Wednesday, October 28, 2020

ಕೊರೋನಾ ಸಮಯ, ಹೃದಯಕ್ಕೆ ಬೇಕು ಅತಿ ಕಾಳಜಿ

ಇಂದು (ಸೆ.29) ವಿಶ್ವ ಹೃದಯದ ದಿನ. ಆಧುನಿಕ ಕಾಲದ ಬಹುದೊಡ್ಡ ತೊಂದರೆಯಾಗಿರುವ ಹೃದ್ರೋಗಗಳು ಹತ್ತಿರ ಬಾರದಂತೆ ಹೃದಯದ ಬಗ್ಗೆ ಕಾಳಜಿ ವಹಿಸುವುದು ನಮ್ಮ ಕರ್ತವ್ಯ. ಈ ಕೊರೋನಾ ಸಾಂಕ್ರಾಮಿಕದ ಸಮಯದಲ್ಲಂತೂ ಇದು ಇನ್ನೂ ಅಗತ್ಯ. ಮನೆಯಲ್ಲೇ ಇದ್ದರೂ ದೈಹಿಕವಾಗಿ ಚಟುವಟಿಕೆಯಿಂದಿರುವ ಮೂಲಕ ಹೃದಯಕ್ಕೆ ಸಂಬಂಧಿಸಿದ ಅರ್ಧಕ್ಕರ್ಧ ಸಮಸ್ಯೆಗಳನ್ನು ದೂರವಿಡಬಹುದು.

    ಇಂದು ವಿಶ್ವ ಹೃದಯ ದಿನ    

♥ ಡಾ. ಸುಮನ್
newsics.com@gmail.com

“ಕೊರೋನಾ ಸಮಯದಲ್ಲಿ ಬೇರೆ ಎಲ್ಲ ಸಮಸ್ಯೆಗಳೂ ಕಡಿಮೆಯಾಗಿವೆ, ಹೆಚ್ಚಿನ ಸಮಸ್ಯೆಗಳು ಯಾರಲ್ಲೂ ಕಂಡುಬರುತ್ತಿಲ್ಲ, ಎಲ್ಲರೂ ಮನೆಯಲ್ಲಿ ಆರಾಮಾಗಿದ್ದಾರೆ’ ಎನ್ನುವ ಮಾತುಗಳನ್ನು ನಾವೆಲ್ಲ ಕೇಳಿದ್ದೇವೆ. ಆದರೆ, ನಿಮಗೆ ತಿಳಿದಿರಲಿ, ಕೊರೋನಾ ಕಾಲದಲ್ಲಿ ಹೃದಯದ ಸಮಸ್ಯೆ ಹೆಚ್ಚಿದೆ.
ಆತಂಕ, ಮನಃಶಾಂತಿ ಕಳೆದುಕೊಂಡಿರುವುದು, ಮನೆಯಲ್ಲಿರುವ ಸಮಸ್ಯೆ, ದೈಹಿಕ ಚಟುವಟಿಕೆ ಕುಂಠಿತವಾಗಿರುವುದು ಸೇರಿದಂತೆ ಹಲವಾರು ಕಾರಣಗಳಿಂದ ಕಳೆದ ಆರು ತಿಂಗಳಿಂದ ಈಚೆಗೆ ಹೃದಯದ ತೊಂದರೆಗಳು ಜನರಲ್ಲಿ ಹೆಚ್ಚಾಗುತ್ತಿರುವುದನ್ನು ದೆಹಲಿ ವೈದ್ಯರು ಗುರುತಿಸಿದ್ದಾರೆ.
ಶೇ.10-12ರಷ್ಟು ಹೆಚ್ಚಾಯ್ತು ಹೃದ್ರೋಗ…
ಕೊರೋನಾ ಸೋಂಕಿನ ಸಾಂಕ್ರಾಮಿಕಕ್ಕೂ ಮುನ್ನ ಇದ್ದುದಕ್ಕಿಂತ ಸುಮಾರು ಶೇ.10-12ರಷ್ಟು ಹೃದ್ರೋಗ ಸಮಸ್ಯೆ ಹೆಚ್ಚಾಗಿದೆ. ಆದರೆ, ಬಹುಪಾಲು ಜನರು ಮನೆಯಿಂದ ಹೊರಬರುತ್ತಿಲ್ಲ. ಸಮಸ್ಯೆ ಹೆಚ್ಚಾಗಿ ತುರ್ತು ಸಮಯ ಬಂದಾಗಲೇ ಆಸ್ಪತ್ರೆ ಮೆಟ್ಟಿಲೇರುವ ಅಭ್ಯಾಸದಿಂದ ಹೃದ್ರೋಗ ಸಮಸ್ಯೆಗಳು ಹೆಚ್ಚುತ್ತಿರುವುದು ಯಾರ ಗಮನಕ್ಕೂ ಬರುತ್ತಿಲ್ಲ. ಜತೆಗೆ, ಚಿಕ್ಕಪುಟ್ಟ ಅನಾರೋಗ್ಯಗಳಿಗೆ ಆಸ್ಪತ್ರೆಗೆ ಹೋಗುವುದಕ್ಕೆ ಜನರು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ, ನಿಯಮಿತ ತಪಾಸಣೆ, ಚಿಕಿತ್ಸೆಗಳನ್ನೂ ಸಹ ಸಾಕಷ್ಟು ಜನರು ಮುಂದೂಡುತ್ತಿದ್ದಾರೆ. ಹೀಗಾಗಿಯೂ ಹೃದಯದ ಸಮಸ್ಯೆ ಬೆಳಕಿಗೆ ಬರುತ್ತಿಲ್ಲ ಎಂದು ಗುರುತಿಸಲಾಗಿದೆ. ಸಮಸ್ಯೆ ಹೆಚ್ಚಳಕ್ಕೆ ಕೊರೋನಾ ಕುರಿತಾದ ಆತಂಕ ಹಾಗೂ ದೈಹಿಕ ಚಟುವಟಿಕೆಯ ಕೊರತೆಯಾಗಿರುವುದೇ ಬಹುಮುಖ್ಯ ಕಾರಣವಾಗಿದೆ. ಇವೆಲ್ಲದರ ಪರಿಣಾಮವಾಗಿ ಬರುವ ದಿನಗಳಲ್ಲಿ ಹೃದಯದ ಸ್ತಂಭನ ಅಥವಾ ಏರು ರಕ್ತದೊತ್ತಡದಿಂದ ಬಳಲುವವರ ಸಂಖ್ಯೆ ಏಕಾಏಕಿ ಹೆಚ್ಚಾದರೂ ಅಚ್ಚರಿಯಿಲ್ಲ ಎನ್ನಲಾಗಿದೆ.
ನಮ್ಮದೇ ಜವಾಬ್ದಾರಿ…
ಇಂದು ವಿಶ್ವ ಹೃದಯದ ದಿನ. ಪ್ರತಿವರ್ಷ ಸೆಪ್ಟೆಂಬರ್ 29ರಂದು ಹೃದಯದ ದಿನವೆಂದು ಆಚರಿಸಲಾಗುತ್ತದೆ. ಹೃದಯವನ್ನು ಸುರಕ್ಷಿತವಾಗಿ, ಕ್ಷೇಮವಾಗಿಟ್ಟುಕೊಳ್ಳುವುದು ನಮ್ಮದೇ ಜವಾಬ್ದಾರಿ. ಈ ಹಿನ್ನೆಲೆಯಲ್ಲಿ ಕೆಲವು ನಿರ್ಧಾರಗಳನ್ನು ಇಂದೇ ತುರ್ತಾಗಿ ತೆಗೆದುಕೊಳ್ಳಬೇಕಿದೆ. ಮುಖ್ಯವಾಗಿ, ಕೊರೋನಾ ಸಮಯದಲ್ಲಿ ಕೆಲವು ಕ್ರಮಗಳನ್ನು ಕೈಗೊಳ್ಳಲೇಬೇಕಿದೆ.
ಹೃದ್ರೋಗ ನಂಬರ್ ಒನ್ ಕೊಲೆಗಾರ…
ಕೊರೋನಾ ಸೋಂಕು ಎಷ್ಟು ಸಮಯ ಇರಲಿದೆ ಎನ್ನುವ ಅಂದಾಜು ಸದ್ಯಕ್ಕಂತೂ ಯಾರಿಗೂ ಇಲ್ಲ. ಆದರೆ, ಈ ಸಮಯದಲ್ಲಿ ಎಂದಿಗಿಂತಲೂ ಹೆಚ್ಚಾಗಿ ಹೃದಯದ ಬಗ್ಗೆ ಕಾಳಜಿ ವಹಿಸಬೇಕಿದೆ. ಜತೆಗೆ, ಇತ್ತೀಚಿನ ದಿನಗಳಲ್ಲಿ ಹೃದ್ರೋಗಗಳೇ ಅತಿ ಹೆಚ್ಚು ಜನರನ್ನು ಸಾವಿನಂಚಿಗೆ ದೂಡುತ್ತಿವೆ. ಹೀಗಾಗಿ, ಈ ಬಾರಿಯ ಹೃದಯದ ದಿನದಂದು “ಹೃದ್ರೋಗ-ಭೂಮಿಯ ಮೇಲಿರುವ ನಂಬರ್ 1 ಕೊಲೆಗಾರ’ ಎನ್ನುವುದನ್ನು ಜನರಿಗೆ ಮನದಟ್ಟು ಮಾಡಿಸುವ ನಿಟ್ಟಿನಲ್ಲಿ ವಿಶ್ವ ಹೃದಯ ಒಕ್ಕೂಟ ಈ ಬಾರಿ ಕಾರ್ಯನಿರ್ವಹಿಸುತ್ತಿದೆ.
ಹೃದಯದ ಸುರಕ್ಷೆಗೆ ಹೀಗ್ಮಾಡಿ
• ನಿಯಮಿತವಾಗಿ ವ್ಯಾಯಾಮ ಮಾಡುವುದು ಕಡ್ಡಾಯ. ಇದು ದೈಹಿಕ ಆರೋಗ್ಯಕ್ಕೂ, ಮಾನಸಿಕ ಆರೋಗ್ಯಕ್ಕೂ ಅತ್ಯಗತ್ಯ.
• ಹಿರಿಯರು, ಕಿರಿಯರು ಎನ್ನದೆ ಎಲ್ಲರೂ ಈಗ ಟಿವಿ, ಗ್ಯಾಜೆಟ್ ಗಳ ಮುಂದೆ ಕಳೆಯುವ ಸಮಯ ಹೆಚ್ಚಾಗಿದೆ. ಹೃದಯದ ಆರೋಗ್ಯಕ್ಕಾಗಿ ಪ್ರತಿದಿನ ಕಡ್ಡಾಯವಾಗಿ ಅರ್ಧ ಗಂಟೆಯಾದರೂ ವ್ಯಾಯಾಮ ಮಾಡಲೇಬೇಕು.
• ಯಾವುದೇ ಕಾರಣಕ್ಕೂ ಒತ್ತಡ, ಉದ್ವೇಗ ಮಾಡಿಕೊಳ್ಳಬೇಡಿ. ನಮಗೂ ಕೊರೋನಾ ಬಂದರೆ ಏನು ಮಾಡುವುದೆಂದು ವೃಥಾ ಚಿಂತಿಸಬೇಡಿ. ಇದರಿಂದ ದೇಹದ ರೋಗ ನಿರೋಧಕ ಶಕ್ತಿ ಇನ್ನಷ್ಟು ಕುಸಿಯುತ್ತದೆ.
• ಕರಿದ ತಿಂಡಿಗಳಿಂದ ದೂರವಿರಿ. ಮನೆಯಲ್ಲೇ ಇರುವಾಗ ಅನೇಕರಿಗೆ ಆಗಾಗ ಏನಾದರೂ ಬಾಯಾಡಿಸುತ್ತ ಇರುವಾಸೆ ಇರುತ್ತದೆ. ಇದಕ್ಕಾಗಿ ಸುಲಭವಾಗಿ ಸಿಗುವ ಕರಿದ ತಿಂಡಿಗಳನ್ನು ತಿನ್ನಬೇಡಿ. ಇದರಿಂದ ಹೃದಯದ ಸಮಸ್ಯೆ ಉಂಟಾಗುತ್ತದೆ ಹಾಗೂ ಹೆಚ್ಚಾಗುತ್ತದೆ.
• ಚಿಕ್ಕ ಸಮಸ್ಯೆ ಕಂಡುಬಂದರೂ ಆಸ್ಪತ್ರೆಗೆ ಹೋಗದೆ ಮನೆಯಲ್ಲೇ ಏನಾದರೊಂದು ಔಷಧ ಮಾಡಿಕೊಳ್ಳಬೇಡಿ. ಕುಟುಂಬ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳಿ. ನಿಯಮಿತ ಚೆಕಪ್ ಗಳನ್ನು ಮಿಸ್ ಮಾಡಬೇಡಿ.
• ಮನೆಯಲ್ಲೇ ಇದ್ದರೂ ದೇಹದ ತೂಕ ಹೆಚ್ಚಾಗದಂತೆ ನೋಡಿಕೊಳ್ಳಿ. ದೇಹಕ್ಕೆ ಹೆಚ್ಚು ಕೆಲಸವಿಲ್ಲದೆ ಸುಮ್ಮನೆ ತಿನ್ನುವ ಹವ್ಯಾಸ ಬೆಳೆಸಿಕೊಳ್ಳಬೇಡಿ.
• ಸರಿಯಾದ ಆಹಾರ ಸೇವನೆ ಮಾಡಿ. ಸಕ್ಕರೆ, ಉಪ್ಪಿನಂಶ ಹೆಚ್ಚಿಲ್ಲದ ಆಹಾರ ಸೇವಿಸುವುದು ಅಗತ್ಯ. ಹಸಿರು ಸೊಪ್ಪು, ತರಕಾರಿ, ಹಣ್ಣು, ಒಣಹಣ್ಣುಗಳ ಸೇವನೆ ಇರಲಿ.
• ಕೊರೋನಾ ಕಷಾಯ ಇತ್ತೀಚೆಗೆ ಫೇಮಸ್ ಆಗಿದೆ. ಆದರೆ, ಪದೇ ಪದೆ ಸೇವಿಸಬೇಡಿ. ಇದರಿಂದ ದೇಹ ಅತಿಯಾಗಿ ಉಷ್ಣವಾಗಿ ಬೇರೆ ಬೇರೆ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಬದಲಾಗಿ, ದಿನಕ್ಕೆ ಒಮ್ಮೆ ಮಾತ್ರವೇ ಕಷಾಯ ಕುಡಿಯಿರಿ.
• ದಿನವೂ ಬೆಳಗ್ಗೆ, ಸಂಜೆ ಎರಡು ಬಾರಿ ಮುಖಕ್ಕೆ ಬಿಸಿನೀರಿನ ಶಾಖ ತೆಗೆದುಕೊಂಡರೆ ಕೊರೋನಾ ಹತ್ತಿರ ಸುಳಿಯುವುದಿಲ್ಲ ಎನ್ನುವುದು ವೈದ್ಯಕೀಯ ಸಂಶೋಧನೆಗಳಿಂದ ಸಾಬೀತಾಗಿದೆ. ಅದನ್ನು ಮಾಡಬಹುದು. ಜತೆಗೆ, ಬಿಸಿನೀರಿಗೆ ಅರಿಶಿಣ, ತುಳಸಿ ಸೇರಿಸಿ ಶಾಖ ತೆಗೆದುಕೊಂಡರೆ ಶ್ವಾಸಕೋಶದ ಸಮಸ್ಯೆ ಉಂಟಾಗುವುದಿಲ್ಲ. ಯಾವುದೇ ಸೋಂಕೂ ಸುಳಿಯುವುದಿಲ್ಲ. ರೋಗ ನಿರೋಧಕ ಶಕ್ತಿ ಕೂಡ ಹೆಚ್ಚುತ್ತದೆ.

ಮತ್ತಷ್ಟು ಸುದ್ದಿಗಳು

Latest News

ಪ್ರೊಫೆಸರ್ ಹತ್ಯೆ ಪ್ರಕರಣ: ಖ್ಯಾತ ಗಾಯಕಿ ಅನನ್ಯ ಭಟ್ ತಂದೆ ಬಂಧನ

Newsics.com ಮೈಸೂರು: ಸಾಂಸ್ಕೃತಿಕ ನಗರ ಮೈಸೂರನ್ನು ಬೆಚ್ಚಿ ಬೀಳಿಸಿದ್ದ ಪ್ರೊಫೆಸರ್  ಪರಶಿವಮೂರ್ತಿ ಹತ್ಯೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಹತ್ಯೆಗೆ ಸುಫಾರಿ ನೀಡಿದ್ದ ಆರೋಪದ ಹಿನ್ನೆಲೆಯಲ್ಲಿ ಖ್ಯಾತ ಗಾಯಕಿ...

ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: 65 ಸಾಧಕರಿಗೆ ಪ್ರಶಸ್ತಿ ಗೌರವ

Newsics.com ಬೆಂಗಳೂರು: ರಾಜ್ಯದ ಪ್ರತಿಷ್ಠಿತ  2020ರ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಸಂಘ ಸಂಸ್ಥೆಗಳು, ಸಾಧಕರು ಸೇರಿದಂತೆ 65 ಮಂದಿಗೆ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ.  ಬೆಂಗಳೂರಿನಲ್ಲಿ  ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ ಟಿ ರವಿ ...

ಎನ್‌ಐಎನಿಂದ ಬೆಂಗಳೂರಲ್ಲಿ ಇನ್ನಿಬ್ಬರು ಶಂಕಿತ ಉಗ್ರರ ಬಂಧನ

newsics.comಬೆಂಗಳೂರು: ನಗರದಲ್ಲಿ ಶಂಕಿತ ಐಸಿಸ್ ಉಗ್ರರ ಭೇಟೆ ಮುಂದುವರಿಸಿರುವ ಎನ್‌ಐಎ ಅಧಿಕಾರಿಗಳ ತಂಡ, ಇದೀಗ ಇನ್ನಿಬ್ಬರು ಶಂಕಿತರನ್ನು ಬಂಧಿಸಿದೆ.ಬೆಂಗಳೂರಿನ ಥಣಿಸಂದ್ರದಲ್ಲಿರುವ ನಿವಾಸವೊಂದರ ಮೇಲೆ ದಾಳಿ ನಡೆಸಿರುವ ದೆಹಲಿ ಎನ್‌ಐಎ ಟೀಮ್,...
- Advertisement -
- Advertisement -
error: Content is protected !!