newsics.com
ಜೀವ ರಕ್ಷಣೆ ಮಹತ್ಕಾರ್ಯಗಳಲ್ಲೊಂದು. ಅದು ರಕ್ತದಾನದಿಂದಲೂ ಸಾಧ್ಯ. ಪ್ರತೀ ವ್ಯಕ್ತಿಯ ದೇಹದಲ್ಲಿ ಸರಿಸುಮಾರು 5 ಲೀನಷ್ಟು ರಕ್ತವಿರುತ್ತದೆ. ದೇಹಕ್ಕೆ 3 ಲೀ ರಕ್ತ ಸಾಕಾಗುತ್ತದೆ. ಹೀಗಾಗಿ ರಕ್ತವನ್ನು ದಾನ ಮಾಡುವುದರಿಂದ ಇನ್ನೊಂದು ಜೀವವನ್ನೂ ಉಳಿಸಬಹುದು ಜತೆಗೆ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬಹುದು.
ಇಂದು (ಜೂನ್ 14) ವಿಶ್ವ ರಕ್ತದಾನಿಗಳ ದಿನ. 18 ರಿಂದ 65 ವರ್ಷದೊಳಗಿನ ಯಾವುದೇ ಆರೋಗ್ಯವಂತ ವ್ಯಕ್ತಿ ಕೂಡ ರಕ್ತದಾನವನ್ನು ಮಾಡಬಹುದು. ಆದರೆ ರಕ್ತದಾನಕ್ಕೂ ಮುನ್ನ ಒಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು.
ನಿಯಮಿತವಾಗಿ ರಕ್ತದಾನ ಮಾಡುತ್ತಿದ್ದರೆ ಪುರುಷರು ಪ್ರತಿ 3 ತಿಂಗಳಿಗೊಮ್ಮೆ ಹಾಗೂ ಮಹಿಳೆಯರು ಪ್ರತೀ 4 ತಿಂಗಳಿಗೊಮ್ಮೆ ರಕ್ತವನ್ನು ದಾನ ಮಾಡಬಹುದಾಗಿದೆ. ರಕ್ತದಾನದಿಂದ ದೇಹದಲ್ಲಿ ಶುದ್ಧ, ಹೊಸ ರಕ್ತಕಣಗಳ ಉತ್ಪಾದನೆ ಸಾಧ್ಯವಾಗುವುದು. ಹೀಗಾಗಿ ರಕ್ತದಾನ ಮಾಡಿ, ಜೀವ ಉಳಿಸಿ – ಆರೋಗ್ಯವನ್ನೂ ಕಾಪಾಡಿಕೊಳ್ಳಿ.
ಆದರೆ ನೆನಪಿಡಿ ಇತ್ತೀಚೆಗೆ ಹಚ್ಚೆ ಹಾಕಿಸಿಕೊಂಡಿದ್ದರೆ ರಕ್ತದಾನ ಮಾಡುವಂತಿಲ್ಲ. ಇನ್ನು ಜ್ವರ, ಶೀತ ಇರುವವರು, ಗರ್ಭಿಣಿಯರು, 50 ಕೆಜಿಗಿಂತ ಕಡಿಮೆ ತೂಕ ಇರುವವರು ಅಥವಾ ಇನ್ನಿತರ ಕಾಯಿಲೆಗಳಿರುವವರು ರಕ್ತದಾನ ಮಾಡಬಾರದು.