Thursday, December 9, 2021

ಮನದೊಳಗೊಂದು ತೀರದ ಮೌನ

Follow Us

ಮಹಾಮಾರಿಯ ಭಯಕ್ಕೋ… ಜಗತ್ತಿನ ಎಲ್ಲಾ ಘಟಾನುಘಟಿ ಬುದ್ಧಿಜೀವಿ ಎಂದುಕೊಳ್ಳುತ್ತಿದ್ದ ಮಾನವನನ್ನು ಸೂಕ್ಷ್ಮಾಣುಜೀವಿ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿರುವುದಕ್ಕೋ… ಮನಸ್ಸಿಗೂ ಪ್ರತಿಬಂಧನವೇನೋ… ಒಂದು ಕವನವೂ ಹುಟ್ಟದಾಗಿದೆ. ಬರಿ ಎಂದರೂ ಬರೆಯಲಾಗುತ್ತಿಲ್ಲ….ಈ.. ವಿರಾಮವನ್ನು ಸಂಭ್ರಮಿಸಲಾಗುತ್ತಿಲ್ಲ.. ಅಗಾಧ ಅರ್ಥವಿರುವ ಈ ದಿವ್ಯಮೌನಕ್ಕೆ ಮುಕ್ತಿ ಬೇಕೆನಿಸುತ್ತಿದೆ. ಗಡಿಬಿಡಿಯ ಬದುಕಿಗೆ ಮತ್ತೆ ಹೊರಳುವ ಸಮಯಕ್ಕೆ ಕಾಯುತ್ತಿರುವೆ… ಈ ವಿರಾಮ ನನಗೆ ಆರಾಮ ಎನಿಸುತ್ತಿಲ್ಲ.

===

* ಕೃಪಾ ದೇವರಾಜ್
response@134.209.153.225
newsics.com@gmail.com

ಗಸದಲ್ಲಿ ತೆಳ್ಳನೇ ನಗುತ್ತಿರುವ ಬಿದಿಗೆ ಚಂದ್ರಮ… ಅವನಿಂದ ಅಷ್ಟು ದೂರದಲ್ಲಿ ಸ್ಥಿರವಾಗಿ ಹೊಳೆಯುವ ಬೆಳ್ಳಿ ಚುಕ್ಕಿ.. ಎರಡು ದಿನದಿಂದಲೂ ಅದೇ ನೋಟ! ಆದರೆ ಚಂದಿರನ ನಗು ಮಾತ್ರ ತುಸು ಹೆಚ್ಚಿದೆ…
ಎರಡು ದಿನದಿಂದ ಇದೇ ಹೊತ್ತಲ್ಲಿ ಇಳಿಸಂಜೆಯಲ್ಲಿ ಬಂದು ಆಗಸ ನೋಡುತ್ತಿದ್ದೇನೆ. ಪೂರ್ತಿ ದಿವಸ ಮನೆಯೊಳಗೆ ಇರುವ ನನಗೆ… ಹೊರಬಂದು ಆಗಸ ನೋಡುವ ಖಯಾಲಿ ಹತ್ತಿದೆ. ಎದುರಿನ ರಸ್ತೆ ನೀರವವಾಗಿ ಮಲಗಿ ರೋದಿಸುತ್ತಿದೆ ಏನೋ ಅನಿಸುತ್ತದೆ.. ಅಂಗೈಯಗಲದ ಅಂಗಳದಲ್ಲಿ ನಾ ನೆಟ್ಟ ಬೆರಳೆಣಿಕೆಯ ತುಳಸಿ, ನರ ವಿಷ, ಗಾಳಿ ಸೊಪ್ಪು, ಲೋಳೆಸರ ಬ್ರಹ್ಮಕಮಲ, ದೊಡ್ಡಪತ್ರೆ, ಸೀತೆ ಹೂವಿನ ಗಿಡಗಳು ನಸುನಗುತ್ತಾ ಆಹ್ವಾನಿಸುತ್ತವೆ… ಅಲ್ಲೇ ಬದಿಯಲ್ಲಿ ಚಾಪೆ ಹಾಸಿ ಕುಳಿತು ಬಿಡುತ್ತೇನೆ.. ಮತ್ತದೇ ಆಕಾಶ ದಿಟ್ಟಿಸುತ್ತಾ…
ಯಾಕೋ ಟಿವಿ ಬೇಡ, ಮೊಬೈಲ್ ಬ್ಯಾಡ, ಪುಸ್ತಕ ಬೇಡ… ಏನೋ ಭಿನ್ನ ಬಗೆಯ ವೈರಾಗ್ಯ… ಇಬ್ಬರಿಗೆ ಎಂಥ ಅಡುಗೆ ಮಾಡಿದರಾಯಿತು ಎಂಬ ಭಾವ.

ಬೆಳಗ್ಗೆ ಎದ್ದಲ್ಲಿಂದಲೂ ರಾತ್ರಿ ಮಲಗುವವರೆಗೂ ಬ್ಯುಸಿ ಬೀ ರೀತಿ ಇರುತ್ತಿದ್ದ ನನಗೆ… ಆಗ ಆರಾಮ ಬೇಕೆನಿಸುತ್ತಿತ್ತು…ಆ.. ಬ್ಯುಸಿಯಲ್ಲೂ… ಮನೆ -ಮಕ್ಕಳು, ಅಡುಗೆ, ಆಫೀಸು, ನನ್ನ ವ್ಯಾಯಾಮ,ಕಥೆ -ಕವನ ಎಲ್ಲವೂ ವಿರಾಮ ರಹಿತವಾಗಿ ನಡೆಯುತ್ತಿತ್ತು….. ಯಾವುದು ಬೊರ್ ಎನಿಸುತ್ತಿರಲಿಲ್ಲ.

ಆದರೆ ಈಗ ಇಷ್ಟು ವಿರಾಮವಿದ್ದರೂ ಮನದೊಳಗೆಯೇ ತೀರದ ಮೌನ! ಅಜ್ಜಿ ಮನೆಗೆ ಹೋದ ಮಕ್ಕಳು… ಈಗ ಇಲ್ಲಿ ಮನೆಯಲ್ಲಿ ಮಕ್ಕಳ ಗಲಗಲವಿಲ್ಲ. ಜಿಲ್ಲಾಧಿಕಾರಿಯ ಕೆಳಗೆ ಕೆಲಸ ಮಾಡುವ ಪತಿಗೆ…. ಕೆಲಸ ಮಾಡುವ ಅನಿವಾರ್ಯತೆ… ಅವರಿಗೆ ಮನೆಯೊಳಗೆ ಇರುವಂತಿಲ್ಲ! ಸಂಜೆ ಬರುವುದು ತಡವಾದರೆ ಲೇಟ್ ಆಗುತ್ತಾ ಎಂದು ಫೋನಾಯಿಸುತ್ತೇನೆ.. ಮತ್ತೆ ಸುಮ್ಮನೆ ಹೋಗಿ ಕುಳಿತು ಬಿಡುವೆ ಗಿಡಗಳ ಬಳಿ… ಕಣ್ಮುಚ್ಚಿ ಒಂದಿಷ್ಟು ಪ್ರಾಣಯಮ ಮಾಡುತ್ತೇನೆ.. ಮತ್ತೆ ಗಿಡಗಳೆಡೆಗೆ ದೃಷ್ಟಿ… ಆನಂತರ ಪುನಹ ಆಕಾಶದತ್ತ ನೋಟ!!

ಆಗ ಚಂದಿರನ ನಸುನಗು ತುಸು ಹೆಚ್ಚಿದಂತೆ ಅನಿಸುತ್ತದೆ. ನನ್ನೊಳಗಿನ ನೀರವ ಮೌನದಲ್ಲಿ ಬೇಸರವಿಲ್ಲ, ಖಿನ್ನತೆ ಇಲ್ಲ…ದಿವ್ಯ ಮೌನವಿದೆ! ಒಮ್ಮೆಗೆ ಭೋರ್ಗರೆಯುತ್ತಾ ಹರಿಯುವ ನದಿ ಸ್ತಬ್ಧವಾದಾಗ ಆಗುವ ಗಲಿಬಿಲಿ. ಚಲನಾ ರಹಿತವಾಗಿ ನಿಂತಾಗ ತನ್ನನ್ನೇ ತಾನು ಅವಲೋಕಿಸುವ ಪರಿ. ಹೀಗೆ ಕುಳಿತರೆ ಜಡ ಹಿಡಿದು ಬಿಡುವೆ ಎಂದು… ಇಂದಿನಿಂದ ಬೆಳಗ್ಗೆ -ಸಂಜೆ ಸೂರ್ಯ ನಮಸ್ಕಾರ ಮಾಡುತ್ತಾ.. ಮನಕ್ಕೆ ಯೋಚನೆ ಬಂದ ಆಸನ ಗಳನ್ನೆಲ್ಲಾ ಮಾಡುತ್ತಿರುವೆ… ಮಕ್ಕಳ ಕರೆಗೆ… ರೇಗದೆ ಅಕ್ಕರೆಯಿಂದ ಉತ್ತರಿಸುವೆ. ಅಮ್ಮ ಮಕ್ಕಳ ಬಗ್ಗೆ ಹೇಳುವಷ್ಟು ಮಾತನ್ನು ಖುಷಿಯಿಂದ ಆಲಿಸುತ್ತಾ… ಮಾತಾಡುತ್ತೇನೆ… ನಾನೀಗ ಬ್ಯುಸಿ ಮತ್ತೆ ಮಾಡುತ್ತೇನೆ ಎಂದು ಹೇಳಿ ಫೋನ್ ಕಟ್ ಮಾಡುತ್ತಿದ್ದದ್ದು ನೆನಪಿಗೆ ಬಂದು ಖೇದವೆನಿಸುತ್ತದೆ.

ಮನೆಗೆ ಸಂಜೆ ಮರಳುವ ಪತಿಯನ್ನು…ಕೂಡಲೇ ಬಚ್ಚಲು ಮನೆಗೆ ಓಡಿಸುತ್ತೇನೆ… ಕಾಲಿಂಗ್ ಬೆಲ್ಲಿಗೆ… ಅವರ ವಾಚ್ ಮೊಬೈಲ್ಗೆ ಸ್ಪಿರಿಟ್ ಸ್ಪ್ರೇ ಮಾಡುತ್ತೇನೆ.. ಅಡುಗೆ ಊಟ… ಅಲ್ಲೇ…ಅಂಗಳದಲ್ಲಿ ಲಘು ನಡಿಗೆ.,.. ಗಡಿಬಿಡಿಯ ಬದುಕಿನಲ್ಲಿ ಒಂದಿಷ್ಟು ದೀರ್ಘ ವಿರಾಮ….. ದಿನವಿಡೀ ಮೌನಗೌರಿ ತರ ಇದ್ದ ನನಗೆ… ಅವರ ಬಳಿ ತೀರದ ಮಾತು… ಅವರಿಗೂ ಅದನ್ನು ಅಷ್ಟೇ ತಾಳ್ಮೆಯಿಂದ ಕೇಳುವ ಸಮಯಾವಕಾಶ… ಮಾತಿಗೆ ನಗುವಿಗೆ ಸಮಯ ಸಿಕ್ಕಿದೆ. ಗಡಿಬಿಡಿಯ ಧಾವಂತದಲ್ಲಿ ಗಳಿಗೆಗೊಮ್ಮೆ ಬರುತ್ತಿದ್ದ ಮೂಗಿನ ತುದಿಯಲ್ಲಿನ ಕೋಪ ಮಾಯವಾಗಿದೆ.ಸುಮ್ಮನೆ ತಣ್ಣನೆ ನೋಟ ಬೀರುತ್ತೇನೆ.

ಮಹಾಮಾರಿಯ ಭಯಕ್ಕೋ… ಜಗತ್ತಿನ ಎಲ್ಲಾ ಘಟಾನುಘಟಿ ಬುದ್ಧಿಜೀವಿ ಎಂದುಕೊಳ್ಳುತ್ತಿದ್ದ ಮಾನವನನ್ನು ಸೂಕ್ಷ್ಮಾಣುಜೀವಿ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿರುವುದಕ್ಕೋ… ಮನಸ್ಸಿಗೂ ಪ್ರತಿಬಂಧನವೇನೋ… ಒಂದು ಕವನವೂ ಹುಟ್ಟದಾಗಿದೆ. ಬರಿ ಎಂದರೂ ಬರೆಯಲಾಗುತ್ತಿಲ್ಲ….ಈ.. ವಿರಾಮವನ್ನು ಸಂಭ್ರಮಿಸಲಾಗುತ್ತಿಲ್ಲ.. ಅಗಾಧ ಅರ್ಥವಿರುವ ಈ ದಿವ್ಯಮೌನಕ್ಕೆ ಮುಕ್ತಿ ಬೇಕೆನಿಸುತ್ತಿದೆ. ಗಡಿಬಿಡಿಯ ಬದುಕಿಗೆ ಮತ್ತೆ ಹೊರಳುವ ಸಮಯಕ್ಕೆ ಕಾಯುತ್ತಿರುವೆ… ಈ ವಿರಾಮ ನನಗೆ ಆರಾಮ ಎನಿಸುತ್ತಿಲ್ಲ.

ಮತ್ತಷ್ಟು ಸುದ್ದಿಗಳು

Latest News

ಹೆಲಿಕಾಪ್ಟರ್ ಪತನದ ಹಿಂದೆ ಚೀನಾ ಕೈವಾಡ: ಸಂಸದ ಸುಬ್ರಮಣಿಯನ್ ಸ್ವಾಮಿ ಶಂಕೆ, ತನಿಖೆಗೆ ಆಗ್ರಹ

newsics.com ನವದೆಹಲಿ: ಸೇನಾ ಹೆಲಿಕಾಪ್ಟರ್ ಪತನದ ಹಿಂದೆ ಚೀನಾ ಕೈವಾಡವಿದೆಯಾ ಎಂಬ ಸಂಶಯವನ್ನು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ವ್ಯಕ್ತಪಡಿಸಿದ್ದಾರೆ. ಇದೊಂದು ಗಂಭೀರ ದುರಂತವಾಗಿದ್ದು, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ...

ಪ್ರಧಾನಮಂತ್ರಿ ಆವಾಜ್ ಯೋಜನೆ 3 ವರ್ಷ ವಿಸ್ತರಣೆ: ಕೇಂದ್ರ ನಿರ್ಧಾರ

newsics.com ನವದೆಹಲಿ: ಮೂರು ವರ್ಷ ಕಾಲ ಪ್ರಧಾನಮಂತ್ರಿ ಆವಾಜ್‌ ಯೋಜನೆ (ಗ್ರಾಮೀಣ) ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ದೇಶದ ಗ್ರಾಮೀಣ ಪ್ರದೇಶದಲ್ಲಿ ಅರ್ಹರಿಗೆ ವಸತಿ ಕಲ್ಪಿಸುವ ಈ ಯೋಜನೆಯನ್ನು ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ. ಪ್ರಧಾನಿ...

ದೆಹಲಿಯಲ್ಲಿ ಶುಕ್ರವಾರ ರಾವತ್ ದಂಪತಿ ಅಂತ್ಯಕ್ರಿಯೆ, ಉತ್ತರಾಖಂಡದಲ್ಲಿ 3 ದಿನ ಶೋಕಾಚರಣೆ

newsics.com ನವದೆಹಲಿ: ತಮಿಳುನಾಡಿನಲ್ಲಿ ನಡೆದಿರುವ ಸೇನಾ ಹೆಲಿಕಾಪ್ಟರ್ ಪತನದಲ್ಲಿ ನಿಧನರಾಗಿರುವ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ಅವರ ಅಂತ್ಯಕ್ರಿಯೆ ಶುಕ್ರವಾರ(ಡಿ.10) ನಡೆಯಲಿದೆ. ಹೆಲಿಕಾಪ್ಟರ್ ದುರಂತದಲ್ಲಿ ಸಾವಿಗೀಡಾಗಿರುವ ಮೂರು ಸೇನಾ ಪಡೆಗಳ...
- Advertisement -
error: Content is protected !!