newsics.com
ಪ್ರತಿಯೊಬ್ಬರೂ ತಮ್ಮ ದೇಹವು ಸುವಾಸನೆಯಿಂದ ಕೂಡಿರಬೇಕು ಎಂದು ಆಸೆ ಪಡುತ್ತಾರೆ. ಅದಕ್ಕಾಗಿ ಇನ್ನಿಲ್ಲದ ಸಾಹಸ ಮಾಡುತ್ತಾರೆ. ನಾನಾ ರೀತಿಯ ಸುಗಂಧದ್ರವ್ಯಗಳಿಗೆ ಮೊರೆ ಹೋಗುತ್ತಾರೆ. ಒಬ್ಬೊಬ್ಬರಿಗೆ ಒಂದೊಂದು ರೀತಿಯ ಪರ್ಫ್ಯೂಮ್ ಅಥವಾ ಸುಗಂಧದ್ರವ್ಯದ ಘಮ ಹಿಡಿಸುತ್ತದೆ. ಕೆಲವರು ಮೈಲ್ಡ್ ಆದ ಪರ್ಫ್ಯೂಮ್ ಅನ್ನು ಇಷ್ಟ ಪಟ್ಟರೆ, ಇನ್ನು ಕೆಲವರು ಅಷ್ಟು ದೂರ ಬರುತ್ತಿದ್ದರೆ ಪರ್ಫ್ಯೂಮ್ ನ ಘಮ ಎಲ್ಲೆಲ್ಲೂ ಹರಡಿರಬೇಕು, ಅಷ್ಟು ಘಾಟಾದ ಪರ್ಫ್ಯೂಮನ್ನು ಇಷ್ಟಪಡುತ್ತಾರೆ. ಇನ್ನು ಕೆಲವರಿದ್ದಾರೆ ಪರ್ಫ್ಯೂಮ್/ ಸುಗಂಧ ದ್ರವ್ಯ ಎಂದರೆ ಮೂಗುಮುರಿಯುವವರು. ಹೀಗೆ ಒಟ್ಟಿನಲ್ಲಿ ಈ ಪರ್ಫ್ಯೂಮ್ ಗೆ ಒಂದಲ್ಲ ಒಂದು ರೀತಿಯ ಡಿಮ್ಯಾಂಡ್ ಇದ್ದೇ ಇದೆ.
ಅದಿರಲಿ, ಇಲ್ಲೊಂದು ಹೊಸ ರೀತಿಯ ಪರ್ಫ್ಯೂಮ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇದು ಒಬ್ಬ ಸುಂದರಿಯ ಬೆವರಿನಿಂದ ಮಾಡಿದ ಪರ್ಫ್ಯೂಮ್ ಅಂತೆ!
ಹೌದು ಆಕೆ ಹೆಸರು ವೆನ್ನೆಸ್ಸಾ ಮೌರಾ, ಬ್ರೆಜಿಲಿಯನ್ ಮಾಡೆಲ್. ಈಕೆ “ಫ್ರೆಶ್ ಗಾಡೆಸ್” ಎಂಬ ಬ್ರಾಂಡ್ ನ ಸುಗಂಧ ದ್ರವ್ಯವನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಇದರ ವಿಶೇಷವೆಂದರೆ, ಈ ಸುಗಂಧ ದ್ರವ್ಯದಲ್ಲಿ ಆ ಸುಂದರ ಯುವತಿಯ ಬೆವರು ಕೂಡ ಸೇರಿದೆ. ಸಾವೊ ಪಾಲೊದಲ್ಲಿ ವಾಸಿಸುತ್ತಿರುವ ಮಾಡೆಲ್ ವೆನೆಸ್ಸಾ ಮೌರಾ ಅವರು ಈ ಪರ್ಪ್ಯೂಮ್ ಬ್ರಾಂಡ್ ಆರಂಭಿಸಿದ್ದಾರೆ.
ಆಕೆಗೆ ಈ ಆಲೋಚನೆ ಬಂದಿದ್ದಾದರೂ ಏಕೆ?
ಆಕೆಯ ಪ್ರಿಯಕರ ಹಾಗೂ ಮಾಜಿ ಪ್ರಿಯಕರ ಯಾವಾಗಲೂ ನಿನ್ನ ದೇಹದ ವಾಸನೆಯು ನೈಸರ್ಗಿಕವಾಗಿ ಸುಗಂಧಭರಿತವಾಗಿದೆ ಅದು ನಮ್ಮನ್ನು ಆಕರ್ಷಿಸುತ್ತದೆ ಎನ್ನುತ್ತಿದ್ದರಂತೆ. ಈ ವಿಚಾರವನ್ನು ಆಕೆ ಗಂಭೀರವಾಗಿ ತೆಗೆದುಕೊಂಡು ಬೆವರಿನಿಂದಲೇ ಪರ್ಡ್ಯೂಮ್ ತಯಾರಿಸಿದ್ದಾಳೆ. ಇದಕ್ಕೆ ‘ಫ್ರೆಶ್ ಗಾಡೆಸ್ ಪರ್ಡ್ಯೂಮ್’ ಎಂದು ಹೆಸರಿಟ್ಟಿದ್ದಾಳೆ. ಇದರಲ್ಲಿ ಆಕೆಯ ಬೆವರಿನ ಹೊರತಾಗಿ ಇತರೆ ಪದಾರ್ಥಗಳು ಕೂಡ ಇದೆ. ಬಾಟಲಿಯಲ್ಲಿ 8 ಮಿಲಿ ಬೆವರನ್ನು ಬೆರೆಸಲಾಗುತ್ತದೆ.
ಈ ಪರ್ಫ್ಯೂಮ ಬೆಲೆ ಎಷ್ಟು?
ವರದಿ ಪ್ರಕಾರ ಈ ಪರ್ಪ್ಯೂಮ್ ಬೆಲೆ 50 ಎಂಎಲ್‌ಗೆ 138 ಡಾಲರ್ ಗಳು ಅಂದರೆ 11 ಸಾವಿರ ರೂಪಾಯಿಯಂತೆ.
ಗುಡ್ ಗಮ್’ ಎಂಬ ಪ್ಲಾಸ್ಟಿಕ್ ರಹಿತ ಚೂಯಿಂಗ್ ಗಮ್ ತಯಾರಿಸಿ, ಹೆಸರುವಾಸಿಯಾದ ಬೆಂಗಳೂರಿನ ಸಹೋದರರು