Saturday, July 31, 2021

ಕೊಕ್ಕರೆ ಹಾಗೂ ಹುಲಿ

Follow Us

ಒಂದಾನೊಂದು ಕಾಲದಲ್ಲಿ ದಟ್ಟ ಅರಣ್ಯದ ಹೃದಯಭಾಗದಲ್ಲಿ ಸುಂದರ ನದಿಯೊಂದು ಹರಿಯುತಿತ್ತು..ಅದರ ದಡದಲ್ಲಿ ಕೊಕ್ಕರೆಯೊಂದು ವಾಸವಾಗಿತ್ತು.. ಅಲ್ಲೇ ಸಮೀಪದ ಗುಹೆಯೊಂದರಲ್ಲಿ ಹುಲಿಯು ತನ್ನ ಸಂಸಾರದೊಂದಿಗೆ ವಾಸಿಸುತ್ತಿತ್ತು..ಹುಲಿಯ ಮರಿ ಹುಟ್ಟಿದ ದಿನದಂದೇ
ಕೊಕ್ಕರೆಯ ಮರಿಯು ಮೊಟ್ಟೆಯೊಡೆದು ಹೊರಬಂದಿತ್ತು..ಅಂದು ನದಿಯ ತೀರಕ್ಕೆ ನೀರು ಕುಡಿಯಲು ಬಂದಿದ್ದ ಹುಲಿಯ ದಂಪತಿಗಳನ್ನು ಬೇಟೆಗಾರ ಕೊಂದನು.. ಹುಲಿಮರಿ ಅನಾಥವಾಯಿತು.. ಇದನ್ನು ನೋಡಿದ ಕೊಕ್ಕರೆಗೆ ಹುಲಿಮರಿಯ ಮೇಲೆ ಮರುಕ ಹುಟ್ಟಿತು..ಅದು ತನ್ನ ಮರಿಯೊಡನೇ ಹುಲಿಮರಿಯನ್ನೂ ಸಾಕಲು ನಿರ್ಧರಿಸಿತು… ಅಂದಿನಿಂದ ಹುಲಿಮರಿಗೆ ತಾನೇ ಮೀನು, ಏಡಿಗಳನ್ನು ತಂದು ತಿನ್ನಲು ಕೊಡುತಿತ್ತು..ತನ್ನ ಮರಿಯಂತೆಯೇ ಅದನ್ನು ಬಹಳ ಪ್ರೀತಿಯಿಂದ ಸಾಕಿತು.. ಕೊಕ್ಕರೆಯ ಮರಿ ಹಾಗೂ ಹುಲಿಮರಿ ಇಬ್ಬರೂ ಒಟ್ಟಿಗೆ ಆಡವಾಡುತ್ತಾ, ಊಟ ಮಾಡುತ್ತಾ ಅನ್ಯೋನ್ಯವಾಗಿದ್ದರು..
ಇದನ್ನು ಕಂಡು ತಾಯಿ ಕೊಕ್ಕರೆ ಒಳಗೊಳಗೇ ಹೆಮ್ಮೆಪಡುತಿತ್ತು..

ದಿನಗಳು ಉರುಳಿದವು ..ಒಂದು ದಿನ ತಾಯಿ ಕೊಕ್ಕರೆ ಆಹಾರ ಹುಡುಕಲು ಹಾರಿ ಹೋಯಿತು.. ಅದೇ ಸಮಯಕ್ಕೆ ಎಲ್ಲಿಂದಲೋ ಹಾರಿ ಬಂದ ದೈತ್ಯ ಕೊಕ್ಕರೆಯೊಂದು ಆಟವಾಡುತಿದ್ದ ಕೊಕ್ಕರೆ ಮರಿಯ
ಮೇಲೆರಗಿ ಅದನ್ನು ಹಿಂಸಿಸಲು ಪ್ರಾರಂಭಿಸಿತು… ಅದನ್ನು ಕಂಡ ಹುಲಿಮರಿ ಕೆರಳಿತು… ಕೋಪದಿಂದ ಘರ್ಜಿಸುತ್ತಾ ಒಮ್ಮೆಲೆ ದೈತ್ಯ ಕೊಕ್ಕರೆಯ ಮೇಲೆರಗಿ ಅದನ್ನು ಒಂದೇ ಬಾರಿಗೆ ನುಂಗಿ ಹಾಕಿತು.. ಅದರ ಮಾಂಸದ ರುಚಿ ಕಂಡ ಹುಲಿ ” ಆಹಾ! ಎಷ್ಟು ಸ್ವಾದಿಷ್ಟಕರವಾಗಿದೆ ಕೊಕ್ಕರೆಯ ಮಾಂಸದ ರುಚಿ!??” ಎಂದು ಉದ್ಗರಿಸಿತು.. ಇದನ್ನೆಲ್ಲ ಕಂಡು ನಡುಗುತ್ತಾ ನಿಂತಿದ್ದ ಕೊಕ್ಕರೆ ಮರಿಯ ಕಡೆ ತಿರುಗಿ
” ನೋಡು! ನಾನೆಷ್ಟು ನಿನ್ನನ್ನು ಪ್ರೀತಿಸುತ್ತೇನೆ ” ಎಂದು ನಾಲಿಗೆ ಚಪ್ಪರಿಸುತ್ತಾ, ಕೊಕ್ಕರೆಮರಿಯನ್ನು ತಿಂದು ತೇಗಿತು…..ಸ್ವಲ್ಪ ಹೊತ್ತಿನ ನಂತರ ಆಹಾರ ತಂದಿದ್ದ ತಾಯಿ ಕೊಕ್ಕರೆ, ತನ್ನ ಮರಿಯನ್ನು ಕಾಣದೆ ಕಂಗಾಲಾಯಿತು.. ಅಲ್ಲೇ ಬಿದ್ದಿದ್ದ ಪುಕ್ಕ ಮೂಳೆಗಳನ್ನು ಕಂಡು ಹೌಹಾರಿತು…
ದುಷ್ಟ ಮೃಗವನ್ನು ಪ್ರೀತಿಯಿಂದ ಸಾಕಿ ಬೆಳೆಸಿದ್ದ ಕೊಕ್ಕರೆಗೆ ತನ್ನ ತಪ್ಪಿನ ಅರಿವಾಯಿತು..ಅಷ್ಟರಲ್ಲೇ ಅಲ್ಲಿಗೆ ಬಂದ ಹುಲಿಮರಿ ನಗುತ್ತಾ “ನೀವಿಷ್ಟು ರುಚಿಕರವಾಗಿದ್ದಿರೆಂದು ಇಷ್ಟು ದಿನವಾದರೂ ತಿಳಿಯದೇ ಹೋಯಿತಲ್ಲಾ!? ನಾನೆಂಥಾ ದಡ್ಡ” ಎನ್ನುತ್ತಾ
ತಾಯಿ ಹಕ್ಕಿಯನ್ನು ಕಬಳಿಸಿತು…

ನೀತಿ:
ದುಷ್ಟ ಸ್ವಭಾವ, ಗುಣಗಳು ಎಂದಿಗೂ ಬದಲಾಗವು.

ಮತ್ತಷ್ಟು ಸುದ್ದಿಗಳು

Latest News

‘ಅಕ್ಕಿನೇನಿ’ ಕೈಬಿಟ್ಟ ನಟಿ ಸಮಂತಾ!

newsics.com ಹೈದರಾಬಾದ್: ತಮಿಳು, ತೆಲುಗು ನಟಿ ಸಮಂತಾ ತಮ್ಮ ಹೆಸರಿನ ಮುಂದೆ ಇದ್ದ ಅಕ್ಕಿನೇನಿ ಹೆಸರನ್ನು ತೆಗೆದಿದ್ದಾರೆ. ಟ್ವಿಟರ್ ಮತ್ತು ಇನ್ಸ್ಟಾಗ್ರಾಂ ಖಾತೆಗಳಲ್ಲಿ‌ನ ಅಕ್ಕಿನೇನಿ ಹೆಸರನ್ನು ತೆಗೆದುಹಾಕಿದ್ದು, ಫೇಸ್ಬುಕ್ನಲ್ಲಿ...

ಜೈಲಿನ ಗೋಡೆ ಕುಸಿದು 22 ಕೈದಿಗಳಿಗೆ ಗಾಯ

newsics.com ಭೋಪಾಲ್(ಮಧ್ಯಪ್ರದೇಶ): ಭಾರೀ ಮಳೆ ಹಿನ್ನೆಲೆಯಲ್ಲಿ ಬೀಡ್ ಜಿಲ್ಲೆಯ ಕಾರಾಗೃಹದ ಗೋಡೆ ಕುಸಿದು 22 ಕೈದಿಗಳು ಗಂಭೀರ ಗಾಯಗೊಂಡಿದ್ದಾರೆ. ಶನಿವಾರ ಬೆಳಗ್ಗೆ 5.10ರ ಸುಮಾರಿಗೆ ಈ ಘಟನೆ ನಡೆದಿದೆ. ಕಾರಾಗೃಹದ ನಂ.6ನೇ ಕೊಠಡಿಯ ಗೋಡೆ ಕುಸಿದಿದ್ದು,...

ಗಾಳಿಯ ರಭಸಕ್ಕೆ ಕಾಲೇಜಿನ ಗೇಟ್ ಬಿದ್ದು ಬಾಲಕ ಸಾವು

newsics.com ಬೆಳಗಾವಿ: ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಆರ್.ಡಿ. ಕಾಲೇಜಿನ ಮುಖ್ಯ ಗೇಟ್ ಬಿದ್ದು 10 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ಪಟ್ಟಣದ ಇಂದಿರಾನಗರ ನಿವಾಸಿ ಸುಫೀಯಾನ ರಾಜು ಮುಲ್ಲಾ ಮೃತಪಟ್ಟ ಬಾಲಕ. ಗೇಟ್ ಮುಂದೆ ರಾಜು ಮುಲ್ಲಾ...
- Advertisement -
error: Content is protected !!