Wednesday, May 18, 2022

ನನ್ನ ಕನಸಿನ ಭಾರತ

Follow Us


♦ ಸುನೀತ ಕುಶಾಲನಗರ

newsics.com@gmail.com



 ಭಾ ರತವೆಂದರೆ ಹೀಗಿರಬೇಕು
ಕನಸುಗಳೆಲ್ಲಾ ನನಸಾಗುವಂತೆ
ಕಾಮನಬಿಲ್ಲಿನ ಬಣ್ಣಗಳೆಲ್ಲಾ
ಭಯದ ಬದುಕನು ಓಡಿಸಲಿ

ಎಲ್ಲವನು ದಾಟಿ ಹರಿವ ನದಿಗಳು
ಧರ್ಮದ ಐಕ್ಯತೆ ಸಾರುತ ಸಾಗಲಿ
ಬೀಸುವ ಮಾರುತ ಮೈಯನು ಸೋಕಿ
ಅತ್ಯಾಚಾರವ ಅಟ್ಟುತಾ ಬೀಸಲಿ

ಹೆತ್ತವರೆಲ್ಲಾ ದಿಟ್ಟ ಮನದಲ್ಲಿ
ಮಕ್ಕಳ ಭವಿಷ್ಯ ರೂಢಿಸಲಿ
ಹಿರಿತಲೆಗಳೆಲ್ಲಾ ಉಸಿರಾಡುವಾಗ
ನೆಮ್ಮದಿಯ ಝೇಂಕಾರ ಹೊಮ್ಮಿಸಲಿ

ರಾಷ್ಟ್ರೀಯ ಹಬ್ಬಗಳಾಚರಣೆಯಲ್ಲಿ
ಪ್ಲಾಸ್ಟಿಕ್ ಬಳಕೆ ಖಂಡಿಸಲಿ
ಹಬ್ಬಗಳೆಲ್ಲಾ ಸಂಭ್ರಮದಲ್ಲಿ
ಮನದ ಮಲಿನವ ತೊಲಗಿಸಲಿ

ಕಸದ ರಾಶಿ ಕೊಳಚೆ ಗುಂಡಿ
ತೊಳೆದು ತೊರೆಯಲಿ ನಾಡನು ಬಿಟ್ಟು
ಹಸಿರು ಪಲ್ಲವ ಚಿಗುರಿ ಬೆಳೆಯುತಾ
ಚಂದನ ಸುಗಂಧವ ಪಸರಿಸಲಿ

ಸಮಾನ ಶಿಕ್ಷಣ ಸಮಾನ ವೇತನ
ಸಮಾನ ಆಸ್ತಿ ಸಮಾನ ಹಕ್ಕು
ಮೊಳಗಲೀ ಘೋಷಣೆ ನಾವೊಂದೇ
ಪ್ರಾಮಾಣಿಕತೆಯ ಕನವರಿಕೆ

ನಾಡಹೆಜ್ಜೆಯ ಝೇಂಕಾರದಲ್ಲಿ
ತಾಯ ರಕ್ಷಣೆಯಲಿ ಒಗ್ಗೂಡಿ ನಲಿದು
ಆಕಾಶದಾಳೆಯಲಿ ಮುದ್ರೆ ಒತ್ತಲಿ
ಭಾರತದ ಕನಸು ಹುಸಿಯಲ್ಲ
ಹಸಿ ಹಸಿ ಕನಸು ನನಸಾಗುವಲ್ಲಿ
ಒಗ್ಗಟ್ಟಿನ ಮಳೆ ಸದಾ ಜಿನುಗುತ್ತಿರಲಿ.

ಮತ್ತಷ್ಟು ಸುದ್ದಿಗಳು

Latest News

ಉಪ್ಪಿನ ಕಾರ್ಖಾನೆ ಗೋಡೆ ಕುಸಿದು 12‌ ಕಾರ್ಮಿಕರು ಸಾವು

newsics.com ಅಹಮದಾಬಾದ್: ಉಪ್ಪು ಪ್ಯಾಕೇಜಿಂಗ್ ಕಾರ್ಖಾನೆಯೊಂದರ ಗೋಡೆ ಕುಸಿದು ಬುಧವಾರ 12 ಕಾರ್ಮಿಕರು ಮೃತಪಟ್ಟಿದ್ದಾರೆ. ಗುಜರಾತ್‌ನ ಮೊರ್‌ಬಿ ಜಿಲ್ಲೆಯ ಹಲ್‌ವಾಡ್ ಕೈಗಾರಿಕಾ ಪ್ರದೇಶದ ‘ಸಾಗರ್ ಸಾಲ್ಟ್ ಫ್ಯಾಕ್ಟರಿ’ಯಲ್ಲಿ ಈ...

ಕನ್ನಡ ಕಲಿಕೆಗೆ‌ ಬಂತು ಸರ್ಕಾರಿ ಇ- ಪೋರ್ಟಲ್

newsics.com ಬೆಂಗಳೂರು: ಕನ್ನಡ ಕಲಿಯುವವರಿಗಾಗಿ ಸರ್ಕಾರಿ ಇ‌- ಕನ್ನಡ ಪೋರ್ಟಲ್ ಅಸ್ತಿತ್ವಕ್ಕೆ ಬಂದಿದೆ. ಇದರಿಂದ ಕರ್ನಾಟಕ ಹಾಗು ಹೊರಗೆ ವಾಸಿಸುತ್ತಿರುವ ಕನ್ನಡೇತರರು ಸರ್ಕಾರಿ ವೆಬ್ ಸೈಟ್‌ನಲ್ಲಿ ಕನ್ನಡ ಕಲಿಯಬಹುದು. ಇ-ಕನ್ನಡ ಪೋರ್ಟಲ್‌ಗೆ ಹೋಗಿ ಆನ್‌ಲೈನ್...

ನಾಳೆ ಮಧ್ಯಾಹ್ನ 12:30ಕ್ಕೆ SSLC ರಿಸಲ್ಟ್

newsics.com ಬೆಂಗಳೂರು: ಗುರುವಾರ (ಮೇ 19) ಮಧ್ಯಾಹ್ನ 12.30ಕ್ಕೆ SSLC ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದೆ. ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಈ ಕುರಿತಂತೆ ಟ್ವೀಟ್ ಮಾಡಿದ್ದಾರೆ. 'ನಾಳೆ ಮಧ್ಯಾಹ್ನ 12.30ಕ್ಕೆ ಎಸ್ಎಸ್ಎಲ್‌ಸಿ ಫಲಿತಾಂಶ ಪ್ರಕಟಿಸಲಾಗುತ್ತದೆ. ಮಧ್ಯಾಹ್ನ 1...
- Advertisement -
error: Content is protected !!