ಮೂಲಕ ಪೋಲಿಯೋ ಲಸಿಕೆ ನೀಡಲು ಚಾಲನೆ ನೀಡಲಾಯಿತು. ಅಂದಿನಿಂದ ಪ್ರತಿವರ್ಷ ಲಸಿಕೆ ದಿನ ಆಚರಿಸಲಾಗುತ್ತಿದೆ. ಪೋಲಿಯೋ ನಿರ್ಮೂಲನೆಗೆ ಆರಂಭವಾದ ಈ ಕಾರ್ಯಕ್ರಮ ಬಳಿಕ ಬೃಹತ್ ಸ್ವರೂಪ ಪಡೆದುಕೊಂಡಿದೆ. ಇದೊಂದು ಕಾರ್ಯಕ್ರಮದ ಆರಂಭದ ಮೂಲಕ ದೇಶದಲ್ಲಿ ಪೋಲಿಯೋ ನಿರ್ಮೂಲನೆಗೆ ಮುನ್ನುಡಿ ಬರೆಯಲಾಯಿತು. ಸತತವಾಗಿ ಲಸಿಕೆ ನೀಡುತ್ತ ಬಂದ ಪರಿಣಾಮವಾಗಿ, 2014ರಲ್ಲಿ ಭಾರತವನ್ನು ಪೋಲಿಯೋಮುಕ್ತ ರಾಷ್ಟ್ರ ಎಂದು ಪರಿಗಣಿಸಲಾಗಿದೆ. ಎರಡು ಹನಿಗಳ ಪೋಲಿಯೋ ಲಸಿಕೆಯಿಂದ ಇಂಥದ್ದೊಂದು ಮಹತ್ವಪೂರ್ಣ ಕಾರ್ಯ ಸಾಧ್ಯವಾಗಿದೆ.
ಈಗ…ಕೊರೋನಾ ಲಸಿಕೆಯಾದರೂ ಅಷ್ಟೆ. ಇಂದಿನ ಮಟ್ಟಿಗೆ ಅಷ್ಟೇನೂ ಮಹತ್ವದ್ದಾಗಿ ಭಾಸವಾಗದಿದ್ದರೂ ಮುಂದೊಂದು ದಿನ ಕೊರೋನಾ ಬಾರದಂತೆ ಸಮಾಜವನ್ನು ರಕ್ಷಿಸುವ ಪ್ರಮುಖ ಟೂಲ್ ಆಗಿ ಬಳಕೆಯಾಗುತ್ತದೆ.
ಮಾರಣಾಂತಿಕ ರೋಗಗಳಿಂದ ರಕ್ಷಣೆ
ಸಮಾಜವನ್ನು ಕಂಗೆಡಿಸುವ ಹಲವಾರು ರೋಗಗಳಿಗೆ ಲಸಿಕೆಯ ಮೂಲಕವೇ ನಿಯಂತ್ರಣ ಹಾಕಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಲಸಿಕೆಗಳು ಪ್ರತಿವರ್ಷ 20-30 ಲಕ್ಷ ಜನರನ್ನು ರಕ್ಷಿಸುತ್ತಿವೆ. ನವಜಾತ ಶಿಶುವಿದ್ದಾಗಿನಿಂದ ನಿಯಮಿತವಾಗಿ ಲಸಿಕೆ ನೀಡುವ ಮೂಲಕ ದಡಾರ, ಧನುರ್ವಾತ, ಪೋಲಿಯೋ, ಸಿಡುಬು, ಕ್ಷಯದಂತಹ ಅನೇಕ ರೋಗಗಳಿಂದ ಲಕ್ಷಾಂತರ ಮಕ್ಕಳನ್ನು ರಕ್ಷಿಸಲಾಗಿದೆ. ಕ್ಷಯರೋಗ ಸಂಪೂರ್ಣವಾಗಿ ನಿರ್ಮೂಲನೆಯಾಗಿಲ್ಲವಾದರೂ ನಿಯಂತ್ರಣದಲ್ಲಿದೆ. 2030ರೊಳಗೆ ದೇಶದಲ್ಲಿ ಕ್ಷಯ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯನಿರ್ವಹಿಸುತ್ತಿದೆ.
ಲಸಿಕಾ ದಿನದ ಅಂಗವಾಗಿ ಲಸಿಕೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಈ ಕೊರೋನಾ ಕಾಲದಲ್ಲಂತೂ ಲಸಿಕೆಯ ಮಹತ್ವ ಬಲ್ಲವರು ಎಲ್ಲರಲ್ಲೂ ಅರಿವು ಮೂಡಿಸುವ ಕಾರ್ಯದಲ್ಲಿ ಭಾಗಿಯಾಗಬೇಕಿದೆ.

ಮತ್ತಷ್ಟು ಸುದ್ದಿಗಳು

Latest News

ಆಸ್ಪತ್ರೆಗೆ ನುಗ್ಗಿ 850 ರೆಮಿಡಿಸಿವರ್ ಇಂಜೆಕ್ಷನ್ ಕಳ್ಳತನ

newsics.com ಭೋಪಾಲ್(ಮಧ್ಯಪ್ರದೇಶ): ಇಲ್ಲಿನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ನುಗ್ಗಿದ ದುಷ್ಕರ್ಮಿಗಳು 850 ರೆಮಿಡಿಸಿವರ್ ಇಂಜೆಕ್ಷನ್ ಗಳನ್ನು ಕಳ್ಳತನ ಮಾಡಿದ್ದಾರೆ. ದೇಶದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ನಡುವೆ ಕಾಳಸಂತೆಯಲ್ಲಿ ಔಷಧ...

ಕೇಂದ್ರ ಸಚಿವ ಕಿರೆನ್ ರಿಜಿಜುಗೆ ಕೊರೋನಾ ಸೋಂಕು

newsics.com ನವದೆಹಲಿ: ಕೇಂದ್ರ ಸಚಿವ ಕಿರೆನ್ ರಿಜಿಜು ಅವರಿಗೆ ಶನಿವಾರ ಕೊರೋನಾ ಸೋಂಕು ತಗುಲಿದೆ. ಈ ವಿಷಯವನ್ನು ಸ್ವತಃ ಸಚಿವ ಕಿರೆನ್ ರಿಜಿಜು ಅವರೇ ತಿಳಿಸಿದ್ದಾರೆ. ಟ್ವಿಟರ್ ನಲ್ಲಿ ಈ‌ ಮಾಹಿತಿ ಹಂಚಿಕೊಂಡಿರುವ ರಿಜಿಜು,...

ಕೊರೋನಾ ಸೋಂಕಿತರ ಚಿಕಿತ್ಸೆಗೆ ‌ಬಳಸುವ ರೆಮ್​ಡಿಸಿವಿರ್ ಇಂಜೆಕ್ಷನ್ ಬೆಲೆ ಇಳಿಕೆ

newsics.com ನವದೆಹಲಿ: ಕೊರೋನಾ ಸೋಂಕಿತ ರೋಗಿಗಳ ಚಿಕಿತ್ಸೆಗೆ ಬಳಸುವ ರೆಮ್​ಡಿಸಿವಿರ್ ಇಂಜೆಕ್ಷನ್ ಬೆಲೆಯನ್ನು ಫಾರ್ಮಾ ಕಂಪೆನಿಗಳು ‌ಸ್ವಪ್ರೇರಣೆಯಿಂದ ಇಳಿಕೆ ಮಾಡಿವೆ. ಕೆಡಿಲಾ ಕಂಪನಿಯು ತನ್ನ ರೆಮ್ಡೆಕ್ ಬ್ರಾಂಡಿನ ರೆಮ್ಡೆಸಿವಿರ್ ಬೆಲೆಯನ್ನು 2800 ರೂ.ನಿಂದ 899 ರೂಪಾಯಿಗೆ...
- Advertisement -
error: Content is protected !!