Thursday, December 1, 2022

ಪುಟ್ಟ ಹೃದಯಕ್ಕಿರಲಿ ನಿಮ್ಮ ಪ್ರೀತಿಯ ಕಾಳಜಿ…

Follow Us

ಇಂದು ವಿಶ್ವ ಹೃದಯ ದಿನ. ಈ ಬಾರಿ use heart for every heart ಎನ್ನುವ ಥೀಮ್‌ನಡಿ ಆಚರಣೆ ಮಾಡಲಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಯುವ ಜನರಲ್ಲೇ ಹೆಚ್ಚು ಹೃದಯಾಘಾತ ಸಂಭವಿಸುತ್ತಿದೆ. ಬದಲಾದ ಜೀವನಶೈಲಿ, ಅಸಮರ್ಪಕ ಆಹಾರ ಪದ್ಧತಿ, ಮಧುಮೇಹ, ಕೊಲೆಸ್ಟ್ರಾಲ್ ಮಟ್ಟ ಹೆಚ್ಚಳ, ಅಧಿಕ ರಕ್ತದೊತ್ತಡ, ಅನುವಂಶೀಯತೆ, ಋತುಬಂಧ, ವಾಯುಮಾಲಿನ್ಯ ಸೇರಿ ಅನೇಕ ಕಾರಣಗಳಿಂದ ಪ್ರತೀ ವರ್ಷ ಶೇ. 25 ರಷ್ಟು ಯುವ ಜನರು ಹೃದ್ರೋಗಕ್ಕೆ ತುತ್ತಾಗುತ್ತಿದ್ದಾರೆ. ನಿಮಗಿರುವುದೊಂದೇ ಪುಟ್ಟ ಹೃದಯ. ಈ ಹೃದಯಕ್ಕಿರಲಿ ಸದಾ ಪ್ರೀತಿಯ ಕಾಳಜಿ.
• ಪದ ಭಟ್

ಪತ್ರಕರ್ತರು, ಬೆಂಗಳೂರು
newsics.com@gmail.com

ನುಷ್ಯನ ಹೃದಯ ಮತ್ತು ಮೆದುಳು ಗಾತ್ರದಲ್ಲಿ ಚಿಕ್ಕವಾದರೂ ಅವುಗಳ‌ ಮಹತ್ವ ತೀರಾ ದೊಡ್ಡದು. ದೈಹಿಕ ಹಾಗೂ ಮಾನಸಿಕ ಆರೋಗ್ಯ ಉತ್ತಮವಾಗಿರಬೇಕೆಂದರೆ ಅಂಗೈಮುಷ್ಟಿಯಷ್ಟಿರುವ ಹೃದಯ ಮತ್ತು ಮೆದುಳು ಆರೋಗ್ಯವಾಗಿರಬೇಕು.
ಎಷ್ಟೇ ಶ್ರೀಮಂತಿಕೆ ಇರಲಿ, ಯಾವ ಕಾಯಿಲೆ ಇರಲಿ ಹೃದಯ ಬಡಿತ ನಿಂತ ಮೇಲೆ ಆ ಜೀವ ನಿರ್ಜೀವ. ಹೀಗಾಗಿ ಇರುವಷ್ಟು ದಿನ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ.

ವಿಶ್ವ ಹೃದಯ ದಿನ…
ಇಂದು ವಿಶ್ವ ಹೃದಯ ದಿನ. ಈ ಬಾರಿ use heart for every heart ಎನ್ನುವ ಥೀಮ್‌ನಡಿ ಆಚರಣೆ ಮಾಡಲಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಯುವ ಜನರಲ್ಲೇ ಹೆಚ್ಚು ಹೃದಯಾಘಾತ ಸಂಭವಿಸುತ್ತಿದೆ. ಬದಲಾದ ಜೀವನಶೈಲಿ, ಅಸಮರ್ಪಕ ಆಹಾರ ಪದ್ಧತಿ, ಮಧುಮೇಹ, ಕೊಲೆಸ್ಟ್ರಾಲ್ ಮಟ್ಟ ಹೆಚ್ಚಳ, ಅಧಿಕ ರಕ್ತದೊತ್ತಡ, ಅನುವಂಶೀಯತೆ, ಋತುಬಂಧ, ವಾಯು ಮಾಲಿನ್ಯ ಸೇರಿ ಅನೇಕ ಕಾರಣಗಳಿಂದ ಪ್ರತೀ ವರ್ಷ ಶೇ. 25 ರಷ್ಟು ಯುವ ಜನರು ಹೃದ್ರೋಗಕ್ಕೆ ತುತ್ತಾಗುತ್ತಿದ್ದಾರೆ.
ನಿಗದಿತ ತಪಾಸಣೆಯಿರಲಿ…
1968ಕ್ಕೆ ಹೋಲಿಸಿದರೆ 15 ರಿಂದ 20 ವರ್ಷ ಮೊದಲೇ ಹೃದಯ ಸಂಬಂಧಿ ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ. ಅದರಲ್ಲೂ ಅನುವಂಶೀಯತೆಯಿಂದ ಹೃದ್ರೋಗಕ್ಕೆ ಒಳಗಾಗಿರುವವರು ಸಂಖ್ಯೆಯೇ ಹೆಚ್ಚಿದೆ. ಹೀಗಾಗಿ 25 ವರ್ಷದ ನಂತರ ಹೃದಯದ ತಪಾಸಣೆಯನ್ನು ನಿಯಮಿತವಾಗಿ ಮಾಡಿಸಿಕೊಳ್ಳುವುದು ಒಳ್ಳೆಯದು ಎನ್ನುತ್ತಾರೆ ತಜ್ಞ ವೈದ್ಯರು.
ಸಾಮಾನ್ಯವಾಗಿ ಹೃದಯಾಘಾತವಾಗುವ ಸಂದರ್ಭದಲ್ಲಿ ಎದೆಯುರಿ, ಕೆಲವರಲ್ಲಿ ಹೊಟ್ಟೆ, ಎದೆಯ ಬಲಭಾಗ, ಕೈಕಾಲುಗಳನ್ನು ಶಕ್ತಿ ಇಲ್ಲದೇ ಇರುವ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇನ್ನು ಮಧುಮೇಹಿಗಳಲ್ಲಿ ನೋವೇ ಇರದೆ ಹೃದಯಾಘಾತ ವಾಗಬಹುದು.
ಆದ್ದರಿಂದ ಹೃದಯಾಘಾತದ ಲಕ್ಷಣಗಳು ಕಾಣಿಸಿಕೊಂಡ ಅರ್ಧಗಂಟೆಯೊಳಗೆ ಚಿಕಿತ್ಸೆ ನೀಡುವುದು ಮುಖ್ಯ. ಅದನ್ನು Golden Hour ಎಂದೇ ಕರೆಯುತ್ತಾರೆ.
ಇರುವುದೊಂದೇ ಪುಟ್ಟ ಹೃದಯ. ಈ ಹೃದಯಕ್ಕಿರಲಿ ಸದಾ ಪ್ರೀತಿಯ ಕಾಳಜಿ.

ಮತ್ತಷ್ಟು ಸುದ್ದಿಗಳು

vertical

Latest News

ವಿಮಾನ ನಿಲ್ದಾಣಗಳ ಸುತ್ತಮುತ್ತ 5ಜಿ ನಿಷೇಧ

newsics.com ನವದೆಹಲಿ:  ವಿಮಾನ ನಿಲ್ದಾಣಗಳ ಸುತ್ತಮುತ್ತ 5ಜಿ ನೆಟ್‌ವರ್ಕ್ ಒದಗಿಸಬಾರದು (ಸಿ–ಬ್ಯಾಂಡ್) ಎಂದು ಟೆಲಿಕಾಂ ಇಲಾಖೆ ಆದೇಶ ಮಾಡಿದೆ. ವಿಮಾನ ನಿಲ್ದಾಣದ ಸುತ್ತಮುತ್ತ 2.1 ಕಿಲೋಮೀಟರ್ ವ್ಯಾಪ್ತಿಯಲ್ಲಿ  5ಜಿ...

ಹಾಕಿ ಟೆಸ್ಟ್‌- 13 ವರ್ಷದ ಬಳಿಕ ಆಸ್ಟ್ರೇಲಿಯಾ ವಿರುದ್ಧ ಗೆದ್ದ ಭಾರತ

newsics.com ಸಿಡ್ನಿ: ಹಾಕಿ ಟೆಸ್ಟ್‌ ನಲ್ಲಿ ಭಾರತ 13 ವರ್ಷದ ಬಳಿಕ ಆಸ್ಟ್ರೇಲಿಯಾ ವಿರುದ್ಧ ಗೆದ್ದಿದೆ. ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಹಾಕಿ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ತಂಡ 4 3 ಗೋಲ್ ಗಳ...

ಕುಕ್ಕರ್ ಬಾಂಬರ್‌ ಶಾರೀಕ್ ಖಾತೆಗೆ ಹಣ ವರ್ಗಾವಣೆ

newsics.com ಮಂಗಳೂರು: ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಆರೋಪಿ ಶಾರೀಕ್‌ಗೆ ಡಾಲರ್‌ಗಳ ಮೂಲಕ ಆತನ ಖಾತೆಗೆ ವರ್ಗಾವಣೆಯಾಗುತ್ತಿದ್ದು ಎನ್ನುವ ಸ್ಪೋಟಕ ಮಾಹಿತಿ ಹೊರ ಬಿದ್ದಿದೆ. ಶಾರೀಕ್‌ ಡಾರ್ಕ್ ವೆಬ್ ಮೂಲಕ ಖಾತೆ ತೆರೆದಿದ್ದು, ಡಾಲರ್‌ಗಳ ಮೂಲಕ...
- Advertisement -
error: Content is protected !!