Tuesday, April 13, 2021

ಉರುಳುವ ಗಾಲಿಗೆ ಹಿಡಿಯುತ ಕೋಲು

Suneetha Kushalanagara
♦ ಸುನೀತ ಕುಶಾಲನಗರ
response@134.209.153.225
newsics.com@gmail.com

 

ಗಾಲಿಯ ಹಿಂದೆ ಓಡಿದ ಮಗನ
ದಾರಿಯ ಕಾಯುತ ಇದ್ದಳು ಅಮ್ಮ
ಅತ್ತ ಇತ್ತ ಎಲ್ಲೂ ಇಲ್ಲ
ಅಲ್ಲಿ ಇಲ್ಲಿ ಕಾಣದೆ ಎಲ್ಲೂ
ದಿಬ್ಬವನೇರಿ ನೋಡಿದಳೊಮ್ಮೆ

ದೂರದಿ ಕಾಣುವ ಕಂದನ ನೋಡಿ
ಬಾ ಬಾ ಕರೆದಳು ಸನ್ನೆಯ ಮಾಡಿ
ಗಾಲಿಯನೋಡಿಸಿ ಬೀಸುವ ಕೋಲು
ಓಡೋಡಿ ಬರುವ ಪುಟಾಣಿ ಕಾಲು
ತಡವೇಕೆಂಬ ಪ್ರಶ್ನೆಯ ಕೇಳಿ
ಗಾಲಿ ಕೋಲು ದೂರಕೆ ಎಸೆದು
ಏದುಸಿರಿಟ್ಟು ಬೆವರನು ಒರೆಸಿ
ಗುಂಡಿಗೆ ಬಿದ್ದ ಕತೆಯನು ಹೇಳಿ
ಕುಳಿತೇಬಿಟ್ಟನು ಕೋಪಿಸಿ
ಅಮ್ಮನು ಹೇಳಲು ಶುರುವಿಟ್ಟ ಕತೆಗೆ
ಬೆರಗುಗಣ್ಣಿನ ಕಿವಿಯಾದ
ನಾಗರಿಕತೆಗೆ ಚಕ್ರವೇ ನಾಂದಿ
ಕೋಲು ನಿಯಂತ್ರಣ ಸಂಕೇತ
ನಡೆಸಿದಂತೆ ನಡೆಯುವ ಗಾಲಿ
ಕೋಲಿಲ್ಲದಿರೆ ಕತೆಯದು ಹೇಳು
ಅದರ ಜೊತೆಯಲೆ ಕ್ರಮಿಸಿದ ನೀನು ?
ಹಳ್ಳಕ್ಕೆ ಬಿದ್ದ ಕಸವಿಸಿಯೇನು
ಬಿದ್ದರೂ ಎದ್ದು ಓಡೂ
ಬದುಕೂ ಹಾಗೆಯೇ ನೋಡು
ಸುಲಭದಿ ಸಿಕ್ಕ ಈ ಚಕ್ರ, ಕೋಲು
ದಕ್ಕಿತು ಸಂತಸ ಪಾಲು
ಸುತ್ತಲೂ ಸಿಗುವ ಅವಕಾಶ ಬಳಸಿ
ಎತ್ತರಕೆ ನಿನ್ನನು ಬೆಳೆಸು
ಪರಿಸರದರಿವು ಇರಬೇಕು
ಎಲ್ಲರ ಒಲವಲಿ ಬೆರಿಬೇಕು
ಅಮ್ಮನ ಮಾತನು ಕೇಳಿದನು
ಉರುಳುವ ಗಾಲಿಗೆ ಹಿಡಿಯುತ ಕೋಲು
ಅಂಗಳದಂಚನು ದಾಟುತ್ತಲೇ
ಜಗದ ವೇಗಕೆ ಓಡಿದನು

ಮತ್ತಷ್ಟು ಸುದ್ದಿಗಳು

Latest News

ಕುರಾನ್’ನಲ್ಲಿನ 26 ವಚನ ತೆಗೆಯಬೇಕೆಂಬ ಅರ್ಜಿ ವಜಾಗೊಳಿಸಿದ ಸುಪ್ರೀಂ

newsics.comನವದೆಹಲಿ: ಕುರಾನ್‌ನಲ್ಲಿನ 26 ವಚನಗಳನ್ನು ತೆಗೆಯುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.ಅರ್ಜಿಯು ಗಂಭೀರ ಉದ್ದೇಶ ಹೊಂದಿಲ್ಲ ಎಂಬ ಕಾರಣಕ್ಕೆ ಅರ್ಜಿದಾರರಿಗೆ 50...

ದೋಣಿ ಮುಳುಗಿ 34 ವಲಸಿಗರ ಸಾವು

newsics.comಜಿಬೂಟಿ: ವಲಸಿಗರನ್ನು ಹೊತ್ತ ದೋಣಿಯೊಂದು ಸಮುದ್ರದಲ್ಲಿ ಮುಳುಗಿ 34 ಮಂದಿ ಮೃತಪಟ್ಟಿದ್ದಾರೆ.ಆಫ್ರಿಕಾ ಖಂಡದ ಜಿಬೂಟಿ ದೇಶದ ಕರಾವಳಿಗೆ ಹೊಂದಿಕೊಂಡ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ ಎಂದು ಅಂತಾರಾಷ್ಟ್ರೀಯ ವಲಸಿಗರ ಸಂಘಟನೆ...

ಮಹಾರಾಷ್ಟ್ರದಲ್ಲಿ 51,751 ಮಂದಿಗೆ ಕೊರೋನಾ ಸೋಂಕು 258 ಜನ‌ ಸಾವು

newsics.comಮುಂಬೈ: ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಯಲ್ಲಿ 51,751 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, 258 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.ಪ್ರಯೋಗಾಲಯಕ್ಕೆ ಬಂದಿದ್ದ 2,33,22,393 ಸ್ಯಾಂಪಲ್‌ಗಳ ಪೈಕಿ 34,58,996 ಮಂದಿಗೆ ಕೊರೋನಾ...
- Advertisement -
error: Content is protected !!