- ದೇವರಾಜ್ ನಿಸರ್ಗತನಯ, ಬಂಗಾರಪೇಟೆ
ಬಣ್ಣ ಬಣ್ಣದ ಚಿಟ್ಟೆಯೆ ಕೇಳು
ನನ್ನಯ ಪ್ರಶ್ನೆಗೆ ಉತ್ತರ ಹೇಳು
ಯಾರು ಕೊಟ್ಟರು ನಿನಗೆ
ಬಣ್ಣಗಳಾ ಬಹುಮಾನ !
ಬಣ್ಣದ ರೆಕ್ಕೆ ಹಾರಲದಕ್ಕೆ
ಹೇಳಿಕೊಟ್ಟವರಾರು ?
ವಿಧ ವಿಧ ಹೂಗಳ ಸಂಗವ ಮಾಡಲು
ತಿಳಿಸಿ ಕೊಟ್ಟವರಾರು ?
ಹಗಲು ರಾತ್ರಿ ಚಳಿಯೋ ಮಳೆಯೋ
ನಿನ್ನ ವಸತಿಯು ಎಲ್ಲಿ ?
ಚಳಿಯಾದಾಗ ಮಳೆಬಂದಾಗ
ಬಂದು ಬಿಡು ನೀನಿಲ್ಲಿ !
ನಿನ್ನಯ ರೆಕ್ಕೆ ಸ್ವಲ್ಪ ದಿನಕ್ಕೆ
ನನಗೆ ಕೊಡುವೆಯೇನು ?
ನಿನ್ನಾ ಹಾಗೆ ಹಾರುತ ನಾನೂ
ಜೇನ ಹೀರಿ ಬರುವೆನು
ನಾ ಜೇನ ಹೀರಿ ಬರುವೆನು !