Saturday, April 1, 2023

ಮಿಂಚುಹುಳ ಮತ್ತು ಸರ್ಪ

Follow Us

* ಮಲ್ಲಿಕಾರ್ಜುನಯ್ಯ ಚಿತ್ರದುರ್ಗ
response@134.209.153.225

ಒಂದಾನೊಂದು ಕಾಲದಲ್ಲಿ ಒಂದು ಸರ್ಪವು ಮಿಂಚುಹುಳುವೊಂದನ್ನು ತಿನ್ನಲಿಕ್ಕೆ ಹವಣಿಸುತ್ತಿತ್ತು.
ಭಯಭೀತ ಮಿಂಚುಹುಳು ಸರ್ಪದಿಂದ ತಪ್ಪಿಸಿಕೊಳ್ಳಲಿಕ್ಕೆ ಅತ್ತಿಂದಿತ್ತ ಹಾರುತ್ತಿತ್ತು. ಸರ್ಪವು ಬೆಂಬಿಡದೆ ಅದನ್ನು ಹಿಂಬಾಲಿಸುತ್ತಿತ್ತು.
ಒಂದೆರಡು ದಿನಗಳ ನಿರಂತರ ಹಾರಾಟದ ನಂತರ ಮಿಂಚುಹುಳು ದಣಿಯಿತು.
ಅದು ಸರ್ಪವನ್ನು ಕೇಳಿತು, ನಾನು ನಿನಗೆ ಮೂರು ಪ್ರಶ್ನೆ ಕೇಳಲೇ ಎಂದು.
ಸರ್ಪವು ಸಿಟ್ಟಿನಿಂದಲೇ ‘ಸರಿ ಸರಿ. ಯಾರಿಗೂ ಉತ್ತರಿಸುವ ಅಗತ್ಯ ನನಗಿಲ್ಲ, ನಿನ್ನನ್ನು ಹೇಗೂ ತಿಂದು ಮುಗಿಸುವವನೇ. ಪ್ರಶ್ನೆ ಕೇಳು ಪರವಾಗಿಲ್ಲ’ ಎಂದಿತು.
ಮಿಂಚುಹುಳು ಮೊದಲ ಪ್ರಶ್ನೆಯಾಗಿ ‘ನಾನು ನಿನ್ನ ಆಹಾರ ಸರಪಳಿಯಲ್ಲಿ ಇದ್ದೇನೆಯೇ?’ ಎಂದು ಕೇಳಿತು.
ಇಲ್ಲವೆಂದಿತು ಸರ್ಪ.
‘ನಾನು ನಿನಗೇನಾದರೂ ತೊಂದರೆ ಮಾಡಿದೆನೇ ಅಥವಾ ಕೆಣಕಿದೆನೇ?’ ಮಿಂಚುಹುಳುವಿನ ಎರಡನೆಯ ಪ್ರಶ್ನೆ.
ಇಲ್ಲ ಎಂದುತ್ತರಿಸಿತು ಸರ್ಪ.
‘ಮತ್ತೇಕೆ ನನ್ನನ್ನು ಕೊಂದು ತಿನ್ನಬೇಕೆಂದಿದ್ದೀ?’ ಮೂರನೆಯ ಪ್ರಶ್ನೆ ಕೇಳಿತು ಮಿಂಚುಹುಳು.
ಆಗ ಸರ್ಪ ಹೇಳಿತು: ‘ಏಕೆಂದರೆ ನೀನು ಆ ರೀತಿ ಮಿನುಗುವುದನ್ನು ನೋಡಿ ನನ್ನಿಂದ ಸಹಿಸಲಾಗುತ್ತಿಲ್ಲ.’
ನಮ್ಮ ಬದುಕಿನಲ್ಲಿಯೂ ನಮಗೆ ಇಂಥ ಸರ್ಪಗಳು ಎದುರಾಗುತ್ತವೆ.
ನಮ್ಮ ಬಾಳಿನ ಹೊಳಪನ್ನು ಕಂಡು ಹೊಟ್ಟೆಯುರಿಯುವ, ನಾಶ ಮಾಡಲೆತ್ನಿಸುವ ವಿಷಸರ್ಪಗಳು.
ಅವುಗಳನ್ನು ಎದುರಿಸಲಿಕ್ಕೆ ನಮಗೆ ಎರಡು ಆಯ್ಕೆಗಳಿರುತ್ತವೆ.
ಒಂದೋ ನಮ್ಮ ಹೊಳಪನ್ನು ನಿಲ್ಲಿಸಿಬಿಡುವುದು, ಆಗ ಯಾವ ಸರ್ಪವೂ ನಮ್ಮ ಬೆನ್ನಟ್ಟುವುದಿಲ್ಲ.
ಎರಡನೆಯ ಆಯ್ಕೆಯೆಂದರೆ ನಮ್ಮ ಹೊಳಪನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವುದು ಮತ್ತು ಆ ಹೊಳಪಿನಿಂದಲೇ ಸರ್ಪಗಳನ್ನು ಮಣಿಸುವುದು.
*”ಪ್ರತಿಯೊಬ್ಬರ ಜೀವನದಲ್ಲಿ ಸಾಗಿಬರುವ ಹಾದಿಯಲ್ಲಿ ಕಲ್ಲುಮುಳ್ಳು ಸಾಮಾನ್ಯ ಮೆಟ್ಟಿನಿಂತು ಮುಂದೆ ಸಾಗೋಣ.

ಮತ್ತಷ್ಟು ಸುದ್ದಿಗಳು

vertical

Latest News

ಮೋದಿ ವಿದ್ಯಾರ್ಹತೆ ಪ್ರಶ್ನಿಸಿದ್ದ ಕೇಜ್ರಿವಾಲ್‌ಗೆ 25 ಸಾವಿರ ದಂಡ

ಅಹಮದಾಬಾದ್‌: ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಹತೆ ಪ್ರಶ್ನಿಸಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‍ಗೆ  ಮುಖಭಂಗ ಉಂಟಾಗಿದೆ. ಪ್ರಧಾನಿ ಮೋದಿ ಡಿಗ್ರಿ ಸರ್ಟಿಫಿಕೇಟ್‍ಗಳನ್ನು ಪ್ರದರ್ಶಿಸುವ ಅಗತ್ಯವಿಲ್ಲ ಎಂದು ಗುಜರಾತ್...

ಕೆಲಸದ ನಡುವೆ ಧಮ್ ಎಳೆಯಲು ಪದೇ ಪದೇ ಬ್ರೇಕ್, 9 ಲಕ್ಷ ರೂಪಾಯಿ ದಂಡ

newsics.com ನವದೆಹಲಿ: ಕೆಲಸದ ನಡುವೆ ಧಮ್ ಎಳೆಯಲು ಬ್ರೇಕ್ ತೆಗೆದುಕೊಳ್ಳುವುದು ಸಾಮಾನ್ಯವಾಗಿದೆ.ನೀವೂ ಹೀಗೆ ಮಾಡುತ್ತಿದ್ದರೆ ಎಚ್ಚರವಾಗಿರುವುದು ಒಳಿತು. ಕೆಲಸದ ನಡುವೆ ಧಮ್ ಎಳೆಯಲು ಪದೇ ಪದೇ ಬ್ರೇಕ್, 9 ಲಕ್ಷ ರೂಪಾಯಿ ದಂಡವನ್ನು ಕಂಪನಿ...

ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಾವಳಿ ಹಿನ್ನೆಲೆ ಮಧ್ಯರಾತ್ರಿ 1 ಗಂಟೆಯ ತನಕ ಮೆಟ್ರೋ ಸೇವೆ

newsics.com ಬೆಂಗಳೂರು: ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಾವಳಿ ಹಿನ್ನೆಲೆ ಮಧ್ಯರಾತ್ರಿ 1 ಗಂಟೆಯ ತನಕ ಮೆಟ್ರೋ ಸೇವೆ ವಿಸ್ತರಣೆ ಮಾಡಲಾಗುತ್ತಿದೆ. ರಾಜ್ಯ ರಾಜಧಾನಿಯಲ್ಲಿ ಏಪ್ರಿಲ್ 2, 10, 17, 26 ಮೇ 21 ರಂದು ಐಪಿಎಲ್ ಪಂದ್ಯವಿರುವ...
- Advertisement -
error: Content is protected !!