Monday, April 12, 2021

ಓದಲು ಯಾವ ಸಮಯ ಬೆಸ್ಟ್?

 2 

ಸಮಯದ ಬೆಲೆ ತಿಳಿದವರಿಗೆ ಎಲ್ಲದಕ್ಕೂ ಸಮಯವಿರುತ್ತದೆ. ಅಂದರೆ, ಸಮಯದ ಬೆಲೆ ಅರಿತ ವಿದ್ಯಾರ್ಥಿಗೆ ದಿನದ ಕೆಲಸಗಳ ಜತೆಗೇ ಎಲ್ಲ ವಿಷಯಗಳನ್ನೂ ಓದಿಕೊಳ್ಳಲು ಸಮಯ ಸಿಗುತ್ತದೆ.
 
♦ ಸುಮನಾ ಲಕ್ಷ್ಮೀಶ
ಆಪ್ತ ಸಮಾಲೋಚಕರು
response@134.209.153.225
newsics.com@gmail.com

ಲ್ಲ ಕಾಲಕ್ಕೂ ಸಮಯ ಅಮೂಲ್ಯ. ಆದರೆ, ಪರೀಕ್ಷಾ ಸಮಯದಲ್ಲಿ, ಅದರ ಮೌಲ್ಯ ಇನ್ನಷ್ಟು ಹೆಚ್ಚಾಗುತ್ತದೆ! ಇರುವ ಸಮಯದಲ್ಲೇ ಎಲ್ಲವನ್ನೂ ಓದಿಕೊಳ್ಳುವ ಆತುರ ವಿದ್ಯಾರ್ಥಿಗಳಲ್ಲಿ ಹೆಚ್ಚಾಗಿ, `ಎಷ್ಟು ಕಡಿಮೆ ಅವಧಿಯಿದೆಯಲ್ಲ’ಎನಿಸುತ್ತದೆ. ವರ್ಷದ ಮೊದಲಿನಿಂದಲೇ ಓದಿಕೊಂಡಿದ್ದರೆ, ಈ ಸಮಯದಲ್ಲಿ ಒತ್ತಡ ಮಾಡಿಕೊಳ್ಳಬೇಕಿರಲಿಲ್ಲವಲ್ಲ ಎಂದು ಪರಿತಪಿಸುವಂತೆ ಮಾಡುತ್ತದೆ. ಭಯ ಬೇಡ, ಈಗಲೂ ಕಾಲ ಮಿಂಚಿಲ್ಲ. ಸಮಯವನ್ನು ಹೊಂದಾಣಿಕೆ ಮಾಡಿಕೊಂಡು ಓದಿದರಾಯಿತು.
ಅನೇಕ ವಿದ್ಯಾರ್ಥಿಗಳು ಸಾಮಾನ್ಯವಾಗಿ ಓದಿಗೆ ರಾತ್ರಿ ಸಮಯವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಸಂಜೆಯ ಹೊತ್ತು ಟಿವಿ ನೋಡುವುದೋ, ಆಟವಾಡುವುದೋ ಮಾಡಿಕೊಂಡಿದ್ದು, ರಾತ್ರಿ ಊಟದ ಬಳಿಕ ಓದಿಗೆ ಕುಳಿತುಕೊಳ್ಳುತ್ತಾರೆ. ಆದರೆ, ಮಿದುಳು ಚುರುಕಾಗಿ ಕೆಲಸ ಮಾಡುವುದು ಬೆಳಗಿನ ಸಮಯದಲ್ಲಿ! 6-7 ತಾಸು ನಿದ್ದೆ ಮಾಡಿ ಎದ್ದ ನಂತರ ಮಿದುಳು ಉತ್ಸಾಹಭರಿತವಾಗಿರುತ್ತದೆ. ಓದಿದ ವಿಷಯ ನೆನಪಿನಲ್ಲಿರುವುದಕ್ಕೆ ಮಿದುಳಿನ ಈ ಉತ್ಸಾಹದ ಕೊಡುಗೆ ಅನನ್ಯ.
ಆದರೂ, ಕೆಲವೊಮ್ಮೆ ಎಲ್ಲರಿಗೂ ಈ ವಿಧಾನ ಹೊಂದಾಣಿಕೆ ಆಗುವುದಿಲ್ಲ, ಹೀಗಾಗಿ, ನಿಮಗೆ ಸರಿ ಹೊಂದುವ ಸಮಯವನ್ನೇ ಆಯ್ಕೆ ಮಾಡಿಕೊಳ್ಳಿ.

ನಿದ್ರಾ ಸಮಸ್ಯೆಗೆ ನಿದ್ರೆಯೇ ಪರಿಹಾರ!
ಓದಬೇಕು ಎಂದಾಗ ಮೊದಲು ಕಾಣಿಸಿಕೊಳ್ಳುವ ಸಮಸ್ಯೆ ಎಂದರೆ ನಿದ್ರೆಯದ್ದು. ಯಾವಾಗ ನಿದ್ರಿಸಬೇಕು? ಯಾವಾಗ ಓದಬೇಕು ಎಂದು. ಏಕೆಂದರೆ ಓದುವಾಗ ನಿದ್ರೆ ಬರುವುದು ತುಂಬ ಮಕ್ಕಳ ಸಮಸ್ಯೆ. ಕೆಲವು ಮಕ್ಕಳು ಎಷ್ಟು ಹೊತ್ತಿಗೆ ಓದಬೇಕು, ಯಾವ ಸಮಯಕ್ಕೆ ಮಲಗಬೇಕು ಎನ್ನುವುದನ್ನೂ ತಮ್ಮ ಟೈಮ್ ಟೇಬಲ್’ನಲ್ಲಿ ಸೇರಿಸಿಕೊಳ್ಳುತ್ತಾರೆ. ಆದರೆ, ಓದಿದ್ದನ್ನು ಹೇಗಾದರೂ ನೆನಪಲ್ಲಿರಿಸಿಕೊಳ್ಳುವುದು ಮುಖ್ಯವೇ ಹೊರತು, ಯಾವ ಸಮಯದಲ್ಲಿ ಓದುತ್ತೇವೆ ಎನ್ನುವುದು ಮುಖ್ಯವಲ್ಲ.
ನಿದ್ರೆಯ ಸಮಸ್ಯೆ ಇರುವವರು ಈ ತಂತ್ರವನ್ನು ಅನುಸರಿಸಬಹುದು. ರಾತ್ರಿಯ ಬಳಿಕ ಓದಲು ಕುಳಿತುಕೊಳ್ಳುವ ಬದಲು ಬೆಳಗ್ಗೆ, ಮಧ್ಯಾಹ್ನ, ಸಂಜೆ ಓದಿಕೊಳ್ಳಬಹುದು. ಒಂದು ವೇಳೆ ನಿಮಗೆ ರಾತ್ರಿ ಹತ್ತು ಗಂಟೆಗೇ ನಿದ್ರೆ ಬಂತು ಎಂದಾದರೆ ತಲೆಕೆಡಿಸಿಕೊಳ್ಳಬೇಡಿ. ಎರಡು ಗಂಟೆ ಮಲಗಿಬಿಡಿ. ಓದಬೇಕು ಎನಿಸಿದರೆ 12 ಗಂಟೆಯ ಹೊತ್ತಿಗೆ ಎದ್ದು ಓದಬಹುದು! ಅಚ್ಚರಿ ಬೇಡ, 2 ಗಂಟೆಗಳ ನಿದ್ರೆ ಮಿದುಳನ್ನು ಸಾಕಷ್ಟು ಫ್ರೆಶ್ ಮಾಡುತ್ತದೆ. ಓದುವ ಮಧ್ಯೆ ತುಂಬ ನಿದ್ರೆ ಬರುವಂತಾದರೆ ಕೇವಲ ಹತ್ತೇ ನಿಮಿಷಗಳ ನಿದ್ರೆ ಮಾಡಿಯೂ ಉಲ್ಲಸಿತರಾಗಬಹುದು. ಪ್ರತಿ ಬಾರಿ ನಿದ್ರೆ ಮಾಡಿ ಎದ್ದಾಗಲೂ ದೇಹದಲ್ಲಿರುವ ನ್ಯೂರಾನುಗಳು ಉತ್ಸಾಹದಿಂದ ಇರುತ್ತವೆಯಂತೆ. ಇದಕ್ಕೆ ಸಮಯವನ್ನು ವಿಂಗಡಿಸುವ ತಂತ್ರವೆನ್ನುತ್ತಾರೆ. ಇದರಿಂದ ಶೇ.100 ರಷ್ಟು ಏಕಾಗ್ರತೆ ಸಾಧಿಸಲು ಸಾಧ್ಯ ಎನ್ನುವುದು ಎಂದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ.
ಇದು ನಿಮಗೆ ಗೊತ್ತಿರಲಿ…
ಎರಡು ತಾಸಿಗಿಂತ ಅಧಿಕ ಸಮಯ ನಿರಂತರವಾಗಿ ಓದಿದರೆ ಏಕಾಗ್ರತೆ ಕ್ಷೀಣಿಸುತ್ತದೆ.
ಅಗತ್ಯವಾದಾಗ ನಿದ್ರೆ ಮಾಡುವುದರಿಂದ ರಾತ್ರಿ ಸಮಯವನ್ನು ಚೆನ್ನಾಗಿ ಬಳಸಿಕೊಳ್ಳಬಹುದು ಹಾಗೂ ಇದರಿಂದ ರಾತ್ರಿಯ ಹೊತ್ತು ಎಷ್ಟು ದೀರ್ಘವಾಗಿದೆ ಎನಿಸುತ್ತದೆ.
ರಾತ್ರಿ ಇಷ್ಟು ಹೊತ್ತು ಓದಲೇಬೇಕು, ಬೆಳಗ್ಗೆ ಇಷ್ಟೊತ್ತಿಗೆ ಏಳಲೇಬೇಕು ಎನ್ನುವ ನಿಯಮಗಳನ್ನು ಹಾಕಿಕೊಳ್ಳಬೇಡಿ. ಆದರೆ, ಓದುವ ಸಮಯದಲ್ಲಿ ಏಕಾಗ್ರತೆ ಇರಲಿ.

 ಮುಂದುವರಿಯುವುದು… 

ಮತ್ತಷ್ಟು ಸುದ್ದಿಗಳು

Latest News

4 ಕೋಟಿ ರೂಪಾಯಿ ಹಣದೊಂದಿಗೆ ಪರಾರಿಯಾದ ಸೆಕ್ಯೂರಿಟಿ ಗಾರ್ಡ್

newsics.com ಚಂಢೀಗಢ: ಪಂಜಾಬಿನ ಚಂಢೀಗಢದಲ್ಲಿ ಬ್ಯಾಂಕ್ ಭದ್ರತಾ ಸಿಬ್ಬಂದಿಯೊಬ್ಬರು 4 ಕೋಟಿ 4 ಲಕ್ಷ ರೂಪಾಯಿ ಜತೆ ಪರಾರಿಯಾಗಿದ್ದಾರೆ. ಸೆಕ್ಟರ್ 34 ಎ ಯಲ್ಲಿ ಈ ಪ್ರಕರಣ...

ಅಪ್ರಾಪ್ತ ಬಾಲಕಿಗೆ ಚುಂಬನ: ಯುವಕನಿಗೆ ಒಂದು ವರ್ಷ ಜೈಲು

newsics.comಮುಂಬೈ: ಅಪ್ರಾಪ್ತ ಬಾಲಕಿಗೆ ಕಣ್ಣು ಹೊಡೆದಿದ್ದಲ್ಲದೆ ಚುಂಬಿಸಿದ್ದಕ್ಕಾಗಿ 20 ವರ್ಷದ ಯುವಕನಿಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ 15 ಸಾವಿರ ರೂ. ದಂಡ ವಿಧಿಸಿ  ಮುಂಬೈ ವಿಶೇಷ ನ್ಯಾಯಾಲಯ...

ಏಕಲವ್ಯ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಶಿಲ್ಪಾ ಆತ್ಮಹತ್ಯೆ

newsics.comಬೆಂಗಳೂರು: ಏಕಲವ್ಯ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಶಿಲ್ಪಾ(41) ಆತ್ಮಹತ್ಯೆಗೆ ಶರಣಾಗಿದ್ದಾರೆ.ತಾಯಿಯ ಸಾವು, ಮಕ್ಕಳಿಲ್ಲವೆಂಬ, ಉದ್ಯೋಗವಿರಲಿಲ್ಲವೆಂಬ ಆತಂಕದಿಂದ ಮಾನಸಿಕ‌ ಖಿನ್ನತೆಗೊಳಗಾಗಿದ್ದ ಶಿಲ್ಪಾ ಡೆತ್ ನೋಟ್ ಬರೆದಿಟ್ಟು ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ...
- Advertisement -
error: Content is protected !!