Wednesday, September 27, 2023

ಜನಸೇವೆಯೇ ಜನಾರ್ದನ ಸೇವೆ

Follow Us

ವಿ. ಗಣೇಶ, ಸಾಗರ
response@134.209.153.225

ಪೂರ್ವಕಾಲದಲ್ಲಿ ಇಂದ್ರದ್ಯುಮ್ನ ಎಂಬ ಮಹಾರಾಜನು ಧರ್ಮ ಮತ್ತು ನ್ಯಾಯದಿಂದ ರಾಜ್ಯವಾಳುತ್ತಿದ್ದನು. ಅವನಿಗೆ ಪ್ರಜೆಗಳೆಂದರೆ ತುಂಬಾ ಪ್ರೀತಿ, ವಿಶ್ವಾಸವಿತ್ತು. ಎಲ್ಲರಂತೆ ಕಾಲ ಮುಗಿದಮೇಲೆ ಅವನು ಕೂಡ ಸತ್ತು ಸ್ವರ್ಗವನ್ನು ಸೇರಿದ. ಸ್ವರ್ಗದಲ್ಲಿ ಸಂತೋಷದಿಂದ ಕಾಲ ಕಳೆಯುತ ಪುಣ್ಯ ಗಳಿಸಿ ಸ್ವರ್ಗಕ್ಕೆ ವಾಪಸು ಬಾ” ಎಂದು ಕಳಿಸಿಕೊಟ್ಟರು.
ಅಂತೆಯೇ ರಾಜನು ಭೂಲೋಕಕ್ಕೆ ಇಳಿದು ಬಂದ. ತಾನು ಆಡಳಿತ ನಡೆಸಿದ ರಾಜ್ಯಗಳ ಎಲ್ಲ ಭಾಗಗಳಲ್ಲೂ ತಿರುಗಾಡತೊಡಗಿದನು. ಎಲ್ಲ ಕಡೆ ಹುಡುಕಿದರೂ ತನ್ನ ಕಾಲದವರಾರೂ ಅವನ ದೃಷ್ಟಿಗೆ ಬೀಳಲಿಲ್ಲ. ಹೀಗೆ ಒಂದು ಕಾಡಿನ ಮಾರ್ಗವಾಗಿ ಬರುವಾಗ ಅಲ್ಲಿ ಮರದ ಮೇಲೆ ಕುಳಿತುಕೊಂಡಿದ್ದ ಒಂದು ಮುದಿ ಗೂಬೆಯನ್ನು ನೋಡಿದನು. ಅದಕ್ಕೆ ನನ್ನ ಪರಿಚಯ ಇರಬಹುದೇ ಎಂದು ಯೋಚಿಸಿದ ರಾಜನು,
“ಅಯ್ಯಾ ಗೂಬೆಯೇ, ನೀನು ಬಹಳ ವರ್ಷಗಳಿಂದ ಇಲ್ಲಿ ವಾಸವಾಗಿದ್ದೀಯ ಎಂದು ತೋರುತ್ತದೆ. ನಿನಗೆ ಇಂದ್ರದ್ಯುಮ್ನ ಎಂಬ ರಾಜನು ಆಳುತ್ತಿದ್ದನು ಎಂಬ ವಿಷಯ ಗೊತ್ತಿದೆಯೇ?” ಎಂದು ಕೇಳಿದನು. ಅದಕ್ಕೆ ಗೂಬೆಯು,
“ನಿಜ, ನಾನು ಈ ಕಾಡಿನಲ್ಲಿ ಬಹಳ ವರ್ಷಗಳಿಂದ ವಾಸವಾಗಿದ್ದೇನೆ. ಆದರೆ ನೀನು ಹೇಳಿದ ರಾಜನ ಹೆಸರನ್ನು ನಾನು ಎಂದೂ ಕೇಳಿಲ್ಲ. ಪಕ್ಕದ ಕಾಡಿನಲ್ಲಿ ನನಗಿಂತ ಭಾರಿ ಹಿರಿಯನಾದ ಬಕಪಕ್ಷಿ ವಾಸವಾಗಿದ್ದಾನೆ . ಅವನು ಆ ರಾಜನ ಹೆಸರನ್ನು ಕೇಳಿದ್ದರೂ ಕೇಳಿರಬಹುದು ಹೋಗಿ ಅವನನ್ನು ವಿಚಾರಿಸು” ಎಂದಿತು.
ಅಂತೆಯೇ ರಾಜನು ಪಕ್ಕದ ಕಾಡಿನತ್ತ ಬಕಪಕ್ಷಿಯನ್ನು ಹುಡುಕಿಕೊಂಡು ಹೊರಟನು. ಬಹಳಷ್ಟು ಹುಡುಕಾಡಿದ ಮೇಲೆ ರಾಜನಿಗೆ ಆ ಬಕಪಕ್ಷಿಯ ದರ್ಶನವಾಯಿತು ಆಗ ರಾಜನು ಅದನ್ನು ಕುರಿತು,
ಅಯ್ಯಾ, ಬಕಪಕ್ಷಿ ನೀನೇನಾದರೂ ಈ ರಾಜ್ಯವನ್ನು ಹಿಂದೆ ಆಳಿದ ಇಂದ್ರದ್ಯುಮ್ನ ಎಂಬ ಮಹಾರಾಜನ ಹೆಸರನ್ನು ಅವನ ಸಾಧನೆಯ ಬಗ್ಗೆ ಏನಾದರೂ ತಿಳಿದುಕೊಂಡಿರುವೆಯಾ ಎಂದು ಕೇಳಿದನು. ಅದಕ್ಕೆ ಉತ್ತರಿಸುತ್ತಾ ಆ ಹಿರಿಯ ಬಕಪಕ್ಷಿಯ
ಇಲ್ಲ ನಾನು ಬಹಳ ವರ್ಷಗಳಿಂದ ಇಲ್ಲಿ ವಾಸವಾಗಿದ್ದರೂ ನನ್ನ ಕಾಲದಲ್ಲಂತೂ ಇಂದ್ರದ್ಯುಮ್ಮ ಮಹಾರಾಜನ ಹೆಸರನ್ನು ಕೇಳಿಲ್ಲ. ಅವನು ಯಾರು? ನನಗಂತೂ ಗೊತ್ತಿಲ್ಲ ತಿಳಿಯಬೇಕೆಂದಿದ್ದರೆ ಇಲ್ಲಿಂದ ದೂರದಲ್ಲಿ ಒಂದು ದೊಡ್ಡ ಸರೋವರ ಇದೆ. ಆ ಸರೋವರದಲ್ಲಿ ತುಂಬಾ ಮುದಿಯಾದ ಒಂದು ದೂಡ್ಡ ಆಮೆಯಿದೆ. ಆ ಹಿರಿಯ ಆಮೆಯನ್ನು ವಿಚಾರಿಸಿದರೆ ನಿನಗೆ ಏನಾದರೂ ಮಾಹಿತಿ ದೊರೆಯಬಹುದು ಎಂದು ಹೇಳಿತು.
ಅಂತೆಯೇ ರಾಜನು ಪ್ರಯತ್ನಪಟ್ಟು ಆ ಸರೋವರದ ಬಳಿಗೆ ಹೋದನು. ಆ ಸರೋವರವು ತುಂಬಿ ಹರಿಯುತ್ತಿದ್ದು ಅದರ ತುಂಬೆಲ್ಲ ಮೊಸಳೆ, ಆಮೆ, ಮೀನು ಮಂತಾದ ವಿವಿಧ ತೆರನಾದ ಪ್ರಾಣಿಗಳು ವಾಸವಾಗಿದ್ದು ಸಂತೋಷದಿಂದ ನಲಿದಾಡುತ್ತಿದ್ದವು. ಅವುಗಳ ಬಳಿ ಮಾತನಾಡುತ್ತಾ ರಾಜನು ಅವರ ಮಧ್ಯದಲ್ಲಿ ತುಂಬಾ ಹಿರಿಯರಾದ ಆಮೆಯೊಂದು ಇದೆಯೇ ಎಂದು ಕೇಳಿದನು. ಆ ಪ್ರಾಣಿಗಳು ಸಕಾರಾತ್ಮಕವಾಗಿ ಉತ್ತರಿಸುತ್ತಾ ಕೆಲವೇ ನಿಮಿಷಗಳಲ್ಲಿ ಹಿರಿಯ ಆಮೆಯನ್ನು ರಾಜನ ಬಳಿ ಕರೆದುಕೊಂಡು ಬಂದವು.
ರಾಜನನ್ನು ನೋಡಿದ ಆಮೆಯು ಅವನನ್ನು ಗುರುತಿಸಿದ್ದೇ ಅಲ್ಲದೆ ಅವನಿಗೆ ಮತ್ತೆ ಮತ್ತೆ ನಮಸ್ಕರಿಸುತ್ತ ಅವನನ್ನು, ಅವನ ರಾಜ್ಯಭಾರವನ್ನು, ಗುಣಗಳನ್ನು ಹೊಗಳತೊಡಗಿತು.
ಪ್ರಭು ನಿನ್ನನ್ನು ಹೇಗೆ ಮರೆಯಲು ಸಾಧ್ಯ? ನೀನಲ್ಲವೇ ಈ ಸರೋವರವನನ್ನು ಕಟ್ಟಿಸಿದುದು? ನೀನಲ್ಲವೇ ನಮಗೆಲ್ಲರಿಗೂ ನೆಮ್ಮದಿಯಿಂದ ಬದುಕುವಂತೆ ಮಾಡಿರುವುದು? ನೀನು ಇಲ್ಲದಿದ್ದರೆ ನಮ್ಮ ಪರಿಸ್ಥಿತಿ ಏನಾಗುತ್ತಿತ್ತು. ರೈತ ಭಾಂದವರೆಲ್ಲ ಅನ್ನ ನೀರಿಲ್ಲದೆ ಅಲೆಯ ಬೇಕಾಗಿತ್ತು. ಮರಗಿಡಗಳು ನೀರು ಇಲ್ಲದೆ ನಾಶವಾಗಿ ಪಕ್ಷಿಗಳ ಸಂತತಿಯೇ ನಾಶವಾಗುತ್ತಿತ್ತು .ಅನ್ನ ಫನೀರಿಲ್ಲದೆ ಮಾನವ ಸಂತತಿ ನಿರ್ನಾಮವಾಗುತ್ತಿತ್ತು.ಇಷ್ಟೆಲ್ಲಾ ಅಭಿವೃದ್ಧಿಯನ್ನು ಮಾಡಿದ ನಿನ್ನನ್ನು ಹೇಗೆ ತಾನೇ ಮರೆಯಲು ಸಾಧ್ಯ? ನೀನೊಬ್ಬ ಪುಣ್ಯಾತ್ಮ. ಮತ್ತೊಮ್ಮೆ ರಾಜನಾಗಿ ಬಂದು ನಮಗೆ ಎಲ್ಲ ರೀತಿಯ ಸಹಕಾರಗಳನ್ನು ಕೊಡು, ನಮ್ಮ ನಾಡನ್ನು ಸ್ವರ್ಗವಾಗಿ ಮಾಡು” ಎಂದು ಬೇಡುತ್ತಾ ಮತ್ತೊಮ್ಮೆ ನಮಸ್ಕರಿಸಿತು. ಈರಾಜನಿಗೆ ತುಂಬಾ ಸಂತೋಷವಾಗಿ ಆಮೆಯನ್ನು ಹಿಡಿದುಕೊಂಡು ಅಪ್ಪಿಕೊಳ್ಳುತ್ತಾ ತನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಿದನು.
ಆ ಸಮಯಕ್ಕೆ ಸರಿಯಾಗಿ ಸ್ವರ್ಗದಿಂದ ವಿಮಾನವೊಂದು ಕೆಳಗಿಳಿಯಿತು. ಅದರಿಂದ ಕೆಳಗಿಳಿದ ದೇವತೆಗಳು,
” ಮಹಾರಾಜ, ಆಮೆಯು ನಿನ್ನನ್ನು ನಿನ್ನ ಕಾರ್ಯವನ್ನು ನೆನಪಿಸಿಕೊಂಡು ಸ್ತುತಿಸತೊಡಗಿದ ಮೇಲೆ ಸ್ವರ್ಗದಲ್ಲಿ ನಿನ್ನ ಪುಣ್ಯದ ಪ್ರಮಾಣವು ಬೆಳೆಯುತ್ತಾ ಹೋಗುತ್ತಿದೆ ಆದ್ದರಿಂದ ನಮ್ಮ ಜತೆಗೆ ಮತ್ತೊಮ್ಮೆ ಸ್ವರ್ಗಕ್ಕೆ ಬಂದು ಅಲ್ಲಿ ಸುಖ ಸಂತೋಷಗಳಿಂದ ನೆಲೆಸು”ಎಂದು ಆಹ್ವಾನಿಸಿದರು. ಆದರೆ ಅದಕ್ಕೆ ಒಪ್ಪದ ರಾಜನು,
“ಇಲ್ಲ ನಾನು ಇಲ್ಲಿ ಭೂಮಿಯಲ್ಲಿ ಇದ್ದು ಇನ್ನೂ ಕೆಲವು ಕಾಲ ರಾಜ್ಯಭಾರ ಮಾಡುತ್ತೇನೆ. ಸಾಧ್ಯವಾದಷ್ಟು ಹೆಚ್ಚು ಹೆಚ್ಚಾಗಿ ಪ್ರಜಾ ಹಿತಕಾರ್ಯಗಳನ್ನು ಮಾಡುತ್ತೇನೆ. ಹೀಗೆ ಮಾಡಿ ಅವರ ಪ್ರೀತಿಗೆ ಪಾತ್ರನಾಗುತ್ತಾನೆ. ನನಗೆ ಸ್ವರ್ಗ ಸುಖಕ್ಕಿಂತಲೂ ಜನಸೇವೆಯೇ ಹೆಚ್ಚಿನ ಸುಖ ಕೊಡುತ್ತದೆ. ” ಎಂದು ಹೇಳುತ್ತಾ ದೇವತೆಗಳನ್ನು ಖಾಲಿ ವಿಮಾನದ ಜತೆಯಲ್ಲಿ ತಿರುಗಿ ಕಳಿಸಿದನು.
ಅದಕ್ಕೇ ಹೇಳುವುದು, “ಜನಸೇವೆಯೇ ಜನಾರ್ದನ ಸೇವೆ ” ಎಂದು. ಇಲ್ಲಿ ನಾವು ಮಾಡಿದ ಪುಣ್ಯ ಕಾರ್ಯಗಳು ಕಾಲಕಾಲಕ್ಕೆ ಸ್ವರ್ಗದಲ್ಲಿ ಬೆಳೆಯುತ್ತಾ ಹೋಗುತ್ತವೆ.

(ಪೇಜಾವರ ಶ್ರೀಗಳು ತಮ್ಮ ಕೊನೆಯ ಪ್ರವಚನದಲ್ಲಿ ಹೇಳಿದ ಕಥೆ)

ಮತ್ತಷ್ಟು ಸುದ್ದಿಗಳು

vertical

Latest News

ಸ್ನೇಹಿತೆ ಜತೆ ದೈಹಿಕ ಸಂಪರ್ಕಕ್ಕೆ ಪ್ರೇಯಸಿ ಒತ್ತಾಯ: ನಿರಾಕರಿಸಿದ ಪ್ರಿಯಕರನ ಮರ್ಮಾಂಗವನ್ನೇ ಕಚ್ಚಿದ ಗೆಳತಿ!

newsics.com ಕಾಸ್ಪುರ: ತನ್ನ ಸ್ನೇಹಿತೆಯೊಂದಿಗೆ ದೈಹಿಕ ಸಂಪರ್ಕ ಸಾಧಿಸಲಿಲ್ಲ ಎಂದು ಕೋಪಗೊಂಡ ಗೆಳತಿ, ಪ್ರಿಯಕರನ ಗುಪ್ತಾಂಗಕ್ಕೆ ಕಚ್ಚಿದ್ದಾಳೆ. ಇಂಥದ್ದೊಂದು ವಿಚಿತ್ರ ಮತ್ತು ಆಘಾತಕಾರಿ ಘಟನೆ ನಡೆದಿದ್ದು ಉತ್ತರಪ್ರದೇಶದಲ್ಲಿ. ಇಲ್ಲಿನ...

ಬಿಜೆಪಿ ನಾಯಕ, ಮಾಜಿ ಕೇಂದ್ರ ಸಚಿವ ಶಾನವಾಜ್ ಹುಸೇನ್’ಗೆ ಹೃದಯಾಘಾತ!

newsics.com ಮುಂಬೈ: ಬಿಜೆಪಿ ನಾಯಕ, ಮಾಜಿ ಕೇಂದ್ರ ಸಚಿವ ಶಾನವಾಜ್ ಹುಸೇನ್'ಗೆ ಹೃದಯ ಸ್ತಂಭನವಾಗಿದ್ದು, ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಂಜಿಯೋಪ್ಲ್ಯಾಸ್ಟಿ ಮಾಡಿಸಲಾಗಿದೆ. ಶಾನವಾಜ್ ಹುಸೇನ್ ಹೃದಯಾಘಾತದಿಂದ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಂಜಿಯೋಪ್ಲಾಸ್ಟಿ...

ಮನೆ ನೌಕರರಿಗೆ ಕಿರುಕುಳ ನೀಡುತ್ತಿದ್ದ ಸೇನಾ ಮೇಜರ್, ಆತನ ಪತ್ನಿ ಬಂಧನ!

newsics.com ಅಸ್ಸಾಂ: ಮನೆ ನೌಕರರಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಸೇನಾ ಮೇಜರ್ ಹಾಗೂ ಆತನ ಪತ್ನಿಯನ್ನು ಅಸ್ಸಾಂನಲ್ಲಿ ಬಂಧಿಸಲಾಗಿದೆ. ಅಸ್ಸಾಂನ ದಿಮಾ ಹಸಾವೋ ಜಿಲ್ಲೆಯಲ್ಲಿ ಸೇನಾ ಮೇಜರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು...
- Advertisement -
error: Content is protected !!