♦ ಡಾ.ಅಜಿತ್ ಹರೀಶಿ
newsics.com@gmail.com
ಕೊನೆ
ಕಾನ
ನಡುಮಧ್ಯೆ
ಎಬ್ಬಿಸಿದ ಭವನ
ಭೂಪ
ಆಪತ್ತೆಂದು ಮಹಲಿಗೆ
ಆಲ ತೆಂಗು ಮಾವು
ಕಾಡು ಮರಗಳ ಕಡಿಸಿ
ಬೇಲಿ ಸುತ್ತ ಬೋಳಿಸಿ
ಆನೆಗಳ ಪಥ ಬದಲಿಸಿದ
ಎಲ್ಲಿಂದಲೋ ಹಾರಿಬಂದ
ಲೋಹದ ಹಕ್ಕಿ
ಅಲ್ಲಿಯೇ ಧರೆಗುರುಳಿ
ಭಸ್ಮ!
ದನಿ
ತಟಾಕು ಸಾಕು
ಹಿಗ್ಗುತ್ತದೆ
ಹೊಟ್ಟೆ ಹಿಡಿಸಿದಷ್ಟು
ಕಂಡಾಪಟ್ಟೆ
ಉಣ ಬಡಿಸುವ
ಅಮ್ಮನಿಗೆ
ಗದರಿಸುವ ನಾನು
ಹೃದಯ ಬಿರಿಯುವಷ್ಟು
ಪ್ರೀತಿ
ಸುರಿಯುವ
ಅವಳ ವಿಷಯದಲ್ಲಿ
ಮೌನಿ