Monday, March 1, 2021

ಮನಮುಟ್ಟುವ ‘ಭಾವದ ಕದತಟ್ಚಿ’

‘ಭಾವದ ಕದತಟ್ಟಿ’ ಎಂಬ ಸುಂದರ ಶೀರ್ಷಿಕೆಯಡಿ ಚೆಂದದ ಮುಖಪುಟದೊಂದಿಗೆ ಮನ ತಟ್ಟುವ ಸುಮಾರು ನಲವತ್ತು ಕವಿತೆಗಳಿರುವ ಈ ಸಂಕಲನಕ್ಕೆ ನಾಡಿನ ಹಿರಿಯ ಹಾಗೂ ಖ್ಯಾತ ಸಾಹಿತಿ ವೈದೇಹಿಯವರ ಆಶೀರ್ವಾದದಂತಹ ಮುನ್ನುಡಿ ಬರೆದಿರುವುದು ಕೃಪಾ ದೇವರಾಜ್’ಗೆ ದಕ್ಕಿದ ಸೌಭಾಗ್ಯ.


♦ ಸುನೀತ ಕುಶಾಲನಗರ

ಶಿಕ್ಷಕರು, ಬರಹಗಾರರು

newsics.com@gmail.com

 ಮೊ ನ್ನೆ ಮೊನ್ನೆಯಷ್ಟೇ ಲೋಕಾರ್ಪಣೆಯಾದ ಕೃತಿ ‘ಭಾವದ ಕದತಟ್ಟಿ’ ಕೊಡಗಿನಲ್ಲಿ ಸಾಹಿತ್ಯ ಕೃಷಿ ಸಮೃದ್ಧಿಗೆ ಮತ್ತೊಂದು ಕವನ ಸಂಕಲನದ ಸೇರ್ಪಡೆ. ಎಳವೆಯಿಂದಲೇ ಓದು ಬರಹಗಳಲ್ಲಿ ತೊಡಗಿಸಿಕೊಂಡ ಕೃಪಾ ಪುಸ್ತಕ ಹೊರತರುವಲ್ಲಿ ತಡವಾಗಿಯಾದರೂ ಸುಖ ಪ್ರಸವ ಕಂಡು ಹಸನ್ಮುಖಿಯಾಗಿದ್ದಾರೆ.
ಸದಾ ಹಿತ ಕೊಡುವ ಕವಿತೆಯೆಡೆ ವಾಲಿ, ತನ್ನ ಜತೆ ತಾನೇ ಮಾತನಾಡುತ್ತಾ ಕಂಡಿದೆಲ್ಲವನ್ನೂ ಸೂಕ್ಷ್ಮವಾಗಿ ಮತ್ತು ಪ್ರೀತಿಯಿಂದ ನೋಡಿ ಜೀವ ತುಂಬುವುದೆಂದರೆ ಕವಿಗಳಿಗೆ ಎಲ್ಲಿಲ್ಲದ ಖುಷಿ. ಕೃಪಾ ಕೂಡ ಇದರಿಂದ ಹೊರತಲ್ಲವೆಂಬುದನ್ನು ಭಾವದ ಕದತಟ್ಟಿ ಸಾರಿ ಹೇಳುತ್ತದೆ.
ಇವರು ಕಾವ್ಯದ ಹಾದಿಯಲ್ಲಿ ಪಯಣಿಸುತ್ತಾ ಹೇಳುವ ಸಾಲುಗಳಲ್ಲಿ..
ಉತ್ತರ ಒಂದೇ ಪ್ರಶ್ನೆಗಳಿಗೆಲ್ಲಾ
ಮತ್ತವಳು ಬುದ್ಧನಲ್ಲ ಹೆಣ್ಣು
ಹತ್ತು ಕೋಟಿ ಕೋಟಲೆಗಳ ನಡುವೆ
ಗತ್ತಿನಲಿ ಏರಿ ಜಯಿಸಬಲ್ಲಳು!
ಇವರ ಅವಳು ಬುದ್ಧನಲ್ಲ ಹೆಣ್ಣು ಕವಿತೆಯಲ್ಲಿ ಹೆಣ್ಣಿನ ಸಂಕಟ ಮತ್ತು ಅದನ್ನು ನಿಭಾಯಿಸಲೇಬೇಕೆಂಬ ಜವಾಬ್ದಾರಿಯನ್ನು ಧ್ವನಿಸುತ್ತದೆ.
ಸ್ತ್ರೀ ಸಂವೇದನೆಗಳನ್ನೇ ಕವಿತೆಯೊಳಗೆ ತುಂಬಿರುವ ತನ್ನ ಭಾವದ ಕದ ತಟ್ಟಿ ಕವಿತೆಯಲ್ಲಿ
ಮನವೇನು ಛತ್ರವೇ? ಸ್ಥಳವಿಲ್ಲವಿಲ್ಲಿ
ಯಾತ್ರಿಕರಿಗೆ
ಭದ್ರವಾಗಿ ಮುಚ್ಚಿ ಹಾಕಬೇಕೆಂದಿರುವೆ
ಕಬ್ಬಿಣದ ಅಗುಳಿ!
ಕವಿತೆಯ ಜತೆ ಯಾವುದೋ ದೃಢ ನಿರ್ಧಾರ ಮಾಡಿದಂತೆ ಗೋಚರಿಸುತ್ತಾರೆ.
ಮನದೊಳಗಿನ ಬೆಳ್ಳಿಮೋಡ ಕವಿತೆಯಲ್ಲಿ
ಎನ್ನ ದುಃಖ ಮಳೆಗಾಲದ ಮಳೆಯಂತಲ್ಲ
ಹೊತ್ತುಗೊತ್ತಿಲ್ಲದೇ ಯಾವಾಗೆಂದರೆ ಆವಾಗ
ಧೋ.ಎಂದು ವರ್ಷಧಾರೆ ಸುರಿದು
ಕಣ್ಣೀರಾಗಿ ಹರಿದು ಬಿಡಲು
ಈ ಕವಿತೆ ಮನದ ತಲ್ಲಣಕ್ಕೊಂದು ಬಿಡುಗಡೆಯಾಗಿ ಹರಿದಂತೆ ಕಾಡುತ್ತದೆ.
ಭಾವದ ಕದತಟ್ಟಿ ಎಂಬ ಸುಂದರ ಶೀರ್ಷಿಕೆಯಡಿ ಚೆಂದದ ಮುಖಪುಟದೊಂದಿಗೆ ಮನ ತಟ್ಟುವ ಸುಮಾರು ನಲವತ್ತು ಕವಿತೆಗಳಿರುವ ಈ ಸಂಕಲನಕ್ಕೆ ನಾಡಿನ ಹಿರಿಯ ಹಾಗೂ ಖ್ಯಾತ ಸಾಹಿತಿ ವೈದೇಹಿಯವರ ಆಶೀರ್ವಾದದಂತಹ ಮುನ್ನುಡಿ ಬರೆದಿರುವುದು ಕೃತಿಕಾರರಿಗೆ ದಕ್ಕಿದ ಸೌಭಾಗ್ಯ.
ಎಂ.ಕಾಂ. ಪದವೀಧರೆಯಾಗಿ ಪ್ರಸ್ತುತ ಟಾಟಾ ಕಾಫಿ ಮಡಿಕೇರಿಯ ತೋಟಗಾರಿಕಾ ವಿತರಣಾ ವಿಭಾಗದಲ್ಲಿ ಬ್ರಾಂಚ್ ಇನ್ಚಾರ್ಜ್ ಉದ್ಯೋಗಿಯಾಗಿ ಸಾಹಿತ್ಯ ಕ್ಷೇತ್ರದಲ್ಲೂ ತೊಡಗಿಸಿಕೊಂಡಿರುವ ಕೃಪಾ ದೇವರಾಜ್ ಬಹುಮುಖ ಪ್ರತಿಭೆಯೂ ಕೂಡ.
ಇವರು ತಮ್ಮ ಭಾವದ ಕದತಟ್ಟಿ ಕವನ ಸಂಕಲನದ ಮೂಲಕ ಭರವಸೆಯ ಕವಯತ್ರಿಯಾಗಿ ಕೊಡಗಿನ ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಂಡಿರುವುದು ಹೆಮ್ಮೆ ಮತ್ತು ಖುಷಿ ಕೊಡುತ್ತಿದೆ. ಹಿರಿಯ ಕವಿಗಳ ಕವಿತೆಗಳ ನಿರಂತರ ಅಧ್ಯಯನ ಮತ್ತು ವರ್ತಮಾನದ ಬರಹಗಾರರನ್ನು ಓದುತ್ತಾ ಮತ್ತಷ್ಟು ಪಳಗಿ ಮನದ ಬತ್ತಳಿಕೆಯಿಂದ ಪಕ್ವ ಬರಹಗಳು ಹೊರಹೊಮ್ಮಿ ಕಾವ್ಯ ಕ್ಷೇತ್ರದಲ್ಲಿ ಇವರ ಹೆಜ್ಜೆ ನಾಡಿನಗಲ ಪಸರಿಸಿ ಜಿಲ್ಲೆಗೆ ಕೀರ್ತಿ ತರುವಂತಾಗಲಿ ಎಂಬುದು ನಮ್ಮೆಲ್ಲರ ಮಹದಾಸೆ.

ಮತ್ತಷ್ಟು ಸುದ್ದಿಗಳು

Latest News

ಅಸ್ಸಾಂನಲ್ಲಿ ಅಪಘಾತ: ಮೈಸೂರಿನ ಯೋಧ ಸಾವು

newsics.com ಗುವಾಹಟಿ:  ಅಸ್ಸಾಂನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೈಸೂರು ಮೂಲದ ಯೋಧರೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.  ಮೃತಪಟ್ಟ ಯೋಧನನ್ನು ತಿ. ನರಸಿಪುರ ತಾಲೂಕಿನ  ಬೆಟ್ಟಹಳ್ಳಿ ಗ್ರಾಮದ ಮೋಹನ್ ಎಂದು...

ತಿರುಪತಿ ಪ್ರವೇಶಿಸದಂತೆ ಚಂದ್ರಬಾಬು ನಾಯ್ಡುಗೆ ನಿರ್ಬಂಧ

newsics.com ತಿರುಪತಿ: ತೆಲುಗು ದೇಶಂ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಜು ಗೆ ತಿರುಪತಿ ಪ್ರವೇಶಿಸದಂತೆ ಪೊಲೀಸರು ತಡೆ ಒಡ್ಡಿದ್ದಾರೆ. ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಣಿಗುಂಟ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು...

ಶೂಟಿಂಗ್ ವೇಳೆ ಸ್ವಲ್ಪದರಲ್ಲೇ ಅಪಾಯದಿಂದ ಪಾರದ ರಿಷಬ್ ಶೆಟ್ಟಿ

newsics.com ಹಾಸನ: ನಟ ರಿಷಬ್ ಶೆಟ್ಟಿ ಚಿತ್ರೀಕರಣದ ವೇಳೆ ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ. ಬೇಲೂರು ಬಳಿ ಚಿತ್ರೀರಣ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಹೀರೋ ಚಿತ್ರದ ಚಿತ್ರೀಕರಣದ ವೇಳೆ ಪೆಟ್ರೋಲ್ ಬಾಂಬ್ ಗೆ ಬೆಂಕಿ...
- Advertisement -
error: Content is protected !!