Thursday, December 2, 2021

ಮಕ್ಕಳೊಂದಿಗೆ ಆಟವಾಡಿ ಎನ್ನುತ್ತಿದೆ ಕೊರೋನಾ!

Follow Us

ಕೊರೋನಾ ವೈರಸ್ ಮಕ್ಕಳ ಬೇಸಿಗೆ ರಜೆಯನ್ನು ಕರಾಳವಾಗಿಸಿದೆ. ಈ ವೈರಸ್ ಕಾಟದಿಂದ ಮುಕ್ತಿ ದೊರೆತರೆ ಸಾಕು, ಮಕ್ಕಳ ರಜೆಯೇನು ಮುಂದಿನ ವರ್ಷವಾದರೂ ಬರುತ್ತದೆ ಎಂದೆನಿಸುತ್ತಿದೆ. ಆದರೆ, ದಿನವಿಡೀ ಮನೆಯಲ್ಲೇ ಇರುವ ಮಕ್ಕಳ ಕಿರಿಕಿರಿ ಅಂತಿಂಥದ್ದಲ್ಲ. ಅದರ ಬಿಸಿ ದೊಡ್ಡವರನ್ನೂ ತಟ್ಟದೆ ಇರದು.

===

♦ ಸುಮನಾ ಲಕ್ಷ್ಮೀಶ
response@134.209.153.225
newsics.com@gmail.com

ಕ್ಕಳನ್ನು ಮನೆಯಲ್ಲೇ ಕೂಡಿಹಾಕಿಕೊಂಡಿರುವ ನಗರದ ಪಾಲಕರ ಪಾಡು ಈಗ ಹೇಳತೀರದ್ದಲ್ಲ. ಪಾಲಕರು ಇಬ್ಬರೂ ಒಂದೆಡೆ ಇರುವಂಥವರಾದರೆ ಸ್ವಲ್ಪ ಪರವಾಗಿಲ್ಲ. ಇಬ್ಬರೂ ಬೇರೆ ಬೇರೆ ಊರುಗಳಲ್ಲಿದ್ದರೆ ಮಾತ್ರ ಮಕ್ಕಳ ಜವಾಬ್ದಾರಿ ಹೊತ್ತವರ ಪಾಡು ದೇವರಿಗೇ ಪ್ರೀತಿ! ಹೌದು, ಸದಾಕಾಲ ಕ್ರಿಯಾಶೀಲವಾಗಿರುವ ಮಕ್ಕಳು ಈಗ ಇಡೀ ದಿನ ಟಿವಿ ಮುಂದೆ ಕೂರುತ್ತಿದ್ದಾರೆ, ಅವರಿಗೆ ಅದು ಅನಿವಾರ್ಯವೂ ಆಗಿದೆ. ಹೊರಗೆ ಹೋಗುವಂತಿಲ್ಲ, ಬೀದಿಯ ನಾಲ್ಕು ಮಕ್ಕಳು ಸೇರಿ ಆಡವಾಡುವಂತಿಲ್ಲ, ಹೊರಗಿನ ಕುರುಕುಲು ಇಲ್ಲ…ಒಂದೇ ಎರಡೇ? ಈ ಎಲ್ಲ ಕಿರಿಕಿರಿಗಳನ್ನು ಅವರು ಪಾಲಕರ ಮೇಲೆಯೇ ತೀರಿಸಿಕೊಳ್ಳುವುದು ಸಹಜ. ಜತೆಗೆ, ದಿನವಿಡೀ ಟಿವಿ, ಮೊಬೈಲ್ ದಾಸರಾಗುತ್ತಿರುವ ಮಕ್ಕಳನ್ನು ಕಂಡೂ ಸಹ ಏನೂ ಮಾಡಲಾಗದ ಅಸಹಾಯಕತೆ ಪಾಲಕರದ್ದು. ಟಿವಿ ನೋಡಬೇಡಿ ಎಂದರೆ ಕಿತ್ತಾಟ. ಸ್ವಲ್ಪ ತಾಳ್ಮೆ ಕಳೆದುಕೊಂಡರೂ ಮನೆ ರಣರಂಗವಾಗುವುದರಲ್ಲಿ ಸಂಶಯವಿಲ್ಲ. ಹೀಗಾಗಿ, ಈಗ ಪಾಲಕರು ತಾಳ್ಮೆಯ ಸಾಕಾರಮೂರ್ತಿಗಳಾಗದ ಹೊರತು ಬೇರೆ ದಾರಿಯಿಲ್ಲ.
ಹಾಗಿದ್ದರೆ ಏನೆಲ್ಲ ಮಾಡಬಹುದು?
• ಮಕ್ಕಳು, ಪಾಲಕರು ಸೇರಿ ಮನೆಯಲ್ಲೇ ಆಟವಾಡಲು ಯತ್ನಿಸಿ. ಕುಟುಂಬವೆಲ್ಲ ಸೇರಿ ಆಟವಾಡುವ ಕಾಲ ಮರೆತೇ ಹೋಗಿರುವುದರಿಂದ ಮೊದಮೊದಲು ಸ್ವಲ್ಪ ಹಿಂಸೆ ಎನಿಸಬಹುದು. ಆದರೆ, ಹೀಗೆ ಕಳೆದುಹೋದ ಮಧುರ ಬಾಂಧವ್ಯವನ್ನು ಮರಳಿ ಬೆಸೆಯಲು ಇದು ಸುಸಮಯ ಎಂದುಕೊಳ್ಳಿ.
• ದಿನದ ಯಾವುದಾದರೂ ನಿಗದಿತ ಸಮಯವನ್ನು ಟಿವಿ ನೋಡಲು, ಮೊಬೈಲ್ ವೀಕ್ಷಣೆಗೆ ನಿಗದಿಪಡಿಸಿ, ಆ ಸಮಯದಲ್ಲಿ ಮಾತ್ರವೇ ಅವರು ಅವುಗಳ ಮೊರೆ ಹೋಗಲಿ. ಉಳಿದ ಸಮಯದಲ್ಲಿ ಬೇರೆ ಚಟುವಟಿಕೆಗಳತ್ತ ಗಮನ ನೀಡಲಿ.
• ಬೆಳಗ್ಗೆ ತಿಂಡಿಯ ಬಳಿಕ, ಮಧ್ಯಾಹ್ನಕ್ಕೆ ಮಾಡುವ ಅಡುಗೆಯ ಕುರಿತು ಮಕ್ಕಳೊಂದಿಗೆ ಮಾತನಾಡಿ. ಅವುಗಳಿಗೆ ಏನೆಲ್ಲ ಬೇಕು ವಿವರಣೆ ಕೊಡಿ. ಅಡುಗೆ ಮನೆಯೇ ಕರೆದೊಯ್ದು ಅವುಗಳ ಪರಿಚಯ ಮಾಡಿಸಿ. ಸಾಧ್ಯವಾದರೆ, ಮಕ್ಕಳೇ ಒಗ್ಗರಣೆ ಹಾಕುವುದು, ಚಿಕ್ಕ ಪುಟ್ಟ ಸಹಾಯ ಮಾಡುವಂತೆ ನೋಡಿಕೊಳ್ಳಿ.
• ಲೂಡೋ, ಕೇರಂ, ಚೆಸ್ ಮುಂತಾದ ಆಟ ಆಡಬಹುದು.
• ಗಿಡಗಳಿದ್ದರೆ ಅವುಗಳ ಆರೈಕೆಯಲ್ಲಿ ಮಕ್ಕಳನ್ನೂ ಸೇರಿಸಿಕೊಳ್ಳಿ. ನೀರು ಹಾಕಲು ಹೇಳಿ. ಕಸ ತೆಗೆಯಲು ಹೇಳಿ. ಕೆಲಸ ಹೇಳಿದರೆ ಮಾಡುವ ಮಕ್ಕಳು ಕಡಿಮೆಯೇ. ಹೀಗಾಗಿ, ಇಬ್ಬರೂ ಸೇರಿ ಮಾಡೋಣ ಎನ್ನಿ, ಆಗ ಬರುವ ಸಾಧ್ಯತೆ ಹೆಚ್ಚಿರುತ್ತದೆ.
• ಮಧ್ಯಾಹ್ನ ಊಟದ ಬಳಿಕ ಸ್ವಲ್ಪ ಸಮಯ ಟಿವಿ ನೋಡಲು ಬಿಡಬಹುದು. ಈ ಸಮಯದಲ್ಲಿ ಪಾಲಕರು ವಿಶ್ರಾಂತಿ ಮಾಡಿಕೊಂಡರೆ ಮತ್ತೆ ಸಂಜೆಯ ಹೋರಾಟಕ್ಕೆ ಸನ್ನದ್ಧರಾಗಬಹುದು!
• ಪಾಲಕರಿಬ್ಬರೂ ಯಾವುದಾದರೊಂದು ಕೆಲಸದಲ್ಲಿದ್ದರೆ ಅವರ ಗಮನ ಬೇರೆ ಇದೆಯೆಂದು ಅರಿತು ಮಕ್ಕಳು ಪುನಃ ಟಿವಿಗೆ ಅಂಟಿಕೊಂಡು ಕೂರಬಹುದು. ಅಂಥ ಮಕ್ಕಳ ಜತೆಗೆ ಯಾರಾದರೂ ಇರಲೇಬೇಕಾಗುತ್ತದೆ. ಆ ಸಮಯದಲ್ಲಿ ಪಾಲಕರಲ್ಲಿ ಯಾರಾದರೂ ಒಬ್ಬರು ಅವರ ಜತೆಗಿದ್ದು, ಇನ್ನೊಬ್ಬರು ಕೆಲಸದಲ್ಲಿ ಪಾಲ್ಗೊಳ್ಳುವುದು ವಿಹಿತ.
• ಮನೆಯಲ್ಲೇ ಮೂರ್ನಾಲ್ಕು ಚೇರುಗಳನ್ನಿರಿಸಿ ಮ್ಯೂಸಿಕಲ್ ಚೇರ್, ಕಣ್ಣಾಮುಚ್ಚಾಲೆ ಆಡಬಹುದು.
• ಕೆಲವು ಹಳೆಯ ಆಟಗಳ ಬಗೆಗೆ ಮರೆತುಹೋದರೆ ಊರಿನ ಪರಿಚಯಸ್ಥರಿಗೆ ಫೋನ್ ಮಾಡಿ ತಿಳಿದುಕೊಳ್ಳುವ ಪ್ರಯತ್ನವನ್ನೂ ಮಾಡಬಹುದು.
• ಪದೇ ಪದೆ ನ್ಯೂಸ್ ನೋಡುತ್ತ ಮನೆಯನ್ನು ಒತ್ತಡಮಯವನ್ನಾಗಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ. ಯಾವಾಗಲಾದರೂ ಒಮ್ಮೆ ಸುದ್ದಿ ತಿಳಿದುಕೊಂಡರೆ ಸಾಕಲ್ಲವೇ?
ಈ ಎಲ್ಲ ಪ್ರಕ್ರಿಯೆಯಲ್ಲಿ ಪಾಲಕರು ದಣಿಯಬಾರದು. ಹೇಗಾದರೂ ಅವರನ್ನು ಎಂಗೇಜ್ ಮಾಡಬೇಕು ಎಂದು ಹಠಕ್ಕೆ ಬಿದ್ದು ಹೊರಟರೆ ಪಾಲಕರು ಸೋಲುವುದು ಗ್ಯಾರಂಟಿ. ಬದಲಿಗೆ ಪ್ರೀತಿಯಿಂದ ಅವರೊಂದಿಗೆ ಇನ್ವಾಲ್ವ್ ಆಗಿ. ಆಗ ನಿಮಗೂ ಖುಷಿಯಾಗುತ್ತದೆ. ಬೇಸಿಗೆ ರಜೆ ಮುಗಿಯುವ ಒಳಗಾಗಿ ಕುಟುಂಬದಲ್ಲಿ ಹೆಚ್ಚಿನ ಸಾಮರಸ್ಯ ಮೂಡಿರುತ್ತದೆ.

ಮತ್ತಷ್ಟು ಸುದ್ದಿಗಳು

Latest News

‘ಮಿರ್ಜಾಪುರ್’ ಖ್ಯಾತಿಯ ನಟ ಬ್ರಹ್ಮ ಮಿಶ್ರಾ ಮೃತದೇಹ ಪತ್ತೆ!

newsics.com ಮುಂಬೈ: 'ಮಿರ್ಜಾಪುರ್' ವೆಬ್ ಸೀರೀಸ್ ನಲ್ಲಿ ಲಲಿತ್ ಪಾತ್ರದ ಮೂಲಕ ಹೆಸರುವಾಸಿಯಾಗಿದ್ದ ನಟ ಬ್ರಹ್ಮ ಮಿಶ್ರಾ ಮುಂಬೈನಲ್ಲಿ ನಿಧನರಾಗಿದ್ದಾರೆ. ಮುಂಬೈನ ವರ್ಸೋವಾದಲ್ಲಿರುವ ಅವರ ಫ್ಲಾಟ್‌ ನಲ್ಲಿ ಅರೆ...

ಸಿಲಿಂಡರ್ ಸ್ಫೋಟಗೊಂಡು 4 ತಿಂಗಳ ಮಗು ಸಾವು

newsics.com ಮುಂಬೈ: ಸಿಲಿಂಡರ್ ಸ್ಫೋಟದಿಂದ 4 ತಿಂಗಳ ಮಗು ಸಾವನ್ನಪ್ಪಿದ ಘಟನೆ ಮುಂಬೈನ ವರ್ಲಿಯಲ್ಲಿರುವ ಬಿಡಿಡಿ ಚಾಲ್‌ ನಲ್ಲಿ ಸಂಭವಿಸಿದೆ. ಸಿಲಿಂಡರ್ ಸ್ಫೋಟಗೊಂಡಿದ್ದರಿಂದ ನಾಲ್ಕು ತಿಂಗಳ ಮಗುವಿಗೆ ತೀವ್ರ ಸುಟ್ಟ ಗಾಯಗಳಾಗಿತ್ತು. ಮಗುವನ್ನು ಆಸ್ಪತ್ರೆಗೆ ದಾಖಲಿಸಿತ್ತಾದರೂ,...

ಒಮಿಕ್ರಾನ್ ಪತ್ತೆ ಹಿನ್ನೆಲೆ ರಾಜ್ಯದಲ್ಲಿ ತೀವ್ರ ಕಟ್ಟೆಚ್ಚರ: ಡಾ. ಅಶ್ವತ್ಥ ನಾರಾಯಣ

newsics.com ಬೆಂಗಳೂರು: ರಾಜ್ಯದಲ್ಲಿ ಎರಡು ಒಮಿಕ್ರಾನ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಈ ಕುರಿತು ಸಚಿವ ಡಾ. ಅಶ್ವತ್ಥ ನಾರಾಯಣ ಪ್ರತಿಕ್ರಿಯಿಸಿದ್ದು, ರಾಜ್ಯದಲ್ಲಿ ಸರಕಾರ ಕಟ್ಟೆಚ್ಚರ ವಹಿಸಿದೆ ಎಂದು ಹೇಳಿದ್ದಾರೆ. ಇಬ್ಬರ ಸಂಪರ್ಕಿತರನ್ನು...
- Advertisement -
error: Content is protected !!