Thursday, December 2, 2021

ತಿಂಗಳಿಗೊಮ್ಮೆ ದೇವತೆ… ಮತ್ತೊಮ್ಮೆ ರಣಚಂಡಿ!

Follow Us

ಹೆಣ್ಣಿನ ಮನಸನ್ನು ಅರಿತವರಿಲ್ಲ. ಇವತ್ತು ಸಮಾಧಾನದಿಂದಿದ್ದರೆ ಇನ್ನೊಂದೆರಡು ದಿನ ಬಿಟ್ಟು ಭಯಂಕರ ಕಿರಿಕಿರಿಯಲ್ಲಿರುತ್ತಾಳೆ, ಅವಳ ಮನಸ್ಸನ್ನು ಹೇಗೆ ಅರ್ಥ ಮಾಡಿಕೊಳ್ಳುವುದು ಎಂದು ಅನಾದಿ ಕಾಲದಿಂದಲೂ ಪುರುಷ ಪ್ರಯತ್ನಿಸುತ್ತಲೇ ಇದ್ದಾನೆ. ಹೀಗಾಗಿ, “ಹೆಂಡತಿಯನ್ನು ಅರ್ಥ ಮಾಡಿಕೊಳ್ಳಲು ಹೋಗಬೇಡಿ, ಬರೀ ಪ್ರೀತಿಸಿ ಸಾಕು’ ಎನ್ನುವ ಮಾತೂ ಚಾಲ್ತಿಯಲ್ಲಿದೆ. ಹೆಣ್ಣು ತಾನು ಬದಲಾಗುವ ಜತೆಗೆ ಬದಲಾವಣೆಯನ್ನು ಸಹ ಬಹಳ ಬೇಗ ಒಪ್ಪಿಕೊಳ್ಳುತ್ತಾಳೆ. ಈ ಹಿನ್ನೆಲೆಯಲ್ಲಿ ನೋಡಿದರೆ ಇದೊಂಥರ ಶಕ್ತಿಯೂ ಹೌದು. ಅವಳಿಗೆ ಈ ಶಕ್ತಿ ಹೇಗೆ ಬರುತ್ತದೆ ಎಂದು ಪುರುಷ ಪ್ರಪಂಚ ಹೊಟ್ಟೆ ಉರಿದುಕೊಂಡದ್ದೂ ಸಾಕಷ್ಟಿದೆ. ಅದಕ್ಕೆಲ್ಲ ಅವಳ ದೇಹವೇ ಕಾರಣ. ದೇಹದಲ್ಲಾಗುವ ಹಾರ್ಮೋನುಗಳ ಬದಲಾವಣೆಯೇ ಆಕೆಯ ಮನಸ್ಥಿತಿಗೆ ಮೂಲ ಕಾರಣ.
* ಸುಮನಾ ಲಕ್ಷ್ಮೀಶ
response@134.209.153.225
sumana08@gmail.com

ಹೆಣ್ಣಿನ ದೇಹ ಸದಾಕಾಲ ಬದಲಾವಣೆಗೆ ತುತ್ತಾಗುತ್ತಿರುತ್ತದೆ. ಈಸ್ಟ್ರೋಜೆನ್ ಮತ್ತು ಪ್ರೊಜಿಸ್ಟಿರಾನ್ ಹಾರ್ಮೋನುಗಳ ಏರಿಳಿತದ ಆಟದಲ್ಲಿ ಹೆಣ್ಣಿನ ದೇಹ ಬಸವಳಿಯುತ್ತದೆ. ಒಮ್ಮೆ ಎಂದೂ ಇಲ್ಲದ ಶಕ್ತಿ ಉತ್ಪಾದನೆಯಾದಂತೆ ಭಾಸವಾದರೆ, ಮಗದೊಮ್ಮೆ ‘ಇನ್ನು ಏನು ಮಾಡಲೂ ಸಾಧ್ಯವಿಲ್ಲವೆಂಬಂತೆ ದೇಹ ಹಾಗೂ ಮನಸ್ಥಿತಿಗಳು ಕುಸಿದು ಪಾತಾಳ ಸೇರುತ್ತವೆ. ಇವೆಲ್ಲವೂ ನಾವು ಕಾಣಲು ಸಾಧ್ಯವಿಲ್ಲದ ಆ ಹಾರ್ಮೋನುಗಳ ಆಟ. ಇದರೊಂದಿಗೆ, ಪ್ರತಿ ತಿಂಗಳು ಹೆಣ್ಣಿನ ದೇಹ ನಾಲ್ಕು ಋತುಮಾನಗಳ ಏರಿಳಿತಗಳನ್ನೂ ಅನುಭವಿಸುತ್ತಿರುತ್ತದೆ ಎನ್ನುವುದು ಗೊತ್ತೇ?
ಅಚ್ಚರಿಪಡಬೇಡಿ. ಮಹಿಳೆಯ ದೇಹದೊಳಗೂ ನಾಲ್ಕು ಋತುಮಾನಗಳು ಸೃಷ್ಟಿಯಾಗುತ್ತಿರುತ್ತವೆ. ಅದಕ್ಕೆ ತಕ್ಕಂತೆ ಆಕೆಯ ಮನಸ್ಥಿತಿಯೂ ನಿರ್ಮಾಣವಾಗುತ್ತದೆ. ಋತುಚಕ್ರದೊಂದಿಗೆ ಆಕೆಯ ಋತುಮಾನ ಬೆಸೆದುಕೊಂಡಿದೆ.
ಋತುಚಕ್ರದ ಮೊದಲ ವಾರ ಆಕೆಯ ದೇಹದಲ್ಲಿ ಚಳಿಗಾಲ! ಅದು ಅಂಡೋತ್ಪತ್ತಿಗೂ ಮುಂಚಿನ ಕಾಲ. ಚಳಿಗಾಲದಲ್ಲಿ ಬಿಸಿಬಿಸಿಯಾದ ಕಾಪಿ, ಜತೆಗೆ ಪಕೋಡ, ಬಜ್ಜಿ ಸವಿದು ಮನೆಯಲ್ಲಿ ಬೆಚ್ಚಗಿರಲು ಬಯಸುತ್ತೇವಲ್ಲವೇ? ಅದೇ ಮಾದರಿಯಲ್ಲಿ ಆಕೆಯ ದೇಹ ಅಂಡೋತ್ಪತ್ತಿಗೂ ಮುಂಚಿನ ಈ ಅವಧಿಯಲ್ಲಿ ಮುದುಡಿಕೊಂಡು ಬೆಚ್ಚಗಿರಲು ಬಯಸುತ್ತದೆ. ಭಾವನೆಗಳ ಉತ್ಕರ್ಷವಿರುವುದಿಲ್ಲ, ಬದಲಾಗಿ ಮನಸ್ಸು ಕುಗ್ಗುತ್ತಿರುತ್ತದೆ. ಒಳಗೊಳಗೇ ಲೆಕ್ಕಾಚಾರ. ಇದು ವಿಶ್ರಾಂತಿಯ ಸಮಯ. ಹೀಗಾಗಿ, “ಸೂಪರ್ ವುಮನ್’ ಎನ್ನುವ ಭ್ರಮೆಯನ್ನು ಕಳಚಿಟ್ಟು ವಿಶ್ರಾಂತಿ ಪಡೆದುಕೊಳ್ಳುವುದು ಉತ್ತಮ.
ಮುಟ್ಟಾದ ತಕ್ಷಣ ಆಕೆಯ ದೇಹದಲ್ಲಿ ವಸಂತ ಉದಯಿಸುತ್ತಾನೆ. ಹೀಗಾಗಿ, ಅದು ವಸಂತ ಕಾಲ. ಅಂಡಾಶಯದಲ್ಲಿ ಉತ್ಪತ್ತಿಯಾದ ಅಂಡವು ಸಂತಾನೋತ್ಪತ್ತಿ ಕ್ರಿಯೆ ನಡೆಯದಿದ್ದಾಗ ಮುಟ್ಟಾಗಿ ಹೊರಬರುತ್ತದೆ. ಮುಟ್ಟು ಕಾಣಿಸಿಕೊಂಡ ತಕ್ಷಣ ದಣಿವು ಆರಿ ಹೊಸತನದ ಅನುಭವ ಆಕೆಗೆ ಉಂಟಾಗುತ್ತದೆ. ಈ ಸಮಯದಲ್ಲಿ ತೀವ್ರವಾದ ಆಶಾವಾದಿಯಾಗುತ್ತಾಳೆ. ಉತ್ತಮ ದೈಹಿಕ ಶಕ್ತಿ, ಭಾವನಾತ್ಮಕ ಸ್ಪಷ್ಟತೆ, ಆಶಾವಾದಿತನವೂ ಸೇರಿಕೊಂಡು ಇಷ್ಟು ದಿನದ ಹಿಂಜರಿಕೆ ಇರುವುದಿಲ್ಲ.
ಮೂರನೇ ವಾರ ಬೇಸಿಗೆ ಕಾಲ. ಇದು ಅಂಡೋತ್ಪತ್ತಿಯ ಸಮಯ. ಹೆಣ್ಣಿನ ದೇಹದ ಬಹುಮುಖ್ಯ ಹಾರ್ಮೋನ್ ಆಗಿರುವ ಈಸ್ಟ್ರೋಜೆನ್ ಅಧಿಕವಾಗಿ ಬಿಡುಗಡೆಯಾಗುತ್ತಿರುತ್ತದೆ. ದೈಹಿಕ, ಮಾನಸಿಕ ಸಾಮರ್ಥ್ಯ ಅಧಿಕವಾಗುತ್ತದೆ. ಪ್ರತಿ ಮಹಿಳೆಯೂ ಈ ಅವಧಿಯಲ್ಲಿ ಸೂಕ್ಷ್ಮ ಹಾಗೂ ಅಂತಃಪ್ರಜ್ಞೆಯುಳ್ಳವಳಾಗುತ್ತಾಳೆ. ಈ ಸಮಯದ ಸಾಮರ್ಥ್ಯವನ್ನು ವ್ಯರ್ಥ ಮಾಡಿಕೊಳ್ಳದಿರುವುದು ಜಾಣತನ. ಇದು ನಿಜಕ್ಕೂ ಸೂಪರ್ ವುಮನ್ ಆಗಬೇಕಾದ ಸಮಯ. ಅಲ್ಲದೆ, ನೋಡಲು ಸಹ ಸುಂದರವಾಗಿ ಕಾಣುತ್ತಾರೆ.
ನಾಲ್ಕನೇ ವಾರ ಮಳೆಗಾಲ. ಅಂಡೋತ್ಪತ್ತಿಯ ಬಳಿಕದ ಪುನಃ ನಿರಾಶೆಯಾಗುತ್ತದೆ. ಈಸ್ಟ್ರೋಜೆನ್ ಹಾರ್ಮೋನ್ ಸ್ರವಿಸುವಿಕೆ ಅತಿ ಕಡಿಮೆಯಾಗಿ, ಪ್ರೊಜಿಸ್ಟಿರಾನ್ ಸ್ರವಿಕೆ ಹೆಚ್ಚುತ್ತದೆ. ಭಾವನಾತ್ಮಕವಾಗಿ ಮೇಲಿನಿಂದ ಕೆಳಗೆ ಬಿದ್ದ ಅನುಭವ. ಅನುಮಾನ, ಗೊಂದಲ ಹೆಚ್ಚುತ್ತದೆ. ಸುಸ್ತಾಗಬಹುದು, ತಲೆನೋವು, ಮೈಕೈ ನೋವು, ಏಕಾಗ್ರತೆ ಇಲ್ಲದಿರುವುದು ಕಂಡುಬರುತ್ತದೆ. ಆದರೆ, ನಮ್ಮ ಕೌಟುಂಬಿಕ ವ್ಯವಸ್ಥೆ ಆಕೆಯನ್ನು ಏಕಾಂಗಿಯಾಗಿರಲು ಬಿಡುವುದಿಲ್ಲ ಎನ್ನುವುದಷ್ಟೇ ನಿಜವಾದ ಸಮಸ್ಯೆ. ಬದಲಾಗಿ, ಆಕೆಯಲ್ಲಿ ಏನೂ ಸಮಸ್ಯೆ ಇರದು. ಹೀಗಾಗಿ, ಆಕೆಗೆ ಇದು ಕಷ್ಟದ ಸಮಯ. ಈ ಸಮಯದಲ್ಲಿ ಒಂದಿಷ್ಟು ಸಾಂತ್ವನ, ನೆರವು ದೊರೆತರೆ ಅವಳಷ್ಟು ಸುಖಿ ಬೇರಿಲ್ಲ.

ಮತ್ತಷ್ಟು ಸುದ್ದಿಗಳು

Latest News

ಸಿಲಿಂಡರ್ ಸ್ಫೋಟಗೊಂಡು 4 ತಿಂಗಳ ಮಗು ಸಾವು

newsics.com ಮುಂಬೈ: ಸಿಲಿಂಡರ್ ಸ್ಫೋಟದಿಂದ 4 ತಿಂಗಳ ಮಗು ಸಾವನ್ನಪ್ಪಿದ ಘಟನೆ ಮುಂಬೈನ ವರ್ಲಿಯಲ್ಲಿರುವ ಬಿಡಿಡಿ ಚಾಲ್‌ ನಲ್ಲಿ ಸಂಭವಿಸಿದೆ. ಸಿಲಿಂಡರ್ ಸ್ಫೋಟಗೊಂಡಿದ್ದರಿಂದ ನಾಲ್ಕು ತಿಂಗಳ ಮಗುವಿಗೆ ತೀವ್ರ...

ಒಮಿಕ್ರಾನ್ ಪತ್ತೆ ಹಿನ್ನೆಲೆ ರಾಜ್ಯದಲ್ಲಿ ತೀವ್ರ ಕಟ್ಟೆಚ್ಚರ: ಡಾ. ಅಶ್ವತ್ಥ ನಾರಾಯಣ

newsics.com ಬೆಂಗಳೂರು: ರಾಜ್ಯದಲ್ಲಿ ಎರಡು ಒಮಿಕ್ರಾನ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಈ ಕುರಿತು ಸಚಿವ ಡಾ. ಅಶ್ವತ್ಥ ನಾರಾಯಣ ಪ್ರತಿಕ್ರಿಯಿಸಿದ್ದು, ರಾಜ್ಯದಲ್ಲಿ ಸರಕಾರ ಕಟ್ಟೆಚ್ಚರ ವಹಿಸಿದೆ ಎಂದು ಹೇಳಿದ್ದಾರೆ. ಇಬ್ಬರ ಸಂಪರ್ಕಿತರನ್ನು...

‘ಮಾನ್ಯವರ್‌’ ಬಟ್ಟೆ ಮಳಿಗೆಯಲ್ಲಿ ಅಗ್ನಿ ದುರಂತ

newsics.com ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಲ್ಲಿರುವ 'ಮಾನ್ಯವರ್‌' ಬಟ್ಟೆ ಮಳಿಗೆಯಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಅಗ್ನಿಶಾಮಕ ದಳ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ, ಅಗ್ನಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಬೆಂಗಳೂರಿನ ಕಮರ್ಷಿಯಲ್‌ ಸ್ಟ್ರೀಟ್‌ನಲ್ಲಿ 'ಮಾನ್ಯವರ್‌' ಬಟ್ಟೆ ಮಳಿಗೆಯಿದ್ದು, ಶಾರ್ಟ್‌ಸರ್ಕ್ಯೂಟ್‌ನಿಂದ...
- Advertisement -
error: Content is protected !!