- ಅರ್ಚನಾ ಎಚ್.
ತಾಯಿಯೊಂದಿಗೆ ಜ್ಯೂಲಿಯನ್ ಕೋಪ್ಕೆಯು ಪ್ರಯಾಣಿಸುತ್ತಿದ್ದ ವಿಮಾನ ಅಪಘಾತಕ್ಕೆ ತುತ್ತಾಯಿತು. 21,000 ಅಡಿಯಿಂದ ಕೆಳಗುರುಳಿದ ವಿಮಾನದಲ್ಲಿ ಆಕೆ ತನ್ನ ಸೀಟಿನ ಸಮೇತ ಅಮೇಜಾನ್ ಮಳೆಕಾಡಿನಲ್ಲಿ ಬಿದ್ದಿದ್ದಳು. ಅದೃಷ್ಟವಶಾತ್ ಬದುಕುಳಿದಿದ್ದಳು. ಒಂದು ಕಣ್ಣು ತೀವ್ರವಾಗಿ ಗಾಯಗೊಂಡಿತ್ತು.. ಕತ್ತಿನ ಮೂಳೆ ಮುರಿದಿತ್ತು ಹಾಗೂ ಅವಳ ರಟ್ಟೆ ಬಲವಾದ ಇರಿತಕ್ಕೊಳಪಟ್ಟಿತ್ತು.. ಅಮೇಜಾನ್ ನಲ್ಲಿ ಕಾಣುವ ನಳನಳಿಸುವ ಹಣ್ಣುಗಳು ವಿಷಪೂರಿತವಾಗಿರುತ್ತವೆ. ಅಲ್ಲಿನ ಪ್ರಾಣಿಗಳು ಅತ್ಯಂತ ವಿಷಕಾರಿಯೆಂದು ಅವಳು ತನ್ನ ತಂದೆಯಿಂದ ತಿಳಿದಿದ್ದಳು. ಮೊದಲು ತಾಯಿಯನ್ನು ಹುಡುಕಲು ಮುಂದಾದಳು. ಕೊನೆಗವಳಿಗೆ ಸಿಕ್ಕದ್ದು, ವಿಮಾನದ ಮುರಿದ ಭಾಗ ಜಖಂಗೊಂಡ ಸತ್ತ ದೇಹಗಳು ಅದನ್ನು ತಿನ್ನಲು ಹವಣಿಸುತ್ತಿದ್ದ ಹದ್ದುಗಳು… ಮತ್ತವಳಿಗೆ ಇದ್ದದ್ದೊಂದೇ ಗುರಿ ಬದುಕಬೇಕು ಮನೆಯಲ್ಲಿರುವ ತಂದೆಯನ್ನು ಸೇರಬೇಕು. ಅವಳಲ್ಲಿದ್ದ ಒಂದಷ್ಟು ಸಿಹಿತಿನಿಸು ಮಾತ್ರವೇ ಅವಳ ಪಾಲಿನ ಆಹಾರ.. ನದಿಯ ಹರಿವನ್ನೇ ಹಿಂಬಾಲಿಸಿ ಹನ್ನೊಂದು ದಿನಗಳು ಅಮೇಜಾನ್ ಕಾಡಿನಲ್ಲಿ ಬದುಕುಳಿದು ಕೊನೆಗೂ ತಂದೆಯನ್ನು ಸೇರಿದ ರೋಚಕ ಕಥೆಯನ್ನು ನೀವು ಕೇಳಿದ್ದಿರಬಹುದು… ಹಾಗಾದರೆ ಅಮೆಜಾನ್ ಮಳೆಕಾಡು ಅಷ್ಟೊಂದು ಅಪಾಯಕಾರಿಯೇ!??
ಅಲ್ಲಿನ ಪ್ರಾಣಿಸಂಕುಲ:
ಅಮೆಜಾನ್ ಮಳೆಕಾಡು ಸಜೀವ ಸಸ್ಯ , ಪ್ರಾಣಿವರ್ಗ ಪ್ರಭೇದಗಳ ದೊಡ್ಡ ಸಮೂಹವನ್ನೇ ಒಳಗೊಂಡಿದೆ.
ಮಾಂಸಾಹಾರಿ ಸಸ್ಯಗಳು ಇಲಿ, ಕಪ್ಪೆ ಕೀಟಗಳನ್ನು ತಿನ್ನುತ್ತವೆ…ವೀನಸ್ ಫ್ಲೈ ಟ್ರಾಪ್, ಪಿಕ್ಚರ್ ಪ್ಲಾಂಟ್ಸ್, ಬ್ಲಾಡರ್ ವರ್ಟ್, ಸನ್ ಡ್ಯೂ ಹಾಗೂ ಜೆನ್ಲಿಸಿಯಾ
ಇತ್ಯಾದಿ ಭಕ್ಷಕ ಸಜೀವ ಸಸ್ಯವರ್ಗಕ್ಕೆ ಸೇರಿವೆ..
ಬುಲೆಟ್ ಇರುವೆ, ಬ್ರೆಜಿಲಿಯನ್ ಅಲೆದಾಡುವ ಸ್ಪೈಡರ್, ದಕ್ಷಿಣ ಅಮೆರಿಕಾದ ರಾಟಲ್ಸ್ನೇಕ್, ಕೆಂಪು ಹೊಟ್ಟೆಯ ಪಿರಾನ್ಹಾಸ್, ಎಲೆಕ್ಟ್ರಿಕ್ ಈಲ್, ಜಾಗ್ವಾರ್ , ಹಸಿರು ಅನಕೊಂಡ, ವಿಷ ಡಾರ್ಟ್ ಕಪ್ಪೆ, ಕೇಮನ್ ಮೊಸಳೆಗಳು
ಅಮೆಸೋನಿಯನ್ ಬೃಹತ್ ಸಹಸ್ರಪದಿ,ಬುಲ್ ಶಾರ್ಕ್, ಪಿಟ್ ವೈಪರ್ ಹಾಗೂ ಹಾರ್ಪಿ ಈಗಲ್
ಅಮೆಜಾನ್ ನ ವಿಷಕಾರಿ ಹಾಗೂ ಅತ್ಯಂತ ಅಪಾಯಕಾರಿ ಪ್ರಾಣಿಗಳಾಗಿವೆ..
ಇಂತಹ ಅಪಾಯಕಾರಿ ಅರಣ್ಯದಲ್ಲಿ ಹನ್ನೊಂದು ದಿನಗಳ ಕಾಲ ಬದುಕುಳಿದು ತಂದೆಯನ್ನು ಸೇರಿದ ಕೋಪ್ಕೆಯ ಧೈರ್ಯಕ್ಕೆ ಜೈಹೋ…!