* ಗೀತಾ ಮೋಂಟಡ್ಕ ಮೈಸೂರು
response@134.209.153.225
20 ವರ್ಷಗಳ ಹಿಂದಿನ ನೆನಪು. ಮೈಸೂರಿನ ರಂಗಾಯಣಕ್ಕೆ ದೇಶದ ಎಲ್ಲಾ ಕಡೆಯಿಂದ ತರಬೇತಿಗಾಗಿ ವಿಶೇಷ ತಜ್ಞರನ್ನು ಕರೆಸಿಕೊಂಡದ್ದಾಗಿತ್ತು. ಹಲವಾರು ಪ್ರಸಿದ್ಧ ನಿರ್ದೇಶಕರ ನಾಟಕಗಳೂ ನಡೆದವು. ಹೊರದೇಶದಿಂದ ಬಂದು ನಾಟಕವಾಡಿಸಿದರೆ ಅದಕ್ಕೆ ಹೆಚ್ಚು ಥಿಯೆಟಿ ್ರಕಲ್ ಅರ್ಥ ಬರುತ್ತೆ ಎನ್ನುವ ಯೋಚನೆಯೊಂದಿಗೆ ಮೇಷ್ಟ್ರು (ಬಿ.ವಿ.ಕಾರಂತರು) ಗ್ರೀಕ್ ದೇಶದ ವಶೀಲಿ ಎಂಬುವರನ್ನು ಹಿಪ್ಪೋಲಿಟಸ್ ನಾಟಕದ ನಿರ್ದೇಶನಕ್ಕಾಗಿ ಆಹ್ವಾನಿಸಿ, ನಂತರ ಅದು ಮೈಸೂರಲ್ಲಿ ಯಶಸ್ವಿ ಪ್ರದರ್ಶನ ಕಂಡು ಅಮೆರಿಕದಲ್ಲೂ ಪ್ರದಶರ್Àನಗೊಳ್ಳುವ ಸಲುವಾಗಿ ವಿಮಾನವನ್ನೇರಲು ತಯಾರಿ ನಡೆಸಿತ್ತು. ವಿಮಾನದ ಬಗ್ಗೆ ಬಾಲ್ಯದಲ್ಲಿ ಕೇಳಿಸಿಕೊಂಡ ಮಾತು, ಅಂದು ಅದು ಅ¥ರೂಪವಾಗಿ ಆಕಾಶದಲ್ಲಿ ಹಾರಾಡುವ ಸದ್ದು ಕೇಳಿಸಿದಾಗ, ಕೋಣೆಯಿಂದ ಹೊಸಿಲ ಹಾರಿ ಓಡಿ ಬಂದು, ಅದು ಸದ್ದು ಮಾಡುತ್ತಾ, ಹಕ್ಕಿ ಹಾಗೆ ಹಾರುತ್ತಾ, ಮಿಣ ಮಿಣ ಹೊಳೆಯುತ್ತ, ಹೊಗೆ ಉಗುಳಿ ಹೋಗುತ್ತಿದ್ದುದನ್ನು ಎವೆಯಿಕ್ಕÀ್ಕದೆ ಮರೆಯಾಗುವವರೆಗೂ ಕೌತುಕದಿಂದ ನೋಡಿದ್ದಷ್ಟೇ ನೆನಪು! ಆದರೆ ಆ ಲೋಹದ ಹಕ್ಕಿಯ ಒಳಗೆ ಕೂತು ನಾನೂ ಹಾರಾಡುತ್ತೇನೆಂದಾಗ ಆದದ್ದು ಪುಳಕÀ… ರೋಮಾಂಚನ! ಆ ದಿನ ಬಂದೇಬಿಟ್ಟಿತ್ತು. -50 ಡಿಗ್ರಿ ಸೆಲ್ಸಿಯಸ್ ಚÀಳಿಯನ್ನು ಎದುರಿಸಲು ಬೇಕಾದಂತಹ ಬೆಚ್ಚನೆಯ ಬಾಡಿಗೆಯ ಉಡುಪುಗಳು, ಬಾಡಿಗೆಯ ಸೂಟ್‍ಕೇಸ್ ಹೊತ್ತು ಬೆಂಗಳೂರು ಏರ್‍ಪೋರ್ಟಿಗೆ ಕಾಲಿಟ್ಟಾಗÀ ಮೊದಲ ಬಾರಿಗೆ ವಿಮಾನವೇರುವ ಎಲ್ಲರ ಕಣ್ಣಲ್ಲೂ ಕೌತುಕ, ಆಶ್ಚರ್ಯ! ಅದಾಗಿ ತೆರೆಯುವ, ಮುಚ್ಚುವ ಬಾಗಿಲನ್ನು ಎಂದೂ ನೋಡಿರದ, ನಮ್ಮನ್ನು ಮೇಲಿಂದ ಕೆಳಗೆ ಮಾಡಿದ ಚೆಕ್ಕಿಂಗ್, ನಾವು ತಂದ ಸೂಟ್‍ಕೇಸ್ ಸ್ಕ್ಯಾನಿಂಗ್, ನಮ್ಮ ಕೈಲಿದ್ದ ವೀಸಾ, ಪಾಸ್‍ಪೋರ್ಟ್‍ನ ಸತತ ಚೆಕ್ಕಿಂಗ್‍ನ್ನು ಕಣ್ಣುಗಳು ಎವೆಯಿಕ್ಕದೆ ನೋಡಿದವು. ಇನ್ನೇನು ಒಳಗೆ ಹೋಗಬೇಕು ಅನ್ನುವಷ್ಟರಲ್ಲಿ ಬಾಗಿಲಲ್ಲಿ ಗಗನಸಖಿಯರ ಸುಂದರ ಮೊಗದ ಕೃತಕ ನಗೆ ನಮ್ಮನ್ನು ಆಹ್ವಾನಿಸಿದಾಗ ಒಳಗೊಳಗೆ ಮುಸಿಮುಸಿ ನಕ್ಕಿದ್ದಾಯಿತು. ನನಗಾಗಿ ನಿಶ್ಚಿತವಾದ ಮಧ್ಯದ ಸಾಲಿನಲ್ಲಿ ವಿದೇಶಿ ದಂಪತಿಗಳಿಬ್ಬರ ಜತೆ ಸೀಟು ಹಂಚಿಕೊಂಡಿದ್ದೆ. ಗೊತ್ತಾಗದ ಅವರ ಭಾಷೆಗಿಂತಲೂ ಅವರ ಅಟಾಟೋಪ ಮುಜುಗರ ತರಿಸಿತ್ತು. ವಿಮಾನ ಇನ್ನೇನು ಮೇಲೆ ಏರಲಿದೆ ಎಂಬ ಉದ್ಘೋಷಕ್ಕೆ ಸೀಟಿನ ಬೆಲ್ಟನ್ನು ಕಟ್ಟಿಕೊಂಡಾಗ, ಬಾಲ್ಯದಲ್ಲಿ ಜಾತ್ರೆಯ ತೊಟ್ಟಿಲ ಜೀಕಾಟದಲ್ಲಿ ಕುಳಿತು ಅಭ್ಯಾಸ ಇದ್ದುದರಿಂದ ಬೇರೆಯವರಿಗಿದ್ದಂತಹ ದುಗುಡ, ದುಮ್ಮಾನ, ಭಯ, ನನಗಾಗಲಿಲ್ಲ. ಆದರೆ ನಮ್ಮ ಜತೆಗಿದ್ದ ಕೆಲವರು ಭಯದಿಂದ ಬೆವರ ಹನಿ ಒರೆಸಿಕೊಂಡಿದ್ದನ್ನು ನೋಡಿ ಮನದೊಳಗೆ ನಕ್ಕಿದ್ದೇ ನಕ್ಕಿದ್ದು. ವಿಮಾನದ ತುಂಬಾ ಚಿತ್ರ ವಿಚಿತ್ರ ದಿರಿಸಿನ ವಿವಿಧ ದೇಶ ಭಾಷೆಯ ಬೇರೆ ಬೇರೆ ಜನರು! ಯಾವುದನ್ನೂ ನೋಡದ ಕಾಣದ ನನಗೆ ಈ ವಿಮಾನ ಯಾನ ಒಂದು ಮಿನಿ ಪ್ರಪಂಚದ ಹಾಗೆ ಕಂಡಿತು. ಎಲ್ಲವೂ ಐಷಾರಾಮಿ. ಬೆಂಗಳೂರಿನಿಂದ ಅಮೆರಿಕಕ್ಕೆ 18 ಗಂಟೆಯ ಸುದೀರ್ಘ ಪಯಣ. ಕುಳಿತಿದ್ದ ಸೀಟಿಗೆ ಊಟ, ಕಾಫಿ ತಿಂಡಿ, ತೀರ್ಥ, ಜ್ಯೂಸ್, ಚಾಕಲೇಟುಗಳು ಬಂದಾಗ ಮುಜುಗರದಿಂದ ಅದನ್ನು ಸ್ವೀಕರಿಸುವಂತಾಗಿತ್ತು, ಮೊದಲ ಬಾರಿಯ ರಾಜಾತಿಥ್ಯದಿಂದ! ಕೂತ ಸೀಟಿನಲ್ಲೆ ಹಾಡು ಕೇಳಲು ಇದ್ದ ಸ್ವಿಚ್, ಬೇಕಾದ ಲೈಟ್, ಕರೆಗಂಟೆ ಇವುಗಳಿಗೆಲ್ಲ ಯಾವ್ಯಾವುದೋ ಸ್ವಿಚ್ ಒತ್ತಿ, ಗೊತ್ತಾಗದೆ ಪೆಚ್ಚು ಮುಖದಲ್ಲಿ ಕೂತದ್ದು, ಊಟವೆಂದು ಕವರ್ ಮಾಡಿದ ತಟ್ಟೆಯೊಳಗೆ ಸೊಪ್ಪು ಸದೆ ಕಂಡಂತಾಗಿ ಹೌಹಾರಿ ಅದನ್ನೇ ನೋಡುತ್ತ ಕೂತಿದ್ದುದು, ಕೈ ತೊಳೆಯಲು, ವಾಷ್ ರೂಮಿನಲ್ಲೂ ಟಿಶ್ಯೂ ಪೇಪರ್ ನೋಡಿ ಬೆಚ್ಚಿ ಬಿದ್ದು ನೀರಿಗಾಗಿ ಕಾತರಿಸಿದ್ದು, ಕಿಟಕಿ ಬದಿಯ ಸೀಟು ಎಲ್ಲರಿಗೂ ಸಿಗದಿದ್ದಾಗ ಸರದಿ ಸಾಲಿನಲ್ಲಿ ಬಂದು ಆ ಪುಟ್ಟ ಕಿಟಿಕಿಯ ಸಣ ್ಣ ಕಿಂಡಿಗಳ ಮೂಲಕ ಬೆಳಕು ಹಾಗೂ ಚಿತ್ರ ವಿಚಿತ್ರ ಮೋಡಗಳ ರಾಶಿಯ ಸಮೂಹ ನೋಡಿದ್ದು, ವಿಮಾನ ಸಾಗುತ್ತ, ಆಕಾಶ, ಭೂಮಿ, ಸಮುದ್ರ, ಬೆಟ್ಟ ಇವೆಲ್ಲವನ್ನೂ ನೋಡಿ ಸಂಭ್ರಮಿಸಿದ್ದು, ಮೋಡಗಳ ಮರೆಯಲ್ಲಿ ವಿಮಾನ ನಿಂತ ಹಾಗೆ ಭಾಸವಾಗಿ ಸ್ವರ್ಗದಲ್ಲಿ ಇಂದ್ರನ ದರ್ಬಾರನ್ನು ಸಿನಿಮಾದಲ್ಲಿ ನೋಡಿರುವ ನಾನು ಅಲ್ಲೇ ಇದ್ದೀನಿ ಎಂದು ಮೈಮರೆತು ಸಂಭ್ರಮಿಸಿದ ಆ ದಿನ… ಓಹ್.