Wednesday, May 18, 2022

ರಾಜನ ಮನಃಪರಿವರ್ತನೆ

Follow Us

ನಾನು ರಾಜ, ನನಗೆ ತಿಳಿಯದೇ ಇರುವ ವಿದ್ಯೆಯೇ ಇಲ್ಲ ಎಂದೆಣಿಸಿದ್ದೆ. ಆದರೆ ಮರ ಏರಿ ಹಣ್ಣುಗಳನ್ನು ಕೊಯ್ಯುವ ಕಲೆ ನನಗೆ ತಿಳಿದೇ ಇಲ್ಲ. ನಾನು ಸುಖದ ಅರಮನೆಯಲ್ಲಿ ಹೇಗೆ ಬೇಕಾದರೂ ಮಲಗುವೆ ಎಂದೆಣಿಸಿದ್ದೆ. ಆದರೆ ಅಲ್ಲೊಬ್ಬ ಮಣ್ಣಿನ ಮೇಲೆಯೇ ಸುಖವಾಗಿ ಮಲಗಿದ್ದ, ನನಗೆ ಅಲ್ಲಿ ನಿದ್ರೆಯೇ ಬರಲಿಲ್ಲ. ಈಜಿ ನದಿ ದಾಟಲೂ ನನಗೆ ತಿಳಿದಿಲ್ಲ.

          

ಡಾ. ಶ್ರೀವತ್ಸ ಮೈಸೂರು
response@newsics.com
newsics.com@gmail.com

 

 ಒ ಬ್ಬ ರಾಜ ತನ್ನ ರಾಜ್ಯ ನೋಡಲು ಕುದುರೆಯನ್ನೇರಿ ಹೊರಟ. ಒಂದೂರಿನ ಹಾದಿಯಲ್ಲಿ ಹೋಗುವಾಗ ಆತನಿಗೆ ತುಂಬಾ ಹಸಿವಾಯಿತು.
ಸುತ್ತಮುತ್ತ ನೋಡಿದಾಗ ಬೃಹದಾಕಾರದ ಮರದಲ್ಲಿ ತುಂಬಾ ಹಣ್ಣುಗಳು ಜೋತು ಬಿದ್ದಿದ್ದವು. ಆ ಮರ ಎತ್ತರವಿದ್ದ ಕಾರಣ ಒಂದು ಹಣ್ಣೂ ಆತನ ಕೈಗೆ ಎಟಕಲಿಲ್ಲ. ಆಗ ಮರ ಕಡಿಯುವವನೊಬ್ಬ ಸಾಕಷ್ಟು ಹಣ್ಣುಗಳನ್ನು ಕೊಯ್ದು ರಾಜನಿಗೆ ಕೊಟ್ಟ. ತಕ್ಷಣ ಆತ ಅದನ್ನು ಗಬಗಬನೆ ತಿಂದು ಮರ ಕಡಿಯುವವನಿಗೆ ಚಿನ್ನದ ನಾಣ್ಯಗಳನ್ನು ಕೊಟ್ಟು ಮುಂದೆ ಸಾಗಿದ.
ಹೀಗೆ ಸಾಗುವಾಗ ಆತ, ‘ನಾನು ರಾಜನಾದರೂ ನನಗೆ ಮರ ಏರಲು ತಿಳಿದಿಲ್ಲ. ಇದೆಂತಹ ಅವಮಾನ’ ಎಂದು ಮರುಗಿದ. ಹೀಗೆ ದೂರ ಸಾಗುವಾಗ ಬಿಸಿಲು ಆತನಿಗೆ ಸುಸ್ತಿನ ಜೊತೆಗೆ ನಿದ್ರೆ ಬರಲು ಶುರುವಾಯಿತು. ಮರದ ಕೆಳಗೆ ಮಲಗಿದರೂ ಆತನಿಗೆ ನಿದ್ರೆ ಬರಲಿಲ್ಲ. ದೂರದಲ್ಲಿ ಮರಗೆಲಸದವನೊಬ್ಬ ತನ್ನ ತಲೆಗೆ ಕಟ್ಟಿದ್ದ ತುಂಡು ಬಟ್ಟೆ ಹಾಸಿ ಗಾಢ ನಿದ್ರೆಗೆ ಜಾರಿದ್ದ. ಆಗ ರಾಜನು ‘ಅವನಿಗೆ ಆ ಭಗವಂತ ಅದೆಷ್ಟು ಸುಖ ನಿದ್ರೆ ಕರುಣಿಸಿದ್ದಾನೆ. ಕಲ್ಲು, ಮಣ್ಣು ತರಗೆಲೆಯ ಮೇಲೆಯೇ ಗಾಢ ನಿದ್ರೆ ಮಾಡುತ್ತಿರುವನಲ್ಲ’ ಎಂದು ಯೋಚಿಸಿ ಆತನನ್ನು ಕರೆದು ‘ನಿನಗೆ ಹೇಗೆ ಇಷ್ಟು ನಿದ್ರೆ ಬರುತ್ತದೆ. ಈ ಮಣ್ಣು, ಧೂಳಿನಲ್ಲಿ ನನಗೆ ಕೂರಲೂ ಮನಸ್ಸಾಗುತ್ತಿಲ್ಲ’ ಎಂದ. ಆಗ ಮರಗೆಲಸದವ ನಮ್ಮ ಬದುಕೇ ಹೀಗೆ. ಕಷ್ಟಪಟ್ಟು ದುಡಿದರೆ ದೇಹಕ್ಕೆ ಆಯಾಸವಾಗುತ್ತದೆ. ಆಗ ಎಲ್ಲಿ ಮಲಗಿದರೂ ನಿದ್ರೆ ಬರುತ್ತದೆ ಎಂದ.
ರಾಜ ಹೀಗೆ ಮುಂದೆ ಹೋಗುವಾಗ ನದಿ ಕಾಣಿಸಿತು. ರಾಜನಿಗೆ ಈಜು ಬರುತ್ತಿರಲಿಲ್ಲ. ಅಲ್ಲಿ ಚಿಕ್ಕ ಮಕ್ಕಳೆಲ್ಲ ನೀರಿನಲ್ಲಿ ಈಜುತ್ತಾ ಆಟವಾಡುತ್ತಿದ್ದರು. ಕತ್ತಲಾಗುತ್ತಾ ಬಂದಾಗ ರಾಜನಿಗೆ ನದಿ ದಾಟಿ ಅರಮನೆ ತಲುಪಲೇಬೇಕಾಯಿತು. ಕೂಡಲೇ ಅಲ್ಲಿದ್ದ ಜನರನ್ನು ಕರೆದು, ‘ನಾನು ರಾಜ, ನನ್ನನ್ನು ಮತ್ತು ಕುದುರೆಯನ್ನು ಈ ನದಿಯಿಂದ ದಾಟಿಸಿ ಆ ದಡಕ್ಕೆ ಕೊಂಡೊಯ್ಯಿರಿ’ ಎಂದು ಆಜ್ಞಾಪಿಸಿದ. ಜನರೆಲ್ಲರೂ ಓಡೋಡಿ ಬಂದು ರಾಜನನ್ನು ಹೊತ್ತು ನದಿಯಲ್ಲಿ ನಡೆದರು ಮತ್ತು ಕುದುರೆಯನ್ನು ಎಳೆದುಕೊಂಡು ಹೋಗಿ ದಡ ಮುಟ್ಟಿಸಿದರು.
ಅರಮನೆ ಸೇರಿದ ರಾಜ ತನ್ನ ಮಹಾರಾಣಿಯನ್ನು ಕರೆದು, ‘ನಾನು ರಾಜ, ನನಗೆ ತಿಳಿಯದೇ ಇರುವ ವಿದ್ಯೆಯೇ ಇಲ್ಲ ಎಂದೆಣಿಸಿದ್ದೆ. ಆದರೆ ಮರ ಏರಿ ಹಣ್ಣುಗಳನ್ನು ಕೊಯ್ಯುವ ಕಲೆ ನನಗೆ ತಿಳಿದೇ ಇಲ್ಲ. ನಾನು ಸುಖದ ಅರಮನೆಯಲ್ಲಿ ಹೇಗೆ ಬೇಕಾದರೂ ಮಲಗುವೆ ಎಂದೆಣಿಸಿದ್ದೆ. ಆದರೆ ಅಲ್ಲೊಬ್ಬ ಮಣ್ಣಿನ ಮೇಲೆಯೇ ಸುಖವಾಗಿ ಮಲಗಿದ್ದ, ನನಗೆ ಅಲ್ಲಿ ನಿದ್ರೆಯೇ ಬರಲಿಲ್ಲ. ಈಜಿ ನದಿ ದಾಟಲೂ ನನಗೆ ತಿಳಿದಿಲ್ಲ. ಅರಮನೆಯಿಂದ ಒಮ್ಮೆಯೂ ಹೊರಗೆ ಹೋಗದ ನಾನು ಈ ಆಸ್ತಿ ಧನ ಕನಕದಲ್ಲಿಯೇ ಬದುಕಿ ಇದನ್ನೇ ಸುಖ ಜೀವನ ಎಂದು ಭಾವಿಸಿರುವೆ. ಆದರೆ ಅವರೆಲ್ಲ ಅಷ್ಟೋ ಇಷ್ಟೋ ಹಣದಲ್ಲಿ ಹೇಗೆ ಸುಖವಾಗಿದ್ದಾರೆ ನೋಡು’ ಎಂದ. ಆಗ ಮಹಾರಾಣಿ ಆತನಿಗೆ ನೀವು ರಾಜ ಎಂಬ ನಿಮ್ಮ ಮನಸ್ಥಿತಿಯೇ ನಿಮಗೆ ಮುಳ್ಳಾಗಿದೆ. ನೀವು ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬದುಕಿ, ಆಗ ಎಲ್ಲವೂ ನಿಮಗೆ ಸಿದ್ಧಿಸುತ್ತದೆ. ಪ್ರಜೆಗಳು ಬಹಳ ಕಷ್ಟದಲ್ಲಿ ಬದುಕು ನಡೆಸುತ್ತಿದ್ದಾರೆ ಎಂದು ಅರಿತುಕೊಳ್ಳಿ ಎಂದಳು. ಆಗ ರಾಜನಿಗೆ ತನ್ನ ತಪ್ಪಿನ ಅರಿವಾಗಿ ಪ್ರಜೆಗಳ ಒಳಿತಿಗಾಗಿ ಅನೇಕ ಕೆಲಸಗಳನ್ನು ಮಾಡಿ ಅವರಿಗಾಗಿಯೇ ಬದುಕಿದನು.

ಮತ್ತಷ್ಟು ಸುದ್ದಿಗಳು

Latest News

2 ಖಾಸಗಿ ಬಸ್ಸುಗಳ ನಡುವೆ ಅಪಘಾತ ; ವಿಡಿಯೋ ವೈರಲ್

newsics.com ತಮಿಳುನಾಡು: ರಾಜ್ಯದ ಸೇಲಂನಲ್ಲಿ 2 ಖಾಸಗಿ ಬಸ್ಸುಗಳ ನಡುವೆ ಅಪಘಾತ ಸಂಭವಿಸಿದ್ದು ಮೂವತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅಪಘಾತದ ರಭಸಕ್ಕೆ ಬಸ್ ಚಾಲಕ ಸೇರಿದಂತೆ ಸೀಟಿನಲ್ಲಿದ್ದ ಪ್ರಯಾಣಿಕರು...

ಪಿ ಎಸ್ ಐ ಅಕ್ರಮ ನೇಮಕಾತಿ: ಜಾಮೀನು ಅರ್ಜಿ ತಿರಸ್ಕರಿಸಿದ ನ್ಯಾಯಾಲಯ

newsics.com ಕಲಬುರಗಿ: ಪಿ ಎಸ್ ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಭಾಗಿಯಾಗಿದ್ದ ಅಭ್ಯರ್ಥಿ ಪ್ರಭು ಹಾಗೂ ಶರಣಪ್ಪ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಕಲಬುರಗಿಯ ಮೂರನೇ ಜೆ ಎಂ ಎಫ್ ನ್ಯಾಯಾಲಯದ ನ್ಯಾಯಾಧೀಶರಾದ ಬಸವರಾಜ...

ಉಪ್ಪಿನ ಕಾರ್ಖಾನೆ ಗೋಡೆ ಕುಸಿದು 12‌ ಕಾರ್ಮಿಕರು ಸಾವು

newsics.com ಅಹಮದಾಬಾದ್: ಉಪ್ಪು ಪ್ಯಾಕೇಜಿಂಗ್ ಕಾರ್ಖಾನೆಯೊಂದರ ಗೋಡೆ ಕುಸಿದು ಬುಧವಾರ 12 ಕಾರ್ಮಿಕರು ಮೃತಪಟ್ಟಿದ್ದಾರೆ. ಗುಜರಾತ್‌ನ ಮೊರ್‌ಬಿ ಜಿಲ್ಲೆಯ ಹಲ್‌ವಾಡ್ ಕೈಗಾರಿಕಾ ಪ್ರದೇಶದ ‘ಸಾಗರ್ ಸಾಲ್ಟ್ ಫ್ಯಾಕ್ಟರಿ’ಯಲ್ಲಿ ಈ ದುರಂತ ಸಂಭವಿಸಿದೆ. ಗುಜರಾತ್‌ನ ಕೈಗಾರಿಕಾ ಸಚಿವ ಬೃಜೇಶ್...
- Advertisement -
error: Content is protected !!