Saturday, November 27, 2021

ತಾಯ್ತನ ಎನ್ನುವುದು ಹೆತ್ತವಳ ಸೊತ್ತೆ?

Follow Us

* ಕೃಪಾ ದೇವರಾಜ್ ಮಡಿಕೇರಿ
response@134.209.153.225
newsics.com@gmail.com

2 ವರ್ಷದ ಮಗುವಿನಲ್ಲಿ ಕೂಡ ತಾಯ್ತನ ಎನ್ನುವುದು ಜಾಗೃತವಾಗಿರುತ್ತದೆ. ಆ ಮಗು ತನ್ನ ಅಮ್ಮ ತನಗೆ ಏನೆಲ್ಲಾ ಮಾಡುತ್ತಾಳೋ, ಅದನ್ನೆಲ್ಲ ಅಂದರೆ ಸ್ನಾನ ಮಾಡಿಸುವುದು, ಬಟ್ಟೆಹಾಕಿ ಅಲಂಕಾರ ಮಾಡುವುದು, ಊಟ ಮಾಡಿಸುವುದು, ನಿದ್ದೆ ಮಾಡಿಸುವುದು.. ಎಲ್ಲವನ್ನು ನನ್ನ ಗೊಂಬೆಗೆ… ತನ್ನ ಮಗು ಎಂದುಕೊಂಡು ಮಾಡುತ್ತದೆ. ಇದರಿಂದ ಹೆಣ್ಣಿಗೆ ತಾಯ್ತನ ಎನ್ನುವುದು ಹುಟ್ಟಿನಿಂದಲೇ ಬಂದಿದೆ ಎಂದಾಗುವುದು.

ಮಗುವನ್ನು ಹೆತ್ತ ಮಾತ್ರಕ್ಕೆ ಆಕೆಯನ್ನು ಪರಿಪೂರ್ಣಳು ಎನ್ನಲಾಗುವುದಿಲ್ಲ. ಯಾವ ಹೆಣ್ಣಿನಲ್ಲಿ ತಾಯ್ತನವು ಪುಟಿದೇಳುತ್ತದೆಯೋ.. ಯಾರನ್ನೇ… ಯಾವುದೇ.. ಮಕ್ಕಳನ್ನಾದರೂ ಸಹ ತನ್ನ ಮಕ್ಕಳನ್ನಾಗಿ ಕಾಣುವಳೋ.. ತಾಯಿಗೆ ಇರಬೇಕಾದ ಪ್ರೀತಿ-ವಾತ್ಸಲ್ಯ ಮಮತೆ ಸಹನೆ ಮುಂತಾದ ತಾಯಿತನದ ಮಾನವೀಯ ಮೌಲ್ಯಗಳನ್ನು ಯಾವ ಹೆಣ್ಣು ಹೊಂದಿರುತ್ತಾಳೋ… ಅವಳನ್ನು ಪರಿಪೂರ್ಣರಳು ಎನ್ನಬಹುದು.

ತಾಯ್ತನ ಎನ್ನುವುದು ಕೇವಲ ಹೆಣ್ಣಿಗೆ ಸೀಮಿತವಲ್ಲ…ಮಗುವಿನ ಅಪ್ಪ… ತನ್ನ ಮಗುವಿಗೆ ಮಮತಾಮಯಿ ಆಗಿ ತಾಯಿತನ ಧಾರೆಯೆರಬಲ್ಲ….ಈಗಿನ ಮಕ್ಕಳು…. ಅಮ್ಮನಿಗಿಂತ….ಹೆಚ್ಚಾಗಿ…ಅಪ್ಪನಿಗೇ ಅಂಟಿಕೊಳ್ಳುತ್ತಾರೆ.ಒಬ್ಬ ತಾಯಿ.. ಅಥವಾ ಆ ಸ್ಥಾನದಲ್ಲಿ ನಿಂತವರು.. ಯಾವ ರೀತಿಯಲ್ಲಿ ಮಗುವನ್ನು ಸಾಕಿ ಸಲಹುತ್ತಾಳೋ.. ಅದರ ಮೇಲೆ ಅವಲಂಬಿತವಾಗಿರುತ್ತದೆ. ನನ್ನ ಮಗುವನ್ನು ಒಬ್ಬ ಉತ್ತಮ ಪ್ರಜೆಯನ್ನಾಗಿ ಸದ್ಗುಣಗಳ ಸಾಕಾರ ಮೂರ್ತಿಯಾಗಿ ನಿಲ್ಲಿಸಿದಾಗ ಆಕೆ ಪರಿಪೂರ್ಣ ಆಗಬಹುದೇನೋ…

ದೇವಕಿ ಕೃಷ್ಣನನ್ನು ಹೆತ್ತರೂ.. ತಾಯ್ತನದ ಪರಿಪೂರ್ಣತೆ ದೊರೆತದ್ದು ಯಶೋದೆಗೆ ಮಾತ್ರ. ಮಕ್ಕಳಿಲ್ಲದ ರಾಧೆಗೆ ಕರ್ಣ ಮಗುವಾಗಿ ಬಂದು ತಾಯಿತನದ ಸವಿಯನ್ನುಣಿಸಿದ.. ಕರ್ಣ ರಾಧೆಯನಾದನೇ ವಿನಹ.. ಕುಂತೇಯನಾಗಲೀಲ್ಲ. ಒಬ್ಬ ಮಹಿಳೆ ಮಕ್ಕಳನ್ನು ಹೆತ್ತರೆ ಮಾತ್ರ ಪರಿಪೂರ್ಣಳಲ್ಲ. 20 ವರ್ಷದ ಅವಿವಾಹಿತ ಹುಡುಗಿ ಕೂಡ.. ಅರವತ್ತು ವರ್ಷದ ವೃದ್ಧನಿಗೆ ತಾಯಿಯಾಗಬಲ್ಲಳು. ಮದರ್ ತೆರೆಸಾ ರವರ ತಾಯ್ತನಕ್ಕೆ ಸರಿಸಾಟಿಯಾರು?

ಇನ್ನು ಹೆಣ್ಣಿನ ಸಾಮಾಜಿಕ ಚಟುವಟಿಕೆಗಳಿಗೆ ತಾಯ್ತನವು ನಿರ್ಬಂಧದಲ್ಲಿ ಆಗುತ್ತದೆ ಎನ್ನುವುದು ಒಪ್ಪುವಂತಹ ಮಾತಲ್ಲ. ಎಷ್ಟು ಜನ ಮಹಿಳೆಯರು ತಮ್ಮ ಮಕ್ಕಳು, ಸಂಸಾರದ ಜವಾಬ್ದಾರಿಯನ್ನು.. ತಮ್ಮ ಹೊರಗಿನ ಜವಾಬ್ದಾರಿಯನ್ನು.. ಸಮರ್ಥವಾಗಿ ನಿರ್ವಹಿಸಿಕೊಂಡು ಹೋಗುತ್ತಿಲ್ಲ..?

ಸ್ವೇಚ್ಛಾಚಾರಿಯಾಗಿ ಯಾವುದೇ ಬಂಧನವಿಲ್ಲದೆ ನಿರ್ಭಿಡೆಯಿಂದ ಬದುಕುತ್ತಿರುವ ಕೆಲವೊಂದು ಆಧುನಿಕ ಮಹಿಳಾಮಣಿಗಳಿಗೆ ತಮ್ಮ ಸಾಮಾಜಿಕ ಚಟುವಟಿಕೆಗಳಿಗೆ ಕಾಲ್ತೊಡಕು ಆಗಬಹುದೇನೋ…..

ಎಳೆ ಮಗುವನ್ನು ಅದಕ್ಕೆ ಸಹಜವಾಗಿ ದೊರೆಯಬೇಕಾದ ಮಮತೆ ವಾತ್ಸಲ್ಯಗಳಿಂದ ವಂಚಿಸಿ ನಾವು ಸಮಾಜೋದ್ಧಾರ ಮಾಡುತ್ತೇವೆಂದು ಸದಾ ಹೊರಗಿದ್ದರೆ… ನಾವು ಮಾಡುವ ಕಾರ್ಯದಲ್ಲಿ ಸಾರ್ಥಕತೆ ಇರುತ್ತದೆಯೇ…. ಹೇಳಿ ಆತ್ಮತೃಪ್ತಿ ನಮಗಿರುತ್ತದೆ ಯೇ..!?!?

ಒಂದು ಮಗುವನ್ನು ಸರಿಯಾಗಿ ಸಾಕಲು ಅಸಮರ್ಥರಾದ ನಾವು… ಸಮಾಜದ ಏಳು ಬೀಳನ್ನೂ ಏನು ತಾನೇ ಸರಿ ಮಾಡಬಲ್ಲೆವು? ಆ ನೈತಿಕ ಹಕ್ಕು… ನಮಗಿರುತ್ತದೆಯೇ…? ಮಕ್ಕಳು ಸಂಸಾರ ಸಾಮಾಜಿಕ ಚಟುವಟಿಕೆಗಳನ್ನು ಸಮರ್ಥವಾಗಿ ಸರಿದೂಗಿಸಿಕೊಂಡು ಹೋಗುವ ಹೆಣ್ಣಿಗೆ ತಾಯ್ತನ ಖಂಡಿತವಾಗಿಯೂ ನಿರ್ಬಂಧದ ಬೇಲಿಯಾಗುವುದಿಲ್ಲ…ಈ ಸಮರ್ಥತೆ ಪ್ರತೀಯೊಬ್ಬ ಹೆಣ್ಣು ಮಕ್ಕಳಲ್ಲೂ ಇದೆ…ಮಾತ್ರವಲ್ಲ ಒಬ್ಬ ಪುರುಷ ಕೂಡ ಒಬ್ಬ ಪರಿಪೂರ್ಣ ತಾಯಿಯಾಗಬಲ್ಲ.

ಮತ್ತಷ್ಟು ಸುದ್ದಿಗಳು

Latest News

ದಕ್ಷಿಣ ಆಫ್ರಿಕಾ ಕೊರೋನಾ ರೂಪಾಂತರಿಗೆ ಒಮಿಕ್ರೋನ್ ಎಂದು ನಾಮಕರಣ

newsics.com ವಾಷಿಂಗ್ಟನ್: ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೊರೋನಾ ರೂಪಾಂತರಿ ವಿಶ್ವದೆಲ್ಲೆಡೆ ಆತಂಕ ಸೃಷ್ಟಿಸಿದೆ. ಅತ್ಯಂತ ಪ್ರಬಲ ರೂಪಾಂತರಿಯಾಗಿರುವ ಕಾರಣ ಇದು ವೇಗವಾಗಿ ಹರಡುತ್ತಿದೆ ಎಂಬ ಭೀತಿ ಮನೆ...

ವಿವಾಹಿತೆಯ ಜತೆ ಅಕ್ರಮ ಸಂಬಂಧ ಹೊಂದಿದ್ದ ಪೊಲೀಸ್ ಎಸ್ಐ ಅಮಾನತು

newsics.com ವಾರಂಗಲ್(ಆಂಧ್ರಪ್ರದೇಶ): ವಿವಾಹಿತೆಯ ಜತೆ ಅಕ್ರಮ ಸಂಬಂಧ ಹೊಂದಿರುವ ಆರೋಪದ ಮೇಲೆ ಪೊಲೀಸ್ ಎಸ್ಐ ಒಬ್ಬರನ್ನು ಅಮಾನತುಗೊಳಿಸಲಾಗಿದೆ. ವಾರಂಗಲ್‌ನ ‍ವನಪರ್ತಿ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಶೇಕ್ ಶಾಪಿ ಅಮಾನತುಗೊಂಡಿರುವ ಪೊಲೀಸ್ ಅಧಿಕಟರಿ. ನವೆಂಬರ್ 18ರಂದು ವಿವಾಹಿತೆಯ...

ಗುದದ್ವಾರಕ್ಕೆ ಏರ್ ಪಂಪ್: ಸ್ನೇಹಿತ ಸಾವು

newsics.com ಬೆಂಗಳೂರು: ತಮಾಷೆಗೆ ಸ್ನೇಹಿತನ ಗುದದ್ವಾರಕ್ಕೆ ಏರ್ ಪಂಪ್ ಮಾಡಿದ್ದು, ಆತ ಮೃತಪಟ್ಟ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದ ರೆಹಮತ್ ಅಲಿ ಮೃತಪಟ್ಟ ವ್ಯಕ್ತಿ. ನವೆಂಬರ್ 16ರಂದು ಕೋಲ್ಕತ್ತಾದ ಗಿರಣಿಯಲ್ಲಿ ರಾತ್ರಿ...
- Advertisement -
error: Content is protected !!