Wednesday, October 28, 2020

ಕೊರೋನಾ ಮರೆಯದಿರಿ, ದಿನಕ್ಕೆ 6-10 ಬಾರಿ ಕೈ ತೊಳೆಯಿರಿ

ಇಂದು ವಿಶ್ವ ಕೈ ತೊಳೆಯುವ ದಿನವನ್ನು ಆಚರಿಸಲಾಗುತ್ತಿದೆ. ಮೊದಲೆಲ್ಲ ಈ ಕುರಿತು ಶಾಲೆಗಳಲ್ಲಿ ಮಾತ್ರವೇ ಅರಿವು ಮೂಡಿಸುವುದು ಸಾಮಾನ್ಯವಾಗಿತ್ತು. ಈಗ ಕೊರೋನಾ ಸೋಂಕಿನಿಂದಾಗಿ ಬಹುತೇಕ ಎಲ್ಲರ ಅರಿವಿಗೂ ಬಂದಿದೆ. ಅಷ್ಟೇ ಅಲ್ಲ, ಕೈ ತೊಳೆಯುವ ಕ್ರಿಯೆ ಕೊರೋನಾ ಸೋಂಕನ್ನು ನಿಯಂತ್ರಿಸುವ ಬಹುಮುಖ್ಯ ವಿಧಾನಗಳಲ್ಲಿ ಒಂದಾಗಿದೆ.

   ಇಂದು ವಿಶ್ವ ಕೈ ತೊಳೆಯುವ ದಿನ   


♦ ಡಾ. ಸುಮನ್
newsics.com@gmail.com


ವಿಶ್ವದಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡ ತಕ್ಷಣ ಮುನ್ನಲೆಗೆ ಬಂದ ವಿಚಾರ ಕೈಗಳ ಸ್ವಚ್ಛತೆಯ ವಿಚಾರ. ಹಲವಾರು ವರ್ಷಗಳಿಂದ ಈ ಕುರಿತು ಜಾಗೃತಿ ಮೂಡಿಸುತ್ತಿದ್ದರೂ ಅಷ್ಟಾಗಿ ತಲೆಕೆಡಿಸಿಕೊಳ್ಳದ ವಿಚಾರ ಕೊರೋನಾದಿಂದಾಗಿ ಗಂಭೀರತೆ ಪಡೆದುಕೊಂಡಿತು. ಕೊರೋನಾಕ್ಕೆ ಮದ್ದಿಲ್ಲ. ಯಾವ ರಾಷ್ಟ್ರವೂ ಮದ್ದು ಕಂಡುಹಿಡಿಯುವಲ್ಲಿ ಇನ್ನೂ ಸಫಲವಾಗಿಲ್ಲ. ಬಾಯಿಯ ಎಂಜಲು ಸಿಡಿಯದ ಹಾಗೆ ಮಾಸ್ಕ್ ಧರಿಸುವುದು, ಇನ್ನೊಬ್ಬರಿಂದ ಅಂತರ ಕಾಯ್ದುಕೊಳ್ಳುವುದು, ಪದೇ ಪದೆ ಕೈಗಳನ್ನು ತೊಳೆದುಕೊಳ್ಳುವ ಮೂಲಕವೇ ಈ ಸೋಂಕನ್ನು ಬಹುತೇಕ ದೂರವಿಡಬಹುದು ಎನ್ನುವುದು ಈಗ ಬಹುತೇಕ ಎಲ್ಲರಿಗೂ ಮನದಟ್ಟಾಗಿದೆ. ಕೈಗಳನ್ನು ಸ್ವಚ್ಛವಿಟ್ಟುಕೊಳ್ಳಬೇಕಾದುದು ಎಷ್ಟು ಮುಖ್ಯ ಎನ್ನುವುದು ಇಷ್ಟು ವ್ಯಾಪಕವಾಗಿ ಎಲ್ಲರ ಅನುಭವಕ್ಕೆ ಬಂದಿರುವುದು ಬಹುಶಃ ಈಗಲೇ.
ಎಲ್ಲರಿಗೂ ಕೈ ನೈರ್ಮಲ್ಯ
ಹೌದು, ದಿನಕ್ಕೆ 6-7 ಬಾರಿ ಕೈ ತೊಳೆದುಕೊಳ್ಳುತ್ತಿದ್ದರೆ ಕೈಗಳ ಮೂಲಕ ದೇಹ ಪ್ರವೇಶಿಸುವ ಹಲವಾರು ಸೋಂಕುಗಳನ್ನು ದೂರವಿಡಬಹುದು ಎನ್ನುವುದು ವೈಜ್ಞಾನಿಕವಾಗಿ ದೃಢಪಟ್ಟಿರುವ ಸಂಗತಿ. ಕೈ ತೊಳೆಯುವುದೆಂದರೆ ಕೈಗಳಿಗೆ ಸುಮ್ಮನೆ ನೀರನ್ನು ಸೋಕಿಸಿ ಬಿಡುವುದಲ್ಲ. ನಮ್ಮಲ್ಲಿ ಬಹುತೇಕರು ಕೈ ತೊಳೆಯುವುದು ಹೀಗೆಯೇ. ವೈಜ್ಞಾನಿಕವಾಗಿ ಕೈ ತೊಳೆಯುವ ವಿಧಾನದ ಬಗ್ಗೆ ಎಲ್ಲರೂ ಅರಿವನ್ನು ಪಡೆದುಕೊಳ್ಳಬೇಕಾಗಿದೆ. ಆದರೆ, ಕೋವಿಡ್-19 ಸೋಂಕಿನ ಈ ಸಮಯದಲ್ಲಿ ಕೈ ತೊಳೆಯುವ ಕ್ರಿಯೆಯ ಬಗ್ಗೆ ಹೆಚ್ಚಿನ ಅರಿವು ಮೂಡಿದೆ ಎನ್ನಬಹುದು.
ಇಂದು (ಅಕ್ಟೋಬರ್ 15) ವಿಶ್ವ ಕೈ ತೊಳೆಯುವ ದಿನವನ್ನು ಆಚರಿಸಲಾಗುತ್ತಿದೆ. 2008ರಿಂದಲೂ ವಿಶ್ವ ಕೈ ತೊಳೆಯುವ ದಿನವನ್ನು ಆಚರಿಸಲಾಗುತ್ತಿದೆ. ಅಂದು 70 ದೇಶಗಳಲ್ಲಿ ಕೈ ತೊಳೆಯುವ ಆಂದೋಲನ ನಡೆಯಿತು. ಆದರೆ, ಜಗತ್ತಿನ ಹಲವಾರು ದೇಶಗಳು ಈ ಕುರಿತು ಕುಹಕವಾಡಿದ್ದವು. ಇಂದು ಕೈ ತೊಳೆಯುವ ಪ್ರಯೋಜನಗಳ ಕುರಿತು ಎಲ್ಲ ದೇಶಗಳಿಗೂ ಮನವರಿಕೆಯಾಗಿದೆ. ಈ ಬಾರಿಯ ಕೈ ತೊಳೆಯುವ ದಿನದ ಘೋಷವಾಕ್ಯ “ಎಲ್ಲರಿಗೂ ಕೈ ನೈರ್ಮಲ್ಯ’.
ಯಾವೆಲ್ಲ ರೋಗಗಳ ತಡೆ ?
ದಿನಕ್ಕೆ ಕನಿಷ್ಠ 6-10 ಬಾರಿ ಕೈ ತೊಳೆದುಕೊಳ್ಳುವುದರಿಂದ ಹಲವಾರು ಬಗೆಯ ಮಾರಣಾಂತಿಕ, ಸಾಂಕ್ರಾಮಿಕ ರೋಗಗಳನ್ನು ತಡೆಯಬಹುದು. ಮುಖ್ಯವಾಗಿ, ಎರಡು ಬಗೆಯ ಸೋಂಕು ದೇಹ ಪ್ರವೇಶಿಸದಂತೆ ನೋಡಿಕೊಳ್ಳಬಹುದು. ಒಂದು, ಕೊರೋನಾದಂಥ ವೈರಾಣು ಸೋಂಕು, ಇನ್ನೊಂದು ಅತಿಸಾರ, ಭೇದಿಯಂಥ ಬ್ಯಾಕ್ಟೀರಿಯಾ ಸೋಂಕುಗಳು.
ಸೋಪಿನ ದ್ರಾವಣ ಅಥವಾ ಸೋಪು ಬಳಸಿ 20 ಸೆಕೆಂಡ್ ಗಳ ಕಾಲ ಕೈ ತೊಳೆದುಕೊಂಡಾಗ ವೈರಾಣು ನಾಶವಾಗುತ್ತದೆ, ರೋಗ ಹರಡದಂತೆ ನೋಡಿಕೊಳ್ಳಬಹುದು.
ವಿಶ್ವಸಂಸ್ಥೆ ವರದಿಯ ಪ್ರಕಾರ, ಸರಿಯಾಗಿ ಕೈ ತೊಳೆದುಕೊಳ್ಳುತ್ತಿದ್ದರೆ ಹತ್ತು ಜನರಲ್ಲಿ ಒಬ್ಬರಿಗೆ ಶ್ವಾಸಕೋಶದ ಸೋಂಕು ಹರಡದಂತೆ ತಡೆಯಬಹುದು. 3ರಲ್ಲಿ ಒಬ್ಬರಿಗೆ ಅತಿಸಾರ ಆಗದಂತೆ ತಡೆಯಬಹುದು. ಹೀಗಾಗಿ, ಕೈ ತೊಳೆದುಕೊಳ್ಳುವುದನ್ನು ಪ್ರತಿಯೊಬ್ಬರೂ ದಿನನಿತ್ಯ ಅನುಸರಿಸಬೇಕು. ಆಂಟಿಸೆಪ್ಟಿಕ್ ದ್ರಾವಣವನ್ನೂ ಉಪಯೋಗಿಸಬಹುದು. ಇದು ಇನ್ನಷ್ಟು ಪರಿಣಾಮಕಾರಿ.
ಯಾವಾಗೆಲ್ಲ ಕೈ ತೊಳೆದುಕೊಳ್ಳಬೇಕು?
ಆಹಾರ ಪದಾರ್ಥ ಮುಟ್ಟುವ ಮುನ್ನ, ಸಾರ್ವಜನಿಕ ಪ್ರದೇಶಗಳಲ್ಲಿ ಯಾವುದೇ ವಸ್ತು ಮುಟ್ಟಿದರೂ ಸೋಪು ದ್ರಾವಣ ಬಳಸಿ ಕೈತೊಳೆಯುವುದು, ಮಕ್ಕಳ ಡೈಪರ್ ಬದಲಿಸಿದಾಗ, ಮೂಗು, ಕಣ್ಣುಗಳನ್ನು ಮುಟ್ಟಿಕೊಂಡಾಗ, ಸೀನಿದಾಗ, ಹೊರಗಿನ ಯಾವುದೇ ವಸ್ತುವನ್ನು ಸ್ಪರ್ಶಿಸಿದಾಗಲೆಲ್ಲ ಕೈ ತೊಳೆದುಕೊಳ್ಳಬೇಕು.
ಕೈ ತೊಳೆದುಕೊಳ್ಳುವುದು ಹೇಗೆ?
ಕೈಗಳನ್ನು ಹರಿಯುವ ನೀರಿನಲ್ಲಿ ಒದ್ದೆ ಮಾಡಿ, ಸಾಬೂನು ಹಚ್ಚಬೇಕು. ಅಂಗೈ ಉಜ್ಜಿ ನೊರೆ ಬರಿಸಬೇಕು. ಬಳಿಕ, ಬಲಗೈ ಬಳಸಿ ಎಡಗೈ ಹಸ್ತದ ಹಿಂಭಾಗವನ್ನು, ಎಡಗೈ ಬಳಸಿ ಬಲಗೂ ಹಸ್ತದ ಹಿಂಭಾಗವನ್ನು ಉಜ್ಜಬೇಕು. ಬೆರಳುಗಳ ನಡುವೆ ಬೆರಳುಗಳನ್ನು ಸೇರಿಸಿ ಉಜ್ಜಬೇಕು. ಹೆಬ್ಬೆರಳಿನ ಸುತ್ತ ತಿಕ್ಕಿ ಸ್ವಚ್ಛ ಮಾಡಬೇಕು. ಮಣಿಕಟ್ಟನ್ನೂ ಸೇರಿಸಿಕೊಂಡು ತಿಕ್ಕಬೇಕು. ಬಳಿಕ, ನಲ್ಲಿ ನೀರಿಗೆ ಹಿಡಿದು ಸ್ವಚ್ಛಗೊಳಿಸಿ. ಒರೆಸಿಕೊಳ್ಳಲು ಶುದ್ಧವಾದ ಟವೆಲ್ ಬಳಸುವುದು ಮುಖ್ಯ. ಕೈ ತೊಳೆದುಕೊಳ್ಳಲು ಬಿಸಿನೀರು ಬಳಸಿದರೆ ಇನ್ನಷ್ಟು ಉತ್ತಮ.

ಮತ್ತಷ್ಟು ಸುದ್ದಿಗಳು

Latest News

ಪ್ರೊಫೆಸರ್ ಹತ್ಯೆ ಪ್ರಕರಣ: ಖ್ಯಾತ ಗಾಯಕಿ ಅನನ್ಯ ಭಟ್ ತಂದೆ ಬಂಧನ

newsics.com ಮೈಸೂರು: ಸಾಂಸ್ಕೃತಿಕ ನಗರ ಮೈಸೂರನ್ನು ಬೆಚ್ಚಿ ಬೀಳಿಸಿದ್ದ ಪ್ರೊಫೆಸರ್ ಪರಶಿವಮೂರ್ತಿ ಹತ್ಯೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಹತ್ಯೆಗೆ ಸುಫಾರಿ ನೀಡಿದ್ದ ಆರೋಪದ ಹಿನ್ನೆಲೆಯಲ್ಲಿ ಖ್ಯಾತ ಗಾಯಕಿ ಅನನ್ಯ...

ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: 65 ಸಾಧಕರಿಗೆ ಪ್ರಶಸ್ತಿ ಗೌರವ

Newsics.com ಬೆಂಗಳೂರು: ರಾಜ್ಯದ ಪ್ರತಿಷ್ಠಿತ  2020ರ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಸಂಘ ಸಂಸ್ಥೆಗಳು, ಸಾಧಕರು ಸೇರಿದಂತೆ 65 ಮಂದಿಗೆ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ.  ಬೆಂಗಳೂರಿನಲ್ಲಿ  ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ ಟಿ ರವಿ ...

ಎನ್‌ಐಎನಿಂದ ಬೆಂಗಳೂರಲ್ಲಿ ಇನ್ನಿಬ್ಬರು ಶಂಕಿತ ಉಗ್ರರ ಬಂಧನ

newsics.comಬೆಂಗಳೂರು: ನಗರದಲ್ಲಿ ಶಂಕಿತ ಐಸಿಸ್ ಉಗ್ರರ ಭೇಟೆ ಮುಂದುವರಿಸಿರುವ ಎನ್‌ಐಎ ಅಧಿಕಾರಿಗಳ ತಂಡ, ಇದೀಗ ಇನ್ನಿಬ್ಬರು ಶಂಕಿತರನ್ನು ಬಂಧಿಸಿದೆ.ಬೆಂಗಳೂರಿನ ಥಣಿಸಂದ್ರದಲ್ಲಿರುವ ನಿವಾಸವೊಂದರ ಮೇಲೆ ದಾಳಿ ನಡೆಸಿರುವ ದೆಹಲಿ ಎನ್‌ಐಎ ಟೀಮ್,...
- Advertisement -
- Advertisement -
error: Content is protected !!