Wednesday, October 28, 2020

ಇವನ್ಯಾರ ಮಗನೋ…

♦ ಶುಭಶ್ರೀ ಭಟ್ಟ
[email protected]
[email protected]

ರಂಗಭೂಮಿ ಕಲಾವಿದನಾಗಿ, ಯಾವುದೇ ಬೃಹತ್ ಹಿನ್ನೆಲೆಯಿಲ್ಲದೇ, ತ್ರಿವಳಿ ‘ಖಾನ್’ಗಳ ದರ್ಬಾರಿನಲ್ಲಿ ತನ್ನದೇ ಛಾಪು ಮೂಡಿಸುವುದು ಸಣ್ಣ ಮಾತಾಗಿರಲಿಲ್ಲ. ಅಬ್ಬರಿಸಿ ಬೊಬ್ಬಿರಿಯುವ ಹೀರೋಯಿಸಂನ ಗಿಲ್ಮಿಟ್ ಇಲ್ಲದೇ, ತುಟಿಯಂಚಿನ ಕಿರುನಗು ಮತ್ತು ಕಣ್ಣಲ್ಲೇ ತನ್ನ ಭಾವವನ್ನೆಲ್ಲಾ ಅದ್ಭುತವಾಗಿ ತೆರೆದಿಡುವ ಕಲಾವಿದ ಇರ್ಫಾನ್.

===

ನಿನ್ನೆಯ ಸುದ್ದಿಯಿಂದ ಮನ ತಲ್ಲಣಿಸಿದೆ. ಅವ್ಯಕ್ತ ಭಾವದ ಬಿಕ್ಕಳಿಕೆಯೊಂದು ಎದೆಗೂಡಿನ ದಾರಿ ತಪ್ಪಿಸಿಕೊಂಡು ಬಿಟ್ಟಿದೆ. ಬಟ್ಟೆ ತೊಳೆಯುವಾಗಲೋ, ಅಡುಗೆಮನೆಯಲ್ಲಿ ಸೌಟು ತಿರುವಿದಾಗಲೋ, ಮರಿಗುಬ್ಬಿಯ ಮಲಗಿಸುವಾಗಲೋ ಫಕ್ಕನೆ ಅವನ ಮುಖ ಕಣ್ಮುಂದೆ ಬಂದು ದುಃಖವುಕ್ಕಿದೆ. ಸಾವಿನ ಸರಣಿಯು ಶುರುವಾಗಿ ತಿಂಗಳೇ ಆಯ್ತು, ಗಹಗಹಿಸಿ ನಗುವ ಅಂತಕರ ದೂತರು ಸಿಕ್ಕಸಿಕ್ಕವರನ್ನೆಲ್ಲಾ ಎಳೆದೊಯ್ಯುವಾಗ ನಾವೊಂದು ನೆಮ್ಮದಿಯ ಬದುಕ ಬಾಳಲಾದೀತೆ? ಆದರೆ ಬದುಕಲು ಅನಿವಾರ್ಯದ ಮರೆವು ಅತ್ಯಗತ್ಯ. ನಾನು ಹೆಚ್ಚಾಗಿ ಯಾರ ಸಾವಿನ ಕುರಿತೂ ಜಾಸ್ತಿ ಬರೆಯುವುದಿಲ್ಲ. ನಮ್ಮ ದುಃಖವೆಲ್ಲಿ ಕೃತ್ರಿಮವೆನಿಸಿಬಿಡುತ್ತದೋ, ಹೋದವರಿಗೆಲ್ಲಿ ಅಗೌರವ ಅನಿಸಿಬಿಡುತ್ತದೋ ಎಂಬ ಸಣ್ಣ ಹಿಂಜರಿಕೆ ನನಗೆ. ಸ್ವಂತ ಅಣ್ಣನಿಲ್ಲದ ನನಗೆ ಅಣ್ಣನಿಲ್ಲದ ಕೊರತೆ ನೀಗಿಸಿದ, ನನ್ನ ಮದುವೆಗೆ ಹೊದಲಕ್ಕಿ ಹೊಯ್ದಿದ್ದ, ನನ್ನ ಕಷ್ಟಕ್ಕೆ ಸದಾ ಮಿಡಿಯುವ ಶುದ್ಧ ಅಂತಃಕರಣದ ಜೀವವೊಂದು ಮರೆಯಾದಾಗಲೂ ನಾನು ಏನನ್ನೂ ಬರೆಯದಾದೆ. ಯಾವುದಕ್ಕೂ ಎದೆಗುಂದದೇ, ಕೊನೆಯ ತನಕ ಸ್ವಾಭಿಮಾನಿಯಾಗಿಯೇ ಬದುಕಿ ಆದರ್ಶಪ್ರಾಯಳಾದ ದೊಡ್ಡಮ್ಮ ಮೊನ್ನೆ ಹೋದಾಗಲೂ ನಾನು ಏನನ್ನೂ ಬರೆಯಲಿಲ್ಲ. ಆದರೆ ಇವನ ಬಗ್ಗೆ ಬರೆಯದೇ ಇದ್ದರೆ ಎದೆಯಲ್ಲಿ ಹೆಪ್ಪುಗಟ್ಟಿದ ನೋವು ಹಿಮವಾಗುವ ಭಯ, ಹಿಮಪಾತವಾಗಿಯಾದರೂ ಮಡುಗಟ್ಟಿದ ದುಃಖ ಕರಗಬಹುದೆಂಬ ಆಶಯ. ಅಷ್ಟಕ್ಕೂ ಅವನ್ಯಾರ ಮಗನೋ? ಅವನ್ಯಾರ ಪತಿಯೋ? ಅವನ್ಯಾರ ಅಪ್ಪನೋ? ಅವನ್ಯಾರ ಒಡಹುಟ್ಟಿದವನೋ? ಅವನು ಅಭಿನಯಿಸಿದ ಪಾತ್ರಗಳ ಹೊರತಾಗಿ ನಮಗೇನು ನಂಟಿತ್ತು ಅವನೊಡನೆ? ಸಿಟ್ಟಿನ ಸಿಡುಕ್ಲ, ಅಸಹಾಯಕ ಅಪ್ಪ, ಪ್ರೀತಿಸುವ ಜೀವ, ಅಮಾಯಕ ಹೀಗೆ ಸಾಮಾನ್ಯ ಜನರಿಗೂ ಹತ್ತಿರವಾದ ಪಾತ್ರಗಳಲ್ಲಿಯೇ ಅಭಿನಯಿಸಿ ನಮ್ಮೊಳಗೊಬ್ಬನಾಗಿದ್ದ ಎಂಬ ಸಹಜ ಭಾವವೊಂದು ಸಾಕಲ್ಲವೇ ಎದೆ ತುಂಬಲು.
ರಂಗಭೂಮಿ ಕಲಾವಿದನಾಗಿ, ಯಾವುದೇ ಬೃಹತ್ ಹಿನ್ನೆಲೆಯಿಲ್ಲದೇ, ತ್ರಿವಳಿ ‘ಖಾನ್’ಗಳ ದರ್ಬಾರಿನಲ್ಲಿ ತನ್ನದೇ ಛಾಪು ಮೂಡಿಸುವುದು ಸಣ್ಣ ಮಾತಾಗಿರಲಿಲ್ಲ. ಅಬ್ಬರಿಸಿ ಬೊಬ್ಬಿರಿಯುವ ಹೀರೋಯಿಸಂನ ಗಿಲ್ಮಿಟ್ ಇಲ್ಲದೇ, ತುಟಿಯಂಚಿನ ಕಿರುನಗು ಮತ್ತು ಕಣ್ಣಲ್ಲೇ ತನ್ನ ಭಾವವನ್ನೆಲ್ಲಾ ಅದ್ಭುತವಾಗಿ ತೆರೆದಿಡುವ ಕಲಾವಿದ ಇವನು. ತನ್ನ ಸಹಜಾಭಿನಯದಿಂದ, ತನ್ನ ಘನ ವ್ಯಕ್ತಿತ್ವದಿಂದ ಜನರಿಗೆಷ್ಟು ಆಪ್ತವಾಗಿದ್ದ ಎಂಬುದು ನಿನ್ನೆಯಿಂದ ಸೋಶಿಯಲ್ ಮೀಡಿಯಾದಲ್ಲಿ ಸಾಗರದಂತೇ ಹರಿದು ಬರುತ್ತಿರುವ ಶೃದ್ಧಾಂಜಲಿ ಪೋಸ್ಟುಗಳೇ ಸಾಕ್ಷಿ. ಈ ‘ಇರ್ಫಾನ್ ಖಾನ್’ ಎಂಬ ಧೈತ್ಯ ಪ್ರತಿಭೆಯೊಂದು ಭೌತಿಕವಾಗಿ ಮರೆಯಾಗಿರಬಹುದು, ಆದರೆ ತನ್ನ ಕಲಾತ್ಮಕ ನಟನೆಯಿಂದ ಸದಾ ಜೀವಂತವಾಗಿಯೇ ಇರ್ತಾನೆ ಎಂದೆಲ್ಲಾ ನಮಗೆ ನಾವೇ ತಲೆಸವರಿಕೊಂಡು ನಿಡುಸುಯ್ಯಬೇಕು ಅಷ್ಟೇ. ನಿನ್ನೆ ಇದ್ದವ ಇವತ್ತಿಲ್ಲ ಎಂಬುದನ್ನು ನಮಗೇ ಅರಗಿಸಿಕೊಳ್ಳಲಾಗ್ತಿಲ್ಲ, ಇನ್ನು ಅವನ ಕುಟುಂಬಕ್ಕೆ ಅದೆಂತಹ ಘಾಸಿಯಾಗಿರಬಹುದೆಂದು ಊಹಿಸಲೂ ಸಾಧ್ಯವಿಲ್ಲ. ಕೈ ಸೋಲ್ತಿದೆ, ಅಕ್ಷರಗಳು ನೆನೆಯುತ್ತಿದೆ, ಮತ್ತೆ ಜಾಸ್ತಿ ಬರೆಯಲು ಸಾಧ್ಯವೇ ಇಲ್ಲ. ಅಂತಿಮ ನಮನ ಅಂತೆಲ್ಲಾ ಖಂಡಿತಾ ಬರೆಯಲಾರೆ. ನಮ್ಮ ಜೀವನದಲ್ಲಿ ಈ ರೀತಿ ಹಾಸುಹೊಕ್ಕಾಗಿದ್ದಕ್ಕೆ, ಅದನ್ನು ಮನವರಿಕೆ ಮಾಡಿಕೊಟ್ಟು ತೆರಳಿದ್ದಕ್ಕೆ ಅವನಿಗೊಂದಿಷ್ಟು ಪ್ರೀತಿ ಅಷ್ಟೇ.

ಮತ್ತಷ್ಟು ಸುದ್ದಿಗಳು

Latest News

ಪ್ರೊಫೆಸರ್ ಹತ್ಯೆ ಪ್ರಕರಣ: ಖ್ಯಾತ ಗಾಯಕಿ ಅನನ್ಯ ಭಟ್ ತಂದೆ ಬಂಧನ

newsics.com ಮೈಸೂರು: ಸಾಂಸ್ಕೃತಿಕ ನಗರ ಮೈಸೂರನ್ನು ಬೆಚ್ಚಿ ಬೀಳಿಸಿದ್ದ ಪ್ರೊಫೆಸರ್ ಪರಶಿವಮೂರ್ತಿ ಹತ್ಯೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಹತ್ಯೆಗೆ ಸುಫಾರಿ ನೀಡಿದ್ದ ಆರೋಪದ ಹಿನ್ನೆಲೆಯಲ್ಲಿ ಖ್ಯಾತ ಗಾಯಕಿ ಅನನ್ಯ...

ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: 65 ಸಾಧಕರಿಗೆ ಪ್ರಶಸ್ತಿ ಗೌರವ

Newsics.com ಬೆಂಗಳೂರು: ರಾಜ್ಯದ ಪ್ರತಿಷ್ಠಿತ  2020ರ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಸಂಘ ಸಂಸ್ಥೆಗಳು, ಸಾಧಕರು ಸೇರಿದಂತೆ 65 ಮಂದಿಗೆ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ.  ಬೆಂಗಳೂರಿನಲ್ಲಿ  ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ ಟಿ ರವಿ ...

ಎನ್‌ಐಎನಿಂದ ಬೆಂಗಳೂರಲ್ಲಿ ಇನ್ನಿಬ್ಬರು ಶಂಕಿತ ಉಗ್ರರ ಬಂಧನ

newsics.comಬೆಂಗಳೂರು: ನಗರದಲ್ಲಿ ಶಂಕಿತ ಐಸಿಸ್ ಉಗ್ರರ ಭೇಟೆ ಮುಂದುವರಿಸಿರುವ ಎನ್‌ಐಎ ಅಧಿಕಾರಿಗಳ ತಂಡ, ಇದೀಗ ಇನ್ನಿಬ್ಬರು ಶಂಕಿತರನ್ನು ಬಂಧಿಸಿದೆ.ಬೆಂಗಳೂರಿನ ಥಣಿಸಂದ್ರದಲ್ಲಿರುವ ನಿವಾಸವೊಂದರ ಮೇಲೆ ದಾಳಿ ನಡೆಸಿರುವ ದೆಹಲಿ ಎನ್‌ಐಎ ಟೀಮ್,...
- Advertisement -
- Advertisement -
error: Content is protected !!