Monday, March 1, 2021

ಮುನ್ನೆಚ್ಚರಿಕೆ, ಆತ್ಮವಿಶ್ವಾಸವೇ ಕ್ಯಾನ್ಸರ್’ಗೆ ಮದ್ದು

ಇಂದು (ಫೆಬ್ರವರಿ 4) ವಿಶ್ವ ಕ್ಯಾನ್ಸರ್ ದಿನ. ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವುದ, ಮುನ್ನೆಚ್ಚರಿಕೆ ಹಾಗೂ ಆತ್ಮವಿಶ್ವಾಸದೊಂದಿಗೆ ಕ್ಯಾನ್ಸರ್ ವಿರುದ್ಧದ ಹೋರಾಟ ನಡೆಯಬೇಕೆನ್ನುವ ನಿಟ್ಟಿನಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ.

   ಇಂದು ವಿಶ್ವ ಕ್ಯಾನ್ಸರ್ ದಿನ   

♦ ಡಾ.ಸುಮನ್
newsics.com@gmail.com


 ದೇ ಹದ್ದೇ ಭಾಗದ ಪುಟಾಣಿ ಅಣುವೊಂದು ವಿಷವಾಗಿ ಬೆಳೆದು ದೇಹವನ್ನೇ ಕಿತ್ತು ತಿನ್ನುವುದು ಅದೇಗೆ ಸಾಧ್ಯ ಎಂದು ಅಚ್ಚರಿ ಪಡುವಷ್ಟರಲ್ಲಿಯೇ ಮಾನವನ ಬದುಕಿಗೆ ಎರವಾಗಿ ಕಾಡುತ್ತಿದೆ ಕ್ಯಾನ್ಸರ್.
ಅಲ್ಲೆಲ್ಲೋ ದೂರದಲ್ಲಿ ಕೇಳುತ್ತಿದ್ದ ಕ್ಯಾನ್ಸರ್ ರೋಗ ಈಗ ಮನೆಮನೆಯ ಕದ ತಟ್ಟಿದೆ. ಬಹುದೊಡ್ಡ ಸವಾಲಾಗಿ ಕಾಡುತ್ತಿದೆ. ವಿಶ್ವವ್ಯಾಪಿ ಪಿಡುಗಾಗಿ ಪರಿಣಮಿಸಿರುವ ಕ್ಯಾನ್ಸರ್ ನಿಯಂತ್ರಣಕ್ಕೆಂದೇ ಪ್ರತಿವರ್ಷ ಫೆಬ್ರವರಿ 4ರಂದು “ವಿಶ್ವ ಕ್ಯಾನ್ಸರ್ ದಿನ’ವನ್ನು ಆಚರಿಸಲಾಗುತ್ತದೆ.
ಬೆಂಗಳೂರಿನ ಕಿದ್ವಾಯಿಯಂಥ ಕ್ಯಾನ್ಸರ್ ಸಂಸ್ಥೆಗೆ ಹೋದರೆ ಬಡ ಜನರ ಜೀವನವನ್ನು ಕ್ಯಾನ್ಸರ್ ಹೇಗೆ ತಿಂದುಹಾಕುತ್ತಿದೆ ಎನ್ನುವುದು ತಿಳಿಯುತ್ತದೆ. ಮಕ್ಕಳ ವಾರ್ಡ್ ಗೆ ಹೋದರಂತೂ ಕರುಳು ಕಿವುಚಿದಂತಾಗುತ್ತದೆ. ಏನೂ ಅರಿಯದ ಮುಗ್ಧ ಕಂದಮ್ಮಗಳು ಕೆಲವೊಮ್ಮೆ ಅಲ್ಲಲ್ಲಿ ಆಟವಾಡಿಕೊಂಡು, ಇನ್ನೊಮ್ಮೆ ನೋವನ್ನುಣ್ಣುತ್ತ ಮಲಗಿರುತ್ತವೆ. ತಾಯ್ತಂದೆಯರ ಕಣ್ಣುಗಳಲ್ಲಿ ಮಾತ್ರ ಮುಗಿಯದ ಆತಂಕ, ಸಂಕಟ. ಹೌದು, ಭಾರತದಂಥ ದೇಶದ ಜನಜೀವನ ಹಾಗೂ ಆರ್ಥಿಕತೆಯನ್ನು ಅಲ್ಲಾಡಿಸಲು ಕ್ಯಾನ್ಸರೊಂದು ಸಾಕು. ಅಷ್ಟರಮಟ್ಟಿಗೆ ಕ್ಯಾನ್ಸರ್ ದುಬಾರಿ ಹಾಗೂ ಸುಲಭವಾಗಿ ಚಿಕಿತ್ಸೆ ದಕ್ಕದ ಆರೋಗ್ಯ ಸಮಸ್ಯೆಯಾಗಿ ಕಾಡುತ್ತಿದೆ.
ಮುಂಚಿತವಾಗಿ ಪತ್ತೆ ಮಾಡುವ ಸವಾಲು
ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವುದು ಹಾಗೂ ರೋಗದ ಕುರಿತಾಗಿರುವ ಭಯವನ್ನು ಹೋಗಲಾಡಿಸುವುದು ಕ್ಯಾನ್ಸರ್ ದಿನದ ಆಚರಣೆಯ ಮುಖ್ಯ ಉದ್ದೇಶ. ಜಾಗತಿಕ ಮಟ್ಟದಲ್ಲಿ ಸಾವಿಗೆ ಕಾರಣವಾಗುತ್ತಿರುವ ಸಾಂಕ್ರಾಮಿಕವಲ್ಲದ ಎರಡನೇ ಅತಿಡೊಡ್ಡ ರೋಗವಾಗಿರುವುದು ಕ್ಯಾನ್ಸರ್. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಕ್ಯಾನ್ಸರ್ ಇರುವಿಕೆಯನ್ನು ಪತ್ತೆ ಮಾಡುವುದು ಅತ್ಯಂತ ಮುಖ್ಯ. ಇದರಿಂದ ಕ್ಯಾನ್ಸರ್ ಪರಿಣಾಮಗಳನ್ನು ಸಾಕಷ್ಟು ಕುಂಠಿತಗೊಳಿಸಬಹುದು.
ಇಂದು ಎಷ್ಟೋ ಜನ ಮನೋಸ್ಥೈರ್ಯದಿಂದ ಕ್ಯಾನ್ಸರ್ ಎದುರಿಸಿ ಸಾಮಾನ್ಯ ಬದುಕಿಗೆ ಮರಳಿದ್ದಾರೆ. ಅಂಥವರ ಯಶೋಗಾಥೆಗಳು ಕ್ಯಾನ್ಸರ್ ಪೀಡಿತರಿಗೆ ಧೈರ್ಯ ಮೂಡಿಸುತ್ತವೆ. ಈ ನಿಟ್ಟಿನಲ್ಲಿ ಇತ್ತೀಚೆಗೆ ಅನೇಕ ಸಂಘ ಸಂಸ್ಥೆಗಳು ಕ್ಯಾನ್ಸರ್ ನಿಂದ ಗುಣಮುಖರಾದವರ ಯಶಸ್ವಿ ಪಯಣವನ್ನು ಸಮಾಜದೊಂದಿಗೆ ಹಂಚಿಕೊಳ್ಳುವ ಕಾರ್ಯ ನಡೆಸುತ್ತಿವೆ.
ಮುನ್ನೆಚ್ಚರಿಕೆ ಹಾಗೂ ಆತ್ಮವಿಶ್ವಾಸ
ಕ್ಯಾನ್ಸರ್ ಬಗ್ಗೆ ಜನಜಾಗೃತಿ ಮೂಡಿಸುವುದೊಂದು ಸವಾಲು. ಭಾರತದಂಥ ದೇಶದಲ್ಲಿ ದೇಹದಲ್ಲಿ ನೋವಿದ್ದರೂ ಮನೆಮದ್ದು ಮಾಡಿಕೊಂಡು ವರ್ಷಾನುಗಟ್ಟಲೆ ಕಾಲ ಕಳೆಯುವ ಜನರಿದ್ದಾರೆ. ಆದರೆ, ಕ್ಯಾನ್ಸರ್ ಹಾಗೂ ಅದರ ಪರಿಣಾಮಗಳನ್ನು ನಿಯಂತ್ರಿಸಲು ಮುಂಚಿತವಾಗಿ ಪತ್ತೆ ಹಚ್ಚುವುದೇ ಹೆಚ್ಚು ಮುಖ್ಯ. ಎಲ್ಲರೂ ಸೇರಿ ಕ್ಯಾನ್ಸರ್ ನಿಯಂತ್ರಿಸಿದರೆ ಜಾಗತಿಕ ಆರೋಗ್ಯ ಹಾಗೂ ಆರ್ಥಿಕತೆ ಸುಧಾರಿಸುತ್ತದೆ. 2019ರಲ್ಲಿ “ನಾನು ಮಾಡುತ್ತೇನೆ ಮನ್ನು ನನ್ನಿಂದ ಸಾಧ್ಯವಿದೆ ಎನ್ನುವ ಘೋಷವಾಕ್ಯದಡಿ ಕ್ಯಾನ್ಸರ್ ಜಾಗೃತಿ ಹಾಗೂ ಅದರ ವಿರುದ್ಧ ಹೋರಾಡುವ ಅಭಿಯಾನ ರೂಪಿಸಲಾಗಿತ್ತು. 2021ರವರೆಗೂ ಅದನ್ನೇ ಮುಂದುವರಿಸಲಾಗಿದೆ. ಮುನ್ನೆಚ್ಚರಿಕೆ ಹಾಗೂ ಆತ್ಮವಿಶ್ವಾಸವೇ ಕ್ಯಾನ್ಸರ್ ಎದುರಿಸಲು ಇರುವ ಮಾರ್ಗಗಳು.
ಮಕ್ಕಳಲ್ಲಿ ಹೆಚ್ಚುತ್ತಿರುವ ರಕ್ತದ ಕ್ಯಾನ್ಸರ್
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಜಗತ್ತಿನ ಶೇ.60ರಷ್ಟು ಕುತ್ತಿಗೆ ಮತ್ತು ತಲೆ ಕ್ಯಾನ್ಸರ್ ಪ್ರಕರಣಗಳು ಭಾರತದಲ್ಲಿ ಕಂಡುಬರುತ್ತವೆ. 2030ರ ವೇಳೆಗೆ ಈ ಪ್ರಮಾಣ ಅಧಿಕವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇದಕ್ಕೆ ಇಲ್ಲಿ ತಂಬಾಕು ಸೇವನೆ ಅತಿಯಾಗಿರುವುದೂ ಕಾರಣವೆಂದು ಗುರುತಿಸಲಾಗಿದೆ. ಇನ್ನು, ಮಕ್ಕಳಲ್ಲಿ ಹೆಚ್ಚುತ್ತಿರುವ ರಕ್ತದ ಕ್ಯಾನ್ಸರ್ ಪ್ರಕರಣಗಳು ತಲೆನೋವಾಗಿವೆ. 2020ರಲ್ಲಿ 20 ಸಾವಿರ ಹೊಸ ರಕ್ತದ ಕ್ಯಾನ್ಸರ್ ಪ್ರಕರಣಗಳು ಮಕ್ಕಳಲ್ಲಿ ಪತ್ತೆಯಾಗಿವೆ. ಇವುಗಳಲ್ಲಿ 15 ಸಾವಿರ ಪ್ರಕರಣಗಳನ್ನು ಲ್ಯುಕೇಮಿಯಾ ಎಂದು ಗುರುತಿಸಲಾಗಿದೆ.
ಕ್ಯಾನ್ಸರ್ ಏರಿಕೆಗೆ ಕಾರಣವೇನು?
ಕ್ಯಾನ್ಸರ್ ಗೆ ವಾಯುಮಾಲಿನ್ಯ, ಜೀವನಶೈಲಿ ಕಾರಣವೆನ್ನುತ್ತಾರೆ. ಆದರೆ, ವಾಯುಮಾಲಿನ್ಯವೇನೂ ಇರದ, ಸರಳ ಜೀವನಶೈಲಿಯಿರುವ ಉತ್ತರ ಕನ್ನಡದಂಥ ಅಪ್ಪಟ ಅರಣ್ಯ ಪ್ರದೇಶದಲ್ಲೂ ಈಗ ಕ್ಯಾನ್ಸರ್ ತಾಂಡವವಾಡುತ್ತಿದೆ. ಮಂಗಳೂರಿನ ಕ್ಯಾನ್ಸರ್ ಆಸ್ಪತ್ರೆಗಳಿಗೆ ಹೋದರೆ ಉತ್ತರ ಕನ್ನಡದವರೇ ಅಧಿಕ ಜನ ಚಿಕಿತ್ಸೆ ಪಡೆದುಕೊಳ್ಳುತ್ತಿರುವುದು ಕಂಡುಬರುತ್ತದೆ. ಕರಾವಳಿ ಹಾಗೂ ಮಲೆನಾಡನ್ನು ಹೊಂದಿರುವ ಉತ್ತರ ಕನ್ನಡದಲ್ಲಿ ಕ್ಯಾನ್ಸರ್ ಹೆಚ್ಚಳವಾಗಲು ಸಮೀಪದ ಕೈಗಾ ಅಣುಸ್ಥಾವರ ಕಾರಣವೆಂದು ಜನ ಮಾತನಾಡಿಕೊಳ್ಳುತ್ತಾರೆ, ಆದರೆ ಈ ಕುರಿತು ನಿಖರ ಅಧ್ಯಯನ ನಡೆಸುವವರು ಯಾರು? ಆದರೆ, ಪ್ರದೇಶಗಳ ಹಂಗಿಲ್ಲದೆ ಎಲ್ಲ ಭಾಗಗಳಲ್ಲೂ ಕ್ಯಾನ್ಸರ್ ಏರಿಕೆಯಾಗಿರುವುದೂ ಸಹ ಅಷ್ಟೇ ಸತ್ಯವಾದ ಸಂಗತಿ.

ಮತ್ತಷ್ಟು ಸುದ್ದಿಗಳು

Latest News

ಕಾಡಾನೆ ಜತೆ ಸೆಲ್ಪಿ ತೆಗೆಯಲು ಹೋಗಿ ಪ್ರಾಣ ಕಳೆದುಕೊಂಡ ಯುವಕ

newsics.com ರಾಂಚಿ:  ಛತ್ತೀಸ್ ಗಢದಲ್ಲಿ ಕಾಡಾನೆ ಜತೆ ಸೆಲ್ಪಿ ತೆಗೆಯಲು ಯತ್ನಿಸಿದ ಯವಕ ಆನೆ ದಾಳಿಯಿಂದ ಪ್ರಾಣ ಕಳೆದುಕೊಂಡಿದ್ದಾನೆ. ಮೃತಪಟ್ಟ ಯುವಕನನ್ನು  ಮನೋಹರ್ ಪಟೇಲ್ ಎಂದು ಗುರುತಿಸಲಾಗಿದೆ. ರಾಯಗಢ...

ಅಸ್ಸಾಂನಲ್ಲಿ ಅಪಘಾತ: ಮೈಸೂರಿನ ಯೋಧ ಸಾವು

newsics.com ಗುವಾಹಟಿ:  ಅಸ್ಸಾಂನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೈಸೂರು ಮೂಲದ ಯೋಧರೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.  ಮೃತಪಟ್ಟ ಯೋಧನನ್ನು ತಿ. ನರಸಿಪುರ ತಾಲೂಕಿನ  ಬೆಟ್ಟಹಳ್ಳಿ ಗ್ರಾಮದ ಮೋಹನ್ ಎಂದು ಗುರುತಿಸಲಾಗಿದೆ. ಕಳೆದ 10 ವರ್ಷದಿಂದ ಅವರು...

ತಿರುಪತಿ ಪ್ರವೇಶಿಸದಂತೆ ಚಂದ್ರಬಾಬು ನಾಯ್ಡುಗೆ ನಿರ್ಬಂಧ

newsics.com ತಿರುಪತಿ: ತೆಲುಗು ದೇಶಂ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಜು ಗೆ ತಿರುಪತಿ ಪ್ರವೇಶಿಸದಂತೆ ಪೊಲೀಸರು ತಡೆ ಒಡ್ಡಿದ್ದಾರೆ. ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಣಿಗುಂಟ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು...
- Advertisement -
error: Content is protected !!