Saturday, April 17, 2021

ಕ್ಷಯ ನಿರ್ಮೂಲನೆಯ ಸಮಯ ಸನಿಹ

ಮಾರ್ಚ್ 24 ವಿಶ್ವ ಕ್ಷಯ ರೋಗ ದಿನ. 2030ರೊಳಗೆ ಕ್ಷಯ ರೋಗವನ್ನು ಭಾರತದಿಂದ ನಿರ್ಮೂಲನೆ ಮಾಡುವುದು ಸರ್ಕಾರದ ಉದ್ದೇಶ. ವಿಶ್ವ ಆರೋಗ್ಯ ಸಂಸ್ಥೆ ಈ ಗುರಿ ನೀಡಿದ್ದು, ಜಾಗತಿಕ ಮಟ್ಟದ ಹೋರಾಟ ನಡೆಯುತ್ತಿದೆ. ಆದರೆ, ಇದು ಅಂದುಕೊಂಡಷ್ಟು ಸರಳವಲ್ಲ. ಸ್ವಚ್ಛತೆ, ಜಾಗರೂಕತೆ, ಮುನ್ನೆಚ್ಚರಿಕೆ ವಹಿಸಿದಲ್ಲಿ ಮಾತ್ರವೇ ಕ್ಷಯ ರೋಗವನ್ನು ನಿರ್ಮೂಲನೆ ಮಾಡಲು ಸಾಧ್ಯ. ಇವುಗಳ ಕುರಿತು ಅರಿವು ಮೂಡಿದರೆ ಮಾತ್ರ ಕ್ಷಯವನ್ನು ನಮ್ಮ ದೇಶದಲ್ಲಿ ಇಲ್ಲವಾಗಿಸಬಹುದು.

     ವಿಶ್ವ ಕ್ಷಯ ರೋಗ ದಿನ    


♦ ಡಾ.ಸುಮನ್
newsics.com@gmail.com


 ದೊಂದು ಪುರಾತನ ರೋಗಾಣು. ಬರೋಬ್ಬರಿ 9 ಸಾವಿರ ವರ್ಷಗಳಿಗೂ ಹಿಂದೆ ಭೂಮಿಯ ಮೇಲೆ ಈ ರೋಗಾಣು ಅಸ್ತಿತ್ವದಲ್ಲಿತ್ತು. ಭಾರತದಲ್ಲಿ ಇದರ 3300 ವರ್ಷಗಳಿಗೂ ಹಿಂದೆಯೇ ಇತ್ತೆಂದು ಗುರುತಿಸಲಾಗಿದೆ. ಇಷ್ಟು ಪುರಾತನ ರೋಗಾಣು ಇಂದಿಗೂ ಪ್ರತಿವರ್ಷ ಲಕ್ಷಾಂತರ ಜನರನ್ನು ಹಿಂಡಿಹಿಪ್ಪೆ ಮಾಡುತ್ತದೆ. ಅದೆಷ್ಟೋ ಲಕ್ಷ ಜನರನ್ನು ಸಾಯಿಸುತ್ತದೆ. ಲಕ್ಷಗಟ್ಟಲೆ ಜನರನ್ನು ದುಡಿಯಲಾರದಂತೆ ಮಾಡುತ್ತದೆ. ಈ ಮೂಲಕ, ಒಂದು ದೇಶಕ್ಕೂ, ವ್ಯಕ್ತಿಗತವಾಗಿಯೂ ಭಾರೀ ನಷ್ಟವುಂಟುಮಾಡುತ್ತದೆ. ಹೀಗಾಗಿಯೇ ಇದನ್ನು ಮನುಕುಲದ ದೊಡ್ಡ ವೈರಿ ಎಂದು ಪರಿಗಣಿಸಲಾಗಿದೆ. ಭಾರತದಲ್ಲಂತೂ ಇದರ ಹಾವಳಿ ವಿಪರೀತ. ಸ್ವಚ್ಛತೆಯಿಲ್ಲದ ಕಡೆಯೇ ಇದರ ಆವಾಸಸ್ಥಾನ. ಈಗ ತಿಳಿದಿರಬಹುದು, ಇದ್ಯಾವ ರೋಗಾಣು ಎಂದು. ಇಂಥ ಭಯಂಕರ ಇತಿಹಾಸ ಹಾಗೂ ಅಸ್ತಿತ್ವ ಇರುವ ರೋಗಾಣು ಮೈಕೋಬ್ಯಾಕ್ಟೀರಿಯಿಮ್ ಟ್ಯುಬರ್ಕೊಲೋಸಿಸ್. ಇದೇ ಕ್ಷಯ ರೋಗಕ್ಕೆ ಕಾರಣವಾಗುವ ರೋಗಾಣು.
2020ರ ಕ್ಷಯ ರೋಗ ವರದಿ ಪ್ರಕಾರ, 2019ರಲ್ಲಿ ಭಾರತದಲ್ಲಿ 24 ಲಕ್ಷ ಹೊಸ ಪ್ರಕರಣಗಳು ದಾಖಲಾಗಿವೆ. 79,144 ಜನ ಸಾವಿಗೀಡಾಗಿದ್ದಾರೆ. ಅಂದರೆ, ಕ್ಷಯ ರೋಗದ ನಿರ್ಮೂಲನೆಗೆ ಭಾರತದಲ್ಲಿ ವ್ಯಾಪಕ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ. ಜಾಗತಿಕವಾಗಿ 2019ರಲ್ಲಿ 1 ಕೋಟಿ ಜನ ಕ್ಷಯ ರೋಗದ ಸೋಂಕನ್ನು ಅಂಟಿಸಿಕೊಂಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಎಷ್ಟೇ ಪ್ರಯತ್ನಿಸಿದರೂ 2015-2020ರ ಅವಧಿಯಲ್ಲಿ ಶೇ.20ರಷ್ಟು ಕ್ಷಯ ರೋಗವನ್ನು ಕಡಿಮೆಗೊಳಿಸಲು ಮಾತ್ರ ಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಥೀಮನ್ನು “ಗಡಿಯಾರ ಟಿಕ್ ಟಿಕ್ ಎನ್ನುತ್ತಿದೆ’ ಎಂದು ಇರಿಸಲಾಗಿದೆ. ಅಂದರೆ, ಜಗತ್ತಿನ ನಾಯಕರು ಕ್ಷಯವನ್ನು ಅಂತ್ಯಗೊಳಿಸಲು ನಿಗದಿಪಡಿಸಿರುವ ಸಮಯ ಸಮೀಪಿಸುತ್ತಿದೆ ಎಂದರ್ಥ.
ರೋಗ ಲಕ್ಷಣ
• ನಿರಂತರವಾದ ಕೆಮ್ಮು, ಕಫ.
• ಕಫ ಬಾಯಿಗೆ ಬಂದಂತಾಗುವುದು.
• ಸಣ್ಣದಾಗಿ ಎದೆನೋವು
• ಪ್ರತಿದಿನ ಸಂಜೆ ವೇಳೆಗೆ ಸಣ್ಣಗೆ ಜ್ವರ ಬರುವುದು
• ವಾಂತಿ, ದೇಹದ ತೂಕ ಕಡಿಮೆಯಾಗುವುದು
• ಸುಸ್ತು
• ಹಸಿವಿಲ್ಲದಿರುವುದು
ಸೋಂಕು ಹರಡುವ ಬಗೆ
• ಸೋಂಕಿತ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ, ಉಗುಳಿದಾಗ, ನಗುವಾಗ, ಮಾತನಾಡುವಾಗ ರೋಗಾಣು ಗಾಳಿಗೆ ಸೇರಿಕೊಂಡು ಇನ್ನೊಬ್ಬರಲ್ಲಿ ಸೇರಿಕೊಳ್ಳುತ್ತದೆ.
• ಸೋಂಕಿತರೊಂದಿಗೆ ಸಾಮೀಪ್ಯ
• ಮದ್ಯಪಾನ, ತಂಬಾಕು ಸೇವನೆ, ಧೂಮಪಾನ
ಮುನ್ನೆಚ್ಚರಿಕೆ ಅಗತ್ಯ
ಕೊಳೆಗೇರಿಗಳಲ್ಲಿ, ಬಡತನ, ಅನಕ್ಷರತೆಯಿರುವಲ್ಲಿ, ಮುಖ್ಯವಾಗಿ ಸ್ವಚ್ಛವಿಲ್ಲದ ಸ್ಥಳಗಳಲ್ಲಿ ಓಡಾಡುವಾಗ ಅತ್ಯಂತ ಹುಷಾರಾಗಿಬೇಕು. ಇಲ್ಲಿಂದಲೇ ರೋಗಾಣುಗಳು ಹರಡುವುದು ಹೆಚ್ಚು. ಸೋಂಕಿತರೊಂದಿಗೆ ಒಡನಾಡುವಾಗ ಎಚ್ಚರಿಕೆ ವಹಿಸಬೇಕು. ಮನೆಯಲ್ಲಿ ಯಾರಿಗಾದರೂ ಟಿಬಿ ಇದ್ದರೆ ಒಂದೇ ಲೋಟ, ತಟ್ಟೆ ಬಳಸುವುದರಿಂದ ಈ ಸೋಂಕು ಹರಡುವುದಿಲ್ಲ. ಕೆಮ್ಮುವಾಗ, ಸೀನುವಾಗ ಕರವಸ್ತ್ರವನ್ನು ಹಿಡಿದುಕೊಳ್ಳಬೇಕು. ಎಲ್ಲೆಂದರಲ್ಲಿ ಉಗುಳುವುದು ಸಲ್ಲ.
ಸ್ವಚ್ಛ ಭಾರತ ಮಿಷನ್’ನಿಂದ ಟಿಬಿ ಇಳಿಕೆ
2014ರಲ್ಲಿ ಪ್ರಧಾನಿ ಮೋದಿ ಜಾರಿಗೆ ತಂದ ಸ್ವಚ್ಛ ಭಾರತ ಮಿಷನ್ ನಿಂದ ಈ ನಿಟ್ಟಿನಲ್ಲಿ ಅಲ್ಪ ಲಾಭವಾಗಿದೆ. ದೇಶದಲ್ಲಿ ಟಿಬಿ ಪ್ರಮಾಣದಲ್ಲಿ ಇಳಿಕೆಯಾಗುತ್ತ ಸಾಗಿದೆ. ಐದು ವರ್ಷದೊಳಗಿನ ಮಕ್ಕಳು ಕ್ಷಯ ಸೋಂಕಿಗೆ ಒಳಗಾಗುವ ಪ್ರಮಾಣ ಕಡಿಮೆಯಾಗಿರುವುದನ್ನು ವಿಶ್ವಸಂಸ್ಥೆ 2017ರಲ್ಲಿ ಗುರುತಿಸಿತ್ತು. ಭಾರತದ ಟಿಬಿ ಸೂಚ್ಯಂಕದಲ್ಲಿ ಗುಜರಾತ್ ಮೊದಲ ಸ್ಥಾನದಲ್ಲಿದೆ. ಎರಡರಲ್ಲಿ ಆಂಧ್ರಪ್ರದೇಶ, ಮೂರರಲ್ಲಿ ಹಿಮಾಚಲ ಪ್ರದೇಶವಿದೆ.
ಆನುವಂಶಿಕವಲ್ಲ
ಸೂಕ್ತ ಸಮಯದಲ್ಲಿ ಸೋಂಕು ಪತ್ತೆ ಮಾಡುವುದರಿಂದ ಕ್ಷಯ ರೋಗವನ್ನು ಗುಣಪಡಿಸಬಹುದು. ಆದರೆ, ಬಹುಔಷಧಿ ಪ್ರತಿರೋಧ ಕ್ಷಯ ಭಾರತದಲ್ಲಿ ಹೆಚ್ಚಾಗುತ್ತಿರುವುದು ದೊಡ್ಡ ತಲೆನೋವಾಗಿದೆ. ಪ್ರತಿವರ್ಷ ಸುಮಾರು 15 ಸಾವಿರ ಇಂಥ ಹೊಸ ಸೋಂಕು ಪ್ರಕರಣಗಳ ಪತ್ತೆಯಾಗುತ್ತಿದೆ. ಅಂದ ಹಾಗೆ, ಕ್ಷಯ ರೋಗ ಆನುವಂಶಿಕವಲ್ಲ. ಗಾಳಿಯಿಂದಲೇ ಈ ರೋಗಾಣು ಹರಡುತ್ತದೆ.

ಮತ್ತಷ್ಟು ಸುದ್ದಿಗಳು

Latest News

ಆಸ್ಪತ್ರೆಗೆ ನುಗ್ಗಿ 850 ರೆಮಿಡಿಸಿವರ್ ಇಂಜೆಕ್ಷನ್ ಕಳ್ಳತನ

newsics.com ಭೋಪಾಲ್(ಮಧ್ಯಪ್ರದೇಶ): ಇಲ್ಲಿನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ನುಗ್ಗಿದ ದುಷ್ಕರ್ಮಿಗಳು 850 ರೆಮಿಡಿಸಿವರ್ ಇಂಜೆಕ್ಷನ್ ಗಳನ್ನು ಕಳ್ಳತನ ಮಾಡಿದ್ದಾರೆ. ದೇಶದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ನಡುವೆ ಕಾಳಸಂತೆಯಲ್ಲಿ ಔಷಧ...

ಕೇಂದ್ರ ಸಚಿವ ಕಿರೆನ್ ರಿಜಿಜುಗೆ ಕೊರೋನಾ ಸೋಂಕು

newsics.com ನವದೆಹಲಿ: ಕೇಂದ್ರ ಸಚಿವ ಕಿರೆನ್ ರಿಜಿಜು ಅವರಿಗೆ ಶನಿವಾರ ಕೊರೋನಾ ಸೋಂಕು ತಗುಲಿದೆ. ಈ ವಿಷಯವನ್ನು ಸ್ವತಃ ಸಚಿವ ಕಿರೆನ್ ರಿಜಿಜು ಅವರೇ ತಿಳಿಸಿದ್ದಾರೆ. ಟ್ವಿಟರ್ ನಲ್ಲಿ ಈ‌ ಮಾಹಿತಿ ಹಂಚಿಕೊಂಡಿರುವ ರಿಜಿಜು,...

ಕೊರೋನಾ ಸೋಂಕಿತರ ಚಿಕಿತ್ಸೆಗೆ ‌ಬಳಸುವ ರೆಮ್​ಡಿಸಿವಿರ್ ಇಂಜೆಕ್ಷನ್ ಬೆಲೆ ಇಳಿಕೆ

newsics.com ನವದೆಹಲಿ: ಕೊರೋನಾ ಸೋಂಕಿತ ರೋಗಿಗಳ ಚಿಕಿತ್ಸೆಗೆ ಬಳಸುವ ರೆಮ್​ಡಿಸಿವಿರ್ ಇಂಜೆಕ್ಷನ್ ಬೆಲೆಯನ್ನು ಫಾರ್ಮಾ ಕಂಪೆನಿಗಳು ‌ಸ್ವಪ್ರೇರಣೆಯಿಂದ ಇಳಿಕೆ ಮಾಡಿವೆ. ಕೆಡಿಲಾ ಕಂಪನಿಯು ತನ್ನ ರೆಮ್ಡೆಕ್ ಬ್ರಾಂಡಿನ ರೆಮ್ಡೆಸಿವಿರ್ ಬೆಲೆಯನ್ನು 2800 ರೂ.ನಿಂದ 899 ರೂಪಾಯಿಗೆ...
- Advertisement -
error: Content is protected !!