Saturday, November 27, 2021

ಬೇವು ಬೆಲ್ಲ ತಿಂದರೆ ಸುಖ

Follow Us

ಯುಗಾದಿ ಬಂದಾಗಲೇ ನಮಗೆ ಬೇವು ಬೆಲ್ಲದ ನೆನಪಾಗೋದು. ಬೆಲ್ಲದ ನೆನಪು ಆಗಾಗ ಆದರೂ ಬೇವಿನ ನೆನಪು ಕಡಿಮೆಯೇ. ಆದರೆ ಬೇವು ಬೆಲ್ಲ ನಮಗೆ ಆರೋಗ್ಯ ಭಾಗ್ಯ ತಂದುಕೊಡುವುದರಲ್ಲಿ ಸಂಶಯವಿಲ್ಲ.
ಡಾ. ಪವಿತ್ರಾ ಚಿಂತಾಮಣಿ
response@134.209.153.225
newsics.com@gmail.com

ಬೇವು ಕಷ್ಟದ ಸಂಕೇತವಾದರೆ ಬೆಲ್ಲ ಸುಖದ ಪ್ರತೀಕ. ಬದುಕಿನಲ್ಲಿ ಸಿಹಿ-ಕಹಿಗಳು ಸಮಾನವಾಗಿ ಬರಲಿ, ಎರಡನ್ನೂ ಸಮಚಿತ್ತದಿಂದ ಸ್ವೀಕರಿಸುವ ಮನೋಭಾವ ಬೆಳೆಯಲಿ ಎಂಬುದೇ ಯುಗಾದಿ ಆಚರಣೆಯ ಸಾರ. ಕಷ್ಟ ಸುಖದ ಕಲ್ಪನೆಯ ಜತೆ ಬೇವು ಬೆಲ್ಲ ಸೇವನೆಯಿಂದ ಅರೋಗ್ಯ ರಕ್ಷಣೆಯೂ ಅಡಗಿದೆ.
ಬೆಲ್ಲ ಶೀತ ದೂರ ಮಾಡಬಲ್ಲದು. ಹಿಂದೆಲ್ಲಾ ಮನೆಗೆ ಬಂದವರಿಗೆ ನೀರಿನ ಜತೆಗೆ ಒಂದು ತುಂಡು ಬೆಲ್ಲ ನೀಡುವ ಪದ್ಧತಿಯಿತ್ತು. ಬೆಲ್ಲದ ಸೇವನೆಯಿಂದ ಶೀತವನ್ನು ಕಡಿಮೆ ಮಾಡಬಹುದು. ಬೆಲ್ಲವನ್ನು ನೀರಿನಲ್ಲಿ ಕುದಿಸಿ, ಅದಕ್ಕೆ ಶುಂಠಿ ರಸ ಸೇರಿಸಿ, ದಿನಕ್ಕೆ 2-3 ಬಾರಿ ಕುಡಿದರೆ ಶೀತ-ಕೆಮ್ಮು ಗುಣವಾಗುತ್ತದೆ.
ಹಾಲಿನಲ್ಲಿ ಬೆಲ್ಲ ಕರಗಿಸಿ, ದಿನಕ್ಕೆ ಎರಡು ಬಾರಿ ಕುಡಿದರೆ, ಮುಟ್ಟಿನ ದಿನಗಳಲ್ಲಿ ನೋವು ಕಾಡುವುದಿಲ್ಲ. ಋತುಸ್ರಾವಕ್ಕೂ ಎರಡು ದಿನ ಮುಂಚೆಯಿಂದಲೇ ಇದನ್ನು ಕುಡಿಯುತ್ತಿದ್ದರೆ ಉತ್ತಮ.
ಊಟದ ನಂತರ ಒಂದು ತುಣುಕು ಬೆಲ್ಲ ತಿಂದರೆ, ಅಜೀರ್ಣ, ಆಸಿಡಿಟಿ, ಮಲಬದ್ಧತೆ ಮುಂತಾದ ಸಮಸ್ಯೆಗಳಿಂದ ಮುಕ್ತಿ ಸಿಗಬಲ್ಲದು.
ಜ್ವರ, ಕೆಮ್ಮು ನಿವಾರಣೆ:
ತುಳಸಿ ಎಲೆಯ ರಸವನ್ನು ಬೆಲ್ಲದಲ್ಲಿ ಬೆರೆಸಿ, ದಿನಕ್ಕೆ ಮೂರು ಬಾರಿ ಒಂದು ಚಮಚ ಸೇವಿಸಿದರೆ ಕೆಮ್ಮು, ಗಂಟಲು ನೋವು ನಿವಾರಣೆಯಾಗುತ್ತದೆ. ಈರುಳ್ಳಿಯನ್ನು ಸುಟ್ಟು, ಬೆಲ್ಲದ ಜತೆ ಸೇವಿಸಿದರೂ ಕೆಮ್ಮು, ಗಂಟಲುನೋವು ವಾಸಿಯಾಗುತ್ತದೆ.
ಬೆಲ್ಲದಲ್ಲಿ ಕಬ್ಬಿಣಾಂಶ ಅಧಿಕವಾಗಿರುವುದರಿಂದ, ರಕ್ತಹೀನತೆಯುಳ್ಳವರು ಸೇವಿಸಿದರೆ ಉತ್ತಮ. ರಕ್ತ ಶುದ್ಧಿಗೂ ಸಹಕಾರಿ.
ಬೇವಿನಿಂದ ನೋವು ದೂರ:
ಆರೋಗ್ಯ ಕಾಪಾಡುವಲ್ಲಿ ಬೆಲ್ಲದಷ್ಟೇ ಬೇವಿಗೂ ಸ್ಥಾನವಿದೆ. ಬೇವಿನ ಕಷಾಯವನ್ನು ನಿಯಮಿತವಾಗಿ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಬ್ಯಾಕ್ಟೀರಿಯಾ, ವೈರಸ್‌ನಿಂದ ಹರಡುವ ಸಾಂಕ್ರಾಮಿಕ ರೋಗಗಳು ಅತಿ ಸುಲಭದಲ್ಲಿ ದೇಹಕ್ಕೆ ಹಾನಿ ಮಾಡುವುದಿಲ್ಲ.
ಬೇವಿನ ಎಲೆ ಅಥವಾ ಬೇವಿನ ಸೊಪ್ಪಿನ ಕಷಾಯದ ಸೇವನೆಯಿಂದ ತುರಿಕೆ, ಕಜ್ಜಿ, ಮೊಡವೆ ಮುಂತಾದ ಚರ್ಮದ ಸಮಸ್ಯೆಗಳನ್ನು ತಡೆಯಬಹುದು.
ಬೇವಿನ ಕಷಾಯದಿಂದ ಬಾಯಿ ಮುಕ್ಕಳಿಸಿದರೆ, ಬೇವಿನ ಕಡ್ಡಿಯಿಂದ ಹಲ್ಲು ಉಜ್ಜಿದರೆ ಬಾಯಿಯ ದುರ್ಗಂಧ, ಹುಳುಕು ಹಲ್ಲು, ಒಸಡಿನಲ್ಲಿ ರಕ್ತಸ್ರಾವ ಮುಂತಾದ ಬಾಯಿಯ ಸಮಸ್ಯೆಗಳು ದೂರಾಗುತ್ತವೆ.
ಪ್ರತಿನಿತ್ಯ 2-3 ಬೇವಿನ ಎಲೆ ತಿಂದರೆ, ಹೊಟ್ಟೆಹುಳದ ಸಮಸ್ಯೆ ಕಾಡುವುದಿಲ್ಲ.

ಮತ್ತಷ್ಟು ಸುದ್ದಿಗಳು

Latest News

ರೈತರ ಪಂಪ್ ಸೆಟ್ ಗಳಿಗೆ ಸೌರ ವಿದ್ಯುತ್: ರಾಜ್ಯದ ಚಿಂತನೆ

newsics.com ಬೆಂಗಳೂರು: ಜಲ ಮೂಲಗಳಿಂದ ಸಾಕಷ್ಟು ವಿದ್ಯುತ್ ಲಭಿಸದ ಕಾರಣ ಸೌರ ವಿದ್ಯುತ್ ಘಟಕಗಳಿಂದ ರೈತರ ಪಂಪ್ ಸೆಟ್ ಗಳಿಗೆ ವಿದ್ಯುತ್ ಪೂರೈಸಲು ರಾಜ್ಯ ಸರ್ಕಾರ ಮುಂದಾಗಿದೆ....

ನಕ್ಸಲ್ ಮುಖಂಡ ಮಡ್ವಿ ಭೀಮಾ ಎನ್ ಕೌಂಟರ್

newsics.com ರಾಯ್ ಪುರ: ನಕ್ಸಲ್ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಮಡ್ವಿ ಭೀಮಾ , ಭದ್ರತಾಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಹತನಾಗಿದ್ದಾನೆ.  ಛತ್ತೀಸ್ ಘಡದ ಸುಕ್ಮಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಹಲವು ಪ್ರಕರಣಗಳಲ್ಲಿ ಭೀಮಾ ಆರೋಪಿಯಾಗಿದ್ದ ಎಂದು ಪೊಲೀಸರು...

ದಕ್ಷಿಣ ಆಫ್ರಿಕಾ ಕೊರೋನಾ ರೂಪಾಂತರಿಗೆ ಒಮಿಕ್ರೋನ್ ಎಂದು ನಾಮಕರಣ

newsics.com ವಾಷಿಂಗ್ಟನ್: ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೊರೋನಾ ರೂಪಾಂತರಿ ವಿಶ್ವದೆಲ್ಲೆಡೆ ಆತಂಕ ಸೃಷ್ಟಿಸಿದೆ. ಅತ್ಯಂತ ಪ್ರಬಲ ರೂಪಾಂತರಿಯಾಗಿರುವ ಕಾರಣ ಇದು ವೇಗವಾಗಿ ಹರಡುತ್ತಿದೆ ಎಂಬ ಭೀತಿ ಮನೆ ಮಾಡಿದೆ. ಈ ಮಧ್ಯೆ ದಕ್ಷಿಣ ಆಫ್ರಿಕಾಕ್ಕೆ ಹಲವು...
- Advertisement -
error: Content is protected !!