Saturday, January 23, 2021

ನೀಳಕೇಶಕ್ಕೆ ಸಿಂಪಲ್ ಸೂತ್ರ

ಪ್ಯಾಷನ್, ಹೇರ್‍ಸ್ಟೈಲ್ ಹೆಸರಿನಲ್ಲಿ ತಲೆಗೆ ವಾರಕೊಮ್ಮೆ ಎಣ್ಣೆ ಹಾಕುವುದೂ ಕಷ್ಟವಾಗಿದೆ. ತಲೆಗೆ ಎಣ್ಣೆ ಹಚ್ಚದಿರುವುದು ಕೂದಲು ಉದುವಿಕೆಗೆ ಮೂಲ ಕಾರಣ. ಹೀಗಾಗಿ ಕೊಬ್ಬರಿ ಎಣ್ಣೆ ಅಥವಾ ಆಯುರ್ವೇದ ಎಣ್ಣೆಗಳಾದ ಆಮ್ಲಾ ಆಯಿಲ್, ಭೃಂಗರಾಜ ತೈಲಗಳನ್ನು ತಲೆಗೆ ಹಚ್ಚಿ ಕೈಬೆರಳುಗಳಿಂದ ಮಸಾಜ್ ಮಾಡಬೇಕು.

   ಸೌಂದರ್ಯ  


♦ ಪವಿತ್ರಾ ಜಿಗಳೆಮನೆ

ಪತ್ರಿಕೋದ್ಯಮ ವಿದ್ಯಾರ್ಥಿನಿ
ವಿವೇಕಾನಂದ ಕಾಲೇಜು, ಪುತ್ತೂರು
newsics.com@gmail.com


 ಸೌಂ ದರ್ಯ ಇಮ್ಮಡಿಗೊಳಿಸುವಲ್ಲಿ ತಲೆಯ ಕೂದಲು ಸಹ ಮುಖ್ಯ ಪಾತ್ರ ವಹಿಸುತ್ತದೆ. ನೀಳ ಕೇಶರಾಶಿ ಎಂತಹವರನ್ನೂ ಆಕರ್ಷಿಸುವಂತೆ ಮಾಡುತ್ತದೆ. ಆದರೆ, ಇತ್ತೀಚಿನ ಜೀವನ ಶೈಲಿಯಿಂದ, ಬಿಸಿಲು, ಧೂಳು ಸೇರಿದಂತೆ ಕೆಲವೊಂದು ಪೋಷಕಾಂಶಗಳ ಕೊರತೆಯಿಂದ ಕೂದಲು ಹೊಳಪು ಕಳೆದುಕೊಂಡು, ಕೆಲವೊಮ್ಮೆ ಸೀಳು ಒಡೆದ ಕೂದಲುಗಳಾಗಿ ಒಣಗಿದಂತೆ ಕಾಣುತ್ತದೆ. ಹೀಗಾಗಿ ಸಿಗುವ ಸಮಯದಲ್ಲೇ ಕೂದಲಿನ ಆರೈಕೆ ಮಾಡಿಕೊಂಡು ಹೊಳೆವ ನೀಳ ಕೇಶರಾಶಿಯನ್ನು ಹೊಂದಬೇಕಾಗಿದೆ.
 • ತೆಂಗಿನೆಣ್ಣೆ ಅಥವಾ ಆಲಿವ್ ಎಣ್ಣೆಗೆ ಸ್ವಲ್ಪ ಮೆಂತ್ಯ ಹಾಕಿ ಕುದಿಸಿ. ನಂತರ ಸೋಸಿ ಶೇಖರಿಸಿಟ್ಟುಕೊಂಡು ವಾರದಲ್ಲಿ 3-4 ಬಾರಿ ತಲೆಗೆ ಹಚ್ಚಿ ಮಸಾಜ್ ಮಾಡಿ. ಇದರಿಂದ ಕೂದಲು ಒಣಗಿದಂತೆ ಆಗುವುದನ್ನು ತಡೆಯಬಹುದು ಹಾಗೂ ಉತ್ತಮವಾಗಿ ಕೂದಲು ಬೆಳೆಯುವುದು.
• ಪ್ಯಾಷನ್, ಹೇರ್‍ಸ್ಟೈಲ್ ಹೆಸರಿನಲ್ಲಿ ತಲೆಗೆ ವಾರಕೊಮ್ಮೆ ಎಣ್ಣೆ ಹಾಕುವುದೂ ಕಷ್ಟವಾಗಿದೆ. ತಲೆಗೆ ಎಣ್ಣೆ ಹಚ್ಚದಿರುವುದು ಕೂದಲು ಉದುರುವಿಕೆಗೆ ಮೂಲ ಕಾರಣವಾಗಿದೆ. ಆದ್ದರಿಂದ ಕೊಬ್ಬರಿ ಎಣ್ಣೆ ಅಥವಾ ಆಯುರ್ವೇದ ಎಣ್ಣೆಗಳಾದ ಆಮ್ಲಾ ಆಯಿಲ್, ಭೃಂಗರಾಜ ತೈಲಗಳನ್ನು ತಲೆಗೆ ಹಚ್ಚಿ ಕೈಬೆರಳುಗಳಿಂದ ಮಸಾಜ್ ಮಾಡಬೇಕು. ಆಗ ಹೊಸ ಕೂದಲು ಬೆಳೆಯಲು ಅನುಕೂಲವಾಗುತ್ತದೆ.
• ತಲೆಸ್ನಾನ ಮಾಡುವ ಮೊದಲು ದಾಸವಾಳದ ಸೊಪ್ಪನ್ನು ನೀರಿನಲ್ಲಿ ನೆನೆಸಿ ಅದರಿಂದ ಸಿಗುವ ಪಾಚಿಯಂತಹ ರಸವನ್ನು ತಲೆಗೆ ಹಚ್ಚಿ ಅರ್ಧ ಗಂಟೆ ಬಿಟ್ಟು ಸೀಗೆಕಾಯಿ ಪುಡಿಯಂತಹ ನೈಸರ್ಗಿಕ ಪದಾರ್ಥಗಳನ್ನು ಬಳಸಿ ತಲೆಯನ್ನು ತೊಳೆಯಬೇಕು
• ತಲೆಗೆ ಸ್ನಾನ ಮಾಡಿದ ಮೇಲೆ ತಲೆಬುಡವನ್ನು ಮಸಾಜ್ ಮಾಡುವಂತೆ ಉಜ್ಜಬೇಕು. ಇದರಿಂದ ತಲೆಯ ರಕ್ತ ಸಂಚಾರ ಹೆಚ್ಚಿ ಕೂದಲನ್ನು ದೃಢವಾಗಿಸುತ್ತದೆ. ಜತೆಗೆ ತಲೆ ಸ್ನಾನ ಮಾಡಿದ ಮೇಲೆ ಕೂದಲು ಚೆನ್ನಾಗಿ ಒಣಗಿದ ಮೇಲೆಯೇ ಬಾಚಬೇಕು. ಇಲ್ಲವಾದರೆ ಕೂದಲು ಉದುರುವ ಸಾಧ್ಯತೆ ಹೆಚ್ಚಿರುತ್ತದೆ.
• ಕಹಿಬೇವು ಕೂದಲ ರಕ್ಷಣಗೆ ಉತ್ತಮ ವಾಹಕವಾಗಿದೆ. ಸಾಸಿವೆ ಎಣ್ಣೆಗೆ ಕಹಿಬೇವು, ಮೆಹಂದಿ ಸೊಪ್ಪು (ಮದರಂಗಿ ಸೊಪ್ಪು) ಸೇರಿಸಿ ಕುದಿಸಿ ಸೋಸಿ ಅದಕ್ಕೆ ಚಿಟಿಕೆಯಷ್ಟು ಕರ್ಪೂರವನ್ನು ಸೇರಿಸಿ ಇಟ್ಟುಕೊಳ್ಳಿ. ಇದನ್ನು ಪ್ರತಿದಿನ ಬಳಸುವುದರಿಂದ ಕೂದಲಿನ ಹೊಟ್ಟು ಕಡಿಮೆಯಾಗಿ ಕೂದಲು ಉದುರುವುದೂ ನಿಲ್ಲುತ್ತದೆ.
• ಕೂದಲು ಉದುರಲು ಮುಖ್ಯ ಕಾರಣವೇ ನಮ್ಮ ಆಹಾರ ಪದ್ಧತಿ. ಹೆಚ್ಚು ಮಸಾಲೆಭರಿತ ಪದಾರ್ಥಗಳ ಸೇವನೆಯಿಂದ ದೇಹದಲ್ಲಿ ಉಷ್ಣ ಜಾಸ್ತಿಯಾಗಿ ಕೂದಲು ಕೂಡ ಒಣಗುತ್ತದೆ. ಆದ್ದರಿಂದ ಸೊಪ್ಪು ಮತ್ತು ನಾರಿನ ಪದಾರ್ಥಗಳ ಸೇವನೆ, ಹಣ್ಣುಗಳನ್ನು ತಿನ್ನುವುದರಿಂದ ಕೂದಲಿನ ಹೊಳಪನ್ನು ಕಾಪಾಡಿಕೊಳ್ಳುವುದರ ಜತೆಗೆ ಆರೋಗ್ಯಯುತವಾಗಿಯೂ ಇರಲು ಸಾಧ್ಯ.

ಮದುವೆ ದಿನ ಸುಂದರವಾಗಿ ಕಾಣಬೇಕೆ? ವಧುವಿಗೆ 7 ಟಿಪ್ಸ್

ಮತ್ತಷ್ಟು ಸುದ್ದಿಗಳು

Latest News

ಪ್ರತಿಭಟನಾ ನಿರತ ರೈತರ ಹತ್ಯೆಗೆ ಸಂಚು: ಆರೋಪಿ ಬಂಧನ

Newsics.com ನವದೆಹಲಿ: ಕೇಂದ್ರದ ಕೃಷಿ ನೀತಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತ ಮುಖಂಡರ ಮೇಲೆ ಗುಂಡಿನ ದಾಳಿ ನಡೆಸಿ ರಕ್ತಪಾತ ಹರಿಸಲು ಸಂಚು ಹೂಡಿದ್ದ ಆರೋಪಿಯನ್ನು ರೈತರು...

ಮನೆಗೆ ನುಗ್ಗಿ 15 ವರ್ಷದ ಬಾಲಕಿಯ ಬರ್ಬರ ಹತ್ಯೆ

Newsics.com ಪಾಟ್ನ: ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಅತ್ಯಂತ ದಾರುಣ ಕೃತ್ಯ ನಡೆದಿದೆ. ಮನೆಯೊಂದಕ್ಕೆ ದಾಳಿ ನಡೆಸಿದ ದುಷ್ಕರ್ಮಿಗಳು 15 ವರ್ಷದ ಬಾಲಕಿಯನ್ನು ಹತ್ಯೆ ಮಾಡಿದ್ದಾರೆ. ಕತ್ತಿಯಿಂದ ಕಡಿದು ಈ ಹತ್ಯೆ ಮಾಡಲಾಗಿದೆ. ಮೃತಪಟ್ಟ ಬಾಲಕಿಯನ್ನು  ಅಂಶು...

ಲಂಡನ್ ನಲ್ಲಿ ಆಶ್ರಯ ಕೋರಿ ವಿಜಯ ಮಲ್ಯ ಅರ್ಜಿ

Newsics.com ಲಂಡನ್: ಭಾರತಕ್ಕೆ ಗಡೀಪಾರು ಭೀತಿ ಎದುರಿಸುತ್ತಿರುವ ದಿವಾಳಿ ಉದ್ಯಮಿ ವಿಜಯ ಮಲ್ಯ ಆಶ್ರಯ ಕೋರಿ ಬ್ರಿಟನ್ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಮಲ್ಯ ಪರ ವಕೀಲ ಫಿಲಿಪ್ ಮೈಕಲ್ ಈ ಮಾಹಿತಿ ಬಹಿರಂಗಪಡಿಸಿದ್ದಾರೆ. ಭಾರತದ ಬ್ಯಾಂಕ್...
- Advertisement -
error: Content is protected !!