Wednesday, July 6, 2022

ಮುಟ್ಟಿನ ಸಮಯದಲ್ಲೇಕೆ ಚಾಕೋಲೇಟ್ ತಿನ್ನುವಾಸೆ?

Follow Us

ಋತುಚಕ್ರ ಸಂದರ್ಭದಲ್ಲಿ ಹೊಟ್ಟೆ ನೋವು, ತಲೆ ನೋವು ಸಹಜ. ಕೆಲವರಿಗೆ ಅಧಿಕ ಪ್ರಮಾಣದಲ್ಲಿ ರಕ್ತಸ್ರಾವ ಆಗುವುದರಿಂದ ರಕ್ತಹೀನತೆ ಕಾಡಬಹುದು. ಇದರಿಂದ ಕಬ್ಬಿಣಾಂಶ ಕೊರತೆ ಕಾಡುತ್ತದೆ. ದೇಹದಿಂದ ಸಾಕಷ್ಟು ಪ್ರಮಾಣದಲ್ಲಿ ರಕ್ತ ಹಾಗೂ ದ್ರವಾಂಶಗಳ ನಷ್ಟ ಉಂಟಾಗುತ್ತದೆ. ತಾಮ್ರದ ‌ಹಾಗೂ ಕ್ರೋಮಿಯಂ ಅಂಶದ ಕೊರತೆ ಆಗುವ ಸಂಭವ ಹೆಚ್ಚಾಗಿರುತ್ತದೆ. ಇದೇ ಕಾರಣಕ್ಕೆ ಮಹಿಳೆಯರಿಗೆ ಚಾಕೋಲೇಟ್ ತಿನ್ನುವ ಆಸೆ ಹೆಚ್ಚಿರುತ್ತದೆ.


• ಡಾ. ಅಹಲ್ಯಾ
newsics.com@gmail.com

ಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ಹಲವು ದೈಹಿಕ ಸಮಸ್ಯೆಗಳು ಕಾಡುತ್ತವೆ. ಆದರೆ ಈ ಸಮಯದಲ್ಲಿ ಅತಿಯಾಗಿ ಸಿಹಿ ತಿನ್ನಬೇಕೆನ್ನುವ ಆಸೆಯೂ ಮೂಡುತ್ತದೆ. ಅಧ್ಯಯನಗಳ ಪ್ರಕಾರ, ಋತುಚಕ್ರದ ಸಂದರ್ಭದಲ್ಲಿ ಮಹಿಳೆಯರಿಗೆ ಸಿಹಿ ತಿನ್ನಬೇಕೆಂಬ ಆಸೆ ಮೂಡುತ್ತದೆ. ವಿಶೇಷವಾಗಿ ಚಾಕೋಲೇಟ್ ತಿನ್ನಲು ಇಷ್ಟಪಡುತ್ತಾರೆ. ಈ ಅವಧಿಯಲ್ಲಿ ಸಕ್ಕರೆ ಹೆಚ್ಚಿರುವ ಪದಾರ್ಥಗಳನ್ನು ಸೇವಿಸಬಹುದೇ?
ಮಿತ ಸೇವನೆ ಉತ್ತಮ…
ಚಾಕೋಲೇಟ್‌ನ್ನು ಇಷ್ಟಪಡಲು ವಯಸ್ಸಿನ ಮಿತಿಯಿಲ್ಲ. ಆದರೆ ಸಕ್ಕರೆ ಅಂಶವನ್ನು ಹೊಂದಿರುವ ಚಾಕೋಲೇಟ್ ತಿನ್ನುವಾಗ ಮಿತವಾಗಿ ತಿನ್ನುವುದು ಒಳ್ಳೆಯದು.
ಈ ವಿಷಯದಲ್ಲಿ ವೈದ್ಯರು ಹೇಳುವಂತೆ ಋತುಚಕ್ರ ಸಂದರ್ಭದಲ್ಲಿ ಹೊಟ್ಟೆ ನೋವು, ತಲೆ ನೋವು ಸಹಜ. ಕೆಲವರಿಗೆ ಅಧಿಕ ಪ್ರಮಾಣದಲ್ಲಿ ರಕ್ತಸ್ರಾವ ಆಗುವುದರಿಂದ ರಕ್ತಹೀನತೆ ಕಾಡಬಹುದು. ಇದರಿಂದ ಕಬ್ಬಿಣಾಂಶ ಕೊರತೆ ಕಾಡುತ್ತದೆ. ದೇಹದಿಂದ ಸಾಕಷ್ಟು ಪ್ರಮಾಣದಲ್ಲಿ ರಕ್ತ ಹಾಗೂ ದ್ರವಾಂಶಗಳ ನಷ್ಟ ಉಂಟಾಗುತ್ತದೆ. ತಾಮ್ರದ ‌ಹಾಗೂ ಕ್ರೋಮಿಯಂ ಅಂಶದ ಕೊರತೆ ಆಗುವ ಸಂಭವ ಹೆಚ್ಚಾಗಿರುತ್ತದೆ. ಇದೇ ಕಾರಣಕ್ಕೆ ಮಹಿಳೆಯರಿಗೆ ಚಾಕೋಲೇಟ್ ತಿನ್ನುವ ಆಸೆ ಉಂಟಾಗುತ್ತದೆ.

ಅಡ್ಡ ಪರಿಣಾಮವಿಲ್ಲ…
ಚಾಕೋಲೇಟ್‌ನಲ್ಲಿ ಅಧಿಕ ಪ್ರಮಾಣದಲ್ಲಿ ಕಾಪರ್ ಹಾಗೂ ಕ್ರೋಮಿಯಂ ಅಂಶ ಇರುವುದರಿಂದ ಅಡ್ಡ ಪರಿಣಾಮಗಳಿಲ್ಲ. ಇವೆರಡೂ ದೇಹಕ್ಕೆ ಬೇಕಾದ ಖನಿಜಾಂಶಗಳು ಆಗಿರುವುದರಿಂದ ಹಣ್ಣು, ತರಕಾರಿಗಳ ಜತೆ ಚಾಕೋಲೇಟ್‌ನ್ನು ಮಿತವಾಗಿ ಸೇವಿಸಬಹುದಾಗಿದೆ.
ತೂಕ ಹೆಚ್ಚಳ…
ತೂಕ ಇಳಿಸಬೇಕು ಎಂಬ ಯೋಚನೆ ಇದ್ದರೆ ಚಾಕೋಲೇಟ್ ವಿಷಯದಲ್ಲಿ ಜಾಗರೂಕರಾಗಿರಿ. ಅಧಿಕ ಪ್ರಮಾಣದ ಸಕ್ಕರೆ ಹಾಗೂ ಕ್ಯಾಲೋರಿಗಳು ಇದರಲ್ಲಿರುವುದರಿಂದ ತೂಕ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಈ ಸಮಯದಲ್ಲಿ ಕಲ್ಲಂಗಡಿ ಹಣ್ಣು, ವಾಲ್ನಟ್, ಪಿಸ್ತಾ ಮುಂತಾದ ಡ್ರೈಫ್ರೂಟ್ಸ್ ಗಳನ್ನು ಸೇವಿಸಿ. ಇವುಗಳಲ್ಲಿ ಕಾಪರ್ ಹಾಗೂ ಕ್ರೋಮಿಯಂ ಅಂಶ ಹೆಚ್ಚಾಗಿರುತ್ತದೆ.

ಮತ್ತಷ್ಟು ಸುದ್ದಿಗಳು

vertical

Latest News

ನಡು ರಸ್ತೆಯಲ್ಲಿ ಮುದ್ದಾದ ಮರಿಗೆ ಜನ್ಮ ನೀಡಿದ ಆನೆ: 1 ಗಂಟೆಗಳ ಸಂಚಾರ ಸ್ಥಗಿತ

newsics.com ಕೇರಳ: ತಮಿಳುನಾಡು - ಕೇರಳ ಸಂಪರ್ಕಿಸುವ ಇಡುಕ್ಕಿಯ ಹೈರೇಂಜ್​ ಜಿಲ್ಲೆಯ ಮರಯೂರು ರಾಷ್ಟ್ರೀಯ ಹೆದ್ದಾರಿ ಮಧ್ಯದಲ್ಲೇ ಆನೆಯೊಂದು ಮರಿಗೆ ಜನ್ಮ ನೀಡಿದೆ. ಪರಿಣಾಮ ಸುಮಾರು ಒಂದು...

ವೈಫ್ ಸ್ವ್ಯಾಪಿಂಗ್:ಪತ್ನಿಗೆ ಕಿರುಕುಳ ನೀಡುತ್ತಿದ್ದ ಉದ್ಯಮಿಯ ವಿರುದ್ಧ ಎಫ್ಐಆರ್ ದಾಖಲು

newsics.com ದೆಹಲಿ: ವೈಫ್ ಸ್ವ್ಯಾಪಿಂಗ್ ಪಾರ್ಟಿಗಳಿಗೆ ಹಾಜರಾಗುವಂತೆ ಪತ್ನಿಯನ್ನು  ಬಲವಂತಾಗಿ ಕರೆದೊಯ್ಯುತ್ತಿದ್ದ  ಗುರುಗ್ರಾಮ್ ಉದ್ಯಮಿಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಉದ್ಯಮಿಯ ಪತ್ನಿ, ತಾನು ನಿರಾಕರಿಸಿದರೆ ತನ್ನ ಪತಿ  ಲೈಂಗಿಕ ಕಿರುಕುಳ ನೀಡುತ್ತಿದ್ದ ಅಲ್ಲದೇ ರಕ್ಷಣೆಗೆ ಗುರುಗ್ರಾಮ್...

ಕೇಂದ್ರ ಸಚಿವರ ರಾಜೀನಾಮೆ: ಸ್ಮೃತಿ ಇರಾನಿ, ಸಿಂಧಿಯಾಗೆ ಹೆಚ್ಚುವರಿ ಖಾತೆಗಳ ಹೊಣೆ

newsics.com ನವದೆಹಲಿ: ಮುಖ್ತಾರ್ ಅಬ್ಬಾಸ್ ನಖ್ವಿ ಅವರ ರಾಜೀನಾಮೆಯ ನಂತರ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೆ ಈಗಾಗಲೇ ಇರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆಯ ಜೊತೆಗೆ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಜವಾಬ್ದಾರಿಯನ್ನು...
- Advertisement -
error: Content is protected !!