Wednesday, May 31, 2023

ಬದುಕೇ ವೃತ್ತಿ… ಬದುಕೇ ಬರಹ…

Follow Us

ಹೆಣ್ಣು ತಾನು ಬರೇ ವೈಯಕ್ತಿಕ ಬದುಕು, ವೃತ್ತಿ ಅಷ್ಟಕ್ಕೆ ಮೀಸಲಾಗದೆ ಒಂದು ರೀತಿಯ ಬಿಡುಗಡೆ ಬಯಸುತ್ತಾ ತನ್ನ ಅಸ್ಮಿತೆ ಉಳಿಸಿಕೊಳ್ಳುವ ಸಲುವಾಗಿ ಹಾಗೂ ತನ್ನ ವ್ಯಕ್ತಿತ್ವವನ್ನು ಅರಳಿಸಲೇಬೇಕೆಂಬ ಹಠಕ್ಕೆ ಬಿದ್ದು ತನ್ನದೇ ಆಸಕ್ತಿಯ ಕ್ಷೇತ್ರವನ್ನು ಕಂಡುಕೊಳ್ಳುತ್ತಾಳೆ. ಅವಳ ಪ್ರತಿಭೆಯ ಹಾದಿ ನಿತ್ಯ ಬದುಕಿನ ಜಡತ್ವವನ್ನು ಇಲ್ಲವಾಗಿಸಿ ಜೀವಂತಿಕೆ ತುಂಬುತ್ತದೆ.

   ಮಹಿಳಾ ದಿನದ ಶುಭಾಶಯಗಳು   



♦ ಸುನೀತ ಕುಶಾಲನಗರ

ಶಿಕ್ಷಕರು, ಕವಯಿತ್ರಿ, ಹವ್ಯಾಸಿ ಬರಹಗಾರರು
newsics.com@gmail.com


 ಬೆ ಳ್ಳಂಬೆಳಗ್ಗೆ ಹಾಸಿಗೆಯಲ್ಲೇ ಆದಿನ ಪೂರೈಸಬೇಕಾದ ಕೆಲಸಗಳು, ಹೆಗಲ ಮೇಲಿರುವ ಜವಾಬ್ಧಾರಿ ,ಅಗತ್ಯವಾಗಿ ಮಾಡಲೇಬೇಕಾದ ಕಾರ್ಯಗಳು ತಿವಿಯಲಾರಂಭಿಸುತ್ತವೆ. ಹಾಸಿಗೆಯಿಂದ ಏಳುವ ಮನಸ್ಸಾಗದಿದ್ದರೂ ಎದ್ದೇಳುವುದು ಅನಿವಾರ್ಯವಾಗಿ ಮೈಮನಗಳ ಜಡತ್ವ ಅಟ್ಟಿಸಿ ಮೊದಲು ದೂಡುವುದೇ ಅಡುಗೆ ಮನೆಗೆ…
ಇಲ್ಲದಿದ್ದರೂ ಅಡುಗೆಮನೆಯೇ ಬಹುತೇಕ ಹೆಣ್ಣುಮಕ್ಕಳ ಕಾರ್ಯಕ್ಷೇತ್ರ.ಬದುಕಿನ ಹೆಚ್ಚು ಸಮಯವನ್ನು ಸವೆಸುವುದು ಅಡುಗೆ ಮನೆಯಲ್ಲೆ.ಮನೆ ಮಂದಿಯ ಇಚ್ಛಾನುಸಾರವಾಗಿ ಹಾಗು ಅವರೆಲ್ಲರ ಅಗತ್ಯತೆಗನುಸಾರವಾಗಿ ಮೊದಲೇ ಯೋಜನೆ ತಲೆಹತ್ತಿ ಯಾಂತ್ರಿಕವಾಗಿ ಚಾಲನೆ ನೀಡುವ ಕೈಗಳು ತನ್ನ ಅಪ್ಪಣೆ ಕಾಯದೆ ಶುರುಹಚ್ಚಿಕೊಳ್ಳುತ್ತದೆ.
ಇತ್ತೀಚಿನ ದಿನಗಳಲ್ಲಿ ಹೆಣ್ಣು ಯಾವುದಾದರೂ ಒಂದು ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವತ್ತ ಒಲವು ತೋರುತ್ತಾಳೆ. ಮನೆಯ ಎಲ್ಲಾ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಲೇ ವೃತ್ತಿ ಜೀವನದಲ್ಲೂ ಉತ್ಸಾಹಿಯಾಗಿ ತನ್ನ ಪಾಲಿನ ಕೆಲಸಗಳಿಗೆ ನ್ಯಾಯ ಒದಗಿಸುತ್ತಾಳೆ.
ವೃತ್ತಿಯೇ ಬದುಕಾಗಿರುವುದರಿಂದ ‘ಅನ್ನ ದೇವರ ಮುಂದೆ ಇನ್ನು ದೇವರುಂಟೇ?’ ಎಂಬಂತೆ ಮೊದಲ ಆಧ್ಯತೆ ಯಾವತ್ತೂ ವೃತ್ತಿಗೆ. ವೈಯಕ್ತಿಕ ಬದುಕಿನಲ್ಲಿ ಎದುರಿಸಬೇಕಾದ ಒತ್ತಡ, ಆತಂಕಗಳು ನುಗ್ಗಿ ಲಗ್ಗೆ ಇಡುತ್ತಾ ವರ್ತಮಾನವನ್ನು ಕಾಡಲಾರಂಭಿಸಿದರೂ ಅವನ್ನೆಲ್ಲಾ ಬದಿಗೆ ತಳ್ಳಿ ಮನಸ್ಸನ್ನು ತಹಬದಿಗೆ ತಂದು ತನ್ನ ಜವಾಬ್ಧಾರಿಗೆ ನ್ಯಾಯ ಒದಗಿಸಲು ಶತ ಪ್ರಯತ್ನ ಮಾಡುತ್ತಾಳೆ. ಬದುಕಿನಲ್ಲಿ ಎದುರುಗೊಳ್ಳಲೇಬೇಕಾದ ಹಾಗು ಹೊಂದಿಕೊಳ್ಳಲೇಬೇಕಾದ ಹೊಸತನಕ್ಕೆ ಅಥವಾ ಬದಲಾವಣೆಗೆ ಅಪ್ಡೇಟ್ ಆಗ್ತಾಳೆ.
ಅಸ್ಮಿತೆಗಾಗಿ ಹೋರಾಟ…
ಹೆಣ್ಣು ತಾನು ಬರೇ ವೈಯಕ್ತಿಕ ಬದುಕು, ವೃತ್ತಿ ಅಷ್ಟಕ್ಕೆ ಮೀಸಲಾಗದೆ ಒಂದು ರೀತಿಯ ಬಿಡುಗಡೆ ಬಯಸುತ್ತಾ ತನ್ನ ಅಸ್ಮಿತೆ ಉಳಿಸಿಕೊಳ್ಳುವ ಸಲುವಾಗಿ ಹಾಗೂ ತನ್ನ ವ್ಯಕ್ತಿತ್ವವನ್ನು ಅರಳಿಸಲೇಬೇಕೆಂಬ ಹಠಕ್ಕೆ ಬಿದ್ದು ತನ್ನದೇ ಆಸಕ್ತಿಯ ಕ್ಷೇತ್ರವನ್ನು ಕಂಡುಕೊಳ್ಳುತ್ತಾಳೆ. ಅವಳ ಪ್ರತಿಭೆಯ ಹಾದಿ ನಿತ್ಯ ಬದುಕಿನ ಜಡತ್ವವನ್ನು ಇಲ್ಲವಾಗಿಸಿ ಜೀವಂತಿಕೆ ತುಂಬುತ್ತದೆ. ಅಲ್ಲದೆ ಗುರುತಿಸಿಕೊಳ್ಳುವಿಕೆಯ ಹಪಾಹಪಿ ಬೆನ್ನಹತ್ತಿ ಹುರುಪಿನ ಒಳತುಡಿತಕ್ಕೆ ವೇದಿಕೆಯನ್ನು ಆಯ್ದು ಒಂದಷ್ಟು ಸಮಾನ ಮನಸ್ಕರ ಬಳಗವನ್ನು ಸೇರುತ್ತಾಳೆ. ಹಾಗೆ ಪ್ರತಿಭೆಗೆ ಬಲ ಬಂದು ಆ ಮೂಲಕ ಸಾಕಷ್ಚು ಅವಕಾಶವನ್ನೂ ಗಿಟ್ಟಿಸಿಕೊಳ್ಳುತ್ತಾಳೆ. ಹೀಗೆ ಮಹಿಳೆ ಕುಟುಂಬ, ವೃತ್ತಿ ಮತ್ತು ಹವ್ಯಾಸಗಳನ್ನು ಏಕಕಾಲಕ್ಕೆ ಅನುಭವಿಸುತ್ತಾ ಅವಿನಾಭಾವ ಸಂಬಂಧಗಳಂತೆ ಒಗ್ಗಿ ಯಶಸ್ವಿಯಾಗುತ್ತಾಳೆ, ನಿರಾಳವಾಗುತ್ತಾಳೆ, ಖುಷಿಯಾಗುತ್ತಾಳೆ.
ನಾನೂ ಹೊರತಲ್ಲ…
ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿರುವ ನಾನೂ ಇದರಿಂದ ಹೊರತಲ್ಲ. ಮನೆಯ ಜವಾಬ್ಧಾರಿಯನ್ನು ನಿಭಾಯಿಸುತ್ತಲೇ ಸಮಾಜದ ಧ್ವನಿಯನ್ನು ಗಮನಿಸುತ್ತಾ ನನ್ನ ಇರುವಿಕೆಯನ್ನು ಸಾಬೀತುಪಡಿಸಲು ಮನಕೆ ಹಿತ ನೀಡುವ ಸಾಹಿತ್ಯಲೋಕದಲ್ಲಿ ತೊಡಗಿಸಿಕೊಳ್ಳುವುದೆಂದರೆ ನನಗೆ ಎಲ್ಲಿಲ್ಲದ ಸಂಭ್ರಮ! ಅಡುಗೆ ಮನೆಯಿಂದಲೇ ಪ್ರಾರಂಭವಾಗುವ ದಿನಚರಿಯ ಜತೆಗೆ ರೇಡಿಯೋ ತಾಗುವ ಬೆರಳು ಜಗದ ಜಗುಲಿಯಂತೆ ಭಿತ್ತರಿಸುವ ವರ್ತಮಾನಗಳನ್ನು ಯಾವುದೇ ತ್ರಾಸಿಲ್ಲದೆ ತಿಳಿಯುತ್ತಾ ಅಡುಗೆ ಕೆಲಸದಲ್ಲಿ ನಿರತಳಾಗುತ್ತೇನೆ.
ಉಕ್ಕಿ ಬರುವ ಹಾಲ್ನೊರೆಯೊಳಗೆ ಮೂಡುವ ಕಲ್ಪನೆ, ಆಗ ತಾನೇ ಬಿರಿದಂತೆ ಉದುರುವ ತೆಂಗಿನತುರಿ,ತೊಳೆದಿಟ್ಟ ಪಾತ್ರೆಗಳ ಹೊಳಪಿನಲ್ಲಿ ಕಾಣುವ ಪ್ರತಿಬಿಂಬ, ಅಣತಿ ಪಾಲಿಸಿದಂತೆ ಹೊಯ್ಯುವಾಗ ಅರಳುವ ದೋಸೆ,ಅದರೊಳಗೂ ಜನ್ಮ ತಳೆಯುವ ಹೊಸಗನಸು..ಹೀಗೆ ಒಂದೇ ಎರಡೇ..ಅಕ್ಷರ ಲೋಕವೇ ತಲೆಯೊಳಗೆ ಮೇಳೈಸಿ ಸಿಕ್ಕ ಏಕಾಂತಕೆ ಹಿಡಿದ ಲೇಖನಿ ಹೊರಹಾಕುವ ಭಾವಲೋಕ ಒಂದು ರೀತಿಯ ಸಂತೃಪ್ತ ಭಾವವನ್ನು ತುಂಬುತ್ತದೆ.ಜೀವಸೆಲೆಯಾಗುವ ಅಕ್ಷರಲೋಕದಲ್ಲಿ ಭಿನ್ನವಾಗಿ ಕಾಣುವುದೆಂದರೆ ಪ್ರತಿ ಬರೆಹಗಾರರಿಗೂ ಅದರಷ್ಟು ಹೆಮ್ಮೆ ಯಾವುದು ಹೇಳಿ…
ಸ್ಥಾನ ಪಲ್ಲಟ…
ನಾಡಿನ ಖ್ಯಾತ ಬರಹಗಾರ್ತಿಯಾಗಿ ನಮ್ಮೆಲ್ಲರ ಮನದಲ್ಲಿ ತಮ್ಮ ಬರಹಗಳ ಮೂಲಕ ನೆಲೆಯೂರಿದ ವೈದೇಹಿಯವರ ಮಗಳು ಡಾ.ನಯನಾ ಕಶ್ಯಪ್ ವೇದಿಕೆಯೊಂದರಲ್ಲಿ ಮಾತನಾಡುತ್ತಾ “ಮುಂದೊಂದು ದಿನ ಗಂಡು ಹೆಣ್ಣುಗಳ ಸ್ಥಾನಪಲ್ಲಟವಾಗುವುದರಲ್ಲಿ ಯಾವುದೇ ಸಂಶಯವಿಲ್ಲ, ಹೆಣ್ಣು ಮುಂದಿನ ದಿನಗಳಲ್ಲಿ ಇನ್ನಷ್ಟು ಸಮರ್ಥಳಾಗುತ್ತಾಳೆ. “ಆ ನೇರ ಮತ್ತು ಸತ್ಯದ ನುಡಿಗಳು ಸದಾ ಆಸುಪಾಸಲ್ಲೇ ಸುಳಿದು ಗಿರಕಿ ಹೊಡೆಯುತ್ತಿದೆ.
“ಮಹಿಳೆಯನ್ನು ಅಬಲೆ ಎಂದು ಕರೆಯದಿರಿ. ಅದು ನಿಂದೆಯಾದೀತು. ಬಲ ಎಂಬುದು ಪಶುಬಲ ಎಂಬುದಾದರೆ ಮಹಿಳೆ ಪುರುಷನಷ್ಟು ದುರ್ಬಲ ಅಲ್ಲ. ನೈತಿಕ ಬಲ ಎಂಬುದಾದರೆ ಆಕೆ ಅವನಿಗಿಂತ ಬಹುಪಾಲು ಬಲಶಾಲಿ.”
– ಮಹಾತ್ಮ ಗಾಂಧಿ
ಸರ್ವಕಾಲಕ್ಕೂ ಸಲ್ಲುವ ಈ ನಿತ್ಯಸತ್ಯದ ನುಡಿಗೆ ತಲೆಬಾಗಲೇಬೇಕಿದೆ. ಎಲ್ಲರಿಗೂ ಮಹಿಳಾ ದಿನದ ಶುಭಾಶಯಗಳು.

ಮತ್ತಷ್ಟು ಸುದ್ದಿಗಳು

vertical

Latest News

Weekend With Ramesh; ಸಾಧಕರ ಕುರ್ಚಿಯಲ್ಲಿ ಡಿಕೆ ಶಿವಕುಮಾರ್!

newsics.com ಬೆಂಗಳೂರು: ಖಾಸಗಿವಾಹಿನಿಯಲ್ಲಿ ವೀಕೆಂಡ್ ವಿತ್ ರಮೇಶ್ ಐದನೇ ಸೀಸನ್​ನ ಈ ವಾರದ ಅತಿಥಿಯಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಗಮಿಸಲಿದ್ದಾರೆ ಎನ್ನುವ ಗಾಳಿ ಸುದ್ದಿಯೊಂದು ಹಬ್ಬಿದೆ. ಭಾನುವಾರದ ಎಪಿಸೋಡ್...

ತರಬೇತಿ ವಿಮಾನ ತುರ್ತು ಭೂಸ್ಪರ್ಶ; ತಪ್ಪಿದ ಭಾರೀ ಅನಾಹುತ

newsics.com ಬೆಳಗಾವಿ: ತರಬೇತಿ ವಿಮಾನವೊಂದು ತಾಂತ್ರಿಕ ತೊಂದರೆಯಿಂದ  ತುರ್ತು ಭೂಸ್ಪರ್ಶ ಆಗಿದೆ. ಈ ಘಟನೆ ಬೆಳಗಾವಿ ತಾಲೂಕಿನ ಹೊನ್ನಿಹಾಳ ಹೊರವಲಯದಲ್ಲಿ ನಡೆದಿದೆ. ರೆಡ್‌ಬರ್ಡ್  ಸಂಸ್ಥೆಗೆ ಸೇರಿದ VT- RBF ತರಬೇತಿ ವಿಮಾನ ಇದಾಗಿದ್ದು, ಘಟನೆ ನಡೆದ...

ಆಪರೇಷನ್ ಪಠ್ಯ ಪುಸ್ತಕ; ಪಠ್ಯಗಳ ಪರಿಷ್ಕರಿಸ್ತೇವೆಂದ ಶಿಕ್ಷಣ ಸಚಿವ ಮಧು ಬಂಗಾರಪ್ಪ

newsics.com ಬೆಂಗಳೂರು:  ಪಠ್ಯ ಪುಸ್ತಕ  ಪರಿಷ್ಕರಣೆ ನಾವು ಮಾಡ್ತೀವಿ. ಪ್ರಣಾಳಿಕೆಯಲ್ಲಿ ಕೊಟ್ಟ ಮಾತಿನಂತೆ ಪರಿಷ್ಕರಣೆ ಮಾಡ್ತೀವಿ. ಮಕ್ಕಳ ಮನಸ್ಸಿನಲ್ಲಿ ಕಲ್ಮಶ ತುಂಬುವ ಪಠ್ಯ ಕೈ ಬಿಡ್ತೀವಿ. ಈ ಬಗ್ಗೆ ಸಿಎಂ, ಡಿಸಿಎಂ ಜೊತೆ ಚರ್ಚಿಸಿ...
- Advertisement -
error: Content is protected !!