ಶರಣಾಗತನನ್ನು ಪೊರೆವ ಚಂದ್ರಘಂಟಾದೇವಿ

ನವರಾತ್ರಿಯ ಮೂರನೇ ದಿನ ಚಂದ್ರಘಂಟಾದೇವಿಯ ಆರಾಧನೆ. ಚಂದ್ರಘಂಟಾದೇವಿಯ ಧ್ಯಾನದಿಂದ ಶರಣಾಗತನ ರಕ್ಷಣೆ ಆಗುತ್ತದೆ. ಆರಾಧನೆಯಿಂದ ಪ್ರಾಪ್ತವಾಗುವ ಬಹುದೊಡ್ಡ ಸದ್ಗುಣವು ಸಾಧಕನಲ್ಲಿ ಪರಾಕ್ರಮ- ನಿರ್ಭಯದೂಂದಿಗೆ ಸೌಮ್ಯತೆ ಹಾಗೂ ವಿನಮ್ರತೆಯೂ ವಿಕಾಸವಾಗುತ್ತದೆಂಬುದು ನಂಬಿಕೆ.

     ನವರಾತ್ರಿ- 3ನೇ ದಿನ     

♦ ವಿದುಷಿ ಮಿತ್ರಾ ನವೀನ್
ಭರತನಾಟ್ಯ ಗುರು
ನಾದವಿದ್ಯಾಲಯ ಸಂಗೀತ-ನೃತ್ಯ ಅಕಾಡೆಮಿ, ಮೈಸೂರು
newsics.com@gmail.com

 ಪಿಂ ಡಜಪ್ರವರಾರೂಢಾ ಚಂಡಕೋಪಾಸ್ತ್ರಕೈರ್ಯುತಾ ।
ಪ್ರಸಾದಂ ತನುತೇ ಮಹ್ಯಂ ಚಂದ್ರಘಂಟೇತಿ ವಿಶೃತಾ ॥
ಜಗಜ್ಜನನಿ ದುರ್ಗೆಯ ಮೂರನೇ ಶಕ್ತಿ ಚಂದ್ರಘಂಟ. ನವರಾತ್ರಿಯ ಉಪಾಸನೆಯಲ್ಲಿ ಮೂರನೇ ದಿನ ಇವಳ ಆರಾಧನೆ ಶಾಂತಿದಾಯಕ ಮತ್ತು ಶ್ರೇಯಸ್ಕರವಾಗಿದೆ. ಇವಳ ಮಸ್ತಕದಲ್ಲಿ ಗಂಟೆಯ ಆಕಾರದ ಅರ್ಧಚಂದ್ರ ಇದ್ದಾನೆ. ಆದ್ದರಿಂದಲೇ ಇವಳು ಚಂದ್ರಘಂಟಾದೇವಿ. ಇವಳ ಶರೀರವು ಚಿನ್ನದಂತೆ ಹೊಳೆಯುತ್ತದೆ. ಇವಳಿಗೆ 10 ಕೈ, 10 ಕೈಗಳಲ್ಲಿ ಖಡ್ಗ, ಗದೆ ಕಮಂಡಲ, ಕತ್ತಿ, ಮಾಲೆ, ಅಭಯಹಸ್ತ, ಅಸ್ತ್ರಗಳು, ಶಸ್ತ್ರಗಳು ವಿಭೂಷಿತವಾಗಿದೆ. ಇವಳ ವಾಹನ ಸಿಂಹ. ಇವಳ ಮುದ್ರೆಯು ಯುದ್ಧಕ್ಕಾಗಿ ಹೊರಟಂತಿದೆ. ತಾಯಿ ಗಂಟೆಯಂತೆ ಭಯಾನಕ ಚಂಡ ಧ್ವನಿಯಿಂದ ಅತ್ಯಾಚಾರೀ ದಾನವರು, ದೈತ್ಯರು, ರಾಕ್ಷಸರು ಯಾವಾಗಲೂ ನಡಗುತ್ತಿರುತ್ತಾರೆ. ಅವಳ ದುಷ್ಕೃತ್ಯ ರೂಪ ಚಾಂಡಿ ಅಥವಾ ಚಾಮುಂಡಾ ದೇವಿ ಎಂದು ಹೇಳಲಾಗುತ್ತದೆ. 
ಶಿವ ಮಹಾ ಪುರಾಣದ ಪ್ರಕಾರ, ಚಂದ್ರಘಂಟವು ಚಂದ್ರಶೇಖರ ರೂಪದಲ್ಲಿ ಶಿವನ ‘ಶಕ್ತಿ’ ಆಗಿದೆ. ಶಿವನ ಪ್ರತಿ ಅಂಶವೂ ಶಕ್ತಿಯೊಂದಿಗೆ ಇರುತ್ತದೆ. ಆದ್ದರಿಂದ ಅವು ಅರ್ಧನಾರೀಶ್ವರ.
ಈ ದಿನ ಸಾಧಕನ ಮನಸ್ಸು ಮಣಿಪೂರ ಚಕ್ರದಲ್ಲಿ ಪ್ರವೇಶಿಸುತ್ತದೆ. ದೇವಿಯ ಕೃಪೆಯಿಂದ ಸಾಧಕನ ಸಮಸ್ತ ಪಾಪಗಳೂ ನಾಶವಾಗುತ್ತವೆ. ಕಷ್ಟಗಳನ್ನು ಸಿಂಹವಾಹಿನಿ ನಿವಾರಿಸುತ್ತಾಳೆ. ಇವಳ ಧ್ಯಾನದಿಂದ ಶರಣಾಗತನ ರಕ್ಷಣೆ ಆಗುತ್ತದೆ. ಇವಳ ಆರಾಧನೆಯಿಂದ ಪ್ರಾಪ್ತವಾಗುವ ಬಹುದೊಡ್ಡ ಸದ್ಗುಣವು ಸಾಧಕನಲ್ಲಿ ಪರಾಕ್ರಮ- ನಿರ್ಭಯದೂಂದಿಗೆ ಸೌಮ್ಯತೆ ಹಾಗೂ ವಿನಮ್ರತೆಯೂ ವಿಕಾಸವಾಗುವುದು. ತಾಯಿಯ ಧ್ಯಾನವು ಇಹ ಮತ್ತು ಪರ ಲೋಕಗಳಲ್ಲಿ ಶ್ರೇಯಸ್ಕರ, ಸದ್ಗತಿಯನ್ನು ಕೊಡುವಂಥದ್ದಾಗಿದೆ.

ಇಂದಿನಿಂದ ನವರಾತ್ರಿ; ಪ್ರಕೃತಿಯ ಪೂರ್ಣರೂಪ ಶೈಲಪುತ್ರಿ

ತಪಸ್ಸಿನ ಪ್ರತೀಕ ಬ್ರಹ್ಮಚಾರಿಣೀ…

LEAVE A REPLY

Please enter your comment!
Please enter your name here

Read More

ಅನಂತಪದ್ಮನಾಭ ಸ್ವಾಮಿ ಆಡಳಿತ ಮಂಡಳಿ ಸದಸ್ಯರಾಗಿ ಕುಮ್ಮನಂ

ನವದೆಹಲಿ: ಕೇರಳದ ಪ್ರಸಿದ್ದ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾಗಿ ಹಿರಿಯ ಬಿಜೆಪಿ ನಾಯಕ ಕುಮ್ಮನಂ ರಾಜಶೇಖರನ್ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯ ಈ...

ವೆಡ್ಡಿಂಗ್‌ ಫೋಟೋ ಶೂಟ್’ನಲ್ಲಿ ಬ್ಯಾಟ್ ಬೀಸಿದ ಸಂಜಿದಾ..!

newsics.comಢಾಕಾ: ಬಾಂಗ್ಲಾದೇಶ ರಾಷ್ಟ್ರೀಯ ಕ್ರಿಕೆಟ್‌ ತಂಡದ ಆಟಗಾರ್ತಿ ಸಂಜಿದಾ ಇಸ್ಲಾಮ್‌ ವಿಶಿಷ್ಟವಾಗಿ ವೆಡ್ಡಿಂಗ್‌ ಫೋಟೋ ಶೂಟ್ ಮಾಡಿ ಸುದ್ದಿಯಾಗಿದ್ದಾರೆ.ಮದುವೆಯ ಸಾಂಪ್ರದಾಯಕ ಉಡುಗೆಯಲ್ಲೇ ಅಂಗಳಕ್ಕಿಳಿದು, ಬ್ಯಾಟಿಂಗ್‌ ಮಾಡುವ ಶೈಲಿಯಲ್ಲಿ ಫೋಟೋ ತೆಗೆಸಿಕೊಂಡು...

ಫಲದಾಯಿನಿ ಕಾತ್ಯಾಯಿನೀ…

ಜಗನ್ಮಾತೆ ಕಾತ್ಯಾಯಿನಿಯು ಅಮೋಘ ಫಲದಾಯಿನಿಯಾಗಿದ್ದಾಳೆ. ಇವಳ ಬಣ್ಣವು ಬಂಗಾರದಂತೆ ಹೊಳೆಯುತ್ತದೆ. ಅವಳಿಗೆ ನಾಲ್ಕು ಭುಜಗಳಿವೆ. ಅಭಯ, ವರ, ಖಡ್ಗ ಹಾಗೂ ಕಮಲ ಪುಷ್ಪಗಳನ್ನು ಹೊಂದಿದ್ದಾಳೆ. ನವರಾತ್ರಿಯ ದುರ್ಗಾಪೂಜೆಯ ಆರನೇ ದಿನ...

Recent

error: Content is protected !!