Monday, October 2, 2023

ಓದಿಸಿಕೊಳ್ಳುವ ಭಾರತ ಕಥಾಮಿತ್ರ

Follow Us

  • ದೀಪ್ತಿ
    response@134.209.153.225

ಸ್ವಲ್ಪ ಹಳೆಯದು ಎನ್ನಿಸಬಹುದಾದ ಮತ್ತು ಸಾರ್ವಕಾಲಿಕ ಸತ್ಯದಂತೆ ಗೋಚರಿಸುತ್ತಿರುವ ಮಾತೆಂದರೆ ಮಕ್ಕಳು ಮೊಬೈಲ್ ಮತ್ತು ಟಿವಿಯ ವ್ಯಾಮೋಹಕ್ಕೆ ಬಿದ್ದು ಓದಿನ ಹವ್ಯಾಸವನ್ನೇ ಕಳೆದುಕೊಂಡಿರುವುದು ಎಲ್ಲರಿಗೂ ತಿಳಿದ ಸತ್ಯವೇ. ಮಕ್ಕಳನ್ನು ಈ ವ್ಯಾಮೋಹದಿಂದ ಬಿಡಿಸಿ ಮತ್ತೆ ಅವರನ್ನು ಓದಿನೆಡೆಗೆ ತರುವ ನಿಟ್ಟಿನಲ್ಲಿ ಬಹಳಷ್ಟು ಹಿರಿಯ ಸಾಹಿತಿಗಳು ಗಂಭೀರವಾಗಿ ಶ್ರಮಿಸುತ್ತಿದ್ದಾರೆ. ಅಂತಹ ಸಾಲಿನಲ್ಲಿ ವಿ. ಗಣೇಶ್ ಸಾಗರ ಕೂಡ ಒಬ್ಬರು. ಇವರು ಮಹಾಭಾರತದ ಕತೆಗಳನ್ನು ತುಂಬ ಸರಳವಾಗಿ, ಭಾಷೆಯ ಹೇರುವಿಕೆ ಇಲ್ಲದೆ ಮಕ್ಕಳ ಮನಮುಟ್ಟುವ ರೀತಿಯಲ್ಲಿ ಪುನಃ ಹೆಣೆದು ‘ಭಾರತ ಕಥಾಮಿತ್ರ’ ಎನ್ನುವ ಹೆಸರಿನಲ್ಲಿ ಹೊರತಂದಿದ್ದಾರೆ.
ಈ ಪುಸ್ತಕದಲ್ಲಿ, ಮಹಾಭಾರತದಲ್ಲಿ ಬರುವ ಕತೆ ಮತ್ತು ಉಪಕತೆಗಳು ಇಲ್ಲಿ ಬಹಳಷ್ಟು ಚೊಕ್ಕದಾಗಿ ಮತ್ತೆ ನಮ್ಮೆಡೆಗೆ ಬಂದಿವೆ. ಲೇಖಕರೇ ಹೇಳುವ ಹಾಗೆ “ಮಹಾಭಾರತದಲ್ಲಿ ಬರುವ ಕಥೆಗಳು ಹಾಗೂ ಉಪಕಥೆಗಳು ತಮ್ಮದೇ ಆದ ಒಂದು ತತ್ವವನ್ನು ಸೃಷ್ಟಿ ಮಾಡುತ್ತವೆ. ಈ ಕಥೆಗಳ ಮಾಲಿಕೆಯ ಮೂಲಕವೇ ಮತ್ತೊಮ್ಮೆ ಭಾರತದ ಕತೆಯನ್ನು ಹೇಳಬಾರದು ಎಂಬ ಪ್ರಶ್ನೆ ನನ್ನನ್ನು ಕಾಣತೊಡಗಿತು. ಇಂತಹ ಕತೆಗಳು ಸಾಕಷ್ಟು ಸಂಖ್ಯೆಯಲ್ಲಿ ಆಗಲೇ ಬೆಳಕು ಕಂಡಿದ್ದರೂ, ನನ್ನೂ ಒಂದು ಕಾಣಿಕೆ ಇರಲಿ ಎಂದು ಈ ಕಥಾಮಾಲಿಕೆಯನ್ನು ಬರೆದಿದ್ದೇನೆ. ಮಕ್ಕಳನ್ನೇ ಕೇಂದ್ರವಾಗಿಟ್ಟುಕೊಂಡು ಈ ಕೃತಿಯನ್ನು ರಚಿಸಿದ್ದೇನೆ” ಎನ್ನುತ್ತಾರೆ.
ಇಲ್ಲಿನ ಎಲ್ಲ ಕತೆಗಳು ಬಿಡದೇ ಓದಿಸಿಕೊಂಡು ಹೋಗುತ್ತವೆ. ಬಹುತೇಕವು ನಮಗೆ ಗೊತ್ತಿದ್ದರೂ ಅದರ ಹೇಳುವಿಕೆಯ ಗುಣದಿಂದಾಗಿ ಮತ್ತೆ ನಮ್ಮನ್ನು ಹಿಡಿದಿಡುತ್ತದೆ. ಅದಲ್ಲದೆ ನಮಗೆ ತಿಳಿದಿಲ್ಲದ “ಯುಧಿಷ್ಟಿರನ ಕೋಪಾಗ್ನಿ”, “ತೇನ ವಿನಾ ತೃಣಮಪಿ ನ ಚಲತೇ” ದಂತಹ ಕತೆಗಳು. “ಭೀಮ ಮತ್ತು ಆಂಜನೇಯರ ಭೇಟಿ” “ಅಗ್ನಿಯನ್ನೇ ಜಯಿಸಿದ ಪಕ್ಷಿಗಳು” “ಅರ್ಜುನ ಬಭ್ರುವಾಹನ” ದಂತಹ ಕತೆಗಳು ರೋಚಕವಾಗಿ ನಮ್ಮನ್ನು ಸೆಳೆಯುತ್ತವೆಯಾದರೂ ಮೂಲ ಕತೆಗೆ ಎಲ್ಲಿಯೂ ಧಕ್ಕೆ ತರುವುದಿಲ್ಲ. ಇಲ್ಲಿ ಸುಮಾರು 63 ಕತೆಗಳಿವೆ. ಎಲ್ಲಿಯೂ ಲಂಘಿಸದೆ ನಮ್ಮನ್ನು ಓದಲು ಕಟ್ಟಿ ಹಾಕುವುದು ಇಲ್ಲಿನ ಕತೆಗಳ ವಿಶೇಷತೆ.

ಭಾರತ ಕಥಾಮಿತ್ರ
ಲೇಖಕರು: ವಿ. ಗಣೇಶ್ ಸಾಗರ 
ಪ್ರಕಾಶನ: ಆಕಾಶ ಪ್ರಕಾಶನ, ಚಾಮರಾಜಪೇಟೆ, ಬೆಂಗಳೂರು
ಪುಟಗಳು: 308, ಬೆಲೆ: 225 ರೂ.

ಮತ್ತಷ್ಟು ಸುದ್ದಿಗಳು

vertical

Latest News

ವಿದ್ಯುತ್ ಲೈನ್ ತಗುಲಿ 5 ಜಾನುವಾರು ಸ್ಥಳದಲ್ಲಿಯೇ ಸಾವು

newsics.com ಕೊಡಗು: ವಿದ್ಯುತ್ ಲೈನ್ ತುಂಡಾಗಿ ಬಿದ್ದ ಹಿನ್ನೆಲೆ ಐದು ಜಾನುವಾರುಗಳು ಸ್ಥಳದಲ್ಲಿಯೇ ಸಾವನ್ನಪ್ಪಿದೆ. ದಾರುಣ ಘಟನೆ ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಮತ್ತೂರಿನಲ್ಲಿ ನಡೆದಿದೆ. ಮತ್ತೂರು ಗ್ರಾಮದ...

Asian Games; ಭಾರತಕ್ಕೆ ಒಂದೇ ದಿನ 15 ಪದಕ

newsics.com ಹ್ಯಾಂಗ್‌ಝೌ: ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ 8ನೇ ದಿನವಾದ ಭಾನುವಾರ ಒಂದೇ ದಿನ 15 ಪದಕ ಬಾಚಿಕೊಂಡಿದೆ. 7ನೇ ದಿನವಾದ ಶನಿವಾರ 10 ಚಿನ್ನ, 14 ಬೆಳ್ಳಿ ಮತ್ತು 14 ಕಂಚಿನೊಂದಿಗೆ 38 ಪದಕಗಳನ್ನು ಭಾರತ...

ಬೆಂಗಳೂರು ಕಂಬಳ: ಕೋಣಗಳಿಗೆ ಮಂಗಳೂರಿಂದಲೇ ಬರುತ್ತೆ ಕುಡಿಯುವ ನೀರು!

newsics.com ಬೆಂಗಳೂರು: ನವೆಂಬರ್ ತಿಂಗಳ 25 ಮತ್ತು 26ನೇ ತಾರೀಕಿನಂದು ಮೊದಲ ಬಾರಿಗೆ ತುಳುನಾಡಿನ ಗಡಿಯನ್ನು ದಾಟಿ ಬೆಂಗಳೂರಿನಲ್ಲಿ ಕರಾವಳಿಯ ಸಾಂಸ್ಕೃತಿಕ ಕ್ರೀಡೆ ಕಂಬಳ ನಡೆಯುತ್ತಿದೆ. ಪುತ್ತೂರು ಶಾಸಕ ಅಶೋಕ್‌ ಕುಮಾರ್ ರೈ ನೇತೃತ್ವದಲ್ಲಿ ಕಂಬಳ...
- Advertisement -
error: Content is protected !!