Tuesday, April 13, 2021

ಕೊನೆಯ ಕ್ಷಣದ ತಯಾರಿ ಮತ್ತು ಎಕ್ಸಾಂ ಹಾಲ್

♦ ಸುಮನಾ ಲಕ್ಷ್ಮೀಶ
ಆಪ್ತ ಸಮಾಲೋಚಕರು
response@134.209.153.225
newsics.com@gmail.com

  15  

ಪರೀಕ್ಷೆಗೆ ತೆರಳುವ ಮಕ್ಕಳಲ್ಲಿ ಕೊರೋನಾ ಬಗ್ಗೆ ಆತಂಕ ಮೂಡಿಸುವ ಬದಲು ಸೂಕ್ತ ಕ್ರಮಗಳನ್ನು ಅನುಸರಿಸುವುದರ ಕುರಿತು ಅರಿವು ಮೂಡಿಸಿದರೆ ಅವರ ಒತ್ತಡವನ್ನು ಕಡಿಮೆ ಮಾಡಬಹುದು. ಇದು ಪಾಲಕರ ಜವಾಬ್ದಾರಿಯೂ ಹೌದು.

         

 ರೀಕ್ಷೆ ಬಂದು ಬಾಗಿಲು ತಟ್ಟುತ್ತಿದೆ. “ನಾಳೆ ಬೆಳಗಾದರೆ ಪರೀಕ್ಷೆ’ ಎನ್ನುವ ಸಣ್ಣದಾದ ಕಂಪನ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತಿರುವ ಎಲ್ಲ ಮಕ್ಕಳಲ್ಲೂ ಇದ್ದೇ ಇದೆ. ಅದರೊಂದಿಗೇ, ಪರೀಕ್ಷೆಗೆ ತೆರಳಲು ನೀವು ಸಕಲ ಸಿದ್ಧತೆ ನಡೆಸಿದ್ದೀರಾ ಎನ್ನುವುದನ್ನು ಇಂದೇ ಖಚಿತಪಡಿಸಿಕೊಳ್ಳಿ. ಪರೀಕ್ಷೆ ದಿನ ಬೆಳಗಿನ ಗಡಿಬಿಡಿಯಲ್ಲಿ ಕೊಂಡೊಯ್ಯುವ ವಸ್ತುಗಳ ಬಗ್ಗೆ ಯೋಚಿಸುತ್ತಿರಬೇಡಿ.
• ನಿಮ್ಮ ಐಡಿ ಕಾರ್ಡ್, ಹಾಲ್ ಟಿಕೆಟ್’ಗಳನ್ನು ಜತನವಾಗಿ ಇಟ್ಟುಕೊಳ್ಳಿ. ಕನಿಷ್ಠ ಎರಡಾದರೂ ಪೆನ್ನು, ಒಂದು ರಿಫಿಲ್ ಜತೆಗಿರಲಿ. ಹೊಸ ರಿಫಿಲ್’ಗಿಂತ ಒಂದೆರಡು ಪೇಜ್ ಬರೆದಿರುವ ರಿಫಿಲ್ ಇಟ್ಟುಕೊಂಡರೆ ಉತ್ತಮ. ಏಕೆಂದರೆ, ಈಗಾಗಲೇ ಬರೆದಿರುವ ರಿಫಿಲ್’ನಲ್ಲಿ ಸರಾಗವಾಗಿ ಬರೆಯಬಹುದು.
• ಗಣಿತದ ಪರೀಕ್ಷೆಯಂದು ಗಣಿತ ಬಿಡಿಸಲು ಬೇಕಾದ ಸಾಮಗ್ರಿಗಳೆಲ್ಲವನ್ನೂ ಸರಿಯಾಗಿ ತೆಗೆದಿರಿಸಿಕೊಳ್ಳಿ. ಯಾವುದನ್ನೋ ಮರೆತು ಇನ್ನೊಬ್ಬರ ಬಳಿ ಕೇಳುವಂತೆ ಆಗಬಾರದು.
• ನೀರಿನ ಬಾಟಲ್ ಒಯ್ಯಿರಿ. ಹೊರಗೆಲ್ಲೂ ನೀರು ಕುಡಿಯದಿರಿ.
• ಪಠ್ಯಕ್ಕೆ ಸಂಬಂಧಿಸಿದ ಪೇಜನ್ನೋ, ಟಿಪ್ಪಣಿಯನ್ನೋ ಅನಗತ್ಯವಾಗಿ ಬಳಿಯಲ್ಲಿ ಇರಿಸಿಕೊಳ್ಳಬೇಡಿ. ಪರೀಕ್ಷಾ ಹಾಲ್ ಪ್ರವೇಶಿಸುವ ಮುನ್ನ ಅಂಥದ್ದೇನಾದರೂ ಇದೆಯೇ ಎಂದು ಚೆಕ್ ಮಾಡಿಕೊಳ್ಳಿ.

ಕೊರೋನಾ ಮತ್ತು ಪರೀಕ್ಷಾ ಹಾಲ್
ಯಾವತ್ತಿಗೂ ನಮ್ಮ ಸುರಕ್ಷತೆ ನಮಗೆ ಎನ್ನುವ ಮಾತು ಸತ್ಯ. ಅದನ್ನು ಈ ಬಾರಿ ನೀವು ಹೆಚ್ಚು ಪಾಲನೆ ಮಾಡಬೇಕು. ಏನೆಲ್ಲ ಸುರಕ್ಷತೆ ತೆಗೆದುಕೊಳ್ಳಬೇಕು?
• ಪಾಲಕರೇ ನೇರವಾಗಿ ಪರೀಕ್ಷಾ ಹಾಲ್’ಗೆ ಮಕ್ಕಳನ್ನು ಬಿಡುವುದು, ಕರೆತರುವುದು ಈ ಬಾರಿಯ ಅಗತ್ಯ.
• ಸ್ನೇಹಿತರೂ ಸೇರಿದಂತೆ ಯಾರೊಂದಿಗೂ ನಿಕಟವಾಗಿ ಬೆರೆಯದೆ ನಿಮ್ಮ ಪಾಡಿಗೆ ನೀವಿರಿ. ದೂರದಿಂದಲೇ ಮಾತನಾಡಿ. ಅಪರೂಪಕ್ಕೆ ಸಿಕ್ಕಿದ್ದಾರೆಂದು ಸಾಮೀಪ್ಯ ಬೇಡ. ಬೇರೆಯವರ ಪುಸ್ತಕ, ಮೊಬೈಲ್ ಇತ್ಯಾದಿ ಏನನ್ನೂ ಸ್ಪರ್ಶಿಸಬೇಡಿ. ಮತ್ತೊಬ್ಬರಿಂದ ದೈಹಿಕ ಅಂತರ ಕಾಪಾಡಿಕೊಳ್ಳಿ.
• ಪರೀಕ್ಷಾ ಹಾಲ್ ಸ್ವಚ್ಛವಾಗಿರುತ್ತದೆ, ಅನುಮಾನ ಬೇಡ. ಆದರೂ ಅನಗತ್ಯವಾಗಿ ಎಲ್ಲೆಂದರಲ್ಲಿ ಮುಟ್ಟಬಾರದು. ನಿಮ್ಮ ವಸ್ತುಗಳನ್ನು ಪ್ರತ್ಯೇಕವಾಗಿ ತೆಗೆದಿರಿಸುವ ವ್ಯವಸ್ಥೆ ಇರುತ್ತದೆ, ಅದರಂತೆ ನಡೆದುಕೊಳ್ಳಿ.
• ಮನೆಯಲ್ಲೇ ಶೌಚ ಪೂರೈಸಿಕೊಂಡು ಹೋದರೆ ಮುಂದಿನ ಮೂರ್ನಾಲ್ಕು ಗಂಟೆಗಳ ಕಾಲ ತೊಂದರೆಯಾಗದು. ತೀರಾ ಅನಿವಾರ್ಯವಾದರೆ ಮಾತ್ರ ಶೌಚಗೃಹ ಬಳಸುವುದು ಸರಿ.
• ನಿಮಗೆ ಬೇಕಾದ ಎಲ್ಲ ಸಲಕರಣೆಗಳನ್ನೂ ನೀವೇ ಇಟ್ಟುಕೊಂಡಿರಿ. ಇನ್ನೊಬ್ಬರ ಬಳಿ ಏನನ್ನೂ ತೆಗೆದುಕೊಳ್ಳಬೇಡಿ.
• ಸುತ್ತಮುತ್ತ ನೋಡುತ್ತ, ಕೊರೋನಾ ಬಗ್ಗೆ ಯೋಚಿಸುತ್ತಿದ್ದರೆ ಇನ್ನಷ್ಟು ಆತಂಕವಾಗುತ್ತದೆ. ಹೀಗಾಗಿ, ಆ ಬಗ್ಗೆ ಯೋಚಿಸದೆ ಇರುವುದೇ ಉತ್ತಮ. ನಿಮ್ಮ ಗಮನ ಪರೀಕ್ಷೆ ಬರೆಯುವುದರ ಮೇಲೆ ಮಾತ್ರ ಇದ್ದರೆ ಸಾಕು.
• ಅಕಸ್ಮಾತ್ ಮನೆಯಿಂದ ಪರೀಕ್ಷಾ ಹಾಲ್’ಗೆ ಕರೆದೊಯ್ಯಲು ಯಾರೂ ಇರದಿದ್ದರೆ ಚಿಂತೆ ಬೇಡ. ಮನೆ ಸಮೀಪವಿದ್ದರೆ ನಡೆದುಕೊಂಡೇ ಓಡಾಡಿ.
• ಕನಿಷ್ಠ ಪರೀಕ್ಷೆ ಮುಗಿಯುವವರೆಗಾದರೂ ನಿತ್ಯ ಬೆಳಗ್ಗೆ ಮತ್ತು ರಾತ್ರಿ ತುಳಸಿ, ಅರಿಶಿನ ಹಾಕಿದ ನೀರಿನ ಆವಿಯನ್ನು ಸೇವಿಸಿ ಅಂದರೆ ಇನ್ಹೇಲ್ ಮಾಡಿ. ಜತೆಗೆ ಅರಿಶಿನ ಹಾಕಿದ ಹಾಲು ಸೇವಿಸಿ. ಹಾಲು ಬೇಡವಾದರೆ ನಿಂಬು ಹಾಕಿದ ಬಿಸಿ ನೀರು ಕುಡಿಯಿರಿ. ಸದಾ ಕಾಲ ಬಿಸಿ ಬಿಸಿ ನೀರನ್ನೇ ಕುಡಿಯುವುದು ಉತ್ತಮ.

    ಎಲ್ಲ SSLC ಪರೀಕ್ಷಾರ್ಥಿಗಳಿಗೆ newsics.com ನಿಂದ ಶುಭಾಶಯಗಳು.    


   ನ್ಯೂಸಿಕ್ಸ್ ಎಕ್ಸಾಂ ಗೈಡ್ ಮುಕ್ತಾಯ. ನಿಮ್ಮ ಅನಿಸಿಕೆಗಳನ್ನು newsics.com@gmail.com ಗೆ ತಿಳಿಸಿ.   

ಮತ್ತಷ್ಟು ಸುದ್ದಿಗಳು

Latest News

2 ಆಂಬುಲೆನ್ಸ್’ಗೆ ದಾರಿಮಾಡಿಕೊಟ್ಟ ಪ್ರಧಾನಿ‌ ಮೋದಿ

newsics.comಕೋಲ್ಕತಾ: ಪಶ್ಚಿಮ‌ ಬಂಗಾಳ ಚುನಾವಣೆ ಪ್ರಚಾರಕ್ಕಾಗಿ ರಸ್ತೆ ಮೂಲಕ ತೆರಳುತ್ತಿದ್ದ ಪ್ರಧಾನಿ ಮೋದಿ, ದಿಢೀರ್ 2 ಆಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟು ಎಲ್ಲರ ಮೆಚ್ಚುಗೆಗೆ...

ಕುರಾನ್’ನಲ್ಲಿನ 26 ವಚನ ತೆಗೆಯಬೇಕೆಂಬ ಅರ್ಜಿ ವಜಾಗೊಳಿಸಿದ ಸುಪ್ರೀಂ

newsics.comನವದೆಹಲಿ: ಕುರಾನ್‌ನಲ್ಲಿನ 26 ವಚನಗಳನ್ನು ತೆಗೆಯುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.ಅರ್ಜಿಯು ಗಂಭೀರ ಉದ್ದೇಶ ಹೊಂದಿಲ್ಲ ಎಂಬ ಕಾರಣಕ್ಕೆ ಅರ್ಜಿದಾರರಿಗೆ 50 ಸಾವಿರ ರೂ. ದಂಡ ವಿಧಿಸಿದೆ.ಉತ್ತರ ಪ್ರದೇಶದ...

ದೋಣಿ ಮುಳುಗಿ 34 ವಲಸಿಗರ ಸಾವು

newsics.comಜಿಬೂಟಿ: ವಲಸಿಗರನ್ನು ಹೊತ್ತ ದೋಣಿಯೊಂದು ಸಮುದ್ರದಲ್ಲಿ ಮುಳುಗಿ 34 ಮಂದಿ ಮೃತಪಟ್ಟಿದ್ದಾರೆ.ಆಫ್ರಿಕಾ ಖಂಡದ ಜಿಬೂಟಿ ದೇಶದ ಕರಾವಳಿಗೆ ಹೊಂದಿಕೊಂಡ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ ಎಂದು ಅಂತಾರಾಷ್ಟ್ರೀಯ ವಲಸಿಗರ ಸಂಘಟನೆ...
- Advertisement -
error: Content is protected !!