ನವದೆಹಲಿ; ಜೆಎನ್ ಯು ಹಿಂಸಾಚಾರದ ಬೆನ್ನಲ್ಲೇ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ವಿವಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿದ್ದಾರೆ. ಸಂಜೆ 7.45ರ ಸುಮಾರಿಗೆ ವಿವಿಗೆ ಭೇಟಿ ನೀಡಿದ ದೀಪಿಕಾ 10 ನಿಮಿಷಗಳ ಕಾಲ ವಿದ್ಯಾರ್ಥಿಗಳೊಂದಿಗೆ ಕಾಲ ಕಳೆದು ಏನನ್ನೂ ಹೇಳದೆ ತೆರಳಿದರು.
ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ನಯಕ ತಜಿಂದರ್ ಪಾಲ್ ಸಿಂಗ್ ಬಗ್ಗ , ‘ಟುಕುಡೇ ಟುಕುಡೇ ತಂಡ ಮತ್ತು ಅಫ್ಜಲ್ ತಂಡಕ್ಕೆ ಬೆಂಬಲ ಸೂಚಿಸಿರುವ ದೀಪಿಕಾ ಅವರ ಚಿತ್ರವನ್ನು ನಿಷೇಧಿಸಿ’ ಎಂದು ಕರೆ ನೀಡಿದ್ದಾರೆ. ದೀಪಿಕಾ ನಟನೆಯ ‘ಛಪಕ್ ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.