Sunday, May 22, 2022

ಕಥೆಯೊಂದ ಹೇಳುವೆ ನೀ ಕೇಳು ಮಗುವೆ…

Follow Us

ಕ್ಕಳನ್ನು ಮಲಗಿಸುವುದು ಸುಲಭದ ಕೆಲಸವೇನಲ್ಲ. ಆದರೆ, ನಿಮಗೆ ಕಥೆ ಹೇಳುವ ಕಲೆ ಗೊತ್ತಿದ್ದರೆ ಮಕ್ಕಳನ್ನು ಬಹುಬೇಗ ನಿದ್ರಾದೇವತೆಯ ಮಡಿಲಿಗೆ ಹಾಕಲು ಸಾಧ್ಯ. ಹಿಂದೆಲ್ಲ ಮನೆ ತುಂಬಾ ಜನರಿರುತ್ತಿದ್ದರು. ಹಿರಿಯರು ಮನೆಯ ಮಕ್ಕಳನ್ನೆಲ್ಲ ಒಂದೆಡೆ ಕೂರಿಸಿಕೊಂಡು ರಾಮಾಯಣ, ಮಹಾಭಾರತದ ಜೊತೆಗೆ ಅನೇಕ ನೀತಿ ಕಥೆಗಳನ್ನು ಮಕ್ಕಳಿಗೆ ಹೇಳುತ್ತಿದ್ದರು. ಟಿವಿ, ಮೊಬೈಲ್, ಇಂಟರ್ನೆಟ್ ಸೇರಿದಂತೆ ಮನರಂಜನೆಯ ಯಾವುದೇ ಮಾಧ್ಯಮಗಳು ಇದ್ದಿರದ ಅಂದಿನ ಕಾಲದಲ್ಲಿ ಮಕ್ಕಳಿಗೆ ಅಜ್ಜ-ಅಜ್ಜಿ ಹೇಳುವ ಕಥೆಯೇ ದೊಡ್ಡ ಮನೋರಂಜನೆಯಾಗಿತ್ತು. ಆದರೆ, ಇಂದಿನ ವಿಭಕ್ತ ಕುಟುಂಬ ಪದ್ಧತಿಯಿಂದ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಅಪ್ಪ-ಅಮ್ಮನಿಗೆ ತಮ್ಮ ಬಿಡುವಿಲ್ಲದ ದಿನಚರಿಯಲ್ಲಿ ಮಕ್ಕಳಿಗೆ ಕಥೆ ಹೇಳಲು ಪುರುಸೊತ್ತು ಸಿಗಬೇಕಲ್ಲ. ಹೀಗಾಗಿ ಟಿವಿಯಲ್ಲಿ ಕಾರ್ಟೂನ್ ಅಥವಾ ಮೊಬೈಲ್‍ನಲ್ಲಿ ಯಾವುದೋ ವಿಡಿಯೋ ಹಾಕಿಕೊಟ್ಟು ಮಕ್ಕಳನ್ನು ನಿದ್ರೆಗೆ ಜಾರಿಸುವ ಪ್ರಯತ್ನವನ್ನು ಈಗಿನ ಪೋಷಕರು ಮಾಡುತ್ತಿದ್ದಾರೆ. ಇದರಿಂದ ಮಕ್ಕಳು ಗಲಾಟೆ ಮಾಡದೆ ನಿದ್ರೆಗೆ ಜಾರಬಹುದು, ಆದರೆ ಟಿವಿ, ಮೊಬೈಲ್ ಮಕ್ಕಳ ಕಣ್ಣಿಗೆ ಹಾನಿ ಮಾಡುವುದು ಮಾತ್ರವಲ್ಲ, ಅವರ ಮಾನಸಿಕ ಅಭಿವೃದ್ಧಿಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರಬಲ್ಲದು. ಆದರೆ, ಕಥೆ ಆಗಲ್ಲ. ಮಕ್ಕಳಿಗೆ ಕಥೆ ಹೇಳುವುದರಿಂದ ಹತ್ತಾರು ಪ್ರಯೋಜನಗಳಿವೆ. ಏನದು ಅಂತೀರಾ? ಮುಂದೆ ಓದಿ.
*ಭಾಷಾ ಜ್ಞಾನ ಹೆಚ್ಚುತ್ತದೆ: ಮಗುವಿಗೆ ಪ್ರತಿದಿನ ಕಥೆ ಹೇಳುವುದರಿಂದ ಅದಕ್ಕೆ ಹೊಸ ಹೊಸ ಪದಗಳ ಪರಿಚಯವಾಗುತ್ತದೆ. ಇನ್ನು ಮಾತು ಕಲಿಯುವ ಹಂತದಲ್ಲಿರುವ ಮಗು ತಾನು ಮಾತನಾಡುವಾಗ ಈ ಪದಗಳನ್ನು ಬಳಸಲು ಪ್ರಯತ್ನಿಸುತ್ತದೆ. ಹೀಗೆ ಮಗುವಿನ ಪದ ಭಂಡಾರ ವಿಸ್ತಾರಗೊಳ್ಳುತ್ತದೆ.
*ಕುತೂಹಲ ಬೆಳೆಯುತ್ತದೆ: ಕಥೆಯನ್ನು ಕೇಳುವಾಗ ಮಕ್ಕಳಲ್ಲಿ ಸಹಜವಾಗಿ ಮುಂದೇನಾಗಬಹುದು ಎಂಬ ಕುತೂಹಲ ಬೆಳೆಯುತ್ತದೆ. ಈ ಕುತೂಹಲವೇ ಅವರು ಕಥೆಯನ್ನು ಆಸಕ್ತಿಯಿಂದ ಕೇಳಿಸಿಕೊಳ್ಳುವಂತೆ ಮಾಡುತ್ತದೆ. ಕುತೂಹಲ ಬೆಳೆಯುವ ಕಾರಣ ಅವರು ತಮ್ಮ ಸುತ್ತಮುತ್ತಲಿನ ಪ್ರತಿ ವಸ್ತು ಹಾಗೂ ವಿಷಯಗಳ ಬಗ್ಗೆ ಪ್ರಶ್ನಿಸುವ ಮೂಲಕ ಮಾಹಿತಿ ಕಲೆ ಹಾಕಲು ಪ್ರಯತ್ನಿಸುತ್ತಾರೆ.
*ಪ್ರಶ್ನೆ ಕೇಳುವ ಮನೋಭಾವ ಹೆಚ್ಚುತ್ತದೆ: ಕಥೆ ಕೇಳುವಾಗ ಮಧ್ಯೆ ಮಧ್ಯೆ ಅದು ಏಕೆ ಹಾಗಾಯಿತು? ಯಾರು ಮಾಡಿದರು? ಏಕೆ ಮಾಡಿದರು? ಹೀಗೆ ಅನೇಕ ಪ್ರಶ್ನೆಗಳನ್ನು ಮಕ್ಕಳು ಕೇಳುತ್ತಾರೆ. ಹೀಗಾಗಿ ಕಥೆ ಹೇಳುವ ಮೂಲಕ ನೀವು ಮಕ್ಕಳಲ್ಲಿ ಪ್ರಶ್ನಿಸುವ ಮನೋಭಾವವನ್ನು ಹೆಚ್ಚಿಸಬಹುದು.
*ಕಲ್ಪನಾ ಶಕ್ತಿ ಬೆಳೆಯುತ್ತದೆ: ಕಥೆ ಹೇಳುವಾಗ ಮಕ್ಕಳು ಅದನ್ನು ದೃಶ್ಯ ರೂಪದಲ್ಲಿ ಕಲ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಹೀಗಾಗಿ ಕಥೆ ಮಕ್ಕಳಲ್ಲಿ ಕಲ್ಪನಾ ಶಕ್ತಿಯನ್ನು ಬೆಳೆಸುತ್ತದೆ.
*ಕಥೆ ಕಟ್ಟುವ ಸಾಮಥ್ರ್ಯ: ಮಕ್ಕಳು ಕಥೆಯನ್ನು ಕೇಳುತ್ತ ಕೇಳುತ್ತ ತಾವು ಕೂಡ ಕಥೆ ಹೇಳಲು ಪ್ರಾರಂಭಿಸುತ್ತಾರೆ. ಚಿಕ್ಕಮಕ್ಕಳು ತಾವು ನೋಡಿದ, ಕೇಳಿದ ವಿಷಯಗಳನ್ನು ರಸವತ್ತಾಗಿ ಕಥೆ ಕಟ್ಟಿ ಹೇಳಲಾರಂಭಿಸುತ್ತಾರೆ.
*ಉಚ್ಚರಣೆ ಸುಧಾರಿಸುತ್ತದೆ: ಕಥೆ ಕೇಳುವಾಗ ದೊಡ್ಡವರು ಹೇಳುವ ಪದಗಳನ್ನು ಗಮನವಿಟ್ಟು ಕೇಳುತ್ತಾರೆ. ಅದನ್ನು ಹೇಗೆ ಉಚ್ಚರಿಸಬೇಕು, ಅದರ ಅರ್ಥವೇನು ಎಂಬುದನ್ನು ಚೆನ್ನಾಗಿ ಗ್ರಹಿಸುತ್ತಾರೆ. ಹೀಗಾಗಿ ಕಥೆ ಹೇಳುವುದರಿಂದ ಮಕ್ಕಳ ಉಚ್ಚರಣೆ ಕೂಡ ಸುಧಾರಿಸುತ್ತದೆ.
*ಗ್ರಹಣ ಶಕ್ತಿ ಹೆಚ್ಚುತ್ತದೆ: ಕಥೆ ಮಕ್ಕಳ ಗ್ರಹಿಕೆಯನ್ನು ಸುಧಾರಿಸುತ್ತದೆ. ಒಂದು ವಿಷಯವನ್ನು ಹೇಗೆ ಗ್ರಹಿಸಬೇಕು ಎಂಬುದು ಕಥೆಗಳನ್ನು ಕೇಳುತ್ತ ಕೇಳುತ್ತ ಮಕ್ಕಳು ಕಲಿತುಕೊಳ್ಳುತ್ತಾರೆ.

ಮತ್ತಷ್ಟು ಸುದ್ದಿಗಳು

Latest News

ಕುತುಬ್ ಮಿನಾರ್ ಸಂಕೀರ್ಣ ಉತ್ಖನನ: ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದ ಕೇಂದ್ರ ಸಚಿವ

newsics.com ನವದೆಹಲಿ: ಕುತುಬ್ ಮಿನಾರ್ ಸಂಕೀರ್ಣದ ಉತ್ಖನನ ಕುರಿತಂತೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಕೇಂದ್ರ ಸಂಸ್ಕೃತಿ ಸಚಿವ ಜಿ.ಕೆ.ರೆಡ್ಡಿ ಹೇಳಿದ್ದಾರೆ. ದೆಹಲಿಯ ಕುತುಬ್ ಮಿನಾರ್ ಸಂಕೀರ್ಣದಲ್ಲಿ...

ನನ್ನ ದೇಹದ ಖಾಸಗಿ ಭಾಗದಲ್ಲಿನ ಮಚ್ಚೆ ಬಗ್ಗೆ ಹೇಳಲಿ: ಲೈಂಗಿಕ ಕಿರುಕುಳ ಆರೋಪಕ್ಕೆ ಎಲಾನ್ ಮಸ್ಕ್ ಓಪನ್ ಚಾಲೆಂಜ್

newsics.com ನ್ಯೂಯಾರ್ಕ್: ಖಾಸಗಿ ಜೆಟ್‌ನಲ್ಲಿ ಫ್ಲೈಟ್ ಅಟೆಂಡೆಂಟ್ ಸ್ನೇಹಿತೆ ಎನ್ನಲಾದ ವ್ಯಕ್ತಿ ಮಾಡಿರುವ ಲೈಂಗಿಕ ಕಿರುಕುಳ ಆರೋಪವನ್ನು ಜಗತ್ತಿನ‌ ನಂಬರ್ ಒನ್ ಶ್ರೀಮಂತ ಬಿಲಿಯನೇರ್ ಎಲಾನ್‌ ಮಸ್ಕ್ ಅಲ್ಲಗಳೆದಿದ್ದಾರೆ. ಒಂದು ವೇಳೆ ಲೈಂಗಿಕ ಕಿರುಕುಳ‌ ನೀಡಿದ್ದೇನೆ...

ಪ್ರಿಯಕರನನ್ನೇ ಮದುವೆಯಾಗುವೆನೆಂದ ವಧು: ತಾಳಿ ಕಟ್ಟುವ ವೇಳೆ ಹೈಡ್ರಾಮಾ

newsics.com ಮೈಸೂರು: ಮದುವೆಯಲ್ಲಿ ತಾಳಿ ಕಟ್ಟುವ ವೇಳೆ ಮದುಮಗಳು ವರನಿಗೆ ಶಾಕ್ ಕೊಟ್ಟಿದ್ದು, ತಾನು ಪ್ರೀತಿಸಿದ ಹುಡುಗನನ್ನೇ ಮದುವೆಯಾಗುವುದಾಗಿ ಹಠ ಹಿಡಿದಿದ್ದಾಳೆ. ಮದುಮಗಳು ಸಿಂಚನ ತನ್ನ ಪಕ್ಕದ ಮನೆಯ ಯುವಕನನ್ನು ಪ್ರೀತಿಸಿದ್ದು, ಆದರೆ ಮನೆಯವರು ಎಚ್.ಡಿ.ಕೋಟೆ...
- Advertisement -
error: Content is protected !!