Thursday, December 9, 2021

ಆತ್ಮಕ್ಕೆ ಲೆಕ್ಕ ಕೊಡುವುದು ಹೇಗೆ

Follow Us

* ನಂದಿನಿ ವಿಶ್ವನಾಥ ಹೆದ್ದುರ್ಗ
response@134.209.153.225
newsics.com@gmail.com

ಗೊತ್ತಿದೆ.
ಇದು ನಾನಲ್ಲ..
ನಾನಿರಬೇಕಿರುವುದು ಹೀಗಲ್ಲ.
ನಾ ಹೀಗಿದ್ದರೇ ಚಂದವೂ ಅಲ್ಲ.
ನಾ ಹೀಗಿರುವುದು ನನಗೂ ಖುಷಿಯಿಲ್ಲ.
ನಾ ಹೀಗಿರುವುದು ಅವನಿಗೂ ಸರಿಯೆನಿಸುವುದಿಲ್ಲ.

ಅವನು ಯಾರು..?
ಯಾವ ಹಸಿವಿನ ತೀವ್ರತೆಯ ಕಾಲದಲಿ
ಮೊದಲು ನೋಡಿದ್ದು ನಾ ಅವನನ್ನು.?
ಮೊದಲ ನೋಟದ್ದೇ ಇದು..?
ಹೌದೆಂದರೆ ಆತ್ಮಕ್ಕೆ ಸುಳ್ಳು ಲೆಕ್ಕ ಹೊಂದಿಸಬೇಕು.
ಮೂರುದಿನದ ನಂತರ ಮನಸೊಳಗೆ ಮತ್ತೆಮತ್ತೆ ಮಥಿಸಿ ಮೋಹ ಹುಟ್ಟಿಸಿದವ.
ಮೋಹ ಮುಗಿದು ಪ್ರೇಮ ಶುರುವಾದದ್ದು ಯಾವಾಗ.?
ಅವನೂ ಅನುಮಾನದಿಂದಲೇ ಹೇಳಿದ್ದ..
“ಲವ್ ಯೂ”
ಅಂತ ಹೇಳದೇ ಇರಲಾರೆ..
ಆದರೆ ಇದು ಅದಲ್ಲ…!!

ಹಾಗಾದರೆ
ಯಾವುದು ಯಾವುದಲ್ಲ..?
ಇದು ಯಾವುದು.?
ಇದು ಅದಲ್ಲ ಎನುವುದಾದರೆ ಅದು ಯಾವುದು.?
ಅದು ಹೇಗಿರುತ್ತದೆ ಎನುವುದು ತಿಳಿದಾಗಿತ್ತಲ್ಲವೇ ಇಬ್ಬರಿಗೂ.?
ಯಾವುದೋ ಅಮೃತ ಘಳಿಗೆಯಲ್ಲಿ ಮೊಹಬತ್ತಿನ ಗಾಳಿ ಸೋಕಿ ಹೋದದ್ದು ಸ್ಪಷ್ಟವಾಯಿತಲ್ಲವೇ.?

ನೀನು ಮತ್ತು ನಾನು…!
ಅಳಿಯುತ್ತಿದೆ ಈ ಭಾವ..
ತೇಲುತ್ತಿದೆ ನಾವೆಂಬ ಅನುಭಾವ.
ಗೊತ್ತುಗುರಿಯಿಲ್ಲದೆ ಹೊತ್ತೊಯ್ಯುತ್ತಿದೆ ನಾವೆ.
ಬಹುಶಃ ಜಗಕ್ಕೆ ಈ ಬಗೆಯ ಸೊಬಗಿರುವುದು ತಿಳಿಯುವುದು ಪ್ರೇಮಕ್ಕೆ ಇಳಿದಾಗ ಮಾತ್ರ.!

ಈ ಹಸಿವಿಗೆ ಆಜ್ಯ ಯಾವುದದು..?
ನೀ ಬಳಿಯಿದ್ದಷ್ಟೂ ಬೇಕು.!
ಹತ್ತಿರವಿದ್ದರೂ ಒತ್ತಿಕೊಳಬೇಕು.
ಇನ್ನಷ್ಟು, ಮತ್ತಷ್ಟು, ಮಗದಷ್ಟು..
ಇದು ಅದ್ವೈತ ಸ್ಥಿತಿ.
ನಿನ್ನಿಂದ ಅನುಭವಿಸಿದೆ ನಾನದನ್ನು.!

ಸೋನೆ ಮಾನ್ಸೂನಿಗೆ ತಿರುಗುವುದಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳಲೇ ಇಲ್ಲ ನೋಡು.
ಪೂರಕ ಹವಮಾನ..!

ನೀನು ಸುರಿದದ್ದು,ನಾನು ಸೋತದ್ದೂ ಎಲ್ಲವೂ.. ನನಗಿನ್ನೂ ಸಾಲದು..!
ಸಾಲದೆನ್ನುವಾಗಲೇ
ನಿನ್ನದು ಧ್ಯಾನ, ಮೌನ.
ಪ್ರೇಮ ಮತ್ತು ಸಾವು ತೀವ್ರ ಉನ್ಮಾದ ಕೊಡುವುದರ ಕುರಿತು ತಿಳಿದಿದ್ದೆ.
ಅರಿವಾಯಿತು ಈಗ.

ನೀ ಇದ್ದಿರಲಿಲ್ಲ ಈ ಮೊದಲು .
ಹಾಗಾಗಿ ನಿನ್ನ ಅನುಪ ಸಹಿಸುವುದಷ್ಟೇನೂ ಕಷ್ಟವಾಗದು ಎಂದನಿಸಿತ್ತು..
ಸಹಿಸುತ್ತಿದ್ದೇನೆ ಎನುವಾಗೆಲ್ಲ ನೀ ಪ್ರಾರ್ಥನೆ ಮಾಡುವ ದೃಶ್ಯ ಕಣ್ಣ ಮುಂದೆ.
ನಿನ್ನ ಹಿಂದಿನಿಂದ ಬಳಸುವ ಹುಚ್ಚು ಏರುತ್ತದೆ.ತಡೆಯುತ್ತೇನೆ.
ಏರುತ್ತದೆ..ತಡೆಯುತ್ತೇ..
ತಡೆದಷ್ಟೂ ಒಡೆಯುವುದೇ ಹುಚ್ಚು.!!

ನಿನ್ನ ಒಂದು, ಒಂದೇ ಒಂದು ಸಲ್ಲಾಪದ ಮಾತಿಗೆ ಕಾದವಳಿಗೆ
ಕಾದ ಕಬ್ಬಿಣದಂತೆ
ನೀ ನನ್ನ ಇನ್ನಾರಿಗೋ ಹೋಲಿಸಿ ಮಾತು.

ಗೊತ್ತಿದೆ.ಅವರು ಪ್ರಬುದ್ಧರು,
ಹೆಚ್ಚು ಓದಿರುವವರು,
ನಿನಗೆ ಆಪ್ತರು..

ಆದರೆ ಪ್ರೀತಿಯೊಡನೆ ಹೋಲಿಕೆ..!
ನೋವಾಯಿತು.
ನೀ ಮನಸಿಗಿಳಿದ ದಿನದಿಂದ ಉತ್ಸವದ ತೋರಣ ಕಟ್ಟಿದ ಎದೆಯೊಳಗೆ
ಶ್ರಾದ್ಧ ಲಕ್ಷಣ ಗೋಚರಿಸಿದ್ದು ನನ್ನದೇ ತಪ್ಪಿರಬಹುದಾ?
ಹೀಗೆ ಅದಮ್ಯವಾಗಿ ಆವಾಹಿಸಿಕೊಳಬಾರದಿತ್ತಾ.?

ಮತ್ತೂ ನಿನ್ನ ಸನಿಹದ ಆವಾಹನೆಯಾಗಿ ಬೆಚ್ಚಗಾಗುತ್ತೇನೆ.
‘ನಮ್ಮ’ ರಸ್ತೆಯ ಬಸವ ‌ಕಾಯಬೇಕಿದೆ
ಈ ಒಲವ.
ಉಳಿಸಿಕೊಳ್ಳಲೇ ಬೇಕಿದೆ
ನಾನು
ನೀನೆಂಬ‌ ಹದನೋವ.

ಉದಯದೂರಿಂದ ಬೊಗಸೆ ಬೆಳಕ ತಂದ ಬಾಗಿಲಲಿಟ್ಟವನು ನೀನು.
ನನ್ನ ಅನವರತದ ಪ್ರೇಮಿ ಸೂರ್ಯನನ್ನು ಮರೆಯಿಸಿದವ ನೀನು.

ಮುಂಗಾರು ಸುರಿಯಬೇಕಿದೆ…
ಹೊಳೆ,ಬಳ್ಳಿ,ಮರ,ತೊರೆ ಮೊರೆಯುತಿವೆ.
ಎಷ್ಟು ವಿಚಿತ್ರ ನೋಡು.
ಮಳೆ ಸುರಿದದ್ದು ಮಾತ್ರ ಕಾಣುತ್ತದೆ ಜಗಕ್ಕೆ.
ಇವಳು ಬಯಸಿ ಮೇಲೇರಿದ್ದು ..?

ಹೋಗಲಿ..
ಒಂದು‌ ಜಡಿ ಮಳೆಯ ಸದ್ದಿಗಾಗಿ ಕಾಯುತ್ತೇನೆ
ಈ ಇರುಳು.
ನಿದ್ದೆ ಸುಳಿಯದೆ ಸುಮ್ಮನಾದರೂ ನನ್ನ ‌ನೆನಪಲ್ಲಿ
ನೀನು ಮತ್ತೆಮತ್ತೆ ಹೊರಳು.

ಮತ್ತಷ್ಟು ಸುದ್ದಿಗಳು

Latest News

ಹೆಲಿಕಾಪ್ಟರ್ ಪತನದ ಹಿಂದೆ ಚೀನಾ ಕೈವಾಡ: ಸಂಸದ ಸುಬ್ರಮಣಿಯನ್ ಸ್ವಾಮಿ ಶಂಕೆ, ತನಿಖೆಗೆ ಆಗ್ರಹ

newsics.com ನವದೆಹಲಿ: ಸೇನಾ ಹೆಲಿಕಾಪ್ಟರ್ ಪತನದ ಹಿಂದೆ ಚೀನಾ ಕೈವಾಡವಿದೆಯಾ ಎಂಬ ಸಂಶಯವನ್ನು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ವ್ಯಕ್ತಪಡಿಸಿದ್ದಾರೆ. ಇದೊಂದು ಗಂಭೀರ ದುರಂತವಾಗಿದ್ದು, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ...

ಪ್ರಧಾನಮಂತ್ರಿ ಆವಾಜ್ ಯೋಜನೆ 3 ವರ್ಷ ವಿಸ್ತರಣೆ: ಕೇಂದ್ರ ನಿರ್ಧಾರ

newsics.com ನವದೆಹಲಿ: ಮೂರು ವರ್ಷ ಕಾಲ ಪ್ರಧಾನಮಂತ್ರಿ ಆವಾಜ್‌ ಯೋಜನೆ (ಗ್ರಾಮೀಣ) ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ದೇಶದ ಗ್ರಾಮೀಣ ಪ್ರದೇಶದಲ್ಲಿ ಅರ್ಹರಿಗೆ ವಸತಿ ಕಲ್ಪಿಸುವ ಈ ಯೋಜನೆಯನ್ನು ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ. ಪ್ರಧಾನಿ...

ದೆಹಲಿಯಲ್ಲಿ ಶುಕ್ರವಾರ ರಾವತ್ ದಂಪತಿ ಅಂತ್ಯಕ್ರಿಯೆ, ಉತ್ತರಾಖಂಡದಲ್ಲಿ 3 ದಿನ ಶೋಕಾಚರಣೆ

newsics.com ನವದೆಹಲಿ: ತಮಿಳುನಾಡಿನಲ್ಲಿ ನಡೆದಿರುವ ಸೇನಾ ಹೆಲಿಕಾಪ್ಟರ್ ಪತನದಲ್ಲಿ ನಿಧನರಾಗಿರುವ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ಅವರ ಅಂತ್ಯಕ್ರಿಯೆ ಶುಕ್ರವಾರ(ಡಿ.10) ನಡೆಯಲಿದೆ. ಹೆಲಿಕಾಪ್ಟರ್ ದುರಂತದಲ್ಲಿ ಸಾವಿಗೀಡಾಗಿರುವ ಮೂರು ಸೇನಾ ಪಡೆಗಳ...
- Advertisement -
error: Content is protected !!