Saturday, April 17, 2021

ಆ್ಯಪ್ ಅಭಿವೃದ್ಧಿಪಡಿಸಿ 20 ಲಕ್ಷ ಗೆಲ್ಲಿ

* ಆತ್ಮನಿರ್ಭರ ಭಾರತಕ್ಕೆ ಆ್ಯಪ್ ಚಾಲೆಂಜ್!

– ಸುಮನಾ ಲಕ್ಷ್ಮೀಶ
response@newsics.com
newsics.com@gmail.com

ಚೀನಾ ಆ್ಯಪ್’ಗಳನ್ನು ನಿಷೇಧಿಸಿದ ಬೆನ್ನಲ್ಲಿಯೇ ಮೋದಿ ಸರ್ಕಾರ ದೇಶೀಯವಾಗಿಯೇ ಆ್ಯಪ್ ಅಭಿವೃದ್ಧಿಪಡಿಸುವತ್ತ ಚಿತ್ತ ನೆಟ್ಟಿದೆ. ಇದು ಸರ್ಕಾರದ ಏಕೈಕ ವ್ಯವಸ್ಥೆಯೊಂದರಿಂದಲೇ ಅಸಾಧ್ಯ ಎನ್ನುವುದನ್ನು ಮನಗಂಡಿರುವ ಪ್ರಧಾನಿ ಮೋದಿ ಇದಕ್ಕಾಗಿ “ಆತ್ಮನಿರ್ಭರ ಭಾರತ ಅನ್ವೇಷಣಾ ಚಾಲೆಂಜ್’ ಎನ್ನುವ ವಿನೂತನ ಸ್ಪರ್ಧೆಯನ್ನು ದೇಶದ ಮುಂದೆ ಇಟ್ಟಿದ್ದಾರೆ.

ಚೀನಾದ ವಸ್ತುಗಳನ್ನಾಗಲೀ, ಆ್ಯಪ್’ಗಳನ್ನಾಗಲೀ ನಿಷೇಧಿಸುವುದು ಸುಲಭ. ಆದರೆ, ಅವುಗಳಿಲ್ಲದೆ ಎಷ್ಟೋ ಹಂತಗಳಲ್ಲಿ ಸಮಸ್ಯೆಯಾಗುತ್ತದೆ. ಕೈಗಾರಿಕೆಗಳು ಚೀನಾದಿಂದ ಆಮದು ಮಾಡಿಕೊಳ್ಳುವ ಬಹಳಷ್ಟು ಕಚ್ಚಾ ವಸ್ತುಗಳನ್ನು ನಮ್ಮಲ್ಲಿಯೇ ಉತ್ಪಾದನೆ ಮಾಡಲು ಗಮನ ಕೊಟ್ಟಿರುವ ನಡುವೆಯೇ ತಂತ್ರಜ್ಞಾನ ಕ್ಷೇತ್ರದಲ್ಲೂ ಸ್ವಾವಲಂಬಿಯಾಗುವತ್ತ ಸರ್ಕಾರವೇ ಖುದ್ದಾಗಿ ಪ್ರೇರಣಾದಾಯಿ ಹೆಜ್ಜೆಗಳನ್ನಿಟ್ಟಿದೆ. ಇತ್ತೀಚೆಗೆ ಚೀನಾ ಮೂಲದ ಜನಪ್ರಿಯ ಆ್ಯಪ್’ಗಳನ್ನು ದೇಶದಲ್ಲಿ ನಿಷೇಧಿಸಿರುವ ಬಳಿಕ ಇಂಥದ್ದೊಂದು ಮಹತ್ವದ ಹೆಜ್ಜೆ ಇಟ್ಟಿದೆ ಮೋದಿ ಸರ್ಕಾರ.
ಭಾರತ ಹೇಳಿಕೇಳಿ ಸಾಫ್ಟ್’ವೇರ್ ತಂತ್ರಜ್ಞರ ದೇಶ. ವಿದೇಶಗಳಿಗೆ ಮುಖ್ಯವಾಗಿ ಅಮೆರಿಕದಂಥ ದೇಶಗಳಿಗೆ ಸಾಫ್ಟ್’ವೇರ್ ತಜ್ಞರನ್ನು ಕಳಿಸುವ ದೇಶಕ್ಕೆ ಇಲ್ಲಿಯೇ ಆ್ಯಪ್’ಗಳನ್ನು ಅಭಿವೃದ್ಧಿಪಡಿಸುವುದು ಖಂಡಿತವಾಗಿ ಕಷ್ಟವಾಗಲಿಕ್ಕಿಲ್ಲ. ಆದರೆ, ಅದಕ್ಕೊಂದು ಪ್ರೇರಣೆ ಹಾಗೂ ವೇದಿಕೆ ಬೇಕಲ್ಲ? ಅದನ್ನೀಗ ಕೇಂದ್ರ ಸರ್ಕಾರವೇ ಮಾಡುತ್ತಿದೆ. ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಅಟಲ್ ಇನೋವೇಷನ್ ಮಿಷನ್ ಜಂಟಿಯಾಗಿ ಈ ಯೋಜನೆಯನ್ನು ರೂಪಿಸಿವೆ. ಇದರ ಅಡಿಯಲ್ಲಿ ಹಾಲಿ ಇರುವ ಆ್ಯಪ್’ಗಳಿಗೆ ಉತ್ತೇಜನ ನೀಡುವ ಹಾಗೂ ಹೊಸ ಆ್ಯಪ್’ಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ.

ಆ್ಯಪ್ ಚಾಲೆಂಜ್ ಹೀಗಿದೆ
ಇ ಲರ್ನಿಂಗ್, ವರ್ಕ್ ಫ್ರಾಮ್ ಹೋಮ್, ಗೇಮಿಂಗ್, ವಹಿವಾಟು, ಮನರಂಜನೆ, ನ್ಯೂಸ್, ಸಾಮಾಜಿಕ ಜಾಲತಾಣ, ಹೆಲ್ತ್ ಮತ್ತು ವೆಲ್’ನೆಸ್… ಈ ಎಂಟು ಕ್ಷೇತ್ರಗಳಿಗೆ ಸಂಬಂಧಿಸಿದ ಆ್ಯಪ್’ಗಳನ್ನು ಅಭಿವೃದ್ಧಿಪಡಿಸಲು ಭಾರತೀಯ ತಂತ್ರಜ್ಞರಿಗೆ ಆಹ್ವಾನ ನೀಡಲಾಗಿದೆ. ಈ ಕ್ಷೇತ್ರಗಳಿಗೆ ಸಂಬಂಧಿಸಿದ ವಿನೂತನ ಐಡಿಯಾಗಳಿರುವ ಯಾರೇ ಆದರೂ ಜುಲೈ 18ರೊಳಗೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು. ಆಯ್ಕೆಯಾದ ಆ್ಯಪ್’ಗಳನ್ನು ಆಗಸ್ಟ್ 7ರಂದು ಪ್ರಕಟಿಸಲಾಗುವುದು. ತಜ್ಞರನ್ನು ನೇಮಕ ಮಾಡಿ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ.
“ಭಾರತ ಹಾಗೂ ವಿಶ್ವ ಎದುರಿಸುತ್ತಿರುವ ನಿರ್ದಿಷ್ಟ ಸಮಸ್ಯೆಗಳನ್ನು ಬಗೆಹರಿಸಲು ಈ ಕ್ಷೇತ್ರಗಳಲ್ಲಿ ಸಾಕಷ್ಟು ಅವಕಾಶಗಳಿವೆ. ಈ ಸವಾಲಿನಲ್ಲಿ ಭಾಗವಹಿಸುವ ಮೂಲಕ ಆತ್ಮನಿರ್ಭರ ಆ್ಯಪ್ ವ್ಯವಸ್ಥೆಯನ್ನು ಸೃಷ್ಟಿಸಿ’ ಎಂದು ಪ್ರಧಾನಿ ಲಿಂಕ್ ಡೆನ್ ಸಾಮಾಜಿಕ ಜಾಲತಾಣದಲ್ಲಿ ಪತ್ರ ಬರೆದು ತಂತ್ರಜ್ಞರಿಗೆ ಉತ್ಸಾಹ ತುಂಬಿದ್ದಾರೆ.

ಬಹುಮಾನವೂ ಉಂಟು
ಮೊದಲ ಬಹುಮಾನ ಪಡೆದ ಆ್ಯಪ್’ಗೆ 20 ಲಕ್ಷ ರೂ.ನೀಡಲಾಗುವುದು. ಎರಡನೇ ಬಹುಮಾನಕ್ಕೆ 15 ಲಕ್ಷ ರೂ. ಮೂರನೇ ಬಹುಮಾನಕ್ಕೆ 10 ಲಕ್ಷ ರೂ. ನಿಗದಿಪಡಿಸಲಾಗಿದೆ. ಅಷ್ಟೇ ಅಲ್ಲ, ಉಪ ವಿಭಾಗಗಳನ್ನು ಸೃಷ್ಟಿಸಿದರೆ ಅವುಗಳಿಗೂ ಕ್ರಮವಾಗಿ 5, 3, 2 ಲಕ್ಷ ರೂ.ಗಳ ಮೂರು ಬಹುಮಾನ ನೀಡಲಾಗುವುದು.
ಹೆಚ್ಚಿನ ಮಾಹಿತಿಗೆ https://innovate.mygov.in/app-challenge/

ಮತ್ತಷ್ಟು ಸುದ್ದಿಗಳು

Latest News

ಆಸ್ಪತ್ರೆಗೆ ನುಗ್ಗಿ 850 ರೆಮಿಡಿಸಿವರ್ ಇಂಜೆಕ್ಷನ್ ಕಳ್ಳತನ

newsics.com ಭೋಪಾಲ್(ಮಧ್ಯಪ್ರದೇಶ): ಇಲ್ಲಿನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ನುಗ್ಗಿದ ದುಷ್ಕರ್ಮಿಗಳು 850 ರೆಮಿಡಿಸಿವರ್ ಇಂಜೆಕ್ಷನ್ ಗಳನ್ನು ಕಳ್ಳತನ ಮಾಡಿದ್ದಾರೆ. ದೇಶದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ನಡುವೆ ಕಾಳಸಂತೆಯಲ್ಲಿ ಔಷಧ...

ಕೇಂದ್ರ ಸಚಿವ ಕಿರೆನ್ ರಿಜಿಜುಗೆ ಕೊರೋನಾ ಸೋಂಕು

newsics.com ನವದೆಹಲಿ: ಕೇಂದ್ರ ಸಚಿವ ಕಿರೆನ್ ರಿಜಿಜು ಅವರಿಗೆ ಶನಿವಾರ ಕೊರೋನಾ ಸೋಂಕು ತಗುಲಿದೆ. ಈ ವಿಷಯವನ್ನು ಸ್ವತಃ ಸಚಿವ ಕಿರೆನ್ ರಿಜಿಜು ಅವರೇ ತಿಳಿಸಿದ್ದಾರೆ. ಟ್ವಿಟರ್ ನಲ್ಲಿ ಈ‌ ಮಾಹಿತಿ ಹಂಚಿಕೊಂಡಿರುವ ರಿಜಿಜು,...

ಕೊರೋನಾ ಸೋಂಕಿತರ ಚಿಕಿತ್ಸೆಗೆ ‌ಬಳಸುವ ರೆಮ್​ಡಿಸಿವಿರ್ ಇಂಜೆಕ್ಷನ್ ಬೆಲೆ ಇಳಿಕೆ

newsics.com ನವದೆಹಲಿ: ಕೊರೋನಾ ಸೋಂಕಿತ ರೋಗಿಗಳ ಚಿಕಿತ್ಸೆಗೆ ಬಳಸುವ ರೆಮ್​ಡಿಸಿವಿರ್ ಇಂಜೆಕ್ಷನ್ ಬೆಲೆಯನ್ನು ಫಾರ್ಮಾ ಕಂಪೆನಿಗಳು ‌ಸ್ವಪ್ರೇರಣೆಯಿಂದ ಇಳಿಕೆ ಮಾಡಿವೆ. ಕೆಡಿಲಾ ಕಂಪನಿಯು ತನ್ನ ರೆಮ್ಡೆಕ್ ಬ್ರಾಂಡಿನ ರೆಮ್ಡೆಸಿವಿರ್ ಬೆಲೆಯನ್ನು 2800 ರೂ.ನಿಂದ 899 ರೂಪಾಯಿಗೆ...
- Advertisement -
error: Content is protected !!