Saturday, November 27, 2021

ಗರುಡನ ಆದರ್ಶ ರಾಜ್ಯ

Follow Us

ನಮ್ಮ ಕಾಡಿಗೆ ಒಬ್ಬ ಆದರ್ಶ ರಾಜನ ಆಯ್ಕೆ ಮಾಡಬೇಕು. ಶೌರ್ಯ, ಶಕ್ತಿ ಮತ್ತು ಬುದ್ಧಿಮತ್ತೆಗೆ ಹೆಸರಾದ ಗರುಡನನ್ನು ರಾಜನನ್ನಾಗಿ ಮಾಡಿದರೆ ಒಳ್ಳೆಯದೆಂದು ಬಹಳಷ್ಟು ಪಕ್ಷಿಗಳು ಹೇಳಿದವು. ಅಷ್ಟರಲ್ಲಿ ಕಾಗೆ ಮತ್ತು ಗೂಬೆ ನಮಗೂ ರಾಜನಾಗುವ ಅವಕಾಶ ಕೊಡಿ ಎಂದು ಬೇಡಿಕೊಂಡವು. ಆಗ ಗರುಡ, ಕಾಗೆ ಮತ್ತು ಗೂಬೆಗಳನ್ನು ಅಭ್ಯರ್ಥಿಗಳನ್ನಾಗಿ ಮಾಡಿ, ಮೂರರಲ್ಲಿ ತಮಗೆ ಇಷ್ಟವಾದ ಪಕ್ಷಿಯ ಮನೆಯ ಮುಂದೆ ಕಾಳು ಹಾಕುವಂತೆ ಹೇಳಲಾಯಿತು.
♦ ಮಲಿಕಜಾನ ಶೇಖ, ಅಕ್ಕಲಕೋಟ, ಮಹಾರಾಷ್ಟ್ರ
response@134.209.153.225
newsics.com@gmail.com

ವಿಂಧ್ಯ ಪರ್ವತಗಳ ಇಳಿಜಾರು ಭಾಗದಲ್ಲಿ ‘ಸುಂದರಬನ’ ಎಂಬ ಸುಂದರ ಕಾಡು. ಹಚ್ಚು ಹಸಿರಿನ ಸಿರಿ, ಸುತ್ತಲೂ ಪರ್ವತ ಶ್ರೇಣಿ. ಅಲ್ಲಲ್ಲಿ ನೀರಿನ ಹೊಂಡಗಳು, ಜುಳು ಜುಳು ಹರಿಯುವ ನದಿ ಇವೆಲ್ಲವುಗಳಲ್ಲಿ ಹಾರಾಡಿ, ನಲಿದು ನೆಮ್ಮದಿಯಿಂದ ಬದುಕುವ ಪಕ್ಷಿ ಸಂಕುಲ. ಪಕ್ಷಿಗಳೆಲ್ಲಾ ಹಾರಾಡಿಕೊಂಡು ಗೂಡು ಮಕ್ಕಳೆಂದು ಸಂತೋಷವಾಗಿದ್ದವು. ಕಾಲಕ್ರಮೇಣ ಅವುಗಳಲ್ಲಿ ಸ್ವಾರ್ಥ ಬೆಳೆದು, ತಂಡ ಕಟ್ಟಿಕೊಂಡು ಕಳ್ಳತನ, ಸುಲಿಗೆ, ಅನ್ಯಾಯದಲ್ಲಿ ನಿರತರಾದವು. ಅದರಲ್ಲಿ ನೆರೆಯ ಕಾಡಿನ ಬರಗಾಲದಿಂದ ಅಲ್ಲಿಯ ಪಕ್ಷಿಗಳ ವಲಸೆಯಾಗಿ ಬರುವದು ದೊಡ್ಡ ಸಮಸ್ಯೆಯಾಯಿತು.
ಈ ಬಗ್ಗೆ ಅಲ್ಲಿಯ ಎಲ್ಲ ಪಕ್ಷಿಗಳು ಕೂಡಿಕೊಂಡು ಸಮಾಲೋಚನೆ ಮಾಡಿದವು. ನಮ್ಮ ಪಕ್ಷಿಗಳ ಬದುಕು ನೆಮ್ಮದಿ, ಸಂತೋಷಕ್ಕೆ ಮರಳಬೇಕಾದರೆ ನಮ್ಮ ಕಾಡಿಗೆ ಒಬ್ಬ ಆದರ್ಶ ರಾಜನ ಆಯ್ಕೆ ಮಾಡಬೇಕು. ಶೌರ್ಯ, ಶಕ್ತಿ ಮತ್ತು ಬುದ್ಧಿಮತ್ತೆಗೆ ಹೆಸರಾದ ಗರುಡನನ್ನು ರಾಜನನ್ನಾಗಿ ಮಾಡಿದರೆ ಒಳ್ಳೆಯದೆಂದು ಬಹಳಷ್ಟು ಪಕ್ಷಿಗಳು ಹೇಳಿದವು. ಆ ತೀರ್ಮಾನ ಮಾಡುವುದಿತ್ತು, ಅಷ್ಟರಲ್ಲಿ ಕಾಗೆ ಮತ್ತು ಗೂಬೆ ನಮಗೂ ರಾಜನಾಗುವ ಅವಕಾಶ ಕೊಡಿ ಎಂದು ಬೇಡಿಕೊಂಡವು. ಸಭೆಯ ಮುಂದೆ ಹೊಸ ಪೇಚು ನಿರ್ಮಾಣವಾಯಿತು. ಆಗ ಗರುಡ, ಕಾಗೆ ಮತ್ತು ಗೂಬೆಗಳನ್ನು ಅಭ್ಯರ್ಥಿಗಳನ್ನಾಗಿ ಮಾಡಿ, ಮೂರರಲ್ಲಿ ತಮಗೆ ಇಷ್ಟವಾದ ಪಕ್ಷಿಯ ಮನೆಯ ಮುಂದೆ ಕಾಳು ಹಾಕುವಂತೆ ಹೇಳಲಾಯಿತು. ಇದಕ್ಕಾಗಿ ಎಲ್ಲ ಪಕ್ಷಿಗಳಿಗೆ ಐದು ದಿನಗಳ ಅವಕಾಶ ಕೊಡಲಾಯಿತು.
ಮೂರು ಪಕ್ಷಿ ಕಾಡಿನ ಪಕ್ಷಿಗಳನ್ನು ಒಲಿಸಿಕೊಳ್ಳುವದಕ್ಕೆ ತಮ್ಮ ತಂಡ ಕಟ್ಟಿಕೊಂಡು ಹೊರಟವು. ಗರುಡ ಶಿಸ್ತಿನ ಸಿಪಾಯಿ, ದಿಟ್ಟ ಸ್ವಭಾವ, ಕೆಲಸದ ಬಗ್ಗೆ ಮಾತಾಡಿ ಕಾಡಿನಲ್ಲಿ ಸೇರುವ ವೈರಿಗಳನ್ನು ತಡೆಯಲು ಮುಂದಾಯಿತು. ಗೂಬೆ ಕನಸು ದೊಡ್ಡದು, ಆದರೆ ಹಗಲಿನಲ್ಲಿಯೇ ಮಲಗುತ್ತಿತ್ತು. ರಾತ್ರಿ ಸ್ವಲ್ಪ ಎಲ್ಲರಿಗೆ ಬಣ್ಣದ ಲೋಕ ತೋರಿಸಿ ಮತ್ತೆ ಮಲಗುತ್ತಿತ್ತು. ಆದರೆ ಯಾವ ವಿಶೇಷ ಗುಣವಿಲ್ಲದ, ಹಳಸಿದ ಅನ್ನಕ್ಕೆ ಮತ್ತು ಕೊಳೆತ ಮಾಂಸಕ್ಕೆ ಜಾರುವ ಕಾಗೆಗೆ ಮಾತ್ರ ರಾಜನಾಗುವ ಬಯಕೆ ಬಹಳ. ಎಲ್ಲ ಪಕ್ಷಿಗಳ ಮುಂದೆ ಸತತ ಕಾ.. ಕಾ.. ಮಾಡುತ್ತಾ ಇಲ್ಲಸಲ್ಲದ ಮಾತುಗಳನ್ನು ಹೇಳುತ್ತಿತ್ತು. ‘ನಾನು ರಾಜನಾದರೆ ಗರುಡನಗಿಂತ ಎತ್ತರಕ್ಕೆ ಹಾರಿ, ವರುಣ ದೇವನನ್ನು ಸೋಲಿಸಿ ಕಾಡಲ್ಲಿ ಬರಗಾಲ ಬೀಳದಂತೆ ನೋಡಿಕೋಳ್ಳುತ್ತೇನೆ’ ಎಂದು ಹೇಳುತ್ತಿತ್ತು. ಇಂತಹ ಮಾತುಗಳಿಗೆ ಮಾರುಹೋಗಿ ಪಕ್ಷಿಗಳು ಕಾಗೆಯತ್ತ ಜಾರಲು ಪ್ರಾರಂಭ ಮಾಡಿದವು. ಕಾಗೆ ತನ್ನ ಗ್ಯಾಂಗಿಗೆ ಕರೆದು, ಪ್ರತಿ ಹಕ್ಕಿ ಗೂಡಿಗೆ ಕೊಳೆತ ಮಾಂಸದ ತುಣುಕು ಮತ್ತು ಹಳಸಿದ ಅನ್ನ ಹಾಕಲು ಹೇಳಿತು. ಆಗ ಮಾತ್ರ ದೊಡ್ಡ ಚಮಾತ್ಕಾರವೇ ಆಯಿತು. ಎಲ್ಲ ಹಕ್ಕಿಗಳು ಕಾಗೆಯೇ ನಮ್ಮ ರಾಜನೆಂದು ಹೇಳತೊಡಗಿದವು.
ಐದು ದಿನಗಳ ನಂತರ ನೋಡಿದರೆ ಕಾಗೆಯ ಮನೆಯ ಮುಂದೆ ಕಾಳಿನ ದೊಡ್ಡ ರಾಶಿಯೇ ಬಿದ್ದಿತ್ತು. ಗೂಬೆಗೆ ಸ್ವಲ್ಪ ಕಾಳು ಬಂದಿದ್ದವು. ಆದರೆ ಗರುಡನಿಗೆ ಮಾತ್ರ ಒಂದು ಕಾಳೂ ಹಾಕಿರಲಿಲ್ಲ. ಅದಕ್ಕೆ ಬಹಳ ನೋವಾಯಿತು. ಹಕ್ಕಿಗಳಿಗೆ ‘ಶಿಸ್ತು, ಶೌರ್ಯ, ಶಾಂತಿ, ರಕ್ಷಣೆ’ ಬೇಕಾಗಿಲ್ಲ ಎಂದು ನೊಂದುಕೊಂಡಿತು.
ಅತ್ತ ಕಾಗೆಯ ಮನೆಯ ಮುಂದೆ ಮಾತ್ರ ಸಂತೋಷಕ್ಕೆ ಪಾರವೇ ಇರಲಿಲ್ಲ. ಕಾಡಿನ ತುಂಬೆಲ್ಲಾ ‘ಕಾ,, ಕಾ,,’ ಕರ್ಕಶ ಧ್ವನಿಯು ಆವರಿಸಿತು. ಕಾಗೆ ಕಾರುಬಾರು ಪ್ರಾರಂಭಿಸಿತು. ತನ್ನ ದರಬಾರದಲ್ಲಿ ಕೋಳಿ, ಗೂಬೆ, ಬಾವಲಿಗಳಂತಹ ಪಕ್ಷಿಗಳನ್ನು ಮಂತ್ರಿಗಳನ್ನಾಗಿ ಮಾಡಿ ಸಲಹೆ ಪಡೆಯುತ್ತಿತ್ತು.
ಕಾಗೆ ರಾಜನಾದ ನಂತರ ಕಾಡಿನ ತುಂಬೆಲ್ಲಾ ಹೊಲಸುತನ ಪ್ರಾರಂಭವಾಯಿತು. ಹೊಲಸು ತಿಂದು ಹೊಲಸು ಮಾಡುವುದು ಹೆಚ್ಚಾಯಿತು. ಇಷ್ಟು ದಿನ ಗರುಡಕ್ಕೆ ಅಂಜಿ ಕುಳಿತ ಕಾಗೆಗಳ ಗ್ಯಾಂಗು ಸಕ್ರಿಯವಾದವು. ಎಲ್ಲ ಪಕ್ಷಿಗಳ ಮೇಲೆ ದಬ್ಬಾಳಿಕೆ ಪ್ರಾರಂಭವಾಯಿತು. ಕಾಡಿನಲ್ಲಿ ಒಂದು ರೀತಿಯ ಭಯದ ವಾತಾವರಣ. ಮೊದಲಿದ್ದ ಸ್ವಾತಂತ್ರ್ಯವೂ ಇಲ್ಲದಂತಾಯಿತು. ಆದರ್ಶತನ, ಬುದ್ಧಿಮತ್ತೆ ಮಣ್ಣಾಯಿತು. ಪಕ್ಷಿಗಳಿಗೆ ಪಶ್ಚಾತ್ತಾಪ ಆಗುತ್ತಲಿತ್ತು. ಅಂತಹದರಲ್ಲಿ ನೆರೆಯ ಕಾಡಿನ ಪಕ್ಷಿಗಳು ಈ ಕಾಡಿನ ಮೇಲೆ ಯುದ್ಧ ಸಾರಿದವು. ಎಲ್ಲ ಪಕ್ಷಿಗಳಿಗೆ ಮತ್ತಷ್ಟು ಚಿಂತೆಯಾಯಿತು. ‘ಚುಗುಲಿ’ ಮಾಡುವ ಕಾಗೆಗಳೇನು ಯುದ್ಧ ಮಾಡಬೇಕು.
ಆಗ “ನಮ್ಮ ಕಾಡನ್ನು ರಕ್ಷಣೆ ಮಾಡುವುದು ನನ್ನ ಧರ್ಮ” ಎಂದು ಗರುಡ ತನ್ನ ಸ್ನೇಹಿತರ ಸಹಕಾರದಿಂದ ವೀರಾವೇಶದಿಂದ ಕಾದಾಡಿ ಅವುಗಳನ್ನು ಹಿಮ್ಮೆಟ್ಟಿಸಿತು. ಎಲ್ಲ ಪಕ್ಷಿಗಳಿಗೆ ಗರುಡನ ಮೇಲೆ ಗರ್ವ ಎನಿಸಿತು. ಅವೆಲ್ಲವೂ ಗರುಡನಿಗೆ ಜಯ ಜಯಕಾರ ಹಾಕುತ್ತಾ ಬಂದು ಕ್ಷಮೆ ಕೇಳಿ, “ನೀನೆ ರಾಜನಾಗಬೇಕು ಮತ್ತು ಕಾಗೆಗಳ ಹೊಲಸು ವೃತ್ತಿಗೆ ಕಡಿವಾಣ ಹಾಕಬೇಕು” ಎಂದು ವಿನಂತಿಸಿಕೊಂಡವು. ಅಂದಿನಿಂದ ತ್ಯಾಗ, ಪ್ರಾಮಾಣಿಕ, ನಿಸ್ವಾರ್ಥಗಳಂತಹ ಆದರ್ಶ ಗುಣವುಳ್ಳ; ಶೌರ್ಯ ಮತ್ತು ಚತುರತೆಗೆ ಹೆಸರಾದ, ಶಾಂತತೆ ಮತ್ತು ಸೌಹಾರ್ದ ಕಾಪಾಡುವ ಗರುಡ ಪಕ್ಷಿಯು ರಾಜನಾಗುತ್ತದೆ. ಮತ್ತೆ ಎಲ್ಲ ಪಕ್ಷಿಗಳು ನೆಮ್ಮದಿಯಿಂದ ಬದುಕುತ್ತವೆ.

ಮತ್ತಷ್ಟು ಸುದ್ದಿಗಳು

Latest News

ವಿವಾಹಿತೆಯ ಜತೆ ಅಕ್ರಮ ಸಂಬಂಧ ಹೊಂದಿದ್ದ ಪೊಲೀಸ್ ಎಸ್ಐ ಅಮಾನತು

newsics.com ವಾರಂಗಲ್(ಆಂಧ್ರಪ್ರದೇಶ): ವಿವಾಹಿತೆಯ ಜತೆ ಅಕ್ರಮ ಸಂಬಂಧ ಹೊಂದಿರುವ ಆರೋಪದ ಮೇಲೆ ಪೊಲೀಸ್ ಎಸ್ಐ ಒಬ್ಬರನ್ನು ಅಮಾನತುಗೊಳಿಸಲಾಗಿದೆ. ವಾರಂಗಲ್‌ನ ‍ವನಪರ್ತಿ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಶೇಕ್ ಶಾಪಿ...

ಗುದದ್ವಾರಕ್ಕೆ ಏರ್ ಪಂಪ್: ಸ್ನೇಹಿತ ಸಾವು

newsics.com ಬೆಂಗಳೂರು: ತಮಾಷೆಗೆ ಸ್ನೇಹಿತನ ಗುದದ್ವಾರಕ್ಕೆ ಏರ್ ಪಂಪ್ ಮಾಡಿದ್ದು, ಆತ ಮೃತಪಟ್ಟ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದ ರೆಹಮತ್ ಅಲಿ ಮೃತಪಟ್ಟ ವ್ಯಕ್ತಿ. ನವೆಂಬರ್ 16ರಂದು ಕೋಲ್ಕತ್ತಾದ ಗಿರಣಿಯಲ್ಲಿ ರಾತ್ರಿ...

ಲಾಲೂ ಪ್ರಸಾದ್ ಯಾದವ್ ಅಸ್ವಸ್ಥ: ಏಮ್ಸ್‌ಗೆ ದಾಖಲು

newsics.com ನವದೆಹಲಿ: ಆರ್‌ಜೆಡಿ ಮುಖ್ಯಸ್ಥ ಹಾಗೂ ಬಿಹಾರದ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಅಸ್ವಸ್ಥರಾಗಿದ್ದು, ಅವರನ್ನು ದೆಹಲಿಯ ಏಮ್ಸ್‌ನ ತುರ್ತು ನಿಗಾ ಘಟಕಕ್ಕೆ ದಾಖಲಿಸಲಾಗಿದೆ. 73 ವರ್ಷದ ಲಾಲೂ ಅವರು ಜ್ವರ, ದಣಿವಿನಿಂದ ಬಳಲಿದ್ದು,...
- Advertisement -
error: Content is protected !!