Wednesday, October 5, 2022

ಸಾಧನೆಗೆ ಪ್ರೇರಣೆ ನೀಡುವ ಕಥೆಗಳ ಸಾರ ‘ನವಿಲುಗರಿ’

Follow Us

ಅಪ್ಪಅಮ್ಮ ಎಂಬ ಸಂಬಂಧದ ಕೊಂಡಿಯನ್ನು ಅಂತರ್ಜಾಲದಿಂದ ಡೌನ್ ಲೋಡ್ ಮಾಡಲಾಗುವುದಿಲ್ಲ. ಸಂಬಂಧದ ಕೊಂಡಿಯನ್ನು ಒಂದರ ಹಿಂದೆ ಒಂದರಂತೆ ತೆರೆಯಲು ಸಾಧ್ಯವಿಲ್ಲ. ಅಮ್ಮನ ಕಣ್ಣೊಳಗಿನ ಅದಮ್ಯ ಪ್ರೀತಿ, ಅಮ್ಮನ ವಿಶಾಲ ಮನಸ್ಸು, ಇವು ಯಾವುದನ್ನು ಅಂತರ್ಜಾಲದಿಂದ ಪ್ರಿಂಟ್‍ಔಟ್ ತೆಗೆಯಲಾಗುವುದಿಲ್ಲ. ‘ನವಿಲುಗರಿ’ ಹೊತ್ತಗೆಯಲ್ಲಿನ ಪ್ರತಿ ಕಥೆಯೂ ಹಲವರ ಬದುಕಿಗೆ ಪ್ರೇರಣೆ.


  ಬುಕ್ ಲೋಕ  

♦ ಸಾಯಿನಂದಾ ಚಿಟ್ಪಾಡಿ
newsics.com@gmail.com


 ಥೆ ಮತ್ತು ಅಂಕಣ ಬರಹಗಳ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸ ಪುಟ ಬರೆದವರು ಪತ್ರಕರ್ತ ಎ.ಆರ್. ಮಣಿಕಾಂತ್. ಸರಳವಾದ ಅಕ್ಷರದ ಪೋಣಿಕೆಯಿಂದ ಅನೇಕ ಕೃತಿಗಳನ್ನು ಓದುಗ ವರ್ಗಕ್ಕೆ ಉಣಬಡಿಸಿ, ಓದುವ ಹುರುಪನ್ನು ಹೆಚ್ಚಿಸಿದವರು. ಅಮ್ಮ ಹೇಳಿದ ಎಂಟು ಸುಳ್ಳುಗಳು, ಅಪ್ಪ ಅಂದ್ರೆ ಆಕಾಶ, ಈ ಗುಲಾಬಿ ನಿನಗಾಗಿ, ಹೀಗೆ ಅನೇಕ ಬರಹದ ಗುಚ್ಚವನ್ನು ಓದುಗರ ಮುಂದಿಟ್ಟು ಜ್ಞಾನದ ಸಾರವನ್ನು ಎರೆದಿದ್ದಾರೆ. ಕನಸು ಕಾಣುವ ಕಂಗಳಿಗೆ ಇವರ ಪುಸ್ತಕಗಳು ಮತ್ತಷ್ಟು ಹುರುಪನ್ನು ನೀಡಿ ಸಾಧನೆಯ ಪಥದಲ್ಲಿ ಮುನ್ನಡೆಸಿದೆ. ಇದೀಗ ‘ನವಿಲುಗರಿ’ ಪುಸ್ತಕ ಓದುಗರ ಮುಂದಿದೆ.
ಈಗಾಗಲೇ ಜನರನ್ನು ತಲುಪಿರುವ ಅನೇಕ ಕೃತಿಗಳು ಅದೆಷ್ಟೋ ಜನರ ಪಾಲಿಗೆ ಮಾದರಿಯಾಗಿದೆ. ಬದುಕು ವ್ಯರ್ಥ ಎಂದು ಭಾವಿಸಿದ ಅನೇಕರಿಗೆ ಸ್ಫೂರ್ತಿಯ ಸೆಲೆಯಾಗಿದೆ. ಪ್ರಕಟಗೊಂಡ ಪ್ರತಿಯೊಂದು ಪುಸ್ತಕವೂ ಕೂಡ ಓದುಗ ವರ್ಗಕ್ಕೆ ಸುಲಭವಾಗಿ ತಲುಪಿದೆ. ಹಾಗಾಗಿಯೇ ಎ.ಆರ್. ಮಣಿಕಾಂತ್ ನಮಗೆ ತೀರಾ ಆಪ್ತರಾಗಿ ಬಿಡುವುದು. ಈಗಾಗಲೇ ಅಪ್ಪ, ಅಮ್ಮಇಬ್ಬರ ಸಂಬಂಧಗಳ ಮಹತ್ವವನ್ನು, ಕರುಳು ಚುರ್ ಎನ್ನುವಂತೆ ಮಾಡುವ ಕಥಾನಕಗಳನ್ನು ಓದುಗರ ಮುಂದಿಟ್ಟಿದ್ದಾರೆ. ಓದುಗರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವ ಕಾಲಘಟ್ಟದಲ್ಲಿ ಅಂತರ್ಜಾಲದಿಂದ ಎಲ್ಲವನ್ನೂ ಸುಲಭವಾಗಿ ಪಡೆಯಬಹುದು ಎಂಬ ಮನೋಭಾವ ಜನರಲ್ಲಿ ಮೂಡಿದೆ. ಆದರೆ ಇವರ ಪುಸ್ತಕಗಳು ಎಲ್ಲಾ ಸಂಬಂಧ ಮಹತ್ವಗಳನ್ನು ಸ್ವವಿವರವಾಗಿ ತಿಳಿಸಿಕೊಂಡು, ಪುಸ್ತಕದ ಕೊನೆಯ ಪುಟವನ್ನು ತಿರುವಿದಾಗ ಕಣ್ಣಂಚಲಿ ಕಂಬನಿ ಜಿನುಗುತ್ತದೆ. ಇನ್ನು ಅಪ್ಪಅಮ್ಮ ಎಂಬ ಸಂಬಂಧದ ಕೊಂಡಿಯನ್ನು ಅಂತರ್ಜಾಲದಿಂದ ಡೌನ್ ಲೋಡ್ ಮಾಡಲಾಗುವುದಿಲ್ಲ. ಸಂಬಂಧದ ಕೊಂಡಿಯನ್ನು ಒಂದರ ಹಿಂದೆ ಒಂದರಂತೆ ತೆರೆಯಲು ಸಾಧ್ಯವಿಲ್ಲ ಎಂಬುದನ್ನು ಇವರ ಕೃತಿ ತಿಳಿಸಿಕೊಟ್ಟಿದೆ. ಅಮ್ಮನ ಕಣ್ಣೊಳಗಿನ ಅದಮ್ಯ ಪ್ರೀತಿ, ಅಮ್ಮನ ವಿಶಾಲ ಮನಸ್ಸು, ಇವು ಯಾವುದನ್ನು ಅಂತರ್ಜಾಲದಿಂದ ಪ್ರಿಂಟ್‍ಔಟ್ ತೆಗೆಯಲಾಗುವುದಿಲ್ಲ. ಬದಲಾಗಿ ಸಂಬಂಧಗಳು ಮನಸ್ಸಿನಲ್ಲಿ ಬೆಸೆದು ಉತ್ತಮ ಬಾಂಧವ್ಯಕ್ಕೆ ಮುನ್ನುಡಿಯಾಗುವಂತಿರಬೇಕು ಎಂಬುದನ್ನು ತಮ್ಮ ಬರಹದ ಮೂಲಕ ತೋರ್ಪಡಿಸಿದ್ದಾರೆ.
ನನ್ನ ಕಣ್ಣ ಮುಂದೆ ಅನೇಕ ಕುಟುಂಬಗಳಿವೆ, ಎಲ್ಲರೂ ಶ್ರೀಮಂತರೇ, ಎಲ್ಲರೂ ಲಕ್ಷಾಧಿಪತಿಗಳೇ. ಎಲ್ಲರ ಬಳಿಯೂ ಎರಡೆರಡು ಕಾರು, ಎರಡೆರಡು ಸೈಟು, ಎರಡೆರಡು ಮನೆ ಆದರೂ ಜನಕ್ಕೆ ನೆಮ್ಮದಿಯಿಲ್ಲ, ಖುಷಿಯಿಲ್ಲ, ಹಣ ಜಾಸ್ತಿಯಾದಾಗ ಕಷ್ಟಗಳು ಕಡಿಮೆಯಾಗುವುದಿಲ್ಲ ಬದಲಾಗಿ ಕಂದಕಗಳು ಸೃಷ್ಟಿಯಾಗುತ್ತದೆ ಎಂದು ಬರವಣಿಗೆಯ ಮೂಲಕ ಜನರಿಗೆ ನೈಜತೆಯನ್ನು ಚಿತ್ರಿಸಿದ್ದಾರೆ.
ಸರಳ ಬರವಣಿಗೆ…
ನೆಮ್ಮದಿ ಎಂಬ ಮಾಯಾಮೃಗ ಅದೆಲ್ಲಿ ಅಡಗಿಹೋಯಿತು ಎಂದು ಮನದೊಳಗೆ ಇಣುಕಿ ನೋಡಿದರೆ ಕಾಣಿಸಿದ್ದು ಅಜ್ಜನ ನಿಟ್ಟುಸಿರು, ಅಮ್ಮನ ಕಣ್ಣೀರು, ಮಕ್ಕಳ ಬಿಕ್ಕಳಿಕೆ, ಒಂದೊಂದು ಕಣ್ಣೊಳಗೆ ಒಂದೊಂದು ಕಥೆ, ಒಂದೊಂದು ಮನದೊಳಗೆ ಒಂದೊಂದು ವ್ಯಥೆ ಎಲ್ಲಾ ಕಥಾಗುಚ್ಚಗಳು ತಿಳಿಸಿಕೊಡುತ್ತಿದೆ. ‘ರೌಡಿ ಆಗಿದ್ದವನು ರಿಯಲ್ ಹೀರೋ ಆಗಿಬಿಟ್ಟ’, ‘ಬ್ರೆಡ್ ಮಾರುತ್ತಿದ್ದವ ಹಲವರ ಬಾಳಿಗೆ ಬೆಳಕು ತಂದ’, ‘ಸವಾಲುಗಳಿಗೆ ಸವಾಲೆಸೆದ ಶಾಲಿನಿಗೆ ಸಲಾಂ’… ಹೀಗೆ ಅನೇಕ ಕಥೆಗಳು ಓದುಗ ವರ್ಗಕ್ಕೆ ಮಾದರಿಯಾಗಿ ಕಥಾ ನಾಯಕ ಮತ್ತು ನಾಯಕಿಯರು ನಿಲ್ಲುತ್ತಾರೆ. ಬದುಕು ವ್ಯರ್ಥ ಎಂದು ಭಾವಿಸಿ ಹೊರಟ ಅನೇಕರಿಗೆ ಇದು ಏನನ್ನಾದರೂ ಸಾಧಿಸುವ ಛಲವನ್ನು ಬದುಕುವ ಚೈತನ್ಯವನ್ನು ಮೂಡಿಸುತ್ತದೆ. ಕಥೆಯಲ್ಲಿ ಬರುವ ಪಾತ್ರಗಳೆಲ್ಲಾ ಬದುಕಿನ ಹಾದಿಗೆ ಹತ್ತಿರವಾಗುತ್ತಾರೆ. ಸೋಲು ಗೆಲುವಿನ ನಡುವೆ ಬದುಕನ್ನು ತೆಗೆದುಕೊಂಡು ಹೋಗುವ ದಾಟಿ ಕೆಲವರಿಗೆ ಬದುಕುವ ಹುಮ್ಮಸ್ಸನ್ನು ಮೂಡಿಸುತ್ತದೆ. ಸರಳ ಬರವಣಿಗೆಯ ಮೂಲಕ ಎ.ಆರ್. ಮಣಿಕಾಂತ್ ನಿರೂಪಣಾ ಶೈಲಿಯಿಂದ ಓದುಗರಿಗೆ ಹತ್ತಿರವಾಗುತ್ತಾರೆ.
ಬದುಕಿಗೆ ಪ್ರೇರಣೆ…
ಕಥೆಯಲ್ಲಿ ಬರುವ ತಿರುವುಗಳು ಮತ್ತು ಯಶಸ್ಸಿನ ಪಥವನ್ನು ಮನಮುಟ್ಟುವಂತೆ ಕಟ್ಟಿಕೊಳ್ಳುವುದು ಇವರ ಬರವಣಿಗೆಯ ವಿಶೇಷ. ಇಲ್ಲಿ ಕಥಾನಾಯಕ ಅಥವಾ ಕಥಾನಾಯಕಿಯೇ ಸ್ವತಃ ಜೀವನದಲ್ಲಿ ನಡೆದ ಏಳುಬೀಳಿನ ಹಾದಿಯ ಚಿತ್ರಣವನ್ನು ತೆರೆದಿಡುತ್ತಾರೆ. ಇಲ್ಲಿ ಬರುವ ಮುಖ್ಯ ಪಾತ್ರಗಳು ಕೂಡ ನಮ್ಮ ಸುತ್ತಮುತ್ತಲಿನ ಸಾಮಾನ್ಯ ಜನರು. ಬದುಕಿನಲ್ಲಿ ಯಾವುದೂ ಸಾಧ್ಯವಿಲ್ಲ ಎಂಬ ಪದಕ್ಕೆ ತದ್ವಿರುದ್ಧವಾಗಿ ಎಲ್ಲರ ಹುಬ್ಬೇರಿಸುವಂತೆ ಬೆಳೆದು ನಿಂತ ಸಾಮಾನ್ಯರು. ಸೋಲಿಗೆ ಸವಾಲೆಸೆಯುತ್ತ ಗೆಲುವಿನ ಕಿರೀಟವನ್ನು ಮುಡಿಗೇರಿಸಿಕೊಂಡ ಸಾಮಾನ್ಯರಲ್ಲಿ ಅಸಾಮಾನ್ಯರ ವ್ಯಕ್ತಿಗಳು. ‘ನವಿಲುಗರಿ’ ಹೊತ್ತಗೆಯಲ್ಲಿನ ಪ್ರತಿ ಕಥೆಯೂ ಹಲವರ ಬದುಕಿಗೆ ಪ್ರೇರಣೆ.

ಮತ್ತಷ್ಟು ಸುದ್ದಿಗಳು

vertical

Latest News

ಸೌತ್ ಆಫ್ರಿಕಾ ವಿರುದ್ಧ ಭಾರತಕ್ಕೆ ಸೋಲು

newsics.com ನವದೆಹಲಿ: ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಕೊನೆಯ ಟಿ-20 ಪಂದ್ಯದಲ್ಲಿ ಭಾರತ ಸೋಲು ಕಂಡಿದೆ. 227 ರನ್​​​ಗಳ ಬೃಹತ್ ಟಾರ್ಗೆಟ್ ಬೆನ್ನತ್ತಿದ ಇಂಡಿಯಾ ಆರಂಭದಿಂದಲೇ ಮುಗ್ಗರಿಸಿತು....

ದೇಶದ ಶೇ.90ಕ್ಕಿಂತ ಹೆಚ್ಚು ಸ್ಟಾರ್ಟ್‌ಅಪ್‌ಗಳು ವಿಫಲ: ಬಿಲಿಯನೇರ್ ಆನಂದ್ ಮಹೀಂದ್ರ

newsics.com ನವದೆಹಲಿ: ದೇಶದ ಶೇ.90ರಷ್ಟು ಸ್ಟಾರ್ಟ್‌ಅಪ್‌ಗಳು ವಿಫಲವಾಗಿವೆ ಎಂದು ಬಿಲಿಯನೇರ್ ಆನಂದ್ ಮಹೀಂದ್ರ ಹೇಳಿದ್ದಾರೆ. ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಟ್ವೀಟ್ ಮಾಡಿ, ಎಲ್ಲಾ ಸ್ಟಾರ್ಟ್‌ಅಪ್‌ಗಳಲ್ಲಿ 90% ಕ್ಕಿಂತ ಹೆಚ್ಚು ವಿಫಲವಾಗಿವೆ. ಒಂದು-ಆಫ್ ಸನ್ನಿವೇಶಗಳಿಂದಾಗಿ...

ಭೀಕರ ಅಪಘಾತ- 10 ಮಂದಿ ಸಾವು, 7 ಮಂದಿಗೆ ಗಾಯ

newsics.com ವಡೋದರ: ಭೀಕರ ರಸ್ತೆ ಅಪಘಾತದಲ್ಲಿ 10 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆ ಗುಜರಾತ್‌ನ ವಡೋದರ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ. ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ತ್ರಿಚಕ್ರ ವಾಹನವೊಂದಕ್ಕೆ ಕಂಟೈನರ್‌ ಟ್ರಕ್‌ ಡಿಕ್ಕಿ ಹೊಡೆದಿದೆ....
- Advertisement -
error: Content is protected !!