Wednesday, May 31, 2023

ತಾಯಿ ಋಣ…

Follow Us

* ಸಂತೋಷ ಪ್ರಭು
response@134.209.153.225

ಬ್ಬ ಯುವಕನು ಮಾತೃಋಣ ತೀರಿಸಲೆಂದು ಒಂದು ಲಕ್ಷ ಬಂಗಾರದ ನಾಣ್ಯಗಳನ್ನು ಸೇರಿಸಿ ತಾಯಿಗೆ ಕೊಟ್ಟು, ‘ಅಮ್ಮ ಈ ಬಂಗಾರದ ನಾಣ್ಯಗಳಿಂದ ನಿನಗೆ ಇಷ್ಟವಾದುದನ್ನು ಮಾಡಿಸಿಕೋ. ಇದರಿಂದ ನನಗೆ ತಾಯಿ ಋಣದಿಂದ ಮುಕ್ತಿ ಸಿಗುತ್ತದೆ’ ಅನ್ನುತ್ತಾನೆ.
ತಾಯಿ ಮುಗುಳ್ನಗುತ್ತ ತಾಯಿ ಹೀಗೆ ಹೇಳಿದಳು… ‘ಮಗು, ನನ್ನ ಋಣ ತೀರಿಸಲು ಈ ಹಣ ನನಗೆ ಬೇಡ, ನೀನು ಒಂದು ದಿನ ರಾತ್ರಿ ನನ್ನ ಬಳಿ ಮಲಗಿಕೊ ಸಾಕು’ ಎಂದಳು.
ತಾಯಿ ಹೇಳಿದಂತೆ ಮಗನು ಸರಿ ಎಂದು ತಾಯಿಯ ಮಂಚದ ಬಳಿ ಮಲಗುತ್ತಾನೆ. ಮಗನು ನಿದ್ರೆಗೆ ಜಾರುತ್ತಾನೆ. ಆಗ ತಾಯಿ, ‘ಮಗನೇ ನನಗೆ ದಾಹ ಆಗುತ್ತಿದೆ. ಸ್ವಲ್ಪ ನೀರು ಕುಡಿಸು’ ಅಂತ ಕೇಳುತ್ತಾಳೆ. ಮಗನು ಸಂತೋಷದಿಂದ ಎದ್ದು ಗ್ಲಾಸಿನಿಂದ ತಾಯಿಗೆ ನೀರನ್ನು ಕುಡಿಸುತ್ತಾನೆ. ತಾಯಿ ಎರಡು ಗುಟುಕು ನೀರನ್ನು ಕುಡಿಯುವಷ್ಟರಲ್ಲಿ ಗ್ಲಾಸು ಪಕ್ಕಕ್ಕೆ ಜಾರಿ ಬೀಳುತ್ತದೆ. ಮಗನು ಮೌನದಿಂದ ಮಲಗುತ್ತಾನೆ.
ಮತ್ತೆ ಮಗನು ನಿದ್ದೆಗೆ ಜಾರಲು ತಾಯಿ ಮತ್ತೆ ಎದ್ದು, ‘ಮಗು ಮತ್ತೆ ಸ್ವಲ್ಪ ನೀರು ಕುಡಿಸು’ ಅಂತ ಕೇಳುತ್ತಾಳೆ. ಮಗನು ಮತ್ತೆ ಎದ್ದು ನೀರು ಕುಡಿಸಲು ತಾಯಿ ಮತ್ತೆ ನೀರು ಚೆಲ್ಲಿ ಹಾಸಿಗೆ ಎಲ್ಲ ಒದ್ದೆಯಾಗುತ್ತದೆ. ಮಗ ತಾಯಿಯನ್ನು ‘ಏನು ಮಾಡಿದೆಯಮ್ಮ’ ಅಂತ ಪ್ರಶ್ನಿಸಿದ, ಅದಕ್ಕೆ ತಾಯಿ ‘ಅಕಸ್ಮಾತ್ತಾಗಿ ಆಯಿತು ಮಗು’ ಅಂತ ಹೇಳಿದಳು.
ಸ್ವಲ್ಪ ಸಮಯದ ನಂತರ ಮತ್ತೆ ತಾಯಿ ನೀರು ಕುಡಿಸಲು ಕೇಳಿದಳು. ಅದಕ್ಕೆ ಮಗ ಕೋಪಗೊಂಡು ‘ಈಗ ತಾನೇ ನೀರು ಕುಡಿದೆಯಲ್ಲ ಅಮ್ಮ. ಮತ್ತೆ ಎಷ್ಟು ನೀರು ಕುಡಿಯುವೆ. ನೀನೇನಾದರು ಹತ್ತಿಯ ಬೀಜಗಳನ್ನ ತಿಂದೆಯ’ ಅಂತ ಹೇಳಿ ನೀರನ್ನು ಕೊಟ್ಟನು.
ಮತ್ತೆ ತಾಯಿ ನೀರು ಕುಡಿಯುವಾಗ ಚೆಲ್ಲುತ್ತದೆ. ಮಗನಿಗೆ ಕೋಪ ಬಂದು ‘ಏನಮ್ಮ ಹಾಸಿಗೆ ಎಲ್ಲ ಒದ್ದೆಯಾಗಿ ಹೋಗಿದೆ. ಕಣ್ಣು ಕಾಣಿಸೋದಿಲ್ವ?’ ಎಂದನು.
ಸ್ವಲ್ಪ ಸಮಯದ ನಂತರ ಮತ್ತೆ ತಾಯಿ ನೀರು ಕೊಡಲು ಕೇಳಿದಳು. ಅದಕ್ಕೆ ಮಗನು ನೀರನ್ನು ತಂದು ಕೊಟ್ಟು ‘ಕುಡಿದು ಸಾಯಿ’ ಅಂತ ಕೂಗಾಡಿದ.
ಆಗ ತಾಯಿ ‘ಮಗು ಸಾಕು ಅರಚಬೇಡ. ತಾಯಿ ಋಣ ತೀರಿಸಬೇಕು ಅಂತ ಹೇಳಿದೆ. ನಿನ್ನ ತಲೆಯ ಮೇಲೆ ಎಷ್ಟು ಕೂದಲು ಇದೆಯೋ ಅಷ್ಟು ಜನ್ಮ ಎತ್ತಿದರೂ ತಾಯಿ ಋಣ ತೀರಿಸಲು ಆಗುವುದಿಲ್ಲ. ನೀನು ಚಿಕ್ಕವನಾಗಿದ್ದಾಗ ಮತ್ತೆ ಮತ್ತೆ ಮೂತ್ರ ಮಾಡುತ್ತಿದ್ದೆ. ನಿನ್ನ ಒದ್ದೆ ಬಟ್ಟೆಯನ್ನು ತೆಗೆದು ನನ್ನ ಸೀರೆಯಿಂದ ಒರೆಸಿ ನಿನ್ನನ್ನು ನನ್ನ ಜಾಗದಲ್ಲಿ ಮಲಗಿಸಿ ನಾನು ಒದ್ದೆಯ ಜಾಗದಲ್ಲಿ ಮಲಗುತ್ತಿದ್ದೆ. ಒಂದು ದಿನವಲ್ಲ, ಒಂದು ವಾರವಲ್ಲ, ಒಂದು ತಿಂಗಳಲ್ಲ ಕೆಲವು ವರ್ಷಗಳೇ, ನೀನು ಒಂಟಿಯಾಗಿ ಮಲಗುವವರೆಗೂ ಬೆಳೆಸಿರುವೆ. ಆದರೆ ನಾನು ಒಂದೆರಡು ಸಲ ಹಾಸಿಗೆ ಒದ್ದೆ ಮಾಡಿದ್ದಕ್ಕೆ ನೀನು ಕೋಪಗೊಂಡೆ. ಒಂದು ದಿನದ ನಿದ್ದೆ ಹಾಳಾಗಿದ್ದಕ್ಕೆ ಬೇಸರ ಮಾಡಿಕೊಂಡೆ’ ಎಂದು ಹೇಳಿದಳು.
ಆಗ ಮಗನಿಗೆ ಮುಜುಗರವಾಗಿ ತಾಯಿಯ ಪಾದಗಳಿಗೆ ನಮಸ್ಕರಿಸಿ, ‘ಅಮ್ಮ ನನ್ನ ಕಣ್ಣು ತೆರೆಸಿದೆ. ನನ್ನನ್ನು
ಕ್ಷಮಿಸು’ ಎಂದನು.

ಮತ್ತಷ್ಟು ಸುದ್ದಿಗಳು

vertical

Latest News

ಮಲಯಾಳಂ ಚಿತ್ರರಂಗದ ಖ್ಯಾತ ನಟ ಹರೀಶ್ ಪೆಂಗನ್ ನಿಧನ

newsics.com ಮಲಯಾಳಂ ಚಿತ್ರರಂಗದ ಖ್ಯಾತ ಕಲಾವಿದ ಹರೀಶ್ ಪೆಂಗನ್ ಅವರು ಮಂಗಳವಾರ (ಮೇ 30) ನಿಧನ ಹೊಂದಿದ್ದಾರೆ. ಅವರಿಗೆ 49 ವರ್ಷ ವಯಸ್ಸಾಗಿತ್ತು. ಹರೀಶ್ ಅವರು ಕಳೆದ...

ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ದುಷ್ಕೃತ್ಯ ಸಂಚು: ದಕ್ಷಿಣ ಕನ್ನಡದ 16 ಕಡೆ NIA ದಾಳಿ

newsics.com ಮಂಗಳೂರು: ಪ್ರಧಾನಿ ಮೋದಿಯವರ ಬಿಹಾರ ಕಾರ್ಯಕ್ರಮದ ವೇಳೆ ದುಷ್ಕೃತ್ಯ ಸಂಚು ರೂಪಿಸಿದ್ದ ಹಿನ್ನೆಲೆಯಲ್ಲಿ ಬುಧವಾರ ರಾಷ್ಟ್ರೀಯ ತನಿಖಾ ದಳ (ಎನ್ಐಎ) ದಕ್ಷಿಣ ಕನ್ನಡ ಜಿಲ್ಲೆಯ 16‌ ಕಡೆ ದಾಳಿ‌ ನಡೆಸಿದೆ. ಬಂಟ್ವಾಳ, ಬೆಳ್ತಂಗಡಿ, ಉಪ್ಪಿನಂಗಡಿ,...

ಸಮುದ್ರಕ್ಕೆ ಬಿತ್ತು ಉತ್ತರ ಕೊರಿಯಾ ಉಡಾಯಿಸಿದ ‘ಗೂಢಚರ್ಯೆ ಉಪಗ್ರಹ’

newsics.com ಸೋಲ್: ಉತ್ತರ ಕೊರಿಯಾ ಬುಧವಾರ ಉಡಾವಣೆ ಮಾಡಿದ ಗೂಢಚರ್ಯೆ ಉಪಗ್ರಹ ಸಮುದ್ರದ ಪಾಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ತಾಂತ್ರಿಕ ಕಾರಣಗಳಿಂದಾಗಿ ಗೂಢಚರ್ಯೆ ಉಪಗ್ರಹ ಸಮುದ್ರಕ್ಕೆ ಬಿದ್ದಿದೆ ಎಂದು ಉತ್ತರ ಕೊರಿಯಾ ಮಾಧ್ಯಮಗಳು ತಿಳಿಸಿವೆ. ಮೊದಲು...
- Advertisement -
error: Content is protected !!