Saturday, March 6, 2021

ಕಾಡಿನ ರಾಜ

  • ವೆಂಕಟೇಶ ಚಾಗಿ

ಮಗದಪುರ ಎಂಬ ರಾಜ್ಯದಲ್ಲಿ ಮಗಧ ರಾಜ ಎಂಬ ದೊರೆ ರಾಜ್ಯವನ್ನಾಳುತ್ತಿದ್ದ . ಮಗದ ರಾಜನು ತುಂಬಾ ಲೋಭಿತನದ ಗುಣವನ್ನು ಹೊಂದಿದ್ದನು. ಅಕ್ಕಪಕ್ಕದ ರಾಜ್ಯಗಳ ಮೇಲೆ ದಂಡೆತ್ತಿ ಹೋಗಿ ನಗನಾಣ್ಯ ಸಂಪತ್ತನ್ನು ಲೂಟಿ ಮಾಡಿಕೊಂಡು ಬರುತ್ತಿದ್ದನು. ರಾಜ್ಯದ ಪ್ರಜೆಗಳಿಗೂ ಮಿತಿಮೀರಿದ ತೆರಿಗೆಯನ್ನು ವಿಧಿಸಿ ಪ್ರಜೆಗಳಿಂದ ವಿನಾಕಾರಣ ಸುಲಿಗೆ ಮಾಡುತ್ತಿದ್ದ ರಾಜ್ಯದ ಜನರು ಬರಗಾಲದಂತಹ ಕಷ್ಟದಲ್ಲಿದ್ದಾಗ ಅವರ ಕಷ್ಟಗಳಿಗೆ ಸ್ಪಂದಿಸದೆ ವಿಲಾಸಿ ಜೀವನ ನಡೆಸುತ್ತಿದ್ದ. ಮಗದ ರಾಜನು ಭೂಮಿಯ ಮೇಲೆ ತಾನೊಬ್ಬನೇ ಏಕೈಕ ರಾಜನಾಗಬೇಕು ಎಂದು ಬಯಸುತ್ತಿದ್ದ. ಎಲ್ಲರೂ ತನ್ನನ್ನು ಭೂಲೋಕದೊಡೆಯ ಎಂದು ಕರೆಯಬೇಕೆಂದು ಬಯಸುತ್ತಿದ್ದ. ಇನ್ನೊಬ್ಬ ರಾಜ ಈ ಭೂಮಿಯ ಮೇಲೆ ಇರಬಾರದು ಎಂದು ಹೇಳಿಕೊಳ್ಳುತ್ತಿದ್ದ.

ಮಗದ ಪುರದ ರಾಜ್ಯದಲ್ಲಿ ಸುಂದರವನ ಎಂಬ ಅತ್ಯಂತ ದೊಡ್ಡದಾದ ಸುಂದರವಾದ ಗೊಂಡಾರಣ್ಯವಿತ್ತು. ಅಲ್ಲಿ ಸಾವಿರಾರು ಪಕ್ಷಿಗಳು ಪ್ರಾಣಿಗಳು ವಾಸವಾಗಿದ್ದವು . ಬಗೆ ಬಗೆ ಮರಗಿಡಗಳು ಇದ್ದವು. ಆ ಕಾಡಿನಲ್ಲಿ ಹುಲಿ ಸಿಂಹ ಚಿರತೆ ಕಾಡುಪ್ರಾಣಿಗಳು , ಜಿಂಕೆ ಆನೆ ಕಡಿಮೆ ಮುಂತಾದ ಪ್ರಾಣಿಗಳು ಇದ್ದವು. ಎಲ್ಲರೂ ಕಾಡಿನ ನಿಯಮದಂತೆ ತಮ್ಮ ವ್ಯಾಪ್ತಿಗೆ ಒಳಪಟ್ಟು ಜೀವನವನ್ನು ನಡೆಸುತ್ತಿದ್ದವು . ಜಲಪಾತಗಳಿಂದ , ನದಿಗಳಿಂದ, ಎತ್ತರವಾದ ಮರಗಳಿಂದ ನಿತ್ಯಹರಿದ್ವರಣದ ಸಸ್ಯಗಳಿಂದ ತುಂಬಾ ಸುಂದರವಾಗಿ ಕಣ್ಮನ ಸೆಳೆಯುವಂತಿತ್ತು . ಆ ಕಾಡಿನ ರಾಜ ಸಿಂಹ . ಪ್ರಾಣಿಗಳು ಅವನನ್ನು ತಮ್ಮ ಏಕೈಕ ಮಹಾರಾಜ ಎಂದು ಕರೆಯುತ್ತಿದ್ದವು. ರಾಜನೂ ಸಹ ಯಾರಿಗೂ ವಿನಾಕಾರಣ ತೊಂದರೆ ಕೊಡದೆ ಕಾಡಿನ ರಕ್ಷಣೆಯನ್ನು ಮಾಡುತ್ತಿದ್ದನು.

ನಾಡಿನ ರಾಜನಾದ ಮಗಧ ರಾಜನು ತಾನು ತನ್ನ ನಾಡಿಗೆ ಮಾತ್ರ ಮಹಾರಾಜನಾಗಿರುವುದು ಅವನಿಗೆ ಸಮಾಧಾನ ನೀಡಲಿಲ್ಲ . ಕಾಡಿನಲ್ಲಿಯೂ ತಾನೇ ರಾಜನಾಗಬೇಕು ಎಂಬ ದುರಾಸೆಯನ್ನು ಬೆಳೆಸಿಕೊಂಡನು. ತನ್ನ ಆಸೆಯನ್ನು ತನ್ನ ಮಂತ್ರಿಗಳ ಆಪ್ತರ ಮುಂದೆ ಹೇಳಿಕೊಂಡನು. ಎಲ್ಲರೂ ರಾಜನ ಆಸೆಗೆ ಹಿಂದೇಟು ಹಾಕಿದರು. ಕಾಡಿನ ರಾಜ ಸಿಂಹ. ಅವನನ್ನು ಸೋಲಿಸುವುದು ತುಂಬಾ ಕಷ್ಟ . ಸೋಲಿಸಿದರೂ ಎಲ್ಲ ಪ್ರಾಣಿಗಳು ತಮ್ಮನ್ನು ರಾಜನೆಂದು ಒಪ್ಪಿಕೊಳ್ಳಲು ಸಾದ್ಯವಿಲ್ಲ. ಎಲ್ಲಾ ಪ್ರಾಣಿಗಳು ಖಂಡಿತವಾಗಿಯೂ ದಂಗೆ ಹೇಳುತ್ತೇವೆ. ಇದರಿಂದ ನಾಡಿನ ಪ್ರಜೆಗಳಿಗೆ ತುಂಬಾನೇ ಹಾನಿ ಉಂಟಾಗಬಹುದು ಎಂದು ಸಲಹೆ ನೀಡಿದರು . ದುರಾಸೆ ಪೂರಿತ ರಾಜ ಯಾರ ಮಾತನ್ನು ಕೇಳಲಿಲ್ಲ. ತನ್ನ ಸೈನ್ಯವನ್ನು ತೆಗೆದುಕೊಂಡು ಕಾಡಿನ ಪ್ರಾಣಿಗಳ ವಿರುದ್ಧ ಯುದ್ದಕ್ಕೆ ತೆರಳಿದನು.

ಮಗಧ ರಾಜನು ಕಾಡಿನ ರಾಜನ ಮೇಲೆ ಯುದ್ಧಕ್ಕೆ ಬರುತ್ತಿದ್ದಂತೆಯೇ ಕಾಡಿನ ಪ್ರಾಣಿಗಳು ಎಚ್ಚೆತ್ತುಕೊಂಡವು. ಎಲ್ಲವೂ ಒಟ್ಟಾಗಿ ಮಗಧ ರಾಜನ ಮೇಲೆ ದಾಳಿ ಮಾಡಿದವು ಸಣ್ಣ ಪುಟ್ಟ , ಪುಟ್ಟ ದೊಡ್ಡ ಪ್ರಾಣಿಗಳೆಲ್ಲ ಮಗಧ ರಾಜನ ಮೇಲೆ ನಾನಾ ರೀತಿಯಲ್ಲಿ ದಾಳಿ ಮಾಡಿದಾಗ ಮಗದ ರಾಜನ ಸೈನ್ಯ ದಿಕ್ಕಾ ಪಾಲಾಗಿ ಓಡಿಹೋಯಿತು. ಮಗಧ ರಾಜನಿಗೆ ಸೋಲುಂಟಾಯಿತು. ಇಷ್ಟಕ್ಕೆ ನಿಲ್ಲದೇ ಪ್ರಾಣಿಗಳು ರಾಜನನ್ನು ನಾಡಿನವರೆಗೂ ಅಟ್ಟಿಸಿಕೊಂಡು ಬಂದು ನಾಡಿನ ಹೊಲ ಗದ್ದೆ ತೋಟಗಳ ಮೇಲೆ, ನಾಡಿನ ಜನ ಹಾಗೂ ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡಿದವು. ಮಗದರಾಜನು ಕಾಡು ಪ್ರಾಣಿಗಳ ದಾಳಿ ದಿಕ್ಕೆಟ್ಟು ಹೋದನು. ರಾಜನಿಗೆ ತನ್ನ ತಪ್ಪಿನ ಅರಿವಾಗತೊಡಗಿತು. ಮಗದರಾಜನು ತನ್ನ ಸೋಲನ್ನು ಒಪ್ಪಿಕೊಂಡು ಕಾಡಿನ ರಾಜ ಸಿಂಹಕ್ಕೆ ತನ್ನ ನಾಡನ್ನು ಕಾಪಾಡು ಎಂದು ಬೇಡಿಕೊಂಡನು. ಆನಂತರ ನಾಡಿನ ರಾಜನಿಗೂ ಕಾಡಿನ ರಾಜನಿಗೂ ಒಂದು ಒಪ್ಪಂದವಾಯಿತು. ಕಾಡಿಗೆ ಯಾರೂ ದಂಡೆತ್ತಿ ಬರುವಹಾಗಿಲ್ಲ. ಕಾಡು ಪ್ರಾಣಿಗಳಿಗೆ ಹಿಂಸೆ ನೀಡುವಂತಿಲ್ಲ. ಎಂದು ಮಗದರಾಜ ಒಪ್ಪಂದ ಮಾಡಿಕೊಂಡು ಈ ವಿಷಯವನ್ನು ನಾಡಿನ ಜನರಿಗೆ ಡಂಗುರ ಸಾರುವುದರ ಮೂಲಕ ತಿಳಿಸಿದನು. ಅಂದಿನಿಂದ ಕಾಡಿನ ರಾಜನಾಗಿ ಸಿಂಹವೇ ಮೆರೆಯಿತು.

ಮತ್ತಷ್ಟು ಸುದ್ದಿಗಳು

Latest News

ಮೂರು ತಿಂಗಳಲ್ಲಿ ಒಕ್ಕಲಿಗರ ಸಂಘಕ್ಕೆ ಚುನಾವಣೆ ನಡೆಸಿ: ಹೈಕೋರ್ಟ್

newsics.comಬೆಂಗಳೂರು: ಇನ್ನು ಮೂರು ತಿಂಗಳಲ್ಲಿ ರಾಜ್ಯ ಒಕ್ಕಲಿಗರ ಸಂಘಕ್ಕೆ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಆದೇಶಿಸಿದೆ.ಶುಕ್ರವಾರ(ಮಾ.5) ಈ ಆದೇಶ ನೀಡಿದೆ. ಸಂಘಕ್ಕೆ...

ಮಗನನ್ನು ಪದವಿವರೆಗೆ ಓದಿಸುವುದು ತಂದೆಯ ಕರ್ತವ್ಯ- ಸುಪ್ರೀಂ ತೀರ್ಪು

newsics.comನವದೆಹಲಿ: ತಂದೆಯಾದವನು ಪುತ್ರನಿಗೆ 18 ವರ್ಷ ವಯಸ್ಸಾಗುವವರೆಗೆ ಆತನ ಖರ್ಚನ್ನಷ್ಟೇ  ನೋಡಿಕೊಂಡರೆ ಸಾಲದು. ಆತ ತನ್ನ ಮೊದಲ ಪದವಿ ಪಡೆಯುವವರೆಗೂ ಖರ್ಚನ್ನು ನಿಭಾಯಿಸಬೇಕು ಎಂದು ತೀರ್ಪು ನೀಡಿದೆ.ನ್ಯಾಯಮೂರ್ತಿಗಳಾದ ಧನಂಜಯ್ ಚಂದ್ರಚೂಡ್...

ವೇಳಾಪಟ್ಟಿ ಬದಲು; ಮೇ 4ರಿಂದ ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆ

newsics.comನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ( ಸಿಬಿಎಸ್‌ಇ ) ಸಿಬಿಎಸ್‌ಇ ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಮೇ 4 ರಿಂದ 10ನೇ ತರಗತಿ ಪರೀಕ್ಷೆಗಳು ಪ್ರಾರಂಭವಾಗಲಿವೆ.ಮೇ 14 ರಂದು...
- Advertisement -
error: Content is protected !!