Saturday, April 17, 2021

ನೊರೆಹಾಲಿನಿಂದ ಪಕ್ಷಿಗೆ ಜೀವದಾನ

♦ ಶ್ರವಣ್ ಬಿರಾದಾರ್
response@newsics.com
newsics.com@gmail.com




 ಗೌ ತಮನೆಂಬ ಒಬ್ಬ ಬ್ರಾಹ್ಮಣನಿದ್ದ. ಅವನು ವೇದಾಧ್ಯಯನ ಮಾಡಿರಲಿಲ್ಲ, ಆಚಾರವಂತನೂ ಆಗಿರಲಿಲ್ಲ. ಅವನು ಭಿಕ್ಷಾಟನೆ ಮಾಡುತ್ತ ಬ್ರಾಹ್ಮಣಪ್ರಿಯನೂ, ದರೋಡೆಕೋರನೂ ಆಗಿದ್ದ ಧನಿಕನಾದ ದಸ್ಯುವಿನಲ್ಲಿ ಆಶ್ರಯ ಪಡೆದ. ಅವನ ಸಾಹಚರ್ಯದಿಂದ ದಿನ ಕಳೆದಂತೆ ಪ್ರಾಣಿಹಿಂಸೆಯಲ್ಲಿ ಪ್ರವೀಣನೂ, ಅತ್ಯಂತ ಕ್ರೂರನೂ ಆದ.
ಒಂದು ದಿನ ಇನ್ನೊಬ್ಬ ಬ್ರಾಹ್ಮಣನು ಆ ದಸ್ಯುವಿನ ಗ್ರಾಮಕ್ಕೆ ಬಂದ. ಅವನು ವೇದಾಧ್ಯಯನ ಪಾರಂಗತನೂ, ಬ್ರಹ್ಮಚಾರಿಯೂ ಆಗಿದ್ದ. ಅವನು ಬ್ರಾಹ್ಮಣರ ಮನೆಯನ್ನು ಹುಡುಕುತ್ತ ಗೌತಮನಲ್ಲಿಗೆ ಬಂದ. ಅಷ್ಟರಲ್ಲಿ ಗೌತಮನೂ ಪಕ್ಷಿಗಳ ಬೇಟೆ ಮುಗಿಸಿ ಹಂಸಪಕ್ಷಿಗಳನ್ನು ಹೊತ್ತುಕೊಂಡು ಮನೆಗೆ ಬಂದ. ಅವನ ಕೈಯಲ್ಲಿರುವ ಧನುರ್ಬಾಣಗಳನ್ನೂ, ಮೈಯ್ಯೆಲ್ಲ ರಕ್ತಮಯವಾದುದನ್ನೂ ನೋಡಿ ತನ್ನ ಬಾಲ್ಯಸ್ನೇಹಿತನೆಂದು ಗುರುತಿಸಿ ಅವನಿಗೆ ಬ್ರಾಹ್ಮಣನಾಗಿದ್ದು, ಹೀಗೆ ರಾಕ್ಷಸಕೃತ್ಯವನ್ನು ಮಾಡಬಾರದೆಂದು ಬುದ್ಧಿ ಹೇಳಿದನು. ಅಲ್ಲದೆ, ಆ ರಾತ್ರಿ ಅಲ್ಲಿ ಅವನೊಡನೆ ಉಣ್ಣಲು ಸಮ್ಮತಿಸದೆ ಬೆಳಗಾಗುವಾಗ ಹೊರಟು ಹೋದನು.
ಗೌತಮನೂ ಮನೆಯಿಂದ ಹೊರಟು ಬರುವಾಗ ಸಿಕ್ಕಿದ ವೈಶ್ಯರೊಡನೆ ಸೇರಿಕೊಂಡು ಆಕ್ರಮಣ ಮಾಡಿದ ಆನೆಯಿಂದ ತಪ್ಪಿಸಿಕೊಂಡು ಒಬ್ಬನೇ ನಡೆದು ಹೋದನು. ನಡೆದು ನಡೆದು ಒಂದು ಸುಂದರವಾದ ಆಲದ ಮರದ ಕೆಳಗೆ ವಿಶ್ರಮಿಸಿದನು. ಆಗ ಅಲ್ಲಿಗೆ ರಾಜಧರ್ಮ ಎಂಬ ಒಂದು ಬಕಪಕ್ಷಿಯು ಬಂತು. ಅದನ್ನು ಹಸಿವೆಯಿಂದ ಬಳಲಿದ ಗೌತಮನು ಕೊಲ್ಲಲು ಬಯಸಿದನು. ಅಷ್ಟರಲ್ಲಿ ಆ ಪಕ್ಷಿಯೇ ಗೌತಮನನ್ನು ವಿಚಾರಿಸಿ ಆದರಾತಿಥ್ಯ ಮಾಡಿ ಅವನ ಬಯಕೆಯಂತೆ ಅವನ ಬಡತನವನ್ನು ಹೋಗಲಾಡಿಸಲು ವಿರೂಪಾಕ್ಷ ರಾಜನಲ್ಲಿಗೆ ಕಳುಹಿಸಿತು. ಅಲ್ಲಿ ಅವನಿಗೆ ಹೇರಳ ಸುವರ್ಣದಾನ ಸಿಕ್ಕಿತು. ಅಲ್ಲಿಂದ ಹಿಂತಿರುಗಲು ಆಲೋಚಿಸಿದ ಅವನು, ತನ್ನ ಮನೆಯನ್ನು ಸೇರಲು ಕೆಲವು ದಿನ ಬೇಕಾದೀತು. ಅಲ್ಲಿಯತನಕ ಹಸಿವೆಯಿಂದ ಇರಲು ಸಾಧ್ಯವಿಲ್ಲವೆಂದು ಬಗೆದು ತನ್ನೊಂದಿಗೆ ಮಲಗಿ ನಿದ್ರಿಸುತ್ತಿದ್ದ ರಾಜಧರ್ಮ ಪಕ್ಷಿಯನ್ನು ಕೊಂದು ಹೊತ್ತುಕೊಂಡು ಹೋದನು. ವಿಷಯ ವಿರೂಪಾಕ್ಷ ರಾಜನಿಗೆ ಗೊತ್ತಾಗಿ ಗೌತಮನನ್ನು ಕೊಲ್ಲಿಸಿದನು. ಮಿತ್ರದ್ರೋಹಿಯೂ, ಕೃತಘ್ನನೂ, ನರಾಧಮನೂ ಆದ ಅವನ ಮಾಂಸವನ್ನು ತಿನ್ನಲು ಪ್ರಾಣಿಗಳಾಗಲೀ, ಪಕ್ಷಿಗಳಾಗಲೀ ಒಪ್ಪಲಿಲ್ಲ.
ಕೊನೆಗೆ ವಿರೂಪಾಕ್ಷ ರಾಜನೇ ಚಿತೆಯನ್ನು ರಚಿಸಿ ಬೆಂಕಿ ಇಟ್ಟು ರಾಜಧರ್ಮನ ಪ್ರೇತಕಾರ್ಯ ನೆರವೇರಿಸಿದನು. ಆಗ ಸುರಭಿದೇವಿಯು ಕೆಚ್ಚಲಿನಲ್ಲಿ ಹಾಲನ್ನು ತುಂಬಿಕೊಂಡು ಚಿತೆಯ ಮೇಲ್ಭಾಗದಲ್ಲಿ ನಿಂತುಕೊಂಡಿತು. ಅದರ ಮೊಲೆಗಳಿಂದ ನೊರೆಸಹಿತವಾದ ಹಾಲು ಚಿತೆಯ ಮೇಲೆ ಸುರಿಯಿತು. ಕೂಡಲೇ ಆ ಪಕ್ಷಿ ಜೀವಂತವಾಗಿ ಎದ್ದು ಬಂತು. ಅಲ್ಲದೆ, ಅದರ ವಿನಂತಿಯಂತೆ ಇಂದ್ರನು ಗೌತಮನನ್ನೂ ಬದುಕಿಸಿದನು. ಅವನು ಐಶ್ವರ್ಯಸಹಿತ ಶಬರಾಲಯವನ್ನು ಸೇರಿದರೂ, ಅಧರ್ಮಾಚರಣೆಯ ಫಲವಾಗಿ ದೇವತೆಗಳಿಂದ ಘೋರವಾದ ನರಕವಾಸದ ಶಾಪಕ್ಕೆ ಗುರಿಯಾದನು.

ಮತ್ತಷ್ಟು ಸುದ್ದಿಗಳು

Latest News

ಆಸ್ಪತ್ರೆಗೆ ನುಗ್ಗಿ 850 ರೆಮಿಡಿಸಿವರ್ ಇಂಜೆಕ್ಷನ್ ಕಳ್ಳತನ

newsics.com ಭೋಪಾಲ್(ಮಧ್ಯಪ್ರದೇಶ): ಇಲ್ಲಿನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ನುಗ್ಗಿದ ದುಷ್ಕರ್ಮಿಗಳು 850 ರೆಮಿಡಿಸಿವರ್ ಇಂಜೆಕ್ಷನ್ ಗಳನ್ನು ಕಳ್ಳತನ ಮಾಡಿದ್ದಾರೆ. ದೇಶದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ನಡುವೆ ಕಾಳಸಂತೆಯಲ್ಲಿ ಔಷಧ...

ಕೇಂದ್ರ ಸಚಿವ ಕಿರೆನ್ ರಿಜಿಜುಗೆ ಕೊರೋನಾ ಸೋಂಕು

newsics.com ನವದೆಹಲಿ: ಕೇಂದ್ರ ಸಚಿವ ಕಿರೆನ್ ರಿಜಿಜು ಅವರಿಗೆ ಶನಿವಾರ ಕೊರೋನಾ ಸೋಂಕು ತಗುಲಿದೆ. ಈ ವಿಷಯವನ್ನು ಸ್ವತಃ ಸಚಿವ ಕಿರೆನ್ ರಿಜಿಜು ಅವರೇ ತಿಳಿಸಿದ್ದಾರೆ. ಟ್ವಿಟರ್ ನಲ್ಲಿ ಈ‌ ಮಾಹಿತಿ ಹಂಚಿಕೊಂಡಿರುವ ರಿಜಿಜು,...

ಕೊರೋನಾ ಸೋಂಕಿತರ ಚಿಕಿತ್ಸೆಗೆ ‌ಬಳಸುವ ರೆಮ್​ಡಿಸಿವಿರ್ ಇಂಜೆಕ್ಷನ್ ಬೆಲೆ ಇಳಿಕೆ

newsics.com ನವದೆಹಲಿ: ಕೊರೋನಾ ಸೋಂಕಿತ ರೋಗಿಗಳ ಚಿಕಿತ್ಸೆಗೆ ಬಳಸುವ ರೆಮ್​ಡಿಸಿವಿರ್ ಇಂಜೆಕ್ಷನ್ ಬೆಲೆಯನ್ನು ಫಾರ್ಮಾ ಕಂಪೆನಿಗಳು ‌ಸ್ವಪ್ರೇರಣೆಯಿಂದ ಇಳಿಕೆ ಮಾಡಿವೆ. ಕೆಡಿಲಾ ಕಂಪನಿಯು ತನ್ನ ರೆಮ್ಡೆಕ್ ಬ್ರಾಂಡಿನ ರೆಮ್ಡೆಸಿವಿರ್ ಬೆಲೆಯನ್ನು 2800 ರೂ.ನಿಂದ 899 ರೂಪಾಯಿಗೆ...
- Advertisement -
error: Content is protected !!