Sunday, December 5, 2021

ನಮ್ಮಯ ಬದುಕು

Follow Us

* ಮಲಿಕಜಾನ ಶೇಖ, ಅಕ್ಕಲಕೋಟ, ಮಹಾರಾಷ್ಟ್ರ
response@134.209.153.225
newsics.com@gmail.com

ಹಂಸಮ್ಮಾ ಬಂದಳು ಹಂಸಮ್ಮಾ
ಕ್ವ್ಯಾಕ್ -ಕ್ವ್ಯಾಕ್ ಕ್ವ್ಯಾಕ್-ಕ್ವ್ಯಾಕ್ ನುಡಿಯುತ್ತಾ
ಶ್ವೇತ ಬಣ್ಣ ನನ್ನದು
ಹಾಲು-ಮೀನು ಕಂಡರೆ ನಾನು
ಕರೆವೆ ಎಂದಳು ಮಕ್ಕಳು-ಮರಿಯನ್ನು.

ಹುಂಜಪ್ಪಾ ಬಂದನು ಹುಂಜಪ್ಪಾ
ಕುಕ್ಕು-ಕೂ ಕುಕ್ಕು- ಕೂ ಕೂಗುತ್ತಾ
ತಲೆಯಲಿ ಪುಂಜ ನನ್ನದು
ಹುಳವ-ಗಿಳವ ಕಂಡರೆ ನಾನು
ಕರೆವೆ ಎಂದನು ಹೆಂಡತಿ ಮಕ್ಕಳನು.

ಕಾಗಣ್ಣ ಬಂದ ಕಾಗಣ್ಣ
ಕಾವ್-ಕಾವ್ ಕಾವ್-ಕಾವ್ ಕಿರಿಚುತ್ತಾ
ಕಪ್ಪು ಬಣ್ಣದು ನನ್ನದು
ಅನ್ನದ ಅಗಳ ಕಂಡರೆ ನಾನು
ಕರೆವೆ ಎಂದನು ಬಂಧು-ಬಳಗವನು.

ಗುಬ್ಬಕ್ಕ ಬಂದಳು ಗುಬ್ಬಕ್ಕ
ಚಿಂವ್-ಚಿಂವ್ ಚಿಂವ್-ಚಿಂವ್ ಎನ್ನುತ್ತಾ
ಗುಬ್ಬಿ ಗೂಡು ನನ್ನದು
ವೈರಿಯನು ಕಂಡರೆ ನಾನು
ಕರೆವೆ ಎಂದಳು ಎಲ್ಲರನು.

ಬೇಡಣ್ಣ ಬಂದಾ ಬೇಡಣ್ಣ
ಕೂಗುತ್ತಾ ಬೈಯುತ್ತಾ ಹೊಡೆಯುತ್ತಾ
ಮೋಸದ ಬಲೆಯು ನನ್ನದು
ಕಾಳನು ತಿನ್ನುತ್ತಾ ಕಂಡರೆ ನಾನು
ತಿನ್ನುವೆ ಬೇಯಿಸಿ ನಿಮ್ಮನ್ನು.

ಹಾರುತ ಬಂದವು ಹಕ್ಕಿಗಳು
ಕರಕರ ಕೊಕ್ಕನ್ನು ಕೆರೆಯುತ್ತಾ
ನಮ್ಮಯ ಬದುಕು ನಮಗೆ ಬಿಡು
ಸುಮ್ಮನೆ ಹೋಗೊ ಬೇಡಣ್ಣಾ
ಇಲ್ಲದಿರೆ…..?
ಕರೆವೆವು ನಾವು ಕೊರೋನಾ .. ಕೊರೋನಾ…

ಮತ್ತಷ್ಟು ಸುದ್ದಿಗಳು

Latest News

ರಾಜ್ಯದಲ್ಲಿ ಹೊಸದಾಗಿ 456 ಕೊರೋನಾ ಪ್ರಕರಣ ಪತ್ತೆ, 330 ಜನ ಗುಣಮುಖ, 6 ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 456 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 29,98,099ಕ್ಕೆ ಏರಿಕೆಯಾಗಿದೆ 330 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ...

ಸರಣಿ ಅಪಘಾತ: ಓರ್ವ ಸಾವು, ಇಬ್ಬರು ಗಂಭೀರ

newsics.com ಉಡುಪಿ: ಸರಣಿ ಅಪಘಾತದಲ್ಲಿ ಓರ್ವ ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉಡುಪಿಯ ಬ್ರಹ್ಮಾವರದಲ್ಲಿ ನಡೆದಿದೆ. ಕಾರು, ಬೈಕ್ ಹಾಗೂ ಮೀನು ಸಾಗಾಟದ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿದೆ. ಮೀನು ಸಾಗಾಟದ ವಾಹನದ...

ಜೈಪುರದಲ್ಲೂ 9 ಒಮೈಕ್ರಾನ್ ಪ್ರಕರಣ ಪತ್ತೆ

newsics.com ಜೈಪುರ: ಮಹಾರಾಷ್ಟ್ರದ ಬಳಿಕ ಇದೀಗ ಜೈಪುರದಲ್ಲೂ 9 ಒಮೈಕ್ರಾನ್ ಪ್ರಕರಣಗಳು ದೃಢಪಟ್ಟಿವೆ. ಒಂದೇ ಕುಟುಂಬದವರಲ್ಲಿ ಸೋಂಕು ಪತ್ತೆಯಾಗಿದ್ದು, ಇವರು ದಕ್ಷಿಣ ಆಫ್ರಿಕಾದಿಂದ ಬಂದವರು ಎಂದು ತಿಳಿದುಬಂದಿದೆ. ಮುಂಬೈನಲ್ಲಿ ಇಂದು ಒಂದೇ ದಿನ 7 ಜನರಿಗೆ...
- Advertisement -
error: Content is protected !!