- ಹೊರಾ ಪರಮೇಶ್ ಹೊಡೇನೂರು
response@134.209.153.225
ನಿತ್ಯವು ಕೆಲಸ ಮಾಡಲು ನಮಗೆ
ಶಕ್ತಿ ಚೈತನ್ಯ ಇರಬೇಕು
ದೇಹಕೆ ಬೇಕಾದ ಶಕ್ತಿ ದೊರೆಯಲು
ಕಾರ್ಬೋಹೈಡ್ರೇಟ್ ಇರಬೇಕು //
ಅಕ್ಕಿ ರಾಗಿ ಜೋಳ ಧಾನ್ಯಗಳು
ಕಾರ್ಬೋಹೈಡ್ರೇಟ್ ನೀಡುವವು
ಪಿಷ್ಟ ಸಕ್ಕರೆ ಕೊಬ್ಬಿನಂಶಗಳು
ಹೆಚ್ಚಿನ ಶಕ್ತಿಯ ಕೊಡುವವು //
ನಮ್ಮ ದೇಹದ ಬೆಳವಣಿಗೆಗಾಗಿ
ಪ್ರೋಟೀನ್ ಪದಾರ್ಥಗಳು ಬೇಕು
ದೇಹದ ದುರಸ್ತಿ ಕಾರ್ಯಕ್ಕಾಗಿ
ಹಾಲು ಮೊಟ್ಟೆ ಸೇವಿಸಬೇಕು //
ರೋಗರುಜಿನಗಳು ಬಾರದ ಹಾಗೆ
ಜೀವಸತ್ವಗಳು ತಡೆಯುವವು
ಹಣ್ಣು ತರಕಾರಿ ಸೊಪ್ಪುಗಳಿಂದ
ಅನ್ನಾಂಗಗಳು ದೊರೆಯುವವು //
ಹಲ್ಲು ಮೂಳೆಗಳ ರಕ್ಷಣೆಗಾಗಿ
ಕ್ಯಾಲ್ಸಿಯಂ ಖನಿಜ ಉಪಯುಕ್ತ
ರಕ್ತಹೀನತೆಗೆ ಕಬ್ಬಿಣಾಂಶ ಬೇಕು
ಗಳಗಂಡ ರೋಗಕೆ ಅಯೋಡಿನ್ ಸೂಕ್ತ //