Saturday, January 23, 2021

ಸ್ವಚ್ಛತೆಗೆ ನಮ್ಮ ಕೊಡುಗೆಯೂ ಇರಲಿ

ಇಂದು (ನವೆಂಬರ್ 19) ವಿಶ್ವ ಶೌಚಾಲಯ ದಿನ. ಈ ಬಾರಿಯ ಘೋಷವಾಕ್ಯ “ಸುಸ್ಥಿರ ಸ್ವಚ್ಛತೆ ಮತ್ತು ಹವಾಮಾನ ಬದಲಾವಣೆ’. ಶೌಚಕ್ಕೆ ಸಂಬಂಧಿಸಿದ ಸ್ವಚ್ಛತೆ ಮನುಷ್ಯನಿಗೆ ಯಾವಾಗಲೂ ಅಗತ್ಯ. ಇಂದಿನ ಕೋವಿಡ್-19 ಸನ್ನಿವೇಶದಲ್ಲಂತೂ ಸ್ವಚ್ಛತೆಯ ಅಗತ್ಯ ಹಿಂದಿಗಿಂತ ಹೆಚ್ಚಾಗಿದೆ.
  ಇಂದು ವಿಶ್ವ ಶೌಚಾಲಯ ದಿನ  
newsics.com Features Desk


 ಒಂ ದೇ ಒಂದು ಗ್ರಾಮ್ ಮನುಷ್ಯನ ಮಲದಲ್ಲಿ ಲಕ್ಷಾಂತರ ವೈರಸ್, ಬ್ಯಾಕ್ಟೀರಿಯಾ, ಪರಾವಲಂಬಿ ಜೀವಿಗಳು ಬದುಕಿರುತ್ತವೆ. ಇವುಗಳೇ ಪ್ರತಿ ವರ್ಷ ಭಾರತದಂಥ ದೇಶದಲ್ಲಿ ಬರೋಬ್ಬರಿ ಒಂದು ಲಕ್ಷ ಸಾವುಗಳಿಗೆ ಕಾರಣವಾಗುತ್ತವೆ. ಮನುಷ್ಯನ ಮಲವೇ ಡಯೇರಿಯಾ ರೂಪದಲ್ಲಿ ಬಂದೆರಗಿ ಐದು ವರ್ಷದೊಳಗಿನ ಮಕ್ಕಳ ಸಾವಿಗೆ ಕಾರಣವಾಗುತ್ತದೆ. ರೋಗಗ್ರಸ್ತ ಮಕ್ಕಳ ಲಿವರ್ ಅಥವಾ ಯಕೃತ್ತು ಹಾನಿಗೊಳಗಾಗಿ ಆಹಾರದಲ್ಲಿನ ಪೌಷ್ಟಿಕಾಂಶವನ್ನು ಹೀರಿಕೊಳ್ಳಲು ಸಾಧ್ಯವಾಗದೆ ಅವರು ಹಲವಾರು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುವಂತೆ ಮಾಡುತ್ತದೆ. ಅಪೌಷ್ಟಿಕತೆ, ನ್ಯೂಮೋನಿಯಾದಿಂದ ಬಳಲುವಂತೆ ಮಾಡುತ್ತದೆ. ಇಂಥ ಅನಾರೋಗ್ಯದಿಂದ ದೈಹಿಕವಾಗಿ ಮಾತ್ರವಲ್ಲ, ಮಾನಸಿಕ ಹಾಗೂ ಸಾಮಾಜಿಕ ಹಿನ್ನಡೆ ಉಂಟಾಗುತ್ತದೆ. ಶಿಕ್ಷಣ ಪಡೆಯುವ ಸಾಮರ್ಥ್ಯವೂ ಕುಂಠಿತವಾಗಬಹುದು.
ಲಕ್ಷಾಂತರ ಮಕ್ಕಳ ಅನಾರೋಗ್ಯ, ತನ್ಮೂಲಕ ಒಟ್ಟಾರೆ ದೇಶದ ಹಿನ್ನಡೆಗೆ ಮನುಷ್ಯನ ಮಲವೇ ಮೂಲವಾಗುತ್ತದೆ ಎಂದರೆ ನಂಬಲು ಅಸಾಧ್ಯವಾಗಬಹುದು. ಆದರೆ, ಇದೆಲ್ಲವನ್ನೂ ಭಾರತ ಅನುಭವಿಸಿದೆ. ಶತಮಾನಗಳ ಬಯಲುಶೌಚದಿಂದ ಸಾಕಷ್ಟು ರೀತಿಯ ಸಮಸ್ಯೆಯನ್ನು ಅನುಭವಿಸಿಯೇ ಇತ್ತೀಚೆಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡುತ್ತಿದೆ. ಸ್ವಚ್ಛತೆಯ ಕೊರತೆಯೇ ಸಮಸ್ಯೆಯ ಮೂಲವಾಗಿರುವಾಗ ಪರಿಹಾರ ಕಂಡುಕೊಳ್ಳಬೇಕಾದುದು ಅಗತ್ಯ. ಈ ನಿಟ್ಟಿನಲ್ಲಿ ಭಾರತ ಕಳೆದ ನಾಲ್ಕಾರು ವರ್ಷಗಳಿಂದ ಬಯಲುಶೌಚ ಮುಕ್ತ ರಾಷ್ಟ್ರವಾಗುವ ನಿಟ್ಟಿನಲ್ಲಿ ದಾಪುಗಾಲಿಟ್ಟಿದೆ.
6 ಲಕ್ಷ ಹಳ್ಳಿಗಳು ಬಯಲುಶೌಚ ಮುಕ್ತ
2014ರಿಂದ ಭಾರತ ಸರ್ಕಾರ ಯುನಿಸೆಫ್ ಸಹಕಾರದೊಂದಿಗೆ ಬಯಲುಶೌಚ ಮುಕ್ತ ರಾಷ್ಟ್ರವಾಗುವತ್ತ ಗಮನಾರ್ಹ ಹೆಜ್ಜೆಗಳನ್ನಿಟ್ಟಿದೆ. ಪರಿಣಾಮವಾಗಿ, ಯುನಿಸೆಫ್ ವರದಿ ಪ್ರಕಾರ 2020ರ ಜನವರಿವರೆಗೆ ದೇಶದ 706 ಜಿಲ್ಲೆಗಳ 6 ಲಕ್ಷಕ್ಕೂ ಅಧಿಕ ಹಳ್ಳಿಗಳು ಬಯಲುಶೌಚ ಮುಕ್ತವಾಗಿವೆ. ಇಷ್ಟು ಸಾಧನೆಯ ಹೊರತಾಗಿಯೂ ಭಾರತದಲ್ಲಿ ಶೌಚಾಲಯದ ಸಮಸ್ಯೆ ತೀವ್ರವಾಗಿದೆ. ಹಲವೆಡೆ ಶೌಚಾಲಯಗಳಿದ್ದರೂ ನೀರಿನ ಸಮಸ್ಯೆ ಅಧಿಕವಾಗಿರುವ ಹಿನ್ನೆಲೆಯಲ್ಲಿ ಶೌಚಾಲಯಗಳು ಪ್ರಯೋಜನಕ್ಕೆ ಬರುತ್ತಿಲ್ಲ. ಆರ್ಥಿಕ ಸಮಸ್ಯೆಯೂ ಶೌಚಾಲಯಗಳನ್ನು ನಿರ್ಮಿಸುವಲ್ಲಿ ಹಿನ್ನಡೆಯಾಗಿದೆ.
ಸ್ವಚ್ಛತೆಯ ಕುರಿತು ಸಕಾರಾತ್ಮಕ ದೃಷ್ಟಿಕೋನ
ಪ್ರಧಾನಿ ನರೇಂದ್ರ ಮೋದಿ ಅವರು ಆರಂಭಿಸಿದ ಸ್ವಚ್ಛ ಭಾರತ್ ಮಿಷನ್ ಜನರ ಮನಸ್ಥಿತಿಯನ್ನು ಬದಲಿಸುವಲ್ಲಿ ಯಶಸ್ವಿಯಾಗಿದೆ ಎಂದರೆ ತಪ್ಪಿಲ್ಲ. ಯುನಿಸೆಫ್ ಪ್ರಕಾರ, 2014ರಿಂದ ಭಾರತದಲ್ಲಿ ಸುಮಾರು 5 ಕೋಟಿ ಜನ ಬಯಲುಶೌಚ ಪದ್ಧತಿಗೆ ವಿದಾಯ ಹೇಳಿದ್ದಾರೆ. ಇದು ಖಂಡಿತವಾಗಿ ಸ್ವಚ್ಛ ಭಾರತ್ ಮಿಷನ್ ಯೋಜನೆಯ ಪರಿಣಾಮವೇ ಆಗಿದೆ.
ಸುಸ್ಥಿರ ಸ್ವಚ್ಛತೆ ಮತ್ತು ಹವಾಮಾನ ಬದಲಾವಣೆ
ಪ್ರತಿವರ್ಷ ನವೆಂಬರ್ 19ರಂದು ವಿಶ್ವ ಶೌಚಾಲಯ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿಯ ಥೀಮ್ “ಸುಸ್ಥಿರ ಸ್ವಚ್ಛತೆ ಮತ್ತು ಹವಾಮಾನ ಬದಲಾವಣೆ’. 2030ರೊಳಗೆ ಎಲ್ಲರಿಗೂ ನೀರು ಮತ್ತು ಸ್ವಚ್ಛತೆ ಒದಗಿಸುವ ಗುರಿಯೊಂದಿಗೆ ಈ ಬಾರಿ ಶೌಚಾಲಯ ದಿನವನ್ನು ಆಚರಿಸಲಾಗುತ್ತಿದೆ.
ಹವಾಮಾನ ಬದಲಾವಣೆ ದಿನದಿಂದ ದಿನಕ್ಕೆ ವಿಪರೀತ ಮಟ್ಟಕ್ಕೆ ಏರುತ್ತಿದೆ. ಇದರಿಂದಾಗಿ, ಪ್ರವಾಹ, ಬರಗಾಲ, ಸಮುದ್ರಮಟ್ಟ ಏರಿಕೆ ಆಗುತ್ತಿದೆ. ಇಂಥ ಸನ್ನಿವೇಶದಲ್ಲೂ ಸುಸ್ಥಿರ ಸ್ವಚ್ಛತೆಯ ಸೌಲಭ್ಯ ಎಲ್ಲರಿಗೂ ಒದಗಬೇಕು ಎನ್ನುವುದು ಇದರ ಹಿಂದಿನ ಆಶಯವಾಗಿದೆ. ಕೋವಿಡ್-19 ಸನ್ನಿವೇಶದಲ್ಲಂತೂ ಇದರ ಮಹತ್ವ ಹಿಂದಿಗಿಂತ ಹೆಚ್ಚಾಗಿದೆ.

ಮತ್ತಷ್ಟು ಸುದ್ದಿಗಳು

Latest News

ಒಂದೇ ದಿನ 14,256 ಜನರಿಗೆ ಕೊರೋನಾ ಸೋಂಕು,152 ಮಂದಿ ಸಾವು

Newsics.com ನವದೆಹಲಿ: ದೇಶದಲ್ಲಿ ಕೊರೋನಾದ  ಅಬ್ಬರ ಮುಂದುವರಿದಿದೆ.ಕಳೆದ  24 ಗಂಟೆಯಲ್ಲಿ  14, 256 ಮಂದಿಯಲ್ಲಿ  ಕೊರೋನಾ ಸೋಂಕು ದೃಢಪಟ್ಟಿದೆ.  ಇದರೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ1,06.39,684 ಕ್ಕೆ...

ಪ್ರತಿಭಟನಾ ನಿರತ ರೈತರ ಹತ್ಯೆಗೆ ಸಂಚು: ಆರೋಪಿ ಬಂಧನ

Newsics.com ನವದೆಹಲಿ: ಕೇಂದ್ರದ ಕೃಷಿ ನೀತಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತ ಮುಖಂಡರ ಮೇಲೆ ಗುಂಡಿನ ದಾಳಿ ನಡೆಸಿ ರಕ್ತಪಾತ ಹರಿಸಲು ಸಂಚು ಹೂಡಿದ್ದ ಆರೋಪಿಯನ್ನು ರೈತರು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಯ ಹೆಸರು...

ಮನೆಗೆ ನುಗ್ಗಿ 15 ವರ್ಷದ ಬಾಲಕಿಯ ಬರ್ಬರ ಹತ್ಯೆ

Newsics.com ಪಾಟ್ನ: ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಅತ್ಯಂತ ದಾರುಣ ಕೃತ್ಯ ನಡೆದಿದೆ. ಮನೆಯೊಂದಕ್ಕೆ ದಾಳಿ ನಡೆಸಿದ ದುಷ್ಕರ್ಮಿಗಳು 15 ವರ್ಷದ ಬಾಲಕಿಯನ್ನು ಹತ್ಯೆ ಮಾಡಿದ್ದಾರೆ. ಕತ್ತಿಯಿಂದ ಕಡಿದು ಈ ಹತ್ಯೆ ಮಾಡಲಾಗಿದೆ. ಮೃತಪಟ್ಟ ಬಾಲಕಿಯನ್ನು  ಅಂಶು...
- Advertisement -
error: Content is protected !!