- ದೇವರಾಜ್ ನಿಸರ್ಗತನಯ
ಬಂಗಾರಪೇಟೆ
response@134.209.153.225
ಬಿತ್ತೋಣ ಬನ್ನಿ ನಾವು
ಅಕ್ಷರಗಳ ಬೀಜವನ್ನು
ಎಳೆಯರಾ ಎದೆಯೊಳಗೆ !
ಬೆಳೆಯೋಣ ಬನ್ನಿ ನಾವು
ಜ್ಞಾನದ ಸಸಿಗಳನ್ನು
ಮುಗ್ಧತೆಯ ಮನದೊಳಗೆ |1|
ಕೀಳೋಣ ಬನ್ನಿ ನಾವು
ಕೀಳರಿಮೆ ಕಳೆಯನ್ನು
ಕಿರಿಯರ ಮನಸೊಳಗೆ !
ಹೇಳೋಣ ಬನ್ನಿ ನಾವು
ಮಾನವತೆ ಕಥೆಯನ್ನು
ಮುಂದಿನಾ ಪೀಳಿಗೇಗೆ |2|
ಎಳೆಯೋಣ ಬನ್ನಿ ನಾವು
ಶಿಕ್ಷಣದಾ ತೇರನ್ನು
ಜ್ಞಾನ ದೇಗುಲದೊಳಗೆ !
ಕಳೆಯೋಣ ಬನ್ನಿ ನಾವು
ಸಂತಸದಾ ಕ್ಷಣಗಳನ್ನು
ಚಿಣ್ಣರಾ ಖುಷಿಯೊಳಗೆ |3|
ಏರೋಣ ಬನ್ನಿ ನಾವು
ಸಾಧನೆಯಾ ಶಿಖರವನ್ನು
ಕಾಯಕದಾ ತತ್ವದೊಳಗೆ !
ಸಾರೋಣ ಬನ್ನಿ ನಾವು
ಸಮಾನತೆ ಪಾಠವನ್ನು
ಭವಿಷ್ಯದಾ ಕನಸುಗಳಿಗೆ |4|